ಕರಗುತ್ತಿರುವ ಹೆಣ್ಣಿನ ಅಸ್ತಿತ್ವದ ರೂಪಕವಾಗಿ ಬಾನು ಮುಷ್ತಾಕ್ ಅವರ ʼಲವ್ ಬರ್ಡ್ಸ್ʼ
Main Article Content
Abstract
ಕನ್ನಡ ಮಹಿಳಾ ಸಾಹಿತ್ಯ ಹೊಸ ಹೊರಳುದಾರಿಯತ್ತ ಹೆಜ್ಜೆ ಹಾಕುತ್ತಿರುವುದು ಸಾಹಿತ್ಯಿಕವಾಗಿ ಅಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಕೂಡ ಮಹತ್ವದ ಸಂಗತಿ. ಕನ್ನಡಕ್ಕೆ ಬೂಕರ್ ಗರಿಮೆಯನ್ನು ತಂದು ಕೊಟ್ಟ ಬಾನು ಮುಷ್ತಾಕ್ ಅವರ ಕತೆಗಳಲ್ಲಿ ವ್ಯಕ್ತವಾಗುವ ಸ್ತ್ರೀ ಪರವಾದ ಆಲೋಚನೆಗಳು, ಸ್ತ್ರೀವಾದಿ ದೃಷ್ಟಿಕೋನ ಹಾಗೂ ಮಾನವ ಪರ ಕಾಳಜಿಗಳ ದೃಷ್ಟಿಯಿಂದ ಪ್ರಮುಖವಾದದ್ದು. ಪ್ರಸ್ತುತ ಲೇಖನದಲ್ಲಿ ಬಾನು ಮುಷ್ತಾಕ್ ಕತೆಗಳಲ್ಲಿ ಅಸ್ತಿತ್ವವಾದದ ಅಂಶಗಳು ಚರ್ಚೆಗೆ ಒಳಪಟ್ಟಿರುವ ಬಗೆಯನ್ನು ವಿವರಿಸಲಾಗಿದೆ. ʼಲವ್ ಬರ್ಡ್ಸ್ʼ ಕತೆಯಲ್ಲಿ ಹೆಣ್ಣಿನ ಅಸ್ತಿತ್ವ ಹಂತ ಹಂತವಾಗಿ ನಾಶವಾಗುತ್ತಿರುವ ಬಗೆಯನ್ನೂ, ಒಂದು ಹಂತದಲ್ಲಿ ಅದು ವೈಯಕ್ತಿಕತೆಯನ್ನು ಮೀರಿ ಹೆಣ್ಣಿನ ಸಾಮಾನ್ಯ ಸಮಸ್ಯೆಯಾಗಿರುವುದರ ಬಗೆಗೆ ಗಮನ ಹರಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಾನು ಮುಷ್ತಾಕ್, (2025), ಹಸೀನಾ ಮತ್ತು ಇತರ ಕತೆಗಳು, ಅಭಿರುಚಿ ಪ್ರಕಾಶನ, ಮೈಸೂರು.
ನಾಗಭೂಷಣಸ್ವಾಮಿ ಓ.ಎಲ್., (1998), ವಿಮರ್ಶೆಯ ಪರಿಭಾಷೆ, ಅಂಕಿತ ಪುಸ್ತಕ, ಬೆಂಗಳೂರು.
ಸಿಮೊನ್ ದ ಬೋವಾ, ಶ್ರೀಮತಿ ಹೆಚ್.ಎಸ್. (ಅನು), (2007), ದಿ ಸೆಕೆಂಡ್ ಸೆಕ್ಸ್, ಅಧ್ಯಯನ ಮಂಡಲ, ಬೆಂಗಳೂರು.