ಪಶ್ಚಿಮ ಮತ್ತು ಕನ್ನಡ ಸಾಹಿತ್ಯ ಸಂದರ್ಭದ ಭಾಷಾಂತರ ಪ್ರಕ್ರಿಯೆಗಳು

Main Article Content

ಡಾ. ವಿಜಯೇಂದ್ರ ಕುಮಾರ್ ಜಿ.ಎಲ್.

Abstract

ಪಾಶ್ಚಾತ್ಯ ಮತ್ತು ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಭಾಷಾಂತರ ಪ್ರಕ್ರಿಯೆಯ ತಾತ್ವಿಕ ಹಾಗೂ ಪ್ರಾಯೋಗಿಕ ಆಯಾಮಗಳನ್ನು ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ಭಾಷಾಂತರವೆಂದರೆ ಕೇವಲ ಯಥಾವತ್ ಶಬ್ದಾನುವಾದವಲ್ಲ; ಅದೊಂದು ಸೃಜನಶೀಲ, ಸಾಂಸ್ಕೃತಿಕ ಹಾಗೂ ಮರುಸೃಷ್ಟಿಯ ಕ್ರಿಯೆ ಎಂಬುದನ್ನು ಎಂಟು ಭಿನ್ನ ಮಾದರಿಗಳ ಮೂಲಕ ಚರ್ಚಿಸಲಾಗಿದೆ. ಕ್ಷಣ ಭಾಷಾಂತರ, ಅಣಕ (ಮಿಮಿಕ್ರಿ), ಮೌಖಿಕ ಸಾಹಿತ್ಯದ ಲಿಪೀಕರಣ, ಯಂತ್ರಾನುವಾದ, ವಾಪಸಾತಿ ಭಾಷಾಂತರ, ರಫ್ತು ಅಥವಾ ವಿಲೋಮ ಭಾಷಾಂತರ, ಗುಂಪು ಭಾಷಾಂತರ ಮತ್ತು ಸಂಕ್ಷೇಪೀಕರಣಗಳೆಂಬ ವಿಶಿಷ್ಟ ವಿಧಾನಗಳನ್ನು ಉದಾಹರಣೆಗಳ ಸಹಿತ ವಿವರಿಸಲಾಗಿದೆ. ಬಿ.ಎಂ.ಶ್ರೀ, ಎ.ಕೆ. ರಾಮಾನುಜನ್ ಅವರ ಪ್ರಯೋಗಗಳು ಹಾಗೂ ಪಂಪ, ರನ್ನರ ಕಾವ್ಯಗಳ ಸಿಂಹಾವಲೋಕನ ಕ್ರಮಗಳನ್ನು ಆಧರಿಸಿ, ಭಾಷಾಂತರವು ಕೇವಲ ನಕಲಾಗಿರದೆ ಸಾಹಿತ್ಯಕ ಸಂವೇದನೆ, ಸಾಂಸ್ಕೃತಿಕ ಮುಖಾಮುಖಿ ಹಾಗೂ ಪ್ರತಿಪಠ್ಯ ನಿರ್ಮಾಣದ ಪ್ರಬಲ ಸಾಧನವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಲೇಖನದಲ್ಲಿ ಸೈದ್ಧಾಂತಿಕವಾಗಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಡಾ. ವಿಜಯೇಂದ್ರ ಕುಮಾರ್ ಜಿ.ಎಲ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಡ್ಲಘಟ್ಟ.

How to Cite

ವಿಜಯೇಂದ್ರ ಕುಮಾರ್ ಜಿ.ಎಲ್. (2026). ಪಶ್ಚಿಮ ಮತ್ತು ಕನ್ನಡ ಸಾಹಿತ್ಯ ಸಂದರ್ಭದ ಭಾಷಾಂತರ ಪ್ರಕ್ರಿಯೆಗಳು. ಅಕ್ಷರಸೂರ್ಯ (AKSHARASURYA), 17(05), 157 to 167. https://aksharasurya.com/index.php/latest/article/view/2380

References

ಅಂಬಿಕಾತನಯದತ್ತ, (1963), ಕನ್ನಡ ಮೇಘದೂತ, ಧಾರವಾಡ: ಸಮಾಜ ಪುಸ್ತಕಾಲಯ.

ಉಷಾ ಎಂ., (2014), ಭಾಷಾಂತರ ಪ್ರವೇಶಿಕೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಕ್ಯಾತನಹಳ್ಳಿ ರಾಮಣ್ಣ, (1991), ಫ್ಲೀಟರು ಸಂಗ್ರಹಿಸಿದ ಲಾವಣಿಗಳು, ಮೈಸೂರು: ಮೈಸೂರು ವಿಶ್ವವಿದ್ಯಾಲಯ.

ನಾಗರಾಜ ಡಿ.ಆರ್., (2006), ಸಾಹಿತ್ಯ ಕಥನ, ಸಾಗರ: ಅಕ್ಷರ ಪ್ರಕಾಶನ.

ಪರಮಶಿವಯ್ಯ ಜೀ.ಶಂ., (1975), ಜಾನಪದ: ಕೆಲವು ಮುಖಗಳು, ಬೆಂಗಳೂರು: ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ.

ಬಾಲುರಾವ್ ಶಾ. (ಅನು), (1991), ಆನಾ ಅಹಮತೋವಾ: ರಿಕ್ವಿಯಂ ಮತ್ತಿತರ ನೂರು ಕವಿತೆಗಳು, ಹೆಗ್ಗೋಡು: ಅಕ್ಷರ ಪ್ರಕಾಶನ.

ಮೋಹನ ಕುಂಟಾರ್ ಎ., (2014), ಕನ್ನಡ-ಮಲಯಾಳಂ ಭಾಷಾಂತರ ಪ್ರಕ್ರಿಯೆ, ಹಂಪಿ: ಕನ್ನಡ ವಿಶ್ವವಿದ್ಯಾಲಯ.

ರಾಮಾನುಜನ್ ಎ.ಕೆ., (2011), ಎ.ಕೆ.ರಾಮಾನುಜನ್ ಸಮಗ್ರ, ಧಾರವಾಡ: ಮನೋಹರ ಗ್ರಂಥ ಮಾಲಾ.

ವೆಂಕಟಾಚಲಶಾಸ್ತ್ರಿ ಟಿ.ವಿ. (ಸಂ), (2006), ಪಂಪ ಸಂಪುಟ (ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಂ), ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಶಿವರುದ್ರಪ್ಪ ಜಿ.ಎಸ್. (ಸಂ), (1991), ಪಂಪ: ಒಂದು ಅಧ್ಯಯನ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ಶ್ರೀಕಂಠಯ್ಯ ತೀ.ನಂ., (1949), ಕವಿ ರನ್ನನ ಗದಾಯುದ್ಧ ಸಂಗ್ರಹಂ, ಮೈಸೂರು: ಕಾವ್ಯಾಲಯ.

ಶ್ರೀಕಂಠಯ್ಯ ಬಿ.ಎಂ., (1966), ಇಂಗ್ಲಿಷ್ ಗೀತಗಳು, ಮೈಸೂರು: ವಿಶ್ವಸಾಹಿತ್ಯ ಪ್ರಕಾಶಕರು.

ದ ಬೈಬಲ್ ಸೊಸೈಟಿ ಆಫ್ ಇಂಡಿಯಾ, (2010), ಹೊಸ ಒಡಂಬಡಿಕೆ, ಬೆಂಗಳೂರು: ದ ಬೈಬಲ್ ಸೊಸೈಟಿ ಆಫ್ ಇಂಡಿಯಾ.

Clifford E. Landers, (2010), Literary Translation: A Practical Guide, New Delhi: Viva Books.

Ramachandran C.N. (ed), (2007), Strings & Cymbals, Hampi: Prasaranga, Kannada University.