ವಚನಕಾರ್ತಿಯರ ವಚನಗಳಲ್ಲಿ ದೇಹ ಮೀಮಾಂಸೆ

Main Article Content

ಮಹಾಲಿಂಗಪ್ರಭು

Abstract

ಕಾಯ, ಕಾಯಕಗಳ ನಡುವೆ ಅನೂಹ್ಯವಾದ ಸಂಬಂಧ ಸ್ಥಾಪಿತವಾಗಿರುತ್ತದೆ. ಇವುಗಳೇ ಎಲ್ಲಾ ಕಲ್ಪನೆ, ಕ್ರಿಯೆ, ಅನುಭೂತಿಗಳಿಗೂ ಮೂಲ. ಹಾಗಾಗಿ ಬೌದ್ಧ, ಜೈನ, ಹಿಂದೂ ಧರ್ಮಗಳು ದೇಹ ಅಥವಾ ಕರ್ಮ ಕುರಿತು ಏನನ್ನು ಹೇಳುತ್ತದೆ ಎಂದು ವಚನಗಳ ಅಧ್ಯಯನಕ್ಕೆ ಪೂರಕವಾಗಿ ಗಮನಿಸಲಾಗಿದೆ.
ದೇಹ ಮೀಮಾಂಸೆ ಎಂಬುದು ಬದುಕಿನ ಮೀಮಾಂಸೆಯೇ ಆಗಿದೆ. ದೇಹ ಆತ್ಮಗಳು ಬೇರೆ ಅಲ್ಲ ಎನ್ನುವುದು 205 ವಚನಕಾರರ ನಿಲುವಿನಲ್ಲಿ ಪ್ರಮುಖವಾದುದು. ಜನ್ಮಾಂತರಗಳನ್ನು ನಿರಾಕರಿಸುತ್ತಾರೆ. ಸುಳ್ಳು, ಅಪ್ರಾಮಾಣಿಕ, ಶಿವಭಕ್ತ ಅಲ್ಲದವನು ನಾಯಿ ಗರ್ಭಕ್ಕೆ ಹೊಗುತ್ತಾನೆ, ನಾಯಿ ಜನ್ಮ ಎಂಬ ಮಾತು ಕಂಡರು ಇವರು ಜನ್ಮಾಂತರಗಳ ಬಗ್ಗೆ ನಿರ್ಲಿಪ್ತರೆ. ಆತ್ಮ ಮಾತ್ರ ಮುಖ್ಯ ದೇಹವಲ್ಲ ಎಂಬ ನಿಲುವು ವಚನಕಾರ/ಕಾರ್ತಿಯರದಲ್ಲ. ದೇಹದಾನುಭವವೇ ಬಹಳ ಮುಖ್ಯವಾದುದು. ಕಾಯವಿಲ್ಲದೆ ನಾನು ಹೇಗೆ ಚನ್ನಮಲ್ಲಿಕಾರ್ಜುನನ್ನು ಕೂಡಲಿ ಎಂಬ ಅಕ್ಕನ ಮಾತು, (ಕೂಡಿ ಒಪ್ಪಚ್ಚಿಯಾಗಬೇಕು, ಭಕ್ತಿಯ ಮಾಡಿದಡೆ ಮತ್ತೊಂದು ಜನ್ಮ ದೊರೆವುದೆ ಎಂಬ ಪ್ರಶ್ನೆಯ ಮಾತು, ಇಂದ್ರಿಯ ಬಿಟ್ಟು ಕಾಯವಿರದು, ಕಾಯವ ಬಿಟ್ಟು ಇಂದ್ರಿಯವಿರದು ಎಂತು ನಿಃಕಾಮಿ ಎಂಬೆ, ಎಂತು ನಿರ್ದೋಷಿ ಎಂಬೆ) ಭಕ್ತಿ ಎಂದರೆ ಕಣ್ಣ ಕಂಬನಿಯಾಗಿ, ಗಂಟಲು ಗದ್ಗದವಾಗಿ ಬದಲಾಗುವ ದೇಹದ ಸ್ಥಿತಿಗಳ ಬಗ್ಗೆ ಹೇಳುವ ಸ್ವರೂಪದ ವಚನ, ಶರಣಸತಿ/ಲಿಂಗಪತಿ ಎಂಬ ಕಲ್ಪನೆ ದೇಹದ ಮೂಲಕ ವ್ಯಕ್ತಿಗೆ ದೊರೆಯುವ ಆಧ್ಯಾತ್ಮಿಕ ಅನುಭವವನ್ನೇ ಹೇಳುವಂಥದ್ದು ಎನಿಸುತ್ತದೆ. ವಚನಕಾರ/ ವಚನ ಕಾರ್ತಿಯರು.

Article Details

Section

Research Articles

Author Biography

ಮಹಾಲಿಂಗಪ್ರಭು

ಕನ್ನಡ ಸಹಾಯಕ ಅಧ್ಯಾಪಕರು, ದಯಾನಂದ ಸಾಗರ್ ಬಿಸಿನೆಸ್ ಅಕಾಡೆಮಿ, ಉದಯಪುರ, ಬೆಂಗಳೂರು.

References

ಕಲಬುರ್ಗಿ ಎಂ.ಎಂ. (ಪ್ರಧಾನ ಸಂ), (1993), ಸಮಗ್ರ ವಚನ ಸಂಪುಟ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ.

ಕಲಬುರ್ಗಿ ಎಂ.ಎಂ. (ಪ್ರಧಾನ ಸಂ), (1993), ಸಮಗ್ರ ವಚನ ಸಂಪುಟ 1 (ಬಸವಣ್ಣನವರ ವಚನಗಳು), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ.

ಕಲಬುರ್ಗಿ ಎಂ.ಎಂ. (ಪ್ರಧಾನ ಸಂ), (1993), ಸಮಗ್ರ ವಚನ ಸಂಪುಟ 2 (ಅಲ್ಲಮಪ್ರಭುದೇವರ ವಚನಗಳು), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ.

ಕಲಬುರ್ಗಿ ಎಂ.ಎಂ. (ಪ್ರಧಾನ ಸಂ), (1993), ಸಮಗ್ರ ವಚನ ಸಂಪುಟ 5 (ಶಿವಶರಣೆಯರ ವಚನಗಳು), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ.