ಲಿಂಗ ಸಮಾನತೆಗಾಗಿ ವಚನಕಾರರ ನಿಲುವು

Main Article Content

ಕುಮಾರಯ್ಯ ಡಿ.ಎಸ್.

Abstract

ಭಾರತೀಯ ಭಕ್ತಿ ಚಳುವಳಿಯಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ವಚನ ಚಳುವಳಿ ಪಡೆದಿದೆ ಎಂದು ಹೇಳಬಹುದು. ಕನ್ನಡ ನಾಡಿನ ಚರಿತ್ರೆಯಲ್ಲಿ 12ನೇ ಶತಮಾನ ಮಹತ್ವವನ್ನು ಪಡೆದಿದೆ. ಅಂದಿನ ಸಮಾಜದಲ್ಲಿದ್ದಂತಹ ಅನೇಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದಂತವರು ವಚನಕಾರರು. ತಮ್ಮ ವಿಚಾರಧಾರೆಗಳ ಮೂಲಕ ಸಮಾಜವನ್ನು ವೈಚಾರಿಕ ನೆಲೆಗೆ ಕೊಂಡೊಯ್ಯಲು ಪ್ರಯತ್ನಿಸಿದರು. ಬಸವಣ್ಣನ ನಾಯಕತ್ವದಲ್ಲಿ ಇಡೀ ಶರಣ ಶರಣೆಯರು ನವ ಸಮಾಜವನ್ನು ಕಟ್ಟಲು ಪ್ರಯತ್ನಿಸಿದಂತವರು. ಅಂದಿನ ಸಮಾಜದಲ್ಲಿ ಹೆಣ್ಣನ್ನು ಕೀಳು ಎಂಬ ಭಾವನೆ ಮನೆ ಮಾಡಿತ್ತು. ಇಂತಹ ಭಾವನೆಯನ್ನು ತೊಡೆದು ಹಾಕಲು ವಚನಕಾರರಂತೆ ವಚನಕಾರ್ತಿಯರು ಸಹ ತಮ್ಮ ವಚನಗಳ ಮೂಲಕ ಸಮಾಜವನ್ನು ಪ್ರಶ್ನಿಸಿದರು. ಪುರುಷ ಸಮಾಜದಲ್ಲಿ ಸ್ತ್ರೀಯು ಸಹ ಸರಿಸಮಾನವಾಗಿ ಬೆಳೆಯುವಂತೆ ಪ್ರೇರೇಪಿಸಿದರು. ಈ ವಚನ ಚಳುವಳಿ ಸ್ತ್ರೀಗೆ ಕೇವಲ ಗೃಹಿಣಿಯಾಗುವ ಅಥವಾ ಪತಿಗೆ ಆಧ್ಯಾತ್ಮಿಕ ಸಾಧನೆಯ ಸಹಾಯಕವಾಗುವ ಸ್ಥಾನವನ್ನು ಅಷ್ಟೇ ನೀಡದೆ ಅವಳ ಆತ್ಮವನ್ನು ಪೂರ್ಣ ಮೌಲ್ಯಮಾಪನ ಮಾಡಿದ ಮೊದಲ ಧಾರ್ಮಿಕ-ಸಾಮಾಜಿಕ ಚಳುವಳಿಯಾಗಿದೆ.

Article Details

Section

Research Articles

Author Biography

ಕುಮಾರಯ್ಯ ಡಿ.ಎಸ್.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಕುಮಾರಯ್ಯ ಡಿ.ಎಸ್. (2025). ಲಿಂಗ ಸಮಾನತೆಗಾಗಿ ವಚನಕಾರರ ನಿಲುವು. ಅಕ್ಷರಸೂರ್ಯ (AKSHARASURYA), 7(05), 32 to 40. https://aksharasurya.com/index.php/latest/article/view/1317

References

ಬಸವರಾಜ ಸಬರದ, (2020), ವಚನ ಚಳುವಳಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು.

ವಿದ್ಯಾಶಂಕರ ಎಸ್. (ಸಂ), (2001), ಸಂಕಿರ್ಣ ವಚನ: ಸಂಪುಟ ಎರಡು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಕಲಬುರ್ಗಿ ಎಂ.ಎಂ. (ಸಂ), (2001), ಸಮಗ್ರ ವಚನ ಸಂಪುಟ (6), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ವೀರಣ್ಣ ರಾಜೂರ (ಸಂ), (2021), ಶಿವಶರಣೆಯರ ವಚನ ಸಂಪುಟ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ವೀರಣ್ಣ ರಾಜೂರ (ಸಂ), (2021), ಬಸವಣ್ಣನವರ ವಚನ ಸಂಪುಟ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಹೂಗಾರ ಎಂ.ಬಿ., (2012) ವಚನ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

Most read articles by the same author(s)