ಯಂತ್ರ ನಾಗರೀಕತೆ ಕುರಿತು ಶಿಶುನಾಳ ಶರೀಫರ ಚಿಂತನೆಗಳು

Main Article Content

ರವಿಶಂಕರ್ ಎ.ಕೆ.

Abstract

ಕನ್ನಡ ಸಾಹಿತ್ಯದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿರುವ ತತ್ವಪದಗಳ ಮರು ಓದು, ಚಿಂತನೆ ಹಾಗೂ ತೌಲನಿಕ ಹೊಸ ನೋಟಗಳು ಈ ಕಾಲದ ಅಧ್ಯಯನವಾಗಿದೆ. ತತ್ವಪದಕ್ಕೆ ಹೊಸ ವ್ಯಾಖ್ಯಾನಗಳನ್ನು ಸೃಷ್ಟಿಸಿಕೊಳ್ಳುತ್ತಾ ನೂರಾರು ತತ್ವಪದಕಾರರ ಒಳನೋಟಗಳ ದರ್ಶನ ಪಡೆಯುವುದು ಭಾರತೀಯ ಸಾಹಿತ್ಯ ಹಾಗೂ ಪಾಶ್ಚಾತ್ಯ ಸಾಹಿತ್ಯಗಳ ಕರ್ತವ್ಯವಾಗಿದೆ. ಈ ಸಾಹಿತ್ಯವು ಆಯಾ ಕಾಲದ ಆಧುನಿಕ ಪ್ರವೇಶಗಳಿಗೂ ಮುಖಾಮುಖಿಯಾಗಿರುವುದನ್ನು ಗಮನಿಸಬಹುದು. ʼಕಾಲʼ ಹಾಗೂ ʼಮನಸ್ಸುʼಗಳ ಕುರಿತು ಜೀವ-ನಿರ್ಜಿವಗಳ ಒಡನಾಟವು ಕಾಲಾತೀತವಾಗಿ ಲೋಕಜ್ಞಾನವಾದ ಚಿಂತನೆಗಳು ತತ್ವಪದಗಳಲ್ಲಿ ಮೂಡಿಬಂದವು. ಯಂತ್ರ ನಾಗರೀಕತೆಯನ್ನು ಶಿಶುನಾಳ ಶರೀಫರ ತತ್ವ ಚಿಂತನೆಯು ಹೇಗೆ ಗ್ರಹಿಸಬಲ್ಲದು ಎಂಬುದೇ ಇಲ್ಲಿಯ ಅಧ್ಯಯನ. ಈ ದೃಷ್ಟಿಕೋನದ ಹಿನ್ನಲೆಯಲ್ಲಿ ಶಿಶುನಾಳ ಶರೀಫರ ತತ್ವಪದಗಳ ಒಳನೋಟಗಳನ್ನು ವರ್ತಮಾನದ ಕಾಲಪ್ರಜ್ಞೆಗಳೊಂದಿಗೆ ಅಧ್ಯಯನಮಾಡಬಹುದು.

Article Details

Section

Research Articles

Author Biography

ರವಿಶಂಕರ್ ಎ.ಕೆ.

ಸಹಾಯಕ ಪ್ರಾಧ್ಯಾಪಕ, ಸಮಾಜ ವಿಜ್ಞಾನಗಳು ಮತ್ತು ಭಾಷಾ ವಿಭಾಗ, ಕ್ರಿಸ್ತು ಜಯಂತಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಬೆಂಗಳೂರು.

How to Cite

ರವಿಶಂಕರ್ ಎ.ಕೆ. (2025). ಯಂತ್ರ ನಾಗರೀಕತೆ ಕುರಿತು ಶಿಶುನಾಳ ಶರೀಫರ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 10(03), 51 to 59. https://aksharasurya.com/index.php/latest/article/view/1773

References

ಶಿವಾನಂದ ಗುಬ್ಬಣ್ಣನವರ (ಸಂ), (2002), ಶಿಶುನಾಳ ಶರೀಫ ಗೀತೆಗಳು, ಅಕ್ಷಯ ಪ್ರಕಾಶನ, ಧಾರವಾಡ.

ಮಂಜುಳಾ ಅಶೋಕ್ ಕುಮಾರ್ ಮಲ್ಹಾರಿ, (2012), ಬೋಧ ಒಂದೇ ಬ್ರಹ್ಮನಾದ ಒಂದೇ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಮೀನಾಕ್ಷಿ ಬಾಳೆ, (2006), ತನ್ನ ತಾನು ತಿಳಿದ ಮೇಲೆ, ವೀರೇಶ್ವರ ಪ್ರಕಾಶನ, ಜಮಖಂಡಿ.