ಬಯಲಾಟದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ: ಒಂದು ಅವಲೋಕನ

Main Article Content

ಹುಲುಗಯ್ಯ ನಾಯಕರ್
ಕೆ. ರಾಮಕೃಷ್ಣಯ್ಯ

Abstract

ಬಯಲಾಟವು ನಮ್ಮ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನಮಾನವನ್ನು ಪಡೆದ ಜಾನಪದ ರಂಗ ಕಲೆಯಾಗಿದೆ. ಈ ರಂಗ ಕಲಿಯು ಸುಮಾರು 150 ರಿಂದ 300 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ ಎಂಬುದು ಬಯಲಾಟ ಕೃತಿಗಳಿಂದ ಮತ್ತು ಕೆಲವು ವಿದ್ವಾಂಸರಗಳಿಂದ ತಿಳಿದು ಬಂದಿದೆ. ಇದಕ್ಕಿಂತ ಪೂರ್ವದಲ್ಲೂ ಬಯಲಾಟದ ಕುರುಹುಗಳು ಇರುವುದರ ಬಗ್ಗೆ ಇತಹಾಸವು ಕೆಲವು ಉದಾಹರಣೆಗಳಂದಿಗೆ ಸ್ಪಷ್ಟಪಡಿಸಲು ಯತ್ನಸಿದೆ. ಇಂತಹ ಬಯಲಾಟದಲ್ಲಿ ಇಂದಿನ ಯುವಜನತೆ ತೊಡಿಕೊಳ್ಳುವುದು ಬಹಳ ಜರೂರಿನ ಸಂಗತಿಯಾಗಿ ಕಂಡುಬರುತ್ತದೆ. ಏಕೆಂದರೆ ಈ ಬಯಲಾಟವು ಹಿಂದಿನ ಕಾಲದ ಅನಕ್ಷರಸ್ಥ ಜನತೆಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಾ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಹಬಾಳ್ವೆಯೊಂದಿಗೆ ಸಾರ್ಥಕತೆಯ ಜೀವನವನ್ನು ಸಾಗಿಸುವ ದಾರಿಯನ್ನು ತೋರಿಸುತ್ತಾ ಬಂದಿದೆ. ಪ್ರಪಂಚಕ್ಕೆ ಮಾದರಿ ಎನಿಸಿದ ನಮ್ಮ ಭಾರತ ಸಂಸ್ಕೃತಿಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತದ ಪ್ರಾಮುಖ್ಯತೆಯನ್ನು ಮತ್ತು ಅದರ ಮೌಲ್ಯಗಳನ್ನು ಬಿತ್ತರಿಸುತ್ತ ಜನರನ್ನು ಆ ನಿಟ್ಟಿನಲ್ಲಿ ಮೌಲ್ಯಯುತ ಬದುಕು ಕಟ್ಟಿಕೊಳ್ಳುವಲ್ಲಿ ಬಯಲಾಟಗಳು ಸಂವಹನ ಮಾಧ್ಯಮಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಜಗತ್ತಿನಲ್ಲಿ ಯುವಜನತೆ ತಮ್ಮ ಕೆಲಸದ ಒತ್ತಡಗಳಿಂದ ಮತ್ತು ಜೀವನದ ನಿರ್ವಹಣೆಯ ಕೆಲವು ಸಮಯದಲ್ಲಿ ಸರಿಯಾಗಿ ನಿರ್ವಹಿಸದೆ ಜೀವನದಲ್ಲಿ ಹತಾಶರಾಗಿ ಮೊಬೈಲ್‌ಗೆ ದಾಸರಾಗಿ ತಮ್ಮ ಜೀವನದ ಮೌಲ್ಯವನ್ನು ತಿಳಿದುಕೊಳ್ಳದೆ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗದೆ ತಮ್ಮ ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದೆ. ಇದರ ಬದಲಾವಣೆಗಾಗಿ ನಮ್ಮ ಸಂಸ್ಕೃತಿಯ ಅರಿವು ಅವರಲ್ಲಿ ಮೂಡಿಸುವದಕ್ಕಾಗಿ ಬಯಲಾಟವನ್ನು ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಿ ಅದರಲ್ಲಿ ತೊಡೆದುಕೊಳ್ಳುವುದರೊಂದಿಗೆ ಆ ಬಯಲಾಟದಲ್ಲಿ ಬರುವ ಕಥೆ ಮತ್ತು ಅದರ ಪ್ರದರ್ಶನಕ್ಕೆ ಬೇಕಾಗುವ ತಾಂತ್ರಿಕ ಅವಶ್ಯಕತೆಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಂಡು ಜೀವನವನ್ನು ಸುಂದರಮಯವಾಗಿಸುವಲ್ಲಿ ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು. ಈ ಬಯಲಾಟವು ಪ್ರಸ್ತುತ ಮಕ್ಕಳು ಮತ್ತು ಯುವ ಜನತೆಗೆ ಯಾವ ರೀತಿಯಲ್ಲಿ ತಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ಸಹಕಾರಿಯಾಗಿದೆ ಎಂಬುದನ್ನು ಕೆಲವು ಕೃತಿಗಳ ಮೂಲಕ ಸಂದರ್ಶನದ ಮೂಲಕ ಮತ್ತು ಬಯಲಾಟದಲ್ಲಿ ತೊಡಗಿರುವ ಹಿರಿಯ ಕಲಾವಿದರುಗಳ ಮೂಲಕ ಇದರಲ್ಲಿರುವ ಮೌಲ್ಯಯುತ ಸಂದೇಶಗಳನ್ನು ಸಾರುವ ಪ್ರಮುಖ ಉದ್ದೇಶವು ಈ ಒಂದು ಕಿರು ಪ್ರಬಂಧವು ಹೊಂದಿದೆ. ಈ ನಿಟ್ಟಿನಲ್ಲಿ ಕೆಲವು ಬಯಲಾಟ ಕಲಾವಿದರನ್ನು ಸಂದರ್ಶಿಸಿ, ಕೃತಿಗಳನ್ನು ಅಭ್ಯಸಿಸಿ ಮಾಹಿತಿ ಸಂಗ್ರಹಿಸಲಾಗಿದೆ. 
ಬಯಲಾಟವು ಕುಣಿತ ಪ್ರಧಾನವಾದದ್ದು ಮತ್ತು ಸಂಭಾಷಣೆ ಪ್ರಧಾನವಾದದ್ದು. ಮೊದಲು ಕುಣಿತಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡಲು ಕಾರಣವೇನು ಇರಬಹುದು ಎಂಬ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದುಬಂದ ವಿಷಯವೇನಂದರೆ, ಮನುಷ್ಯನಲ್ಲಿ ಹೆಚ್ಚಾಗಿ ಕಾಲುಗಳನ್ನು ಕಠಿಣವಾದ ಕೆಲಸಗಳಿಗೆ ಬಳಸಿ ಎಷ್ಟು ಭದ್ರವಾಗಿಟ್ಟುಕೊಳ್ಳುತ್ತಾನೋ ದೇಹದ ಆರೋಗ್ಯವು ಅಷ್ಟೇ ಭದ್ರವಾಗಿರುತ್ತದೆ ಎನ್ನುವ ಪ್ರತೀತಿಯಿದೆ. ಪ್ರಸ್ತುತ ಕಾಲದಲ್ಲೂ ಸಹ ವಾಕಿಂಗ್, ರನ್ನಿಂಗ್ ಎನ್ನುವ ನೆಪದಲ್ಲಿ ಕಾಲುಗಳನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎನ್ನುವ ಸಲಹೆ ವೈದ್ಯರು ನೀಡುತ್ತಾರೆ. ಕಾಲುಗಳು ಸದೃಢವಾಗಿಟ್ಟುಕೊಳ್ಳುವ ಸಲುವಾಗಿ ಜೋರಾಗಿ ನಡೆಯುವುದು ಅಥವಾ ಓಡುವುದು ಇದರಿಂದ ಕಾಲುಗಳು ಗಟ್ಟಿಗೊಳ್ಳುವುದೊಂದೆ ಅಲ್ಲದೆ ದೇಹದಲ್ಲಿನ ಕೊಬ್ಬಿನ ಅಂಶ ಕರಗುತ್ತದೆ. ಬೆವರು ಕಿತ್ತಿ ಬರುತ್ತದೆ. ಎಲ್ಲಾ ಅಂಗಾಂಗಗಳಲ್ಲೂ ರಕ್ತದ ಚಲನೆ ವೇಗವಾಗಿ ಸಾಗುತ್ತದೆ. ಅದೇ ರೀತಿ ಉಸಿರಾಟ ಮತ್ತು ಎದೆ ಬಡಿತ ಕೂಡ ವೇಗಪಡೆಯುತ್ತದೆ. ಇದರಿಂದ ಒಟ್ಟಾರೆ ದೇಹದ ಆರೋಗ್ಯ ಉತ್ತಮ ರೀತಿಯಲ್ಲಟ್ಟುಕೊಳ್ಲಲು ಸಾಧ್ಯ. ಹಾಗೆಯೇ ಈ ಜೋರಾದ ಸಂಭಾಷಣೆ, ಗಹಗಹಿಸಿ ನಗುವುದರಿಂದ ಗಂಟಲಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರಲಾರವು. ಬಯಲಾಟದಲ್ಲಿ ಕಬ್ಬಿಣದ ಕಡಲೆಗಳಂತೆ ಭಾಸವಾಗುವ ಪ್ರಾಸಾನುಪ್ರಾಸ ಹೊಂದಿದ ಸಂಭಾಷಣೆ ಗಂಟಲಿನ ವ್ಯಾಯಾಮಕ್ಕೂ ಅನುಕೂಲವಾಗುತ್ತದೆ. ಹಾಗೆಯೇ ಬಾಯಿಯಲ್ಲಿರುವ ಯಾವುದೇ ಅಹಿತಕರವಾದ ಸೂಕ್ಷ್ಮಾಣು ಜೀವಿಗಳು ಕೂಡ ಆ ಉಚ್ಚಾರಣೆಗೆ ಸತ್ತು ಹೋಗುತ್ತವೆ. ಹಾಗಾಗಿ ಕುಣಿತದಿಂದ ಕಾಲುಗಳು ಗಟ್ಟಿಗೊಂಡು ದೇಹದ ಆರೋಗ್ಯ ವೃದ್ಧಿಸುವಂತೆ, ಕಂಠ ಅಂದರೆ ಧ್ವನಿಯನ್ನು ಬಳಸುವುದರಿಂದ ಗಂಟಲಿನ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಒಟ್ಟಾರೆ ದೇಹದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಲು ಈ ಎರಡು ಅಂಗಾಂಗಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಬಯಲಾಟದಲ್ಲಿ ಭಾಗವಹಿಸಿದವರು ತಮ್ಮ ಸ್ವ ಅನುಭವದ ಮೂಲಕ ತಿಳಿಸಿದ್ದಾರೆ. ಪ್ರಸ್ತುತ ವೈದ್ಯರು ಕೂಡ ಸಲಹೆ ನೀಡುವಂತೆ ಕಾಲಿನ ಗಟ್ಟಿತನವೇ ದೇಹದ ಕಟ್ಟಿತನ ಮತ್ತು ಗಂಟಲಿಗೆ ಸಂಬಂಧಿಸಿದಂತೆ ಕೆಲವು ಕರ್ಕಶ ಶಬ್ದದ ರೀತಿಯಲ್ಲಿ ಗಂಟಲಿನ ವ್ಯಾಯಾಮಗಳನ್ನು ಹೇಳಿಕೊಡುತ್ತಾರೆ. ಹಾಗೆಯೇ ಹಿಂದಿನ ಕಾಲದಲ್ಲಿ ಈ ಕಠಿಣವಾದ ಶಬ್ದಗಳನ್ನು ಉಚ್ಚಾರಣೆ ಮಾಡುವುದರ ಮೂಲಕ ಆ ಗಂಟಲಿನ ಆರೋಗ್ಯವನ್ನು ವೃದ್ಧಿಸುಲು ಬಹಳಷ್ಟು ಅನುಕೂಲವಾಗಿತ್ತು ಎಂಬುದು ಈ ಬಯಲಾಟಗಳ ಮೂಲಕ ನಾವು ತಿಳಿಯಬಹುದು. ಹಾಗಾಗಿ ಯಾವುದೇ ಮನುಷ್ಯ ಅನಾರೋಗ್ಯದಿಂದ ಇದ್ದರೆ ಅವನು ಬಯಲಾಟದಲ್ಲಿ ಪಳಗಿದರೆ ಅತ್ಯಂತ ಉತ್ತಮವಾದ ಆರೋಗ್ಯ ಪಡೆಯುತ್ತಾನೆಂಬದು ಈಗಲೂ ಪ್ರಸ್ತುತದಲ್ಲಿರುವ ಮಾತಾಗಿದೆ. 

Article Details

Section

Research Articles

Author Biographies

ಹುಲುಗಯ್ಯ ನಾಯಕರ್

ಸಂಶೋಧನಾ ವಿದ್ಯಾರ್ಥಿ, ಪ್ರದರ್ಶನ ಕಲಾವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 

ಕೆ. ರಾಮಕೃಷ್ಣಯ್ಯ

ಪ್ರಾಧ್ಯಾಪಕರು, ಪ್ರದರ್ಶನ ಕಲಾವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 

References

ಬಸವರಾಜ ಮಲಶೆಟ್ಟಿ, (2008), ಉತ್ತರ ಕರ್ನಾಟಕದ ಬಯಲಾಟಗಳು, ಕೆ. ಎಸ್. ಎಮ್. ಟ್ರಸ್ಟ್, ಬೆಂಗಳೂರು.

ದುರ್ಗಾದಾಸ್ ಕೆ. ಆರ್. , (1996), ಬಳ್ಳಾರಿ ಜಿಲ್ಲೆಯ ಬಯಲಾಟಗಳು, ಸಮತಾ ಪ್ರಕಾಶನ, ಬೆಳಗಾವಿ.

ರಾಮಚಂದ್ರೇಗೌಡ ಹಿ. ಶಿ. , (1998), ಜಾನಪದ: ಸಾಂಸ್ಕೃತಿಕ ಆಯಾಮಗಳು, ಕನ್ನಡ ಪುಸ್ತಕ ಪ್ರಧಿಕಾರ, ಬೆಂಗಳೂರು.

ಶ್ರೀರಾಮ ಇಟ್ಟಣ್ಣವರ, (2019), ಬಯಲಾಟದ ಲೇಖನಗಳು. ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಚಕ್ಕೆರೆ ಶಿವಶಂಕರ್, (2008), ಕರ್ನಾಟಕ ಜನಪದ ರಂಗಭೂಮಿ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು.

ಬೋರಲಿಂಗಯ್ಯ ಹಿ.ಚಿ., (2015), ಕರ್ನಾಟಕದ ಜನಪದ ಕಲೆಗಳ ಕೋಶ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.