‘ಕ್ರಾಂತಿ ಬಂತು, ಕ್ರಾಂತಿ’ ನಾಟಕದ ವಸ್ತು, ತಂತ್ರ ಮತ್ತು ತಾತ್ವಿಕತೆ
Main Article Content
Abstract
ಪಿ. ಲಂಕೇಶ್ ವಿರಚಿತ ‘ಕ್ರಾಂತಿ ಬಂತು, ಕ್ರಾಂತಿ’ ಏಕಾಂಕ ನಾಟಕವು ಕ್ರಾಂತಿಯ ಹೆಸರಿನಲ್ಲಿ ನಡೆಯುವ ಬೂಟಾಟಿಕೆ ಹಾಗೂ ನಾಯಕತ್ವದ ಡಂಭಾಚಾರದ ಕಟು ವಿಡಂಬನೆಯಾಗಿದೆ. ಆಕರ್ಷಕ ಭಾಷಣಗಳ ಮೂಲಕವೇ ಕ್ರಾಂತಿಯ ಭ್ರಮೆ ಹುಟ್ಟಿಸುವ ಪ್ರೊಫೆಸರ್ ಭಗವಾನ್, ಆತನ ಸೈದ್ಧಾಂತಿಕ ಮಾತುಗಳಿಗೆ ಮರುಳಾಗಿ ನಕ್ಸಲೈಟ್ ಆಗಿ ಪರಿವರ್ತನೆಗೊಂಡು, ಕೊನೆಗೆ ಗುರುವಿನಿಂದಲೇ ಹತ್ಯೆಗೀಡಾಗುವ ಮುಗ್ಧ ವಿದ್ಯಾರ್ಥಿ ದಿನಕರನ ದುರಂತ ಈ ಕೃತಿಯ ಕೇಂದ್ರವಸ್ತು. ಬದ್ಧತೆ, ಪ್ರಾಮಾಣಿಕತೆ ಹಾಗೂ ತ್ಯಾಗವಿಲ್ಲದ ಬರೀ ಮಾತುಗಳು ಕ್ರಾಂತಿಯಾಗಲಾರವು; ಬದಲಿಗೆ ಅದು ಸ್ವಾರ್ಥ ಸಾಧನೆಯ, ಅಧಿಕಾರ ದಾಹದ ಮೆಟ್ಟಿಲಾಗುತ್ತದೆ ಎಂಬ ತಾತ್ವಿಕತೆಯನ್ನು ಇಲ್ಲಿ ಮಂಡಿಸಲಾಗಿದೆ. ಕಳ್ಳ ಮತ್ತು ದಿನಕರನ ಮುಖಾಮುಖಿ, ಭಗವಾನನ ಸೋಗಲಾಡಿತನ ಹಾಗೂ ಸುಧಾಳ ಚಾಣಾಕ್ಷತೆಯ ಮೂಲಕ, ವ್ಯಕ್ತಿಪೂಜೆಯಲ್ಲಿ ಮುಳುಗಿದ ಸಮಾಜದಲ್ಲಿ ನೈಜತೆಯು ಸೋತು ನಕಲಿಯೇ ಹೇಗೆ ವಿಜೃಂಭಿಸುತ್ತದೆ ಎನ್ನುವ ವಾಸ್ತವವನ್ನು ಅತ್ಯಂತ ಮಾರ್ಮಿಕವಾಗಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಲಂಕೇಶ್ ಪಿ., (1995), ಕ್ರಾಂತಿ ಬಂತು, ಕ್ರಾಂತಿ, ಬೆಂಗಳೂರು: ಪತ್ರಿಕೆ ಪ್ರಕಾಶನ.