ಬೌದ್ಧ ಬಿಕ್ಕು ಮತ್ತು ದೇವರಗುಡ್ಡರ ದೀಕ್ಷೆಯ ವಿಧಾನಗಳ ಅವಲೋಕನ

Main Article Content

ಗುಂಡಣ್ಣ ಪಿ.

Abstract

ಯಾವುದೇ ಒಂದು ಮತ, ಧರ್ಮದ ಅಸ್ತಿತ್ವ ಉಳಿದಿರುವುದು ಅದನ್ನು ಅನುಸರಿಸುವ ಪರಂಪರೆಯಿಂದ ಪರಂಪರೆಗೆ ಸಾಗಿಸುವ ಅನುಯಾಯಿಗಳ ಮೇಲೆ. ಇವರ ಬಗ್ಗೆ ತಿಳಿದುಕೊಳ್ಳದೆ ಮತ, ಧರ್ಮಗಳ ಸತ್ವವನ್ನು ಗ್ರಹಿಸಲಾಗುವುದಿಲ್ಲ. ಮೌಖಿಕ ಪರಂಪರೆಯಲ್ಲಿ ಸಾಗಿ ಬಂದಿರುವ ಕಥನ, ಕಾವ್ಯ, ಲಾವಣಿ ಮೊದಲಾದವುಗಳು ಕಾಲಾನಂತರದಲ್ಲಿ ಭಿನ್ನ ಪ್ರದೇಶ, ಸಂದರ್ಭಗಳಲ್ಲಿ ಮಾರ್ಪಾಟುಗೊಂಡು ಮೂಲದಲ್ಲಿ ಇಲ್ಲದ ವಿಷಯಾಂಶಗಳನ್ನು, ಘಟನೆಗಳನ್ನು ಸೇರಿಸಿ ರೂಪುಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ಆದರೆ ನಿಯಮ, ಆಚರಣೆಗಳು ಎಷ್ಟೇ ತಲೆಮಾರುಗಳು ದಾಟಿ ಬಂದರು ಹೆಚ್ಚು ಬದಲಾವಣೆಗೊಳಿಸದೆ ಅನುಸರಿಸಲಾಗಿರುತ್ತದೆ. ಮಂಟೇಸ್ವಾಮಿ, ಸಿದ್ದಪ್ಪಾಜಿ ಜಾತ್ರೆಗಳಲ್ಲಿ ಮಾಂಸಹಾರ, ಭಂಗಿ ಸೇವನೆಯ ಪದ್ದತಿ ಇದೆ. ಮಲೆಯ ಮಾದಯ್ಯನ ನೆಲೆಯಲ್ಲಿ ಹೆಣ್ಣು ಗಂಡಿನ ಸಂಬಂಧಕ್ಕಾಗಲಿ, ಮಾಂಸ-ಮದ್ಯಗಳ ಸೇವನೆಗಾಗಲಿ ಅವಕಾಶವಿಲ್ಲ. ವಿರಕ್ತಿ ಮತ್ತು ಭಕ್ತಿಯೇ ಭಕ್ತರ ಮೂಲ ನಿಯಮ. ಮಾದಯ್ಯನ ಅನುಯಾಯಿಗಳಾದ ದೇವರಗುಡ್ಡರು ಪಡೆಯುವ ದೀಕ್ಷಾ ಪದ್ದತಿ ಅಹಿಂಸೆ ಮತ್ತು ಶಾಂತಿಯ ಜೀವನವನ್ನು, ಸೌಹಾರ್ದ ಬದುಕನ್ನು, ಅಹಂಕಾರವಿಲ್ಲದೆ ಭಿಕ್ಷೆ ಬೇಡಿ ಹಂಚಿ ತನ್ನುವುದನ್ನು ತಿಳಿಸುತ್ತದೆ. ಇದು ಬೌದ್ಧ ಬಿಕ್ಕುಗಳು ಅನುಸರಿಸುವ ದೀಕ್ಷಾ ನಿಯಮಗಳಿಗೆ ಪೂರಕ ಸಂಬಂಧವನ್ನು ಹೊಂದಿದೆ. 

Article Details

Section

Research Articles

Author Biography

ಗುಂಡಣ್ಣ ಪಿ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಗುಂಡಣ್ಣ ಪಿ. (2025). ಬೌದ್ಧ ಬಿಕ್ಕು ಮತ್ತು ದೇವರಗುಡ್ಡರ ದೀಕ್ಷೆಯ ವಿಧಾನಗಳ ಅವಲೋಕನ. ಅಕ್ಷರಸೂರ್ಯ (AKSHARASURYA), 6(03), 68 to 78. https://aksharasurya.com/index.php/latest/article/view/1133

References

ಅಂಬೇಡ್ಕರ್‌ ಬಿ.ಆರ್.‌, (2021), ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ರವರ ಸಮಗ್ರ ಬರಹಗಳು ಮತ್ತು ಭಾಷಣಗಳು: ಸಂಪುಟ-10, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.

ರಾಜರತ್ನಂ ಜಿ.ಪಿ., (2007) ಗೌತಮ ಬದ್ಧ, ಸ್ವಪ್ನ ಬುಕ್‌ ಹೌಸ್‌, ಬೆಂಗಳೂರು.

ವೆಂಕಟೇಶ್‌ ಇಂದ್ವಾಡಿ ರಾ. (ಸಂ), (2008), ಮಲೆಯ ಮಾದಪ್ಪನ ಮಹಾಕಾವ್ಯ ಸಾಂಸ್ಕೃತಿಕ ಮುಖಾಮುಖಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸ್ವಾಮಿ ಬಿ.ಎಸ್., (2008), ಮಲೆಯ ಮಾದೇಶ್ವರ ಮಹಾಸಂಪುಟ, ಕಿರಣ್‌ ಎಂಟರ್‌ ಪ್ರೈಸಸ್‌, ಬೆಂಗಳೂರು.

ಚಂದ್ರಶೇಖರ ಕಂಬಾರ (ಸಂ), (2021), ಜಾನಪದ ವಿಶ್ವಕೋಶ: ಸಂಪುಟ-2, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.