ತಿಪಟೂರು ಪರಿಸರದ ಆಧುನಿಕ ಪೂರ್ವ ಕನ್ನಡ ಕವಿಗಳು
Main Article Content
Abstract
ಪ್ರಸ್ತುತ ಲೇಖನವು ತಿಪಟೂರು ಪರಿಸರದ ನಾಲ್ವರು ಆಧುನಿಕಪೂರ್ವ ಕನ್ನಡ ಕವಿಗಳಾದ ಗೌರವಾಂಕ (ಕ್ರಿ.ಶ. 1525), ಕರಿಸಿದ್ಧೇಶ್ವರ ಸ್ವಾಮಿ (ಕ್ರಿ.ಶ. 1560), ಪ್ರಸನ್ನದೇಶಿಕ (ಕ್ರಿ.ಶ. 1610) ಮತ್ತು ಕರಿವೃಷಭ ದೇಶೀಕೇಂದ್ರ ಸ್ವಾಮಿ (ಕ್ರಿ.ಶ. 1808) ಇವರನ್ನು ಸಮೀಕ್ಷಿಸುತ್ತದೆ. ಈ ಕವಿಗಳ ಮೇಲೆ ವೀರಶೈವ ಧರ್ಮದ ಪ್ರಬಲ ಪ್ರಭಾವವಿದ್ದು, ಅವರು ತಮ್ಮ ಧಾರ್ಮಿಕ ಶ್ರದ್ಧೆಯನ್ನು ದೇಸೀ ಸಾಹಿತ್ಯ ಪ್ರಕಾರಗಳಾದ ಸಾಂಗತ್ಯ, ಭೋಗಷಟ್ಪದಿ, ತಾರಾವಳಿ ಮತ್ತು ಕೈವಲ್ಯಪದಗಳಲ್ಲಿ ವಿಪುಲವಾಗಿ ನಿರೂಪಿಸಿದ್ದಾರೆ. ಇವರ ಕೃತಿಗಳಲ್ಲಿ ಕಥಾ ಕಥನ ನೈಪುಣ್ಯ ಮತ್ತು ಸಾಹಿತ್ಯಕ ಸೊಗಸು ಕಂಡುಬಂದರೂ, ಸರಿಯಾದ ಅಧ್ಯಯನದ ಕೊರತೆಯಿಂದಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸೂಕ್ತ ಸ್ಥಾನ ಪಡೆಯುವಲ್ಲಿ ಹಿಂದುಳಿದಿವೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಈ ಸಮೀಕ್ಷೆಯು ಈ ಕವಿಗಳ ಹಿರಿಮೆಯನ್ನು ದಾಖಲಿಸುವ ಪ್ರಯತ್ನವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪರಮಶಿವಮೂರ್ತಿ ಡಿ.ವಿ. & ನಂಜುಂಡಸ್ವಾಮಿ ಬಿ. (ಸಂಪಾದಕರು), (2021), ಕಾವ್ಯಕಲ್ಪ: ತುಮಕೂರು ಜಿಲ್ಲಾ ಪ್ರಾಚೀನ ಸಾಹಿತ್ಯ ಸಿರಿ - ಸಂಪುಟ - 1, ತುಮಕೂರು ಜಿಲ್ಲಾ ಕನ್ನಡ ಪರಿಷತ್, ತುಮಕೂರು.
ಶಿವಣ್ಣ ಎಸ್. (ಸಂಪಾದಕರು), ಪ್ರಸನ್ನದೇಶಿಕನ ಹೊನ್ನವಳ್ಳಿ ಸಿದ್ಧವೀರೇಶ್ವರನ ಪವಾಡ, ಪರಂಜ್ಯೋತಿ ಪತ್ರಿಕೆ, ಬೆಳಗಾವಿ.
ನಾಗಭೂಷಣ ಸಿ., (2018), ಶರಣ ಸಾಹಿತ್ಯ - ಸಂಸ್ಕೃತಿ ಕವಳಿಗೆ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ಯೋಗೀಶ್ವರಪ್ಪ ಡಿ.ಎನ್., (2022), ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
ವಿದ್ಯಾಶಂಕರ ಎಸ್., (2015), ವೀರಶೈವ ಸಾಹಿತ್ಯ ಚರಿತ್ರೆ, ಸಂ. 6, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
ಯೋಗೀಶ್ವರಪ್ಪ ಡಿ.ಎನ್. (ಸಂಪಾದಕರು), (2002), ಜಯಮಂಗಲಿ 69 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ನಂಜುಂಡಸ್ವಾಮಿ ಬಿ. (ಸಂಪಾದಕರು), (2002), ಕಲ್ಪಸಿರಿ - ಅಖಿಲ ಭಾರತ 69 ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರು.
ಸಿದ್ಧಲಿಂಗಪ್ಪ ಕೆ.ಎಸ್. (ಪ್ರಧಾನ ಸಂಪಾದಕರು), (1997), ಚೆನ್ನುಡಿ ಸ್ಮರಣ ಸಂಚಿಕೆ, ತುಮಕೂರು ಜಿಲ್ಲಾ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಗುಬ್ಬಿ.