Published: 2025-05-05

Table of Contents

Table of Contents

I to V

ಆಧುನಿಕ ಕನ್ನಡ ರಂಗಭೂಮಿಯಲ್ಲಿ ರಂಗನಿರ್ದೇಶಕರಾಗಿ ಬಿ. ವಿ. ಕಾರಂತರ ಕೊಡುಗೆ

ಅರುಣ್‌ಕುಮಾರ್ ಬಿ., ಕೆ. ರಾಮಕೃಷ್ಣಯ್ಯ

01 to 10

ಆಧುನಿಕ ಕನ್ನಡ ರಂಗಭೂಮಿಯ ನಿರ್ದೇಶಕರಾಗಿರುವ ಬಿ. ವಿ. ಕಾರಂತ ಅವರು ಬಾಲ್ಯದಲ್ಲಿ ಬೆಳೆದದ್ದು ಕನ್ನಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಅವರ ಕಣ್ಣುಗಳು, ಮತ್ತು ಕಿವಿಗಳು ಯಕ್ಷಗಾನ, ಜಾತ್ರೆ, ಕೋಲ, ರಥೋತ್ಸವ, ಪದ-ದಾನಗಳು ಮತ್ತು ವಿವಿಧ ಸಂಗೀತ ವಾದ್ಯಗಳ ಧ್ವನಿ ವಿನ್ಯಾಸಗಳಿಗೆ ತೆರೆದುಕೊಂಡವು. ಇವರು ಪ್ರಸಿದ್ಧ ಗುಬ್ಬಿ ವೀರಣ್ಣ ಕಂಪನಿಯವರು ಪುತ್ತೂರಿನಲ್ಲಿ ಬೀಡುಬಿಟ್ಟಾಗ ಅಲ್ಲಿ ‘ಕೃಷ್ಣಲೀಲಾ’ ನಾಟಕವನ್ನು ನೋಡಿ ನಾಟಕದ ಕಡೆಗೆ ಆಸಕ್ತರಾದರು. ನಂತರ ಅವರು ಗುಬ್ಬಿ ಕಂಪನಿಗೆ ಸೇರಿಕೊಂಡರು. ಅವರು ಡಾ. ರಾಜಕುಮಾರರಂತಹ ಹಿರಿಯರ ನಟರ ಜೊತೆಗೆ ಅಭಿನಯವನ್ನು ಮಾಡಿದರು. ಗುಬ್ಬಿ ವೀರಣ್ಣನವರು ಕಾರಂತರನ್ನು ಸ್ನಾತಕೋತ್ತರ ಪದವಿ ಅಭ್ಯಾಸಕ್ಕೆ ಬನಾರಸ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿದರು. ಅಲ್ಲಿ ಅವರು ಹಿಂದೂಸ್ತಾನಿ ಸಂಗೀತವನ್ನು ಕಲಿತರು. ಅಲ್ಲಿಯ ರಂಗಭೂಮಿ ಮತ್ತು ಹಿಂದಿ ನಾಟಕಗಳ ಬಗ್ಗೆ ಪಿಹೆಚ್. ಡಿ ಪದವಿಯನ್ನು ಪಡೆದರು. 1962ರಲ್ಲಿ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸಂಸ್ಥೆಯಿಂದ ಪದವಿ ಪಡೆದರು. 
ದೆಹಲಿಯಲ್ಲಿ ಕನ್ನಡದಲ್ಲಿ ಪ್ರಸಿದ್ಧ ನಾಟಕಗಳನ್ನು ಬರೆದು ನಿರ್ದೇಶಿಸಿದರು. ದೆಹಲಿಯ ಗೆಳೆಯರೊಂದಿಗೆ ಸೇರಿಕೊಂಡು ಕನ್ನಡ ಭಾರತಿ ಆರಂಭಿಸಿ ಅಲ್ಲಿ ಗಹನ ನಾಟಕಗಳನ್ನು ನಿರ್ಮಿಸಿದರು. 1970ರಲ್ಲಿ ಬೆಂಗಳೂರಿಗೆ ಬಂದು ರಂಗಭೂಮಿಗೆ ನವೀನ ತಂತ್ರಗಳು, ವೈಭವ, ಸಂಗೀತ, ಮತ್ತು ನೃತ್ಯವನ್ನು ತರುವ ಮೂಲಕ ಕನ್ನಡ ರಂಗಭೂಮಿಯಲ್ಲಿ ಕಂಪನ್ನು ಸೃಷ್ಟಿಸಿದರು. ಭಾರತದಲ್ಲಿಯೇ ರಂಗಭೂಮಿ ಸಂಗೀತದಲ್ಲಿ ವಿಭಿನ್ನ ರೂಪಗಳನ್ನು ಬೆರೆಸುವ ಮೂಲಕ ಕನ್ನಡ ರಂಗಭೂಮಿಯನ್ನು ಬೆಳೆಸಿದರು. ನಂತರ ಇಬ್ರಾಹಿಂ ಅಲ್ಯಾಜಿ ನೇತೃತ್ವದಲ್ಲಿ 1969 ಮತ್ತು 1972 ರ ನಡುವೆ ಅವರು ನವದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ನಾಟಕ ಶಿಕ್ಷಕರಾಗಿ ಕೆಲಸ ಮಾಡಿದರು. ನಂತರ ದಂಪತಿಗಳು ಬೆಂಗಳೂರಿಗೆ ಮರಳಿದರು. 
ಕಾರಂತರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ಅರ್ಧದಷ್ಟು ಕನ್ನಡ ಭಾಷೆಯಲ್ಲಿವೆ. ಅವರು ಹಯವದನ, ಕತ್ತಲೆ ಬೆಳಕು, ಹುಚ್ಚು ಕುದುರೆ, ಏವಂ ಇಂದ್ರಜಿತ್, ಈಡಿಪಸ್, ಸಂಕ್ರಾಂತಿ, ಜೋಕುಮಾರ ಸ್ವಾಮಿ, ಸತ್ತವರ ನೇರಳು, ಹುಟ್ಟುವ ಬಡಿದರೆ, ಕಿಂದರಿ ಜೋಗಿ, ಚಂದ್ರಹಾಸ ಮತ್ತು ಗೋಕುಲ ನಿರ್ಗಮನ ನಾಟಕಗಳಲ್ಲದೆ, ಪಂಜರ ಶಾಲೆ, ನೀಲಿ ಕುದುರೆ, ಹೆಡ್ಡಾಯಣ, ಅಳಿಲು ರಾಮಾಯಣ ಮುಂತಾದ ಹಲವಾರು ಮಕ್ಕಳ ನಾಟಕಗಳನ್ನೂ ಸಹ ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ನಾಟಕಗಳೆಂದರೆ ಪ್ರೇಕ್ಷಕರಿಗೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿ ಅವರು ಅಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ರಂಗಾಯಣ ಸಂಸ್ಥೆಯ ಹುಟ್ಟಿಗೆ ಕಾರಣರಾದರು. 1981ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ರಂಗಭೂಮಿಗೆ ಸಲ್ಲಿಸಿದ ಅಮೋಘ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಕರ್ನಾಟಕ ಸರ್ಕಾರವು ಕನ್ನಡ ರಂಗಭೂಮಿಗೆ ಅವರ ಕೊಡುಗೆಗಾಗಿ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ನೀಡಿದೆ. ಹೀಗೆ ಅವರು ಭಾರತದ ಹಲವು ಭಾಷೆಗಳಲ್ಲಿನ ರಂಗಭೂಮಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುವುದರ ಜೊತೆಗೆ ತಮ್ಮ ಮಾತೃಭಾಷೆಯಾಗಿರುವ ಕನ್ನಡ ರಂಗಭೂಮಿಗೂ ತಮ್ಮ ಅಮೂಲ್ಯ ಕೊಡುಗೆಯನ್ನು ಕೊಟ್ಟಿರುವುದು ವೈಶಿಷ್ಟ್ಯಪೂರ್ಣವಾಗಿದೆ. 

Read More »

ಬಯಲಾಟದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ: ಒಂದು ಅವಲೋಕನ

ಹುಲುಗಯ್ಯ ನಾಯಕರ್, ಕೆ. ರಾಮಕೃಷ್ಣಯ್ಯ

11 to 22

ಬಯಲಾಟವು ನಮ್ಮ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನಮಾನವನ್ನು ಪಡೆದ ಜಾನಪದ ರಂಗ ಕಲೆಯಾಗಿದೆ. ಈ ರಂಗ ಕಲಿಯು ಸುಮಾರು 150 ರಿಂದ 300 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ ಎಂಬುದು ಬಯಲಾಟ ಕೃತಿಗಳಿಂದ ಮತ್ತು ಕೆಲವು ವಿದ್ವಾಂಸರಗಳಿಂದ ತಿಳಿದು ಬಂದಿದೆ. ಇದಕ್ಕಿಂತ ಪೂರ್ವದಲ್ಲೂ ಬಯಲಾಟದ ಕುರುಹುಗಳು ಇರುವುದರ ಬಗ್ಗೆ ಇತಹಾಸವು ಕೆಲವು ಉದಾಹರಣೆಗಳಂದಿಗೆ ಸ್ಪಷ್ಟಪಡಿಸಲು ಯತ್ನಸಿದೆ. ಇಂತಹ ಬಯಲಾಟದಲ್ಲಿ ಇಂದಿನ ಯುವಜನತೆ ತೊಡಿಕೊಳ್ಳುವುದು ಬಹಳ ಜರೂರಿನ ಸಂಗತಿಯಾಗಿ ಕಂಡುಬರುತ್ತದೆ. ಏಕೆಂದರೆ ಈ ಬಯಲಾಟವು ಹಿಂದಿನ ಕಾಲದ ಅನಕ್ಷರಸ್ಥ ಜನತೆಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಾ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಹಬಾಳ್ವೆಯೊಂದಿಗೆ ಸಾರ್ಥಕತೆಯ ಜೀವನವನ್ನು ಸಾಗಿಸುವ ದಾರಿಯನ್ನು ತೋರಿಸುತ್ತಾ ಬಂದಿದೆ. ಪ್ರಪಂಚಕ್ಕೆ ಮಾದರಿ ಎನಿಸಿದ ನಮ್ಮ ಭಾರತ ಸಂಸ್ಕೃತಿಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತದ ಪ್ರಾಮುಖ್ಯತೆಯನ್ನು ಮತ್ತು ಅದರ ಮೌಲ್ಯಗಳನ್ನು ಬಿತ್ತರಿಸುತ್ತ ಜನರನ್ನು ಆ ನಿಟ್ಟಿನಲ್ಲಿ ಮೌಲ್ಯಯುತ ಬದುಕು ಕಟ್ಟಿಕೊಳ್ಳುವಲ್ಲಿ ಬಯಲಾಟಗಳು ಸಂವಹನ ಮಾಧ್ಯಮಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಜಗತ್ತಿನಲ್ಲಿ ಯುವಜನತೆ ತಮ್ಮ ಕೆಲಸದ ಒತ್ತಡಗಳಿಂದ ಮತ್ತು ಜೀವನದ ನಿರ್ವಹಣೆಯ ಕೆಲವು ಸಮಯದಲ್ಲಿ ಸರಿಯಾಗಿ ನಿರ್ವಹಿಸದೆ ಜೀವನದಲ್ಲಿ ಹತಾಶರಾಗಿ ಮೊಬೈಲ್‌ಗೆ ದಾಸರಾಗಿ ತಮ್ಮ ಜೀವನದ ಮೌಲ್ಯವನ್ನು ತಿಳಿದುಕೊಳ್ಳದೆ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗದೆ ತಮ್ಮ ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದೆ. ಇದರ ಬದಲಾವಣೆಗಾಗಿ ನಮ್ಮ ಸಂಸ್ಕೃತಿಯ ಅರಿವು ಅವರಲ್ಲಿ ಮೂಡಿಸುವದಕ್ಕಾಗಿ ಬಯಲಾಟವನ್ನು ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಿ ಅದರಲ್ಲಿ ತೊಡೆದುಕೊಳ್ಳುವುದರೊಂದಿಗೆ ಆ ಬಯಲಾಟದಲ್ಲಿ ಬರುವ ಕಥೆ ಮತ್ತು ಅದರ ಪ್ರದರ್ಶನಕ್ಕೆ ಬೇಕಾಗುವ ತಾಂತ್ರಿಕ ಅವಶ್ಯಕತೆಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಂಡು ಜೀವನವನ್ನು ಸುಂದರಮಯವಾಗಿಸುವಲ್ಲಿ ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು. ಈ ಬಯಲಾಟವು ಪ್ರಸ್ತುತ ಮಕ್ಕಳು ಮತ್ತು ಯುವ ಜನತೆಗೆ ಯಾವ ರೀತಿಯಲ್ಲಿ ತಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ಸಹಕಾರಿಯಾಗಿದೆ ಎಂಬುದನ್ನು ಕೆಲವು ಕೃತಿಗಳ ಮೂಲಕ ಸಂದರ್ಶನದ ಮೂಲಕ ಮತ್ತು ಬಯಲಾಟದಲ್ಲಿ ತೊಡಗಿರುವ ಹಿರಿಯ ಕಲಾವಿದರುಗಳ ಮೂಲಕ ಇದರಲ್ಲಿರುವ ಮೌಲ್ಯಯುತ ಸಂದೇಶಗಳನ್ನು ಸಾರುವ ಪ್ರಮುಖ ಉದ್ದೇಶವು ಈ ಒಂದು ಕಿರು ಪ್ರಬಂಧವು ಹೊಂದಿದೆ. ಈ ನಿಟ್ಟಿನಲ್ಲಿ ಕೆಲವು ಬಯಲಾಟ ಕಲಾವಿದರನ್ನು ಸಂದರ್ಶಿಸಿ, ಕೃತಿಗಳನ್ನು ಅಭ್ಯಸಿಸಿ ಮಾಹಿತಿ ಸಂಗ್ರಹಿಸಲಾಗಿದೆ. 
ಬಯಲಾಟವು ಕುಣಿತ ಪ್ರಧಾನವಾದದ್ದು ಮತ್ತು ಸಂಭಾಷಣೆ ಪ್ರಧಾನವಾದದ್ದು. ಮೊದಲು ಕುಣಿತಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡಲು ಕಾರಣವೇನು ಇರಬಹುದು ಎಂಬ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದುಬಂದ ವಿಷಯವೇನಂದರೆ, ಮನುಷ್ಯನಲ್ಲಿ ಹೆಚ್ಚಾಗಿ ಕಾಲುಗಳನ್ನು ಕಠಿಣವಾದ ಕೆಲಸಗಳಿಗೆ ಬಳಸಿ ಎಷ್ಟು ಭದ್ರವಾಗಿಟ್ಟುಕೊಳ್ಳುತ್ತಾನೋ ದೇಹದ ಆರೋಗ್ಯವು ಅಷ್ಟೇ ಭದ್ರವಾಗಿರುತ್ತದೆ ಎನ್ನುವ ಪ್ರತೀತಿಯಿದೆ. ಪ್ರಸ್ತುತ ಕಾಲದಲ್ಲೂ ಸಹ ವಾಕಿಂಗ್, ರನ್ನಿಂಗ್ ಎನ್ನುವ ನೆಪದಲ್ಲಿ ಕಾಲುಗಳನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎನ್ನುವ ಸಲಹೆ ವೈದ್ಯರು ನೀಡುತ್ತಾರೆ. ಕಾಲುಗಳು ಸದೃಢವಾಗಿಟ್ಟುಕೊಳ್ಳುವ ಸಲುವಾಗಿ ಜೋರಾಗಿ ನಡೆಯುವುದು ಅಥವಾ ಓಡುವುದು ಇದರಿಂದ ಕಾಲುಗಳು ಗಟ್ಟಿಗೊಳ್ಳುವುದೊಂದೆ ಅಲ್ಲದೆ ದೇಹದಲ್ಲಿನ ಕೊಬ್ಬಿನ ಅಂಶ ಕರಗುತ್ತದೆ. ಬೆವರು ಕಿತ್ತಿ ಬರುತ್ತದೆ. ಎಲ್ಲಾ ಅಂಗಾಂಗಗಳಲ್ಲೂ ರಕ್ತದ ಚಲನೆ ವೇಗವಾಗಿ ಸಾಗುತ್ತದೆ. ಅದೇ ರೀತಿ ಉಸಿರಾಟ ಮತ್ತು ಎದೆ ಬಡಿತ ಕೂಡ ವೇಗಪಡೆಯುತ್ತದೆ. ಇದರಿಂದ ಒಟ್ಟಾರೆ ದೇಹದ ಆರೋಗ್ಯ ಉತ್ತಮ ರೀತಿಯಲ್ಲಟ್ಟುಕೊಳ್ಲಲು ಸಾಧ್ಯ. ಹಾಗೆಯೇ ಈ ಜೋರಾದ ಸಂಭಾಷಣೆ, ಗಹಗಹಿಸಿ ನಗುವುದರಿಂದ ಗಂಟಲಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರಲಾರವು. ಬಯಲಾಟದಲ್ಲಿ ಕಬ್ಬಿಣದ ಕಡಲೆಗಳಂತೆ ಭಾಸವಾಗುವ ಪ್ರಾಸಾನುಪ್ರಾಸ ಹೊಂದಿದ ಸಂಭಾಷಣೆ ಗಂಟಲಿನ ವ್ಯಾಯಾಮಕ್ಕೂ ಅನುಕೂಲವಾಗುತ್ತದೆ. ಹಾಗೆಯೇ ಬಾಯಿಯಲ್ಲಿರುವ ಯಾವುದೇ ಅಹಿತಕರವಾದ ಸೂಕ್ಷ್ಮಾಣು ಜೀವಿಗಳು ಕೂಡ ಆ ಉಚ್ಚಾರಣೆಗೆ ಸತ್ತು ಹೋಗುತ್ತವೆ. ಹಾಗಾಗಿ ಕುಣಿತದಿಂದ ಕಾಲುಗಳು ಗಟ್ಟಿಗೊಂಡು ದೇಹದ ಆರೋಗ್ಯ ವೃದ್ಧಿಸುವಂತೆ, ಕಂಠ ಅಂದರೆ ಧ್ವನಿಯನ್ನು ಬಳಸುವುದರಿಂದ ಗಂಟಲಿನ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಒಟ್ಟಾರೆ ದೇಹದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಲು ಈ ಎರಡು ಅಂಗಾಂಗಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಬಯಲಾಟದಲ್ಲಿ ಭಾಗವಹಿಸಿದವರು ತಮ್ಮ ಸ್ವ ಅನುಭವದ ಮೂಲಕ ತಿಳಿಸಿದ್ದಾರೆ. ಪ್ರಸ್ತುತ ವೈದ್ಯರು ಕೂಡ ಸಲಹೆ ನೀಡುವಂತೆ ಕಾಲಿನ ಗಟ್ಟಿತನವೇ ದೇಹದ ಕಟ್ಟಿತನ ಮತ್ತು ಗಂಟಲಿಗೆ ಸಂಬಂಧಿಸಿದಂತೆ ಕೆಲವು ಕರ್ಕಶ ಶಬ್ದದ ರೀತಿಯಲ್ಲಿ ಗಂಟಲಿನ ವ್ಯಾಯಾಮಗಳನ್ನು ಹೇಳಿಕೊಡುತ್ತಾರೆ. ಹಾಗೆಯೇ ಹಿಂದಿನ ಕಾಲದಲ್ಲಿ ಈ ಕಠಿಣವಾದ ಶಬ್ದಗಳನ್ನು ಉಚ್ಚಾರಣೆ ಮಾಡುವುದರ ಮೂಲಕ ಆ ಗಂಟಲಿನ ಆರೋಗ್ಯವನ್ನು ವೃದ್ಧಿಸುಲು ಬಹಳಷ್ಟು ಅನುಕೂಲವಾಗಿತ್ತು ಎಂಬುದು ಈ ಬಯಲಾಟಗಳ ಮೂಲಕ ನಾವು ತಿಳಿಯಬಹುದು. ಹಾಗಾಗಿ ಯಾವುದೇ ಮನುಷ್ಯ ಅನಾರೋಗ್ಯದಿಂದ ಇದ್ದರೆ ಅವನು ಬಯಲಾಟದಲ್ಲಿ ಪಳಗಿದರೆ ಅತ್ಯಂತ ಉತ್ತಮವಾದ ಆರೋಗ್ಯ ಪಡೆಯುತ್ತಾನೆಂಬದು ಈಗಲೂ ಪ್ರಸ್ತುತದಲ್ಲಿರುವ ಮಾತಾಗಿದೆ. 

Read More »

ಶಂಭುಲಿಂಗ ವಾಲ್ದೊಡ್ಡಿ ಹಾಯಿಕುಗಳು: ಸಹಬಾಳ್ವೆಯ ಆಶಯ

ಕಿರಣ ವಲ್ಲೇಪುರೆ

23 to 28

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಜಪಾನಿ ಮೂಲಕ ಕನ್ನಡಕ್ಕೆ ಪರಿಚಯವಾದ ‘ಹಾಯಿಕು’ ಕನ್ನಡದ ಪ್ರಮುಖ ಕಾವ್ಯ ಪ್ರಕಾರವಾಗಿ ಬೆಳೆದು ಬರುತ್ತಿದೆ. ಕನ್ನಡದ ತ್ರಿಪದಿಯಂತೆಯೆ ‘ಹಾಯಿಕು’ ಮೂರು ಸಾಲಿನ ಪದ್ಯವಾಗಿದೆ. ಕನ್ನಡದ ಹಿರಿಯ ಲೇಖಕರಾದ ಶಂಭುಲಿಂಗ ವಾಲ್ದೊಡ್ಡಿ ಅವರು ‘ಹೊಂಗನಸಿನ ಹಾಯಿಕುಗಳು’, ‘ಹೊಸ ದಿಗಂತದ ಹಾಯಿಕುಗಳು’, ‘ವೈಶಾಖದ ಹಾಯಿಕುಗಳು’ ಎಂಬ ಹಾಯಿಕು ಸಂಕಲನಗಳನ್ನು ರಚಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಸಂಭುಲಿಂಗ ವಾಲ್ದೊಡ್ಡಿ ಅವರ ಹಾಯಿಕುಗಳಲ್ಲಿ ವ್ಯಕ್ತಗೊಂಡ ಸಹಬಾಳ್ವೆಯ ಆಶಯವನ್ನು ವಿಶ್ಲೇಷಿಸಲಾಗಿದೆ. 

Read More »

ಹರಿಶ್ಚಂದ್ರಚಾರಿತ್ರದ ಹೊಲತಿಯರ ಪ್ರಸಂಗ: ದಲಿತ ಪ್ರಜ್ಞೆಯ ಟಿಪ್ಪಣಿ

ರಾಘವೇಂದ್ರ ಕುಪ್ಪೇಲೂರ

29 to 40

ಈ ಲೇಖನದಲ್ಲಿನ ‘ದಲಿತ ಪ್ರಜ್ಞೆ’ ಎಂಬುದನ್ನು ಆಧುನಿಕ ದಲಿತ ಲೋಕಮೀಮಾಂಸೆಯ ಅರಿವಿನ ಹಿನ್ನೆಲೆಯಲ್ಲಿ ಪ್ರಯೋಗಿಸಲಾಗಿದೆ. ಅರವಿಂದ ಮಾಲಗತ್ತಿ ಅವರು ‘ದಲಿತ ಪ್ರಜ್ಞೆ’ಯನ್ನು ಕುರಿತು ಹೀಗೆ ಹೇಳುತ್ತಾರೆ: ʼಪ್ರಜ್ಞೆ ಎಂಬ ಪದ - ಭೂತ – ವರ್ತಮಾನ - ಭವಿಷತ್ಕಾಲಗಳನ್ನು ಒಳಗೊಂಡು ಅವುಗಳನ್ನು ಒಂದು ಸರಣಿಯಲ್ಲಿರಿಸಿ ಪರಿಸರದ ಸ್ಥಿತಿಯನ್ನು ಗ್ರಹಿಸಿ ಆ ಸ್ಥಿತಿಗೆ ಚಾಲನೆ ನೀಡುವ ಶಕ್ತಿʼ ಎನ್ನುತ್ತಾರೆ. ಪ್ರಸ್ತುತ ಈ ಲೇಖನದ ವ್ಯಾಪ್ತಿಯು ಅಧ್ಯಯನದ ದೃಷ್ಟಿಯಿಂದ ಮಧ್ಯಕಾಲೀನ ಸಂದರ್ಭದ ಕವಿ ರಾಘವಾಂಕನ ಹರಿಶ್ಚಂದ್ರ ಚಾರಿತ್ರ ಕಾವ್ಯದ ಹೊಲತಿಯ ಪ್ರಸಂಗವನ್ನು ಕೇಂದ್ರಿಕರಿಸಿದೆ. ಇಲ್ಲಿ ವಿಶ್ವಾಮಿತ್ರ, ಹೊಲತಿಯರು, ಹರಿಶ್ಚಂದ್ರ ಮತ್ತು ಕವಿಯ ನೆಲೆಯಂದ ಹೀಗೆ ನಾಲ್ಕು ಪಾರ್ಶ್ವಗಳಲ್ಲಿ ದಲಿತ ಪ್ರಜ್ಞೆಯ ಕಣ್ಣೋಟವನ್ನು ಒಳಗೊಂಡಿದೆ. 

Read More »

ಯಯಾತಿ ನಾಟಕದಲ್ಲಿ ಸಾಮಾಜಿಕ ಸಂಘರ್ಷ

ರಮೇಶ್

41 to 51

ಗಿರೀಶ್ ಕಾರ್ನಾಡರು ಬಹುಮುಖ ವ್ಯಕ್ತಿತ್ವವುಳ್ಳವರು ನಾಟಕಕಾರ ನಿರ್ದೇಶಕ ನಟ ಪ್ರಾಧ್ಯಾಪಕರಾಗಿ ಹಲವು ಕ್ಷೇತ್ರಗಳಲ್ಲಿ ದುಡಿದವರು ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ನಾಟಕ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಪ್ರಶಸ್ತಿ ವಿಜೇತರು ನಾನಾ ಕ್ಷೇತ್ರಗಳಲ್ಲಿ ಪಾಂಡಿತ್ಯ ಪಡೆದವರು ನಾಗಮಂಡಲ, ತುಘಲಕ್, ಹಯವದನ, ಹಿಟ್ಟಿನ ಹುಂಜ, ತಲೆದಂಡ ಯಯಾತಿ ನಾಟಕಗಳನ್ನು ರಚಿಸಿದ್ದಾರೆ. ಕನ್ನಡಕ್ಕೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟವರು. 
ಯಯಾತಿ ಪೌರಾಣಿಕ ವ್ಯಕ್ತಿ, ಪಾಂಡವರ ಪೂರ್ವಜರಲ್ಲಿ ಒಬ್ಬ ನಹುಷನ ಮಗ ಅವನಿಗೆ ಇಬ್ಬರು ಹೆಂಡತಿಯರು, ಶರ್ಮಿಷ್ಠೆ ಮತ್ತು ದೇವಯಾನಿ ಶರ್ಮಿಷ್ಠೆ ರಾಕ್ಷಸರಾಜನ ಮಗಳು, ದೇವಯಾನಿ ಅಸುರರ ಗುರು ಶುಕ್ರಾಚಾರ್ಯರ ಮಗಳು ಪುರಾಣಗಳಲ್ಲಿ ಬರುವ ಯಯಾತಿ ಬದುಕನ್ನು ಆಯ್ಕೆ ಮಾಡಿಕೊಂಡು ದೇವಯಾನಿ ಮದುವೆಯ ನಂತರದ ಕಥೆಯ ಆಧಾರದ ಮೇಲೆ ನಾಟಕವನ್ನು ರಚಿಸಿದ್ದಾರೆ. ಮೂಲ ಯಯಾತಿ ಕತೆಯಲ್ಲಿ ಇಲ್ಲದಿರುವ ಚಿತ್ರಲೇಖೆ ಎಂಬ ಪುರುವಿನ ಹೆಂಡತಿ ಪಾತ್ರವನ್ನು ಸೃಷ್ಟಿಸಿ ಹೊಸ ದೃಷ್ಟಿಕೋನದಿಂದ ಯಯಾತಿ ನಾಟಕ ರಚಿಸಿದ್ದಾರೆ. ಸ್ವರ್ಣಲತೆ ಎಂಬ ದಾಸಿ ಪಾತ್ರವನ್ನು ಹೊಸದಾಗಿ ಹುಟ್ಟು ಹಾಕಿದ್ದಾರೆ. ಇಲ್ಲಿ ಪುರು ಆಧುನಿಕ ಯುವಜನಾಂಗದ ಪ್ರತಿನಿಧಿಯಂತೆ ಕಂಡುಬರುತ್ತಾರೆ. ಯಯಾತಿ, ಪುರು, ದೇವಿಯಾನಿ, ಶರ್ಮಿಷ್ಠೆ, ಸ್ವರ್ಣಲತೆ, ಚಿತ್ರಲೇಖೆ ಪಾತ್ರಗಳಲ್ಲದೆ ಕಚ, ಶುಕ್ರಾಚಾರ್ಯ, ಪುರುವಿನ ತಾಯಿ ಪಾತ್ರಗಳ ಪ್ರಸ್ತಾಪವಿದೆ. 

Read More »

ಶಾಂತಕವಿಗಳು ಮತ್ತು ಕನ್ನಡ ನಾಡು-ನುಡಿ ಚಿಂತನೆ

ಮಲ್ಲಯ್ಯ ಸಂಡೂರು

52 to 60

ಪ್ರಾಚೀನ ಕಾಲದಲ್ಲಿ ಅಖಂಡ ಭಾರತೀಯ ಸಂಸ್ಕೃತಿ ಹೊಂದಿದ ಭಾರತೀಯರಿದ್ದರೇ ಹೊರತು ರಾಜಕೀಯವಾಗಿ, ಆಡಳಿತಾತ್ಮಕವಾಗಿ ಭಾರತ ಒಂದು ದೇಶವಾಗಿ ಅಸ್ತಿತ್ವವಿದ್ದಿರಲಿಲ್ಲ. ಅಂದಿನ ಕನ್ನಡನಾಡಿನ ರಾಜ್ಯ-ಸಾಮ್ರಾಜ್ಯಗಳು ಸ್ವತಂತ್ರ ದೇಶಗಳಾಗಿ, ಸಾರ್ವಭೌಮತ್ವ ಹೊಂದಿದ್ದವು. ಇಂದಿನಂತೆ ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳಂತೆ ರಾಷ್ಟ್ರೀಯತೆ ಮತ್ತು ಪ್ರಾಂತಿಯತೆಗಳ ದ್ವಂದ್ವವಿದ್ದಿರಲಿಲ್ಲ. ಅಂದು ಇವೆರಡೂ ಅಲ್ಲದ ‘ರಾಜಭಕ್ತಿ’ ಇತ್ತು. ಪ್ರಾಚೀನ ಕನ್ನಡ ಕವಿಗಳು ತಮ್ಮನ್ನಾಳ್ವ ರಾಜರಿಗೆ, ರಾಜ್ಯಕ್ಕೆ, ಸಾಮ್ರಾಜ್ಯಕ್ಕೆ, ರಾಜಭಕ್ತಿ-ರಾಜನಿಷ್ಠೆಯನ್ನು ತೋರಿಸುವದರ, ಮೂಲಕ, ನಾಡು-ನುಡಿಯ ಅಭಿಮಾನ ಪ್ರೇಮವನ್ನು ಹೊಂದಿದ್ದರು. ಇದನ್ನು ನಾವು ಕನ್ನಡದ ಮೊದಲ ಕೃತಿಯಾದ ಕವಿರಾಜಮಾರ್ಗದಲ್ಲಿ “ಕಾವೇರಿಯಿಂದ ಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್’’ ಎನ್ನುವಲ್ಲಿ ತನ್ನ ಕಾಲದ ಕನ್ನಡ ನಾಡಿನ ಮೇರೆಗಳನ್ನು ಹೇಳಿದ್ದಾನೆಯೇ ಹೊರತು ಇಡೀ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿಲ್ಲಾ. ಕನ್ನಡ ನಾಡಿನ ಅರಸರು, ಉತ್ತರದಲ್ಲಿ ಹಿಮಾಲಯದವರೆಗೂ, ಪಶ್ಚಿಮದ ಸಮುದ್ರದವರೆಗೂ ದಿಗ್ವಿಜಯ ಬಿಸಿರುವದನ್ನು ಅಥವಾ ರಾಜ್ಯದ ಗಡಿ ವಿಸ್ತರಿಸಿರುವದನ್ನು ಕನ್ನಡಿಗರ ಸಾಹಸ, ಶೌರ್ಯ, ಹಿರಿಮೆ, ಎಂದೊ, ಕನ್ನಡ ನಾಡಿನ ಮೇರೆಗಳೆಂದೂ ವರ್ಣಿಸಿರುದುಂಟು. ಕನ್ನಡ ಕವಿಗಳು ಅಖಂಡ ಭಾರತೀಯ ಸಂಸ್ಕೃತಿಯ ಪರಂಪರೆಗೆ ಸೇರಿದ ಪೌರಾಣಿಕ ವಸ್ತುವನ್ನು ತಮ್ಮನ್ನಾಳುವ ರಾಜರು, ಸಾಮಂತರಿರಲಿ, ಚಕ್ರವರ್ತಿಗಳಿರಲಿ, ಅವರಿಗೆ ಆ ರಾಜ್ಯಕ್ಕೆ ಸಮಿಕರಿಸಿಯೊ, ಆರೋಪಿಯಿಸೋ ರೂಪಾಂತರಿಸಿಯೋ ಕಾವ್ಯ ರಚಿಸಿರುವುದುಂಟು. ಮೂಲವಸ್ತುವಿನಲ್ಲಿಯ ಉತ್ತರ ಭಾರತದ ನದಿಯಯನ್ನೊ, ಪ್ರದೇಶವನ್ನೊ, ಕನ್ನಡ ನಾಡಿನ ಪ್ರದೇಶಕ್ಕೊ, ನದಿಗೋ ಆರೋಪಿಸಿ ವರ್ಣಿಸಿರುವರು. ಆ ಪಾತ್ರ, ಆ ಸನ್ನಿವೇಶವನ್ನು ಕನ್ನಡ ನಾಡಿನ ಇಂತಹ ನದಿಗೆ, ಇಂತಹ ಪ್ರದೇಶಕ್ಕೆ ಬಂದಿತ್ತೆಂದು ವರ್ಣಿಸಿರುವುದುಂಟು. ಹೀಗೆ ಮೂಲವಸ್ತುವನ್ನು ಸ್ವೀಕರಿಸುವುದರ ಮೂಲಕ ಸಂಸ್ಕೃತಿಕವಾಗಿ ಭಾರತೀಯತ್ವವನ್ನು ಒಪ್ಪಿಕೊಂಡು ಅದನ್ನು ತಮ್ಮ ನಾಡಿಗೆ, ಪ್ರದೇಶಕ್ಕೆ, ಭಾಷೆಗೆ ರೂಪಾಂತರಿಸಿ ಸೀಮಿತಗೊಳಿಸಿಕೊಳ್ಳುವಲ್ಲಿ ತಮ್ಮ ನಾಡು-ನುಡಿಯ ಪ್ರೇಮವನ್ನು ಮೆರೆದಿರುವರು. ಈ ರೀತಿಯ ಕನ್ನಡದ ಆದಿ ಕವಿ ಪಂಪನು ಮಹಾಭಾರತದ ವಸ್ತುವನ್ನು ಕನ್ನಡ ನಾಡಿನ ತನ್ನ ಆಶ್ರಯದಾತ ಅರಸನಾದ ಅರಿಕೇಸರಿಗೆ ಸಮೀಕರಿಸಿ ‘ವಿಕ್ರಮಾರ್ಜುನ ವಿಜಯ’ವನ್ನು ರಚಿಸಿರುವನು. ಇದೇ ರೀತಿ ಮುಂದೆ ಬಂದ ಕನ್ನಡ ಕವಿಗಳ ಕಾವ್ಯ ಪರಂಪರೆಯಲ್ಲಿ ನಾಡು-ನುಡಿಯ ಬಗೆಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದನ್ನು ಕಾಣುತ್ತೇವೆ. 

Read More »

17 ಮತ್ತು 18 ನೇ ಶತಮಾನದ ಕನ್ನಡ ಇತಿಹಾಸದಲ್ಲಿ ವಸಾಹತುಶಾಹಿಯ ಅರಿಮೆಯ ಹಿಂಸೆ (ಜ್ಞಾನಾತ್ಮಕ ಹಿಂಸೆ)

ಸುಧಾಕರ್ ಆರ್.ಎನ್.

61 to 67

ಈ ಲೇಖನವು 17ನೇ ಮತ್ತು 18ನೇ ಶತಮಾನಗಳಲ್ಲಿ ಕನ್ನಡಿಗರ ಚರಿತ್ರೆಯ ಮೇಲೆ ವಸಾಹತುಶಾಹಿಯು ಹೇರಿದ ಎಪಿಸ್ಟೆಮಿಕ್ (ಜ್ಞಾನಾಧಾರಿತ) ಹಿಂಸೆ ಅಥವಾ ಅರಿಮೆಯ ಹಿಂಸೆಯನ್ನು ವಿವರಿಸುತ್ತದೆ. ವಸಾಹತುಶಾಹಿ ಜ್ಞಾನ ವ್ಯವಸ್ಥೆಗಳು ಕನ್ನಡದ ದೇಸೀ ಜ್ಞಾನ ಪರಂಪರೆಗಳನ್ನು ಮತ್ತು ಇತಿಹಾಸಿಕ ಕಥನಗಳನ್ನು ಹೇಗೆ ಬದಲು ಮಾಡಿವೆ ಎಂಬುದನ್ನು ಇದು ಪರಿಶೀಲಿಸುತ್ತದೆ. ಈ ಮೂಲಕ ವಸಾಹತುಶಾಹಿ ಸಾಮ್ರಾಜ್ಯಾಧಿಕಾರದ ವಿಶಾಲ ಯೋಜನೆಗೆ ಹೇಗೆ ಸಹಕಾರಿಯಾಗಿದೆಯೆಂಬುದನ್ನು ಅನಾವರಣಗೊಳಿಸುತ್ತದೆ. ಇತಿಹಾಸ ದಾಖಲೆಗಳು, ಮಿಷನರಿ ಬರಹಗಳು, ಆಡಳಿತ ದಾಖಲೆಗಳು ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳ ಮರು ರಚನೆ ತೀವ್ರ ವಿಶ್ಲೇಷಣೆಯ ಮೂಲಕ, ಈ ಲೇಖನವು ಕನ್ನಡದ ಸಾಂಸ್ಕೃತಿಕ, ಭಾಷಾ ಮತ್ತು ಬೌದ್ಧಿಕ ಪರಂಪರೆಗಳ ಮೇಲೆ ಹೇರಲಾದ ಅರಿಮೆಯ ಹಿಂಸೆಯ ಬಹುಮಟ್ಟದ ಸ್ವರೂಪಗಳನ್ನು ವಿವರಿಸುತ್ತದೆ. 

Read More »

ಬೌದ್ಧ ಬಿಕ್ಕು ಮತ್ತು ದೇವರಗುಡ್ಡರ ದೀಕ್ಷೆಯ ವಿಧಾನಗಳ ಅವಲೋಕನ

ಗುಂಡಣ್ಣ ಪಿ.

68 to 78

ಯಾವುದೇ ಒಂದು ಮತ, ಧರ್ಮದ ಅಸ್ತಿತ್ವ ಉಳಿದಿರುವುದು ಅದನ್ನು ಅನುಸರಿಸುವ ಪರಂಪರೆಯಿಂದ ಪರಂಪರೆಗೆ ಸಾಗಿಸುವ ಅನುಯಾಯಿಗಳ ಮೇಲೆ. ಇವರ ಬಗ್ಗೆ ತಿಳಿದುಕೊಳ್ಳದೆ ಮತ, ಧರ್ಮಗಳ ಸತ್ವವನ್ನು ಗ್ರಹಿಸಲಾಗುವುದಿಲ್ಲ. ಮೌಖಿಕ ಪರಂಪರೆಯಲ್ಲಿ ಸಾಗಿ ಬಂದಿರುವ ಕಥನ, ಕಾವ್ಯ, ಲಾವಣಿ ಮೊದಲಾದವುಗಳು ಕಾಲಾನಂತರದಲ್ಲಿ ಭಿನ್ನ ಪ್ರದೇಶ, ಸಂದರ್ಭಗಳಲ್ಲಿ ಮಾರ್ಪಾಟುಗೊಂಡು ಮೂಲದಲ್ಲಿ ಇಲ್ಲದ ವಿಷಯಾಂಶಗಳನ್ನು, ಘಟನೆಗಳನ್ನು ಸೇರಿಸಿ ರೂಪುಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ಆದರೆ ನಿಯಮ, ಆಚರಣೆಗಳು ಎಷ್ಟೇ ತಲೆಮಾರುಗಳು ದಾಟಿ ಬಂದರು ಹೆಚ್ಚು ಬದಲಾವಣೆಗೊಳಿಸದೆ ಅನುಸರಿಸಲಾಗಿರುತ್ತದೆ. ಮಂಟೇಸ್ವಾಮಿ, ಸಿದ್ದಪ್ಪಾಜಿ ಜಾತ್ರೆಗಳಲ್ಲಿ ಮಾಂಸಹಾರ, ಭಂಗಿ ಸೇವನೆಯ ಪದ್ದತಿ ಇದೆ. ಮಲೆಯ ಮಾದಯ್ಯನ ನೆಲೆಯಲ್ಲಿ ಹೆಣ್ಣು ಗಂಡಿನ ಸಂಬಂಧಕ್ಕಾಗಲಿ, ಮಾಂಸ-ಮದ್ಯಗಳ ಸೇವನೆಗಾಗಲಿ ಅವಕಾಶವಿಲ್ಲ. ವಿರಕ್ತಿ ಮತ್ತು ಭಕ್ತಿಯೇ ಭಕ್ತರ ಮೂಲ ನಿಯಮ. ಮಾದಯ್ಯನ ಅನುಯಾಯಿಗಳಾದ ದೇವರಗುಡ್ಡರು ಪಡೆಯುವ ದೀಕ್ಷಾ ಪದ್ದತಿ ಅಹಿಂಸೆ ಮತ್ತು ಶಾಂತಿಯ ಜೀವನವನ್ನು, ಸೌಹಾರ್ದ ಬದುಕನ್ನು, ಅಹಂಕಾರವಿಲ್ಲದೆ ಭಿಕ್ಷೆ ಬೇಡಿ ಹಂಚಿ ತನ್ನುವುದನ್ನು ತಿಳಿಸುತ್ತದೆ. ಇದು ಬೌದ್ಧ ಬಿಕ್ಕುಗಳು ಅನುಸರಿಸುವ ದೀಕ್ಷಾ ನಿಯಮಗಳಿಗೆ ಪೂರಕ ಸಂಬಂಧವನ್ನು ಹೊಂದಿದೆ. 

Read More »

Perception Of Student Teachers on Integrated Teacher Education Programme at Senior Secondary Level

Sujata B Hanchinalkar, T.V. Somashekar, Praveen Kumar S.

79 to 91

Indian system of teacher education has been revamped after implementation of National Council for Teacher Education (NCTE) Regulation, 2014. The pre-service teacher education programme has been designed to develop professional competencies of student teachers. Therefore, NCTE regulation prescribed various forms of integrated approaches in teacher preparation at elementary level and secondary level. Much before NCTEs implementation of Integrated Teacher Education Programme (ITEP), Regional Institutes of Education (RIEs) had planned and successfully implemented the ITEP in Science, Social Science from last four decades. Since a decade, RIE Mysuru has also implemented ITEP [‘Master of Science Education’ (i.e. M.Sc.Ed.)] for teacher preparation at Senior Secondary, level which is one of its kind in the country. Therefore, the present study has been taken up to explore the perceptions of student teachers on Integrated Teacher Education Programme at Senior Secondary level at RIE Mysuru. The study reveals positive opinion of student teachers towards the Integrated Teacher Education Programme at Senior Secondary level. It also involved in preparation of large number of competent teachers for senior secondary level in meeting the needs of the present-day schools.

Read More »

Ethics of Inclusive Peace and Responsible Governance

Prof. Fr. Davis Panadan CMI, Sini John

92 to 106

The world faces growing risks from disputes, conflicts, violence, and instability. Building inclusive peace is about much more than ending war. It is about putting in place the institutions and trust that will strengthen the social contract and carry people forward into a peaceful future. It is about resolution of disputes, conflicts, and wars. Inclusion does not mean giving everyone a seat at the negotiating table. It does mean creating opportunities for people with a stake in lasting peace to shape it. Inclusive governance is that the machinery of government is equipped with effective, responsive and accountable institutions capable and empowered to deliver necessary public services to those furthest behind and rebuild public trust in government at the local levels. Governance is most ethically seen in the legal process and the juristic act through which the inclusive peace is achieved. The legal process is the resolution of disputes and conflicts which are actual or occasionally potential, by means of a decision. Pound stresses that law, morals and policy are distinct which can alter the fact that legal decisions are inevitably based on an ideology. Therefore, it is better to face up to this and make a conscious effort to recognize what are the operative values of one’s society and develop the law accordingly, rather than attempt to treat all legal decisions as purely technical exercises in legal logic.

Read More »

Martial Race Theory and Colonial Military Recruitment: Constructing Racial Hierarchies in British India

Aneesha Dutta

107 to 115

The British colonial administration constructed the martial race theory to selectively recruit soldiers based on racial, ethnic and geographical criteria. This paper examines how colonial discourse shaped the classifications of Indian communities into martial and non-martial groups, favouring Sikhs, Gurkhas and Pathans while marginalising high caste Hindu and Dalits. Using recruitment handbooks, administrative policies and military reports, the study highlights the racialised logic behind the British military enlistment practices. The shift in recruitment post-1857, particularly the Peel and Eden Commissions’ role in reinforcing ethnic segregation, demonstrates how these policies were aimed at dividing Indian society and ensuring imperial stability. Furthermore, the paper explores how martial race ideology was codified through colonial ethnographies, handbooks, and regimental structures. This study argues that martial race theory was not merely a military necessity but a colonial tool of governance, reinforcing racial hierarchies that persisted even in post-colonial India. 

Read More »

Importance of Summer Camps for Children in Theatre in Indian Context

Prabhuraja

116 to 120

Theatre summer camps in India play a pivotal role in shaping children’s holistic development by offering unique opportunities to explore creativity, build confidence, and develop essential life skills. This research article examines the significance of summer camps tailored specifically for children in the Indian theatre domain. By reviewing existing literature and practical experiences from India, we highlight the transformative impact of theatre summer camps on children’s personal growth, artistic expression, and social connections.

Read More »

Cyber bullying of Indian Cricketers on internet: A study

Vinod Kumar D Chavan

121 to 132

Cyberbullying has become a pervasive issue in the digital age, affecting individuals across various domains, including sports. This study delves into the phenomenon of cyberbullying targeting Indian cricketers on the internet, shedding light on its prevalence, forms, and consequences. With the proliferation of social media platforms and the increasing online presence of cricket stars, this research investigates the unique challenges faced by Indian cricketers as they navigate the virtual world.
The study employs a mixed-methods approach, combining qualitative and quantitative analyses to provide a comprehensive understanding of cyberbullying against Indian cricketers. Data was collected through surveys, interviews, and content analysis of social media platforms, focusing on prominent Indian cricket players who have faced online harassment.
Our findings reveal that Indian cricketers are disproportionately targeted by cyberbullies due to their high public profiles and the emotional investment of fans in cricket. Common forms of cyberbullying against cricketers include abusive comments, threats, and character assassination. Social media platforms, especially Twitter and Instagram, serve as hotspots for such vitriolic behaviour, perpetuated by anonymous trolls and disgruntled fans.
The psychological impact of cyberbullying on Indian cricketers is significant, leading to stress, anxiety, and a negative impact on their performance. Many cricketers report feeling helpless and vulnerable when confronted with a barrage of online abuse. In some cases, cyberbullying has even resulted in players taking breaks from social media or seeking professional mental health support.
This study also investigates the role of social media platforms and their policies in curbing cyberbullying. It identifies the need for stricter regulations and more proactive measures to protect the mental well-being of Indian cricketers and other public figures. Additionally, the study highlights the importance of media literacy and digital resilience training for athletes to empower them in dealing with cyberbullying.
In conclusion, cyberbullying of Indian cricketers on the internet is a pressing issue that demands attention from stakeholders, including sports authorities, social media platforms, and society as a whole. This study provides valuable insights into the nature and impact of cyberbullying on cricketers, emphasizing the urgent need for concerted efforts to combat online harassment and protect the mental health of our sporting icons in the digital age.

Read More »