‘ಡೇರ್ ಡೆವಿಲ್ ಮುಸ್ತಾಫಾ’: ಸ್ವ ಮತ್ತು ಅನ್ಯವನ್ನು ಬೆಸೆವ ಕಥನ
Main Article Content
Abstract
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದ ‘ಡೇರ್ ಡೆವಿಲ್ ಮುಸ್ತಾಫಾ’ ಕಥೆಯು ಮತೀಯ ಪೂರ್ವಗ್ರಹ, ಅನ್ಯತೆ ಮತ್ತು ಮಾನವೀಯ ಸಂಬಂಧಗಳ ಸಂಕೀರ್ಣತೆಯನ್ನು ವಿಶ್ಲೇಷಿಸುವ ಮಹತ್ವದ ಕಥನವಾಗಿದೆ. ಈ ಸಂಶೋಧನಾ ಲೇಖನವು ಕಥೆಯಲ್ಲಿ ‘ಸ್ವ’ ಮತ್ತು ‘ಅನ್ಯ’ಗಳ ನಡುವೆ ನಿರ್ಮಾಣವಾಗುವ ಅಂತರವು ಸಾಮಾಜಿಕ, ಮತೀಯ ಹಾಗೂ ಚಾರಿತ್ರಿಕ ಪೂರ್ವಗ್ರಹಗಳಿಂದ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಪರಿಶೀಲಿಸುತ್ತದೆ. ಮುಸ್ತಾಫಾನ ಪ್ರವೇಶದ ಸಂದರ್ಭದಲ್ಲಿ ಸಹಪಾಠಿಗಳ ಮನಸ್ಸಿನಲ್ಲಿ ಮೂಡುವ ಅನುಮಾನಗಳು, ಫೇಜ್ ಟೋಪಿ, ಭಾಷೆ, ಆಹಾರ ಮತ್ತು ಧಾರ್ಮಿಕ ಆಚರಣೆಗಳಿಗೆ ನೀಡಲಾಗುವ ಮತೀಯ ಅರ್ಥಗಳು ಅನ್ಯೀಕರಣದ ಪ್ರಕ್ರಿಯೆಯನ್ನು ಸ್ಪಷ್ಟಪಡಿಸುತ್ತವೆ. ಆದರೆ ಸಹಜವಾದ ಸ್ನೇಹ, ಕ್ರೀಡೆ, ಹಾಸ್ಯ, ಸಂಘರ್ಷ ಮತ್ತು ಪರಸ್ಪರ ಸಹಕಾರದ ಅನುಭವಗಳು ಈ ಪೂರ್ವಗ್ರಹಗಳನ್ನು ಕ್ರಮೇಣ ಕರಗಿಸುತ್ತವೆ. ಗಣಪತಿ ಉತ್ಸವದ ಸಂದರ್ಭದಲ್ಲಿನ ಮುಸ್ತಾಫಾನ ಮಾನವೀಯ ನಡೆ ಸಹಪಾಠಿಗಳಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಕಥೆಯು ಮತೀಯ ಗಡಿಗಳನ್ನು ಮೀರಿ ಮಾನವೀಯತೆ, ವೈಚಾರಿಕತೆ, ಸಹಬಾಳ್ವೆ ಮತ್ತು ಜಾತ್ಯತೀತ ಮನೋಭಾವಗಳನ್ನು ಬೆಳೆಸುವ ಹೊಸತಲೆಮಾರಿನ ಪ್ರಜ್ಞೆಯನ್ನು ಪ್ರತಿಪಾದಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪೂರ್ಣಚಂದ್ರ ತೇಜಸ್ವಿ ಕೆ. ಪಿ., (2009), ಅಬಚೂರಿನ ಪೋಸ್ಟಾಫೀಸು, ಮೈಸೂರು: ಪುಸ್ತಕ ಪ್ರಕಾಶನ.
ಲಂಕೇಶ್ ಪಿ., (1997), ಟೀಕೆ-ಟಿಪ್ಪಣಿ, ಸಂಪುಟ- 1 (ಆಯ್ಕೆ: ನಟರಾಜ್ ಹುಳಿಯಾರ್), ಬೆಂಗಳೂರು: ಪತ್ರಿಕೆ ಪ್ರಕಾಶನ.
ರಾಮದಾಸ್ ಕೆ., (2004), ಮಾನವತೆಯ ತುಡಿತಗಳು, ಮೈಸೂರು: ತಾರಾ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್.
ಅಶೋಕ ಟಿ. ಪಿ., (2004), ಕಥನ ಕಾರಣ, ಧಾರವಾಡ: ಮನೋಹರ ಗ್ರಂಥಮಾಲಾ.