ವಿಜಯಶ್ರೀಯವರ ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆ
Main Article Content
Abstract
ಸಮಾಜ ಎಂಬ ಪರಿಕಲ್ಪನೆ ಮಾನವ ಪ್ರಾರಂಭ ಹಂತದಿಂದ ನಾಗರೀಕನಾಗುತ್ತಾ ಬೆಳೆದುಬಂದಂತೆ ಒಂದೆಡೆ ನೆಲೆಸುವ, ಕೂಡಿ ಬಾಳುವ ಹಂತದಲ್ಲಿ ಸಮಾಜ ಸಮುದಾಯ ಪರಿಕಲ್ಪನೆಗಳು ಬೆಳೆಯಲಾರಂಭಿಸಿದವು. ಧರ್ಮ, ಜಾತಿಗಳು ಹುಟ್ಟಿಕೊಂಡವು. ಸಾಮಾಜಿಕ ಸಂವೇದನೆ ಮತ್ತು ಸಾಹಿತ್ಯ ಸಂವೇದನೆಗಳೆರಡೂ ಬೇರೆ ಬೇರೆಯಲ್ಲ, ಅವು ಪರಸ್ಪರ ಸಾಹಚರ್ಯಭಾವ ಹೊಂದಿದೆಯೆಂಬ ಅಭಿಪ್ರಾಯ ಪಡುತ್ತಾರೆ.
ʼರವಿ ಕಾಣದ್ದನ್ನು ಕವಿ ಕಂಡʼ ಎಂಬಂತೆ ಸಮಾಜದ ಆಗುಹೋಗುಗಳನ್ನು ಲೇಖಕಿ ತಮ್ಮ ಲೇಖನಿಯಲ್ಲಿ ಮೂಡಿಸಿದ್ದಾರೆ. "ಮನುಷ್ಯ ಮನುಷ್ಯ ಸಂಬಂಧಗಳು ಅವು ಏಕಕಾಲಕ್ಕೆ ಕುಟುಂಬ ಸಂಬಂಧಗಳು ಹೌದು, ಸಾಮಾಜಿಕ ಸಂಬಂಧಗಳು ಹೌದು" ಎಂಬಂತೆ ಮಾನವ ಕುಟುಂಬ ಜೀವಿಯೂ ಹೌದು, ಸಾಮಾಜಿಕ ಜೀವಿಯೂ ಹೌದು. ಈ ಹಿನ್ನೆಲೆಯಲ್ಲಿ ಸಾಮರಸ್ಯ ಬಾಂಧವ್ಯಗಳು ಸಮಾಜದಲ್ಲಿ ಬಹಳ ಮಹತ್ವವೆನಿಸುತ್ತದೆ.
"ಪಡುವ ಕಡಲ ಹೊನ್ನಹೆಣ್ಣು
ನನ್ನ ಜೀವದುಸಿರು ಕಣ್ಣು
ನಲಿಸಿ ಕಲಿಸಿ ಮನವನೊಲಿಸಿ
ಕುಣಿಸಿರುವಳು"
ಎಂದು ಬಿ.ಎಂ.ಶ್ರೀ.ಯವರ ʼಇಂಗ್ಲೀಷ್ ಗೀತೆಗಳುʼ ಸಂಕಲನದಲ್ಲಿ ಕಾಣಿಕೆ ಕವನದಲ್ಲಿ ಹೇಳುವ ಮಾತು ಪಾಶ್ಚಿಮಾತ್ಯ ಸಮಾಜವನ್ನು ಕೂಡಾ ತನ್ನದಾಗಿಸಿಕೊಂಡ ಹೃದಯ ವೈಶಾಲ್ಯತೆಯನ್ನು ಕಾಣಬಹುದಾಗಿದೆ.
ವಿಜಯಶ್ರೀಯವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡವರು. ಇವರ ಕಾದಂಬರಿಗಳಲ್ಲಿ ಸಮಾಜದ ವಿವಿಧ ಮುಖಗಳನ್ನು ಅತ್ಯಂತ ನೈಜವಾಗಿ ಬಿಂಬಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಸಮಾಜದ ಮೌಢ್ಯ, ಮೂಢನಂಬಿಕೆಗಳು, ನಿಮ್ನ-ಮೇಲ್ವರ್ಗದ ಸಮಸ್ಯೆಗಳ ಚಿತ್ರಣ, ಬಡತನ, ನಿರುದ್ಯೋಗದ ಪರಿಕಲ್ಪನೆ, ವೇಶ್ಯಾ ಸಮಸ್ಯೆ, ಮಹಿಳೆ ಮೇಲಿನ ಅತ್ಯಾಚಾರ, ಬಾಲ್ಯವಿವಾಹ, ವಿಧವಾ ವಿವಾಹಗಳ ಬಗೆಗಿನ ಪರಿಕಲ್ಪನೆಗಳ ಬಗ್ಗೆ ಬೆಳಕು ಚೆಲ್ಲಲಾಗಿವೆ. ಸಾಮಾಜಿಕ ಪ್ರಜ್ಞೆಯುಳ್ಳ ಹಲವು ಕಾದಂಬರಿಗಳು ಸಾಮಾಜಿಕ ನೆಲೆಯಲ್ಲಿ ಅಧ್ಯಯನಕ್ಕೆ ಯೋಗ್ಯವಾಗಿವೆ.
ಈ ರೀತಿಯ ಸರಳತೆ, ನೈಜ ಸನ್ನಿವೇಶಗಳ ಚಿತ್ರಣ ವಿಜಯಶ್ರೀಯವರ ಕಾದಂಬರಿಗಳು ಓದುಗನನ್ನು ತಲುಪಲು ಕಾರಣವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವಿಜಯಶ್ರೀ, (2006), ಅಕ್ಕ, ಹೆಚ್.ಎಸ್.ಮಂಜುನಾಥ ಪ್ರಕಾಶನ, ಶಿವಮೊಗ್ಗ.
ವಿಜಯಶ್ರೀ, (2010), ಅವ್ಯಕ್ತದಾಚೆಯಿಂದ, ರತ್ನ ಪ್ರಕಾಶನ, ಶಿವಮೊಗ್ಗ.
ವಿಜಯಶ್ರೀ, (2011), ಕಪ್ಪುಮನಸ್ಸಿನಬಿಳಿಜನ, ರುದ್ರಮ್ಮ ಪ್ರಕಾಶನ, ರಾಮಗೊಂಡನಹಳ್ಳಿ.
ವಿಜಯಶ್ರೀ, (1980), ಕೀರ್ತಿಮಯೂರಿವನ, ಶ್ರೀ ಏಜೆನ್ಸೀಸ್, ಬೆಂಗಳೂರು.
ವಿಜಯಶ್ರೀ, (2006), ವಾತ್ಸಲ್ಯದಹಾದಿಗಳು, ಹೆಚ್.ಎಸ್.ನಾಗರತ್ನ ಪ್ರಕಾಶನ, ಶಿವಮೊಗ್ಗ.
ವಿಜಯಶ್ರೀ, (2006), ಶಮನ, ಹೆಚ್.ಎಸ್.ನಾಗರತ್ನ ಪ್ರಕಾಶನ, ಶಿವಮೊಗ್ಗ.
ವಿಜಯಶ್ರೀ, (2009), ಸ್ವಾತಿ, ಪರ‍್ಣಿಮಾ ಪ್ರಿಂರ‍್ಸ್, ಬೆಂಗಳೂರು.
ವಿಜಯಶ್ರೀ, (2003), ಸಿಂಧೂರ, ರಜತ ಪ್ರಕಾಶನ, ಭದ್ರವತಿ.
ವಿಜಯಶ್ರೀ, (1993), ಸುಮಂಗಲಿ, ಭಾರತಿ ಪ್ರಕಾಶನ, ಮೈಸೂರು.
ವಿಜಯಶ್ರೀ, (2007), ಸ್ನೇಹಪಂಜರ, ಹೆಚ್.ಎಸ್.ನಾಗರತ್ನ ಪ್ರಕಾಶನ, ಶಿವಮೊಗ್ಗ.