ಚದುರಂಗರ ಮೂರು ಕಥೆಗಳ ವಿಶ್ಲೇಷಣೆ

Main Article Content

ಜಯಶಂಕರ ಎಂ.

Abstract

ಚದುರಂಗರ ಕಥನಶೈಲಿ ಮಾನವೀಯತೆ, ಕೋಮುಸೌಹಾರ್ದ, ಬಡತನ, ಅಸಹಾಯಕತೆ, ಪ್ರೀತಿ, ಪಶ್ಚಾತ್ತಾಪ ಹಾಗೂ ಕೋಮುವಾದದಂತಹ ಸಾಮಾಜಿಕ ವಾಸ್ತವಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಈ ಲೇಖನದಲ್ಲಿ ‘ದಿಬ್ಬ’, ‘ತುಲಸಿ’ ಮತ್ತು ‘ತಿರುವು’ ಎಂಬ ಮೂರು ಕಥೆಗಳನ್ನು ವಿಶ್ಲೇಷಿಸಲಾಗಿದೆ. ‘ದಿಬ್ಬ’ ಕಥೆಯಲ್ಲಿ ಸಲೀಮ ಸಾಬರ ಬದುಕಿನ ಮೂಲಕ ಹಸಿವು, ಸಾವು ಮತ್ತು ಪಾಪಪ್ರಜ್ಞೆಯ ನಡುವಿನ ಸಂಘರ್ಷವನ್ನು ಚಿತ್ರಿಸಲಾಗಿದೆ. ‘ತುಲಸಿ’ಯಲ್ಲಿ ಧರ್ಮದ ಗಡಿಗಳನ್ನು ಮೀರುವ ಪ್ರೀತಿ, ಬಡತನ ಮತ್ತು ಅಸಹಾಯಕತೆಯ ದುರಂತವನ್ನು ವಿಶ್ಲೇಷಿಸಲಾಗಿದೆ. ‘ತಿರುವು’ ಕಥೆ ಕೋಮು ಗಲಭೆಯ ಹಿನ್ನೆಲೆಯಲ್ಲಿಯೂ ಮಾನವೀಯತೆ ಮತ್ತು ಸಹಜೀವನದ ಮೌಲ್ಯವನ್ನು ಪ್ರತಿಪಾದಿಸುತ್ತದೆ. ಈ ಮೂರು ಕಥೆಗಳ ಮೂಲಕ ಚದುರಂಗರು ಧರ್ಮ, ಜಾತಿ, ಕೋಮುವಾದಗಳಿಗಿಂತ ಮನುಷ್ಯತ್ವವೇ ಶ್ರೇಷ್ಠ ಎಂಬ ಆಶಯವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ.

Article Details

Section

Research Articles

Author Biography

ಜಯಶಂಕರ ಎಂ.

ಸಹ ಪ್ರಾಧ್ಯಾಪಕ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು, ಮೈಸೂರು.

How to Cite

ಜಯಶಂಕರ ಎಂ. (2025). ಚದುರಂಗರ ಮೂರು ಕಥೆಗಳ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 10(03), 205 to 211. https://aksharasurya.com/index.php/latest/article/view/2454

References

ಚದುರಂಗ, (1999), ದಿಬ್ಬ (ಚದುರಂಗರ ಸಮಗ್ರ ಕಥೆಗಳು), ಮೈಸೂರು: ಅಭಿರುಚಿ ಪ್ರಕಾಶನ.

ಚದುರಂಗ, (1999), ತುಲಸಿ (ಚದುರಂಗರ ಸಮಗ್ರ ಕಥೆಗಳು), ಮೈಸೂರು: ಅಭಿರುಚಿ ಪ್ರಕಾಶನ.

ಚದುರಂಗ, (1999), ತಿರುವು (ಚದುರಂಗರ ಸಮಗ್ರ ಕಥೆಗಳು), ಮೈಸೂರು: ಅಭಿರುಚಿ ಪ್ರಕಾಶನ.