ಶರಣರ ಭಕ್ತ ಭವಿ ಪರಿಕಲ್ಪನೆಯ ವಿಶ್ಲೇಷಣೆ

Main Article Content

ಮಹದೇವಪ್ರಸಾದ್‌ ಎನ್.ಎಸ್.

Abstract

ಈ ಸಂಶೋಧನಾ ಲೇಖನವು ಶರಣರ ವಚನಗಳಲ್ಲಿ ವ್ಯಕ್ತವಾಗುವ ‘ಭವಿ–ಭಕ್ತ’ ಪರಿಕಲ್ಪನೆಯನ್ನು ತಾತ್ವಿಕ ಹಾಗೂ ಅನುಭಾವಿಕ ನೆಲೆಯಲ್ಲಿ ವಿಶ್ಲೇಷಿಸುತ್ತದೆ. ‘ಭವಿ’ ಎಂಬ ಪದಕ್ಕೆ ಕೇವಲ ಲಿಂಗಧಾರಣೆ ಇಲ್ಲದ ವ್ಯಕ್ತಿ ಎಂಬ ಸೀಮಿತ ಅರ್ಥವಲ್ಲದೆ, ಚಲನೆಯಿಲ್ಲದ ಅಸ್ತಿತ್ವ, ಆತ್ಮಸ್ವರೂಪದ ಅರಿವಿಲ್ಲದ ಸ್ಥಿತಿ ಹಾಗೂ ಕಾಮ, ಕ್ರೋಧ, ಲೋಭ, ಮೋಹಾದಿ ಮಾನವೀಯ ಗುಣಗಳ ಸಂಕೇತವೆಂಬ ವಿಸ್ತೃತ ಅರ್ಥಗಳಿರುವುದನ್ನು ಲೇಖನ ಗುರುತಿಸುತ್ತದೆ. ಭಕ್ತನ ಸಾಧನೆಯಲ್ಲಿ ಭವಿ–ಭಕ್ತರ ನಡುವಿನ ಸಂಬಂಧ, ದೇವಾರಾಧನೆ ಮತ್ತು ಲಿಂಗಾರಾಧನೆಯ ವ್ಯತ್ಯಾಸ, ಪ್ರಸಾದ ತತ್ತ್ವ ಹಾಗೂ ಸಮರಸದ ಪರಿಕಲ್ಪನೆಗಳನ್ನು ಪರಿಶೀಲಿಸಲಾಗಿದೆ. ಶರಣರ ದೃಷ್ಟಿಯಲ್ಲಿ ಭಕ್ತನು ಅಂತಿಮವಾಗಿ ಭವಿತ್ವವನ್ನು ಮೀರಿ ಲಿಂಗಚೇತನದೊಂದಿಗೆ ಏಕೀಭವಿಸುವ ಸಾಧನೆಯೇ ನಿಜವಾದ ಭಕ್ತಿಯೆಂಬ ತಾತ್ವಿಕ ಆಶಯವನ್ನು ಲೇಖನ ಪ್ರತಿಪಾದಿಸುತ್ತದೆ. 

Article Details

Section

Research Articles

Author Biography

ಮಹದೇವಪ್ರಸಾದ್‌ ಎನ್.ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು, ಮೈಸೂರು ಜಿಲ್ಲೆ.

How to Cite

ಮಹದೇವಪ್ರಸಾದ್‌ ಎನ್.ಎಸ್. (2025). ಶರಣರ ಭಕ್ತ ಭವಿ ಪರಿಕಲ್ಪನೆಯ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 10(03), 224 to 229. https://aksharasurya.com/index.php/latest/article/view/2456

References

ವೀರಣ್ಣ ರಾಜೂರ (ಸಂ), (2021), ಬಸವಣ್ಣನವರ ವಚನ ಸಂಪುಟ 1, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಪೂಜ್ಯಶ್ರೀ ಕಮಲಕ್ಕನವರು (ಸಂ), (ವರ್ಷ ಲಭ್ಯವಿಲ್ಲ), ಬಸವಣ್ಣನವರ ಲಿಂಗಾಯತ ಧರ್ಮ, ತುರಗನೂರು: ಗುರುಬಸವಣ್ಣ ಯೋಗ ಕಮ್ಮಟ.

ಬಸವರಾಜು ಎಲ್. , (2014), ಅಲ್ಲಮನ ವಚನ ಚಂದ್ರಿಕೆ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ತಿಪ್ಪೇರುದ್ರಸ್ವಾಮಿ ಎಚ್., (1997), ವಚನಗಳಲ್ಲಿ ವೀರಶೈವ ಧರ್ಮ, ಮೈಸೂರು: ಡಿ.ವಿ.ಕೆ. ಮೂರ್ತಿ.

ಶ್ರೀ ಬಸವಾನಂದ ಸ್ವಾಮಿಗಳು, (2009), ಆರೋಗ್ಯಮೃತ, ಧಾರವಾಡ: ಪ್ರಭುದೇವ ಪ್ರಕಾಶನ.