ಕುವೆಂಪು, ಮಾಸ್ತಿ, ಲಂಕೇಶರ ಕಥೆಗಳ ರಂಗಪ್ರಯೋಗ: ಒಂದು ಅವಲೋಕನ
Main Article Content
Abstract
ಈ ಲೇಖನವು ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಪಿ. ಲಂಕೇಶ್ ಅವರ ಆಯ್ದ ಸಣ್ಣಕಥೆಗಳ ರಂಗರೂಪ ಪ್ರಕ್ರಿಯೆಯನ್ನು ಅವಲೋಕಿಸುತ್ತದೆ. ಸಣ್ಣಕಥೆಗಳು ಮೂಲತಃ ನಿರೂಪಣಾ ಪ್ರಧಾನ ಸಾಹಿತ್ಯ ಪ್ರಕಾರವಾಗಿದ್ದರೂ, ಅವುಗಳಲ್ಲಿರುವ ನಾಟಕೀಯತೆ, ಸಂಭಾಷಣೆ, ದೃಶ್ಯ ನಿರ್ಮಾಣಶಕ್ತಿ ಮತ್ತು ಪಾತ್ರಗಳ ಚಲನಶೀಲತೆಯು ರಂಗರೂಪಕ್ಕೆ ಅನುಕೂಲಕರವಾಗಿರುವುದನ್ನು ತೋರಿಸುತ್ತದೆ. ಇಲ್ಲಿ ಕುವೆಂಪು ಅವರ ‘ಧನ್ವಂತರಿ ಚಿಕಿತ್ಸೆ’ ಕಥೆಯಲ್ಲಿನ ರೈತರ ಬದುಕಿನ ದುರಂತ ಮತ್ತು ಸಮಾಜವಾದಿ ಆಶಯಗಳು ರಂಗಪ್ರಯೋಗದಲ್ಲಿ ಹೇಗೆ ವಿಸ್ತರಿಸಲ್ಪಟ್ಟಿವೆ ಎಂಬುದನ್ನು ವಿಶ್ಲೇಷಿಸಲಾಗಿದೆ. ಮಾಸ್ತಿಯವರ ಕಥೆಗಳಲ್ಲಿ ಕಥೆಯೊಳಗಿನ ಕಥೆ, ಬಹು ನಿರೂಪಕರ ವಿನ್ಯಾಸ ಮತ್ತು ಸಂಭಾಷಣಾ ಶೈಲಿಯು ರಂಗಪ್ರಯೋಗಕ್ಕೆ ಹೇಗೆ ಪೂರಕವಾಗಿದೆ ಎಂಬುದನ್ನು ‘ವೆಂಕಟಶಾಮಿಯ ಪ್ರಣಯ’ ಹಾಗೂ ‘ಜೋಗ್ಯೋರ ಅಂಜಪ್ಪನ ಕೋಳೀ ಕಥೆ’ಗಳ ಮೂಲಕ ವಿವರಿಸಲಾಗಿದೆ. ಲಂಕೇಶರ ‘ಕುರುಡು ಕಾಂಚಾಣ’ ಕಥೆಯ ‘ಗಿಳಿಯು ಪಂಜರದೊಳಿಲ್ಲ’ ಎಂಬ ರಂಗರೂಪವು ವೈಯಕ್ತಿಕ ಮನೋವೈಜ್ಞಾನಿಕ ಅನುಭವವನ್ನು ಸಾಮಾಜಿಕ ವಿಮರ್ಶೆಯ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆಯನ್ನು ಈ ಲೇಖನ ವಿಶ್ಲೇಷಿಸುತ್ತದೆ. ಒಟ್ಟಾರೆ, ಸಾಹಿತ್ಯಕೃತಿಯ ಆಶಯವನ್ನು ಉಳಿಸಿಕೊಂಡು, ಕೆಲವೊಮ್ಮೆ ಮೂಲ ಕೃತಿಯ ಆಶಯಗಳನ್ನು ಮೀರಿ ರಂಗಮಾಧ್ಯಮದ ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳ್ಳುವ ಸೃಜನಾತ್ಮಕ ಪ್ರಕ್ರಿಯೆಯೇ ರಂಗರೂಪ ಎಂಬುದನ್ನು ಈ ಲೇಖನ ಪ್ರತಿಪಾದಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶಿವಾರೆಡ್ಡಿ ಕೆ.ಸಿ. (ಸಂ), (2000), ಕುವೆಂಪು ಸಮಗ್ರ ಕಾವ್ಯ, ಸಂಪುಟ-1, ಹಂಪಿ: ಕನ್ನಡ ವಿಶ್ವವಿದ್ಯಾಲಯ.
ಶ್ರೀನಿವಾಸ, (1975), ಮಾಸ್ತಿಯವರ ಪುಸ್ತಕಗಳು-ಕತೆಗಳು 1, ಬೆಂಗಳೂರು: ಜೀವನ ಕಾರ್ಯಾಲಯ.
ಮರುಳಸಿದ್ದಪ್ಪ ಕೆ., (2002), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಅಂಕಿತ ಪುಸ್ತಕ.
ಕಾರಂತ ಬಿ.ವಿ. (ಸಂಗ್ರಹ ಮತ್ತು ಕೃತಿರೂಪ: ವೈದೇಹಿ), (2003), ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಬದುಕಿನ ನೆನಪು ಅನುಭವಗಳ ಕಥನ, ಬೆಂಗಳೂರು: ಪ್ರಿಸಮ್ ಬುಕ್ಸ್.
ರಂಗನಾಥ್ ಹೆಚ್.ಕೆ., (1972), ಕನ್ನಡ ನಾಟಕ ಕಲೆ, ಬೆಂಗಳೂರು: ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ.
ವಿಜಯಾ, (1999), ನಾಗೇಶ್ ಆರ್. (ರಂಗಸಂಪನ್ನರು ಮಾಲಿಕೆ:8), ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ.