Published: 2025-06-05

Table of Contents

Table of Contents

I to V

ಕನ್ನಡದಲ್ಲಿ ಮೀಸಲಾತಿ ಚಳವಳಿಯ ಇತಿಹಾಸ: ಒಂದು ಅವಲೋಕನ

ಅಂಜಿನಪ್ಪ ಎಲ್.ಟಿ.

01 to 10

ಪ್ರಸ್ತುತ ಈ ಲೇಖನದಲ್ಲಿ ಭಾರತದಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ಶೂದ್ರರು ಅನುಭವಿಸಿದ ಯಾತನೆಗಳು, ಹನ್ನೆರಡನೇ ಶತಮಾನದಲ್ಲಿ ಆದ ಸಾಮಾಜಿಕ ಕ್ರಾಂತಿಗಳು, ಸ್ವಾತಂತ್ರ ಪೂರ್ವದಲ್ಲಿನ ಮೀಸಲಾತಿ ಕ್ರಮಗಳು ನಂತರದ ಬೆಳವಣಿಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೊಲ್ಲಾಪುರದ ಶಾಹುಮಹಾರಾಜರು ಹಿಂದುಳಿದವರಿಗೆ ಶೇಕಡ 50ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ ಎಂಬ ಹೆಗ್ಗಳಿಕೆ ಪಾತ್ರವಾದ ರೀತಿ ಹಾಗೂ ಅವರ ಕೈಗೊಂಡ ಕಾರ್ಯವೈಖರಿಗಳನ್ನು ಇಲ್ಲಿ ತಿಳಿಸಲಾಗಿದೆ. 
ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರು ಹಿಂದುಳಿದವರಿಗೆ ನೀಡಿದ ಕೊಡುಗೆಗಳು ಅವರ ಅಧಿಕಾರವಧಿಯಲ್ಲಿ ಜಾರಿಗೆ ತಂದ ಮಿಲ್ಲರ್ ಆಯೋಗ, ಮಿಲ್ಲರ್ ಆಯೋಗವು ಆ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡುತ್ತಿದ್ದ ತಾರತಮ್ಯ ಸಂಬಳದ ಸೌಲತ್ತುಗಳು ಇತರ ಸೌಲತ್ತುಗಳು ಹಾಗೂ ಆಯೋಗ ಕೈಗೊಂಡ ನಿರ್ಣಯವನ್ನು ಇಲ್ಲಿ ಉಲ್ಲೇಖಿಸಲಾಗಿದೆ. 
ಮುಂದೆ ದೇಶ್ಯಾದ್ಯಂತ ಹುಟ್ಟಿಕೊಂಡ ಒಕ್ಕೂಟಗಳು ಜಾತಿ ಸಂಘಟನೆಗಳು, ಸೈಮನ್ ಕಮಿಷನ್, ಡಾ. ಬಿ.ಆರ್. ಅಂಬೇಡ್ಕರ್ ಅವರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿ ಅಸ್ಪೃಶ್ಯರ ಪರವಾಗಿ ಧ್ವನಿ ಎತ್ತಿ ಅದರಲ್ಲಿ ಸರ್ಕಾರ ಕೈಗೊಳ್ಳಬಹುದಾದ ಯೋಜನೆಗಳನ್ನು ಇಲ್ಲಿ ಸ್ಮರಿಸಲಾಗಿದೆ. ಮೈಸೂರು ಸಂಸ್ಥಾನದ ಕೊಡುಗೆ ಮಿಲ್ಲರ್ ಆಯೋಗದಿಂದ ಹಿಡಿದು ಕಾಕಾ ಕಾಲೇಲ್ಕರ್ ಆಯೋಗದ ವರದಿ, ನಾಗನಗೌಡನ ವರದಿ, ಹಿಂದುಳಿದ ವರ್ಗಗಳ ಬೈಬಲ್ ಎಂದೇ ಪ್ರಖ್ಯಾತವಾದ ಹಾವನೂರು ವರದಿ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ, ದ್ವಾರಕನಾದ ಆಯೋಗ ಮುಂತಾದವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ಚಿತ್ರಿಸಲಾಗಿದೆ. 
ಪ್ರತಿ ವರದಿಯ ಮುಖ್ಯಾಂಶಗಳು ಅದರ ರಚನೆ ರಚನೆಯಾಗಲು ಕಾರಣವಾದ ಅಂಶಗಳು ವರದಿಯ ಪರಿಣಾಮ ಅದರ ಮುಖ್ಯ ಅಂಶಗಳು ಇದರ ಪರಿಣಾಮದಿಂದಾಗಿ ಮುಂದೆ ಬಂದ ಆಯೋಗಗಳ ಕೊಡುಗೆಗಳನ್ನು ಇಲ್ಲಿ ತಿಳಿಸಲಾಗಿದೆ. 

Read More »

ಅಡಿಗರ ಭೂಮಿಗೀತದ ನಾಯಕ: ‘ಈಡಿಪಸ್’

ಚಾಂದ್ ಪಾಷ

11 to 16

ದೊರೆ ಈಡಿಪಸ್ ನ ತಲ್ಲಣ, ಪಾಪ ಪ್ರಜ್ಞೆ, ತಾಯಿಯನ್ನು ಭೋಗಿಸಿದನೆಂಬ ಕಳಂಕ ಇತ್ಯಾದಿ ಎಲ್ಲ ಗುಣಗಳು ಕೂಡ ಅಡಿಗರ ‘ಭೂಮಿಗೀತ’ ದ ನಾಯಕನಿಗೆ ಹೋಲುವಂಥದ್ದು. ಕಣ್ಣು ಕಳೆದುಕೊಳ್ಳುವ ರೂಪಕವು ಪ್ರಭುತ್ವದ ಅತೀವ ದುರಾಸೆ ಮತ್ತು ಅಜ್ಞಾನವನ್ನು ಸೂಚಿಸುತ್ತದೆ. ಸ್ವಸಂಬಂಧಗಳಲ್ಲಿ ಲೈಂಗಿಕತೆ ಅಕ್ರಮವೂ, ಅಪರಾಧವೂ ಆಗಿ ಇರುವ ಈ ದೇಶದಲ್ಲಿ, ಈಡಿಪಸ್ ನ ಹೋಲುವ ಕ್ರಿಯೆಗಳು ನಡೆಯುತ್ತಿವೆ. ಭೂಮಿಯನ್ನು ತಾಯಿ ಎನ್ನುತ್ತಲೇ ಉತ್ತು, ಬಿತ್ತುವ ಪ್ರಕ್ರಿಯೆ ಮಗನೇ ತಾಯಿಯನ್ನು ಭೋಗಿಸಿದ ಹೋಲಿಕೆ ನೀಡಬಲ್ಲದು. ಹಾಗಾಗಿ ಭೂಮಿಗೀತದ ನಾಯಕನಾಗಿ ದೊರೆ ಈಡಿಪಸ್ ನನ್ನು ಅಡಿಗರು ರೂಪಕವಾಗಿ ತಂದಿದ್ದಾರೆಂದು ಈ ಲೇಖನ ಸಾಧಿಸುತ್ತದೆ. 

Read More »

ʼಸ್ತ್ರೀ ಅಸ್ಮಿತೆ: ವಿಭಿನ್ನ ನೆಲೆಗಳುʼ ಕೃತಿಯ ಒಳನೋಟ

ಕೆ. ಅನಂತಾಚಾರ್

17 to 25

ಹೆಣ್ಣು ಯಾವಾಗಲೂ ಒಂದು ಮೂಲೆಗುಂಪಿನಂತೆ ಎಂಬ ವಾದ ಸದಾ ಹರಡಿ ಹೋಗಿರುವ ಸಂದರ್ಭದಲ್ಲಿ ಚೇತನಾ ಹೆಗಡೆ ಅವರ “ಸ್ತ್ರೀ ಅಸ್ಮಿತೆ : ವಿಭಿನ್ನ ನೆಲೆಗಳು” ಕೃತಿಯು ವಿಭಿನ್ನ ಮಾದರಿಯ ಅಧ್ಯಯನವನ್ನು ನಮ್ಮ ಮುಂದಿಡುತ್ತದೆ. ಈ ಕೃತಿಯು ವ್ಯಕ್ತಿ ಮತ್ತು ವ್ಯಕ್ತಿತ್ವಗಳನ್ನು ಸದಾ ಕಾಲ ಬೇರೆಯಾಗಿ ಕಾಣುವ ವ್ಯತ್ಯಾಸಗಳಿಂದ ಹೊರತಾಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಒಂದೇ ಎಂದು ಭಾವಿಸುವ ಹಾಗಿಲ್ಲ. ಜೈವಿಕ ವ್ಯತ್ಯಾಸಗಳನ್ನು ಅಂಗೀಕರಿಸುತ್ತಲೇ ಹೆಣ್ಣಿನ ಅಸ್ಮಿತೆಯನ್ನು ಗುರುತಿಸುವ ಕೆಲಸವನ್ನು ಲೇಖಕಿ ಮಾಡಿದ್ದಾರೆ. ಹೆಣ್ಣು ಮತ್ತು ಹೆಣ್ತನವನ್ನು ಹೆಣ್ಣು ಅಧ್ಯಯನ ಮಾಡಿದಾಗ ಉಂಟಾಗುವ ತೀಕ್ಷ್ಣ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಕಟ್ಟಿಕೊಡುವಲ್ಲಿ ಈ ಕೃತಿಯು ಪರಿಣಾಮಕಾರಿಯಾಗಿದೆ ಎನ್ನಲು ಅಡ್ಡಿಯಿಲ್ಲ. ವರ್ಜೀನಿಯಾ ವೂಲ್ಫ್ ಕೇಳುತ್ತಾಳೆ ಹೆಣ್ಣಿಗೆ ಒಂದು ಪ್ರತ್ಯೇಕವಾದ ಕೊಠಡಿಯನ್ನು ಕೊಡಿ ಎಂದು. ಆದರೆ ಹಾಗೆ ಕೊಠಡಿಯನ್ನು ಕೊಡುವ ಮೂಲಕ ಅವಳನ್ನು ಮತ್ತೊಮ್ಮೆ ಅವಳದ್ದೇ ಕೊಠಡಿಯಲ್ಲಿ, ಅವಳದ್ದೇ ಕೈಯನ್ನು, ಅವಳದ್ದೇ ಹಗ್ಗದಿಂದ ಕಟ್ಟಿದಂತಾದೀತು. ಬದಲಾಗಿ ಪ್ರತ್ಯೇಕವಾದ ಕೊಠಡಿ ಎಂಬುದನ್ನು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ಹಾಗೂ ಅವಳ ಆಲೋಚನೆಗಳಿಗೂ ನೀಡುವುದು ಒಳಿತು.

Read More »

ಬಸವಣ್ಣನವರ ವಚನಗಳಲ್ಲಿ-ಜಾತಿ ನಿರಾಕರಣೆ

ಕುಮಾರಯ್ಯ ಡಿ.ಎಸ್.

26 to 31

ಹನ್ನೇರಡನೆ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಶರಣ ಸಮಾಜವು ಕುಲ, ಮತ, ಲಿಂಗ, ವರ್ಣ, ವರ್ಗಇವುಗಳಿಂದ ಮುಕ್ತವಾಗಿತ್ತು. ಬಸವಣ್ಣನವರು ಜಾತಿಯ ವಿಷ ಬೀಜವನ್ನು ಕಿತ್ತು ನವ ಸಮಾಜದಲ್ಲಿ ಹೇಗೆ ಬದುಕಬೇಕೆಂದು ಸಾರಿದರು. ಮನುಧರ್ಮದ ಕರ್ಮಸಿದ್ದಾಂತವನ್ನು ಬಸವಣ್ಣನವರು ಅಲ್ಲಗಳೆದು ಕಾಯಕ ಸಿದ್ಧಾಂತವನ್ನು ಕಾರ್ಯಗತಗೊಳಿಸಿದರು. ಬಸವಣ್ಣನವರ ಚಿಂತನೆಗಳಲ್ಲಿ ಜಾತಿ ನಿರಾಕರಣೆಯೂ ಸಹ ಮಹತ್ವವಾದ ಚಿಂತನೆಯಾಗಿದೆ. ಜಾತಿ ನಿರಾಕರಣೆ ವಿಚಾರದಲ್ಲಿ ಎಲ್ಲರಿಗಿಂತ ಹೆಚ್ಚು ಮಾನಸಿಕ ಸಂಘರ್ಷವನ್ನು ಹೊಂದಿದವನು ಬಸವಣ್ಣನವರು, ಇಲ್ಲದಿದ್ದರೆ ‘ಉತ್ತಮ ಕುಲದಲ್ಲಿ ಹುಟ್ಟಿದನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯ ಎಂದು ಹೇಳುವ ನೋವು ಏಕಿರಬೇಕಿತ್ತು?’ ಉತ್ತಮ ಜಾತಿ ಸಂಕೋಲನೆಯಿಂದ ಬಿಡಿಸಿಕೊಂಡು ಹೊರಬರುವುದಕ್ಕಾಗಿ ತಾನು ಹುಟ್ಟಿದ ಜಾತಿಯನ್ನು ನಿರಾಕರಣೆ ಮಾಡುತ್ತಾನೆ. ಜಾತಿ ಎಂಬ ಹೆಮ್ಮೆರವನ್ನು ಬುಡಸಮೇತ ಕಿತ್ತು ಹಾಕಲು ಅಂತರ್ಜಾತಿ ವಿವಾಹವನ್ನು ಸಹ ಬಸವಣ್ಣನವರು ಮಾಡುತ್ತಾರೆ. ಇದರೊಂದಿಗೆ ನವ ಸಮಾಜದ ಸೃಷ್ಟಿಗೆ ಕಾರಣನಾಗುತ್ತಾನೆ. ಇಂತಹ ಎಲ್ಲಾ ಅಂಶವನ್ನು ಕುರಿತು ಬಸವಣ್ಣನವರ ವಚನಗಳಲ್ಲಿ ಜಾತಿ ನಿರಾಕರಣೆ ಹೇಗೆ ಮೂಡಿ ಬಂದಿದೆ ಎಂದು ಅರಿಯಬಹುದು. 

Read More »

ಕೃಷಿ ವಿಜ್ಞಾನ ಸಾಹಿತ್ಯದ ಬೆಳವಣಿಗೆಯ ವಿಶ್ಲೇಷಣಾತ್ಮಕ ಅಧ್ಯಯನ

ಮಲ್ಲಿಕಾರ್ಜುನ ಎಂ.ಸಿ.

32 to 46

ಕೃಷಿ ಸಾಹಿತ್ಯ ಬರಹಗಾರರನ್ನು ಹೇಗೆ ಗುರುತಿಸಿಕೊಳ್ಳುವುದಾದರೂ ಹೇಗೆ? ಕೃಷಿಯಲ್ಲಿ ತೊಡಗಿಸಿಕೊಂಡು ತಾನು ಕಂಡುಂಡ ಸತ್ಯವನ್ನು ಬರಹದಲ್ಲಿ ರೂಪದಲ್ಲಿ ಪ್ರಕಟಿಸಿದ ಸಾಹಿತ್ಯವನ್ನು ನೆಚ್ಚಬೇಕೇ? ಅಥವಾ ಭಾವನಾತ್ಮಕವಾಗಿ ಬರೆಯುವ ಬರವಣಿಗೆಯನ್ನು ನೆಚ್ಚಬೇಕೇ? ಕೃಷಿ ವಿಜ್ಞಾನಿಗಳು ಬರೆದ ಸಲಹೆ, ಮಾರ್ಗದರ್ಶನದ ಆಧುನಿಕ ಕೃಷಿ ಮಾಹಿತಿಯನ್ನೇ? ಸಂದೇಶಗಳ ಮಾದರಿಯಲ್ಲಿರುವ ಬರವಣಿಗೆಯನ್ನೇ? ನಾವು ಎಂತಹ ಕೃಷಿ ಸಾಹಿತ್ಯವನ್ನು ನಿರೀಕ್ಷಿಸಬಹುದು. ಇಂತಹ ಜಿಜ್ಞಾಸೆ ನಮ್ಮ ಮುಂದೆ ಕಾಡುತ್ತದೆ. ಕೃಷಿಕ ಬರೆದ ಬರವಣಿಗೆಯನ್ನೇ, ಕೃಷಿಯಲ್ಲಿ ಆಸಕ್ತಿ ಹೊಂದಿ ಆಳವಾಗಿ ಅಧ್ಯಯನ ನಿರತರಾದ ಬರಹಗಾರರನ್ನೇ, ಕೃಷಿ ಅನುವಾದಗಳನ್ನೇ, ಕೃಷಿಯೇತರರು ಬರೆದ ಬರವಣಿಗೆಯನ್ನೇ, ಕೃಷಿ ವಿಜ್ಞಾನಿಗಳು ಬರೆದ ಬರವಣಿಗೆಯನ್ನೇ, ಸಾಂಸ್ಥಿಕ ಪ್ರಕಟಣೆಗಳನ್ನೇ ಇವುಗಳಲ್ಲಿ ನಾವು ಯಾವುದನ್ನು ಒಪ್ಪಬೇಕು ಎಂಬುದು ಚರ್ಚಿತ ವಿಚಾರ. ಒಟ್ಟಾರೆ ಕೃಷಿ ಸಾಹಿತ್ಯದ ನಿರ್ಮಾಣದ ನಂತರದಲ್ಲ್ಲಿ ಅದರ ಪರಿಣಾಮದ ಬಗ್ಗೆ ಗಮನಿಸಬೇಕಾದ ಅಗತ್ಯವಿದೆ. 
ಕೃಷಿ ಎಂಬುದೇ ಒಂದು ಜೀವನ ವಿಧಾನ. ಇದಕ್ಕೆ ಪೂರಕವಾಗಿ ಆಯಾ ಕಾಲದ ಕೃಷಿಯ ಅಗತ್ಯತೆ ಅನುಗುಣವಾಗಿ ಕೃಷಿ ಸಾಹಿತ್ಯ ಸೃಷ್ಟಿಯಾಗುತ್ತ ಬಂದಿದೆ. ಬಹುಪಾಲು ಕೃಷಿಕರು ಅಕ್ಷರಸ್ಥರಲ್ಲದ ತಳಮಟ್ಟದ ಹಾಗೂ ತಳ ಸಮುದಾಯದವರಿದ್ದಾರೆ. ಕೃಷಿಕರು ತಮ್ಮ ಬೇಸಾಯ ಚುಟವಟಿಕೆಗಳನ್ನು ಪರಿಸರ, ಹವಾಮಾನ ಹಾಗೂ ಕಾಲಾಧಾರಿತ ವಿಧಾನಗಳನ್ನು ಅನುಸರಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಒತ್ತಡಗಳನ್ನು ನಿಭಾಯಿಸುವಂತಹ ಕೃಷಿ ಸಾಹಿತ್ಯ ಸೃಷ್ಟಿಯಾಗಬೇಕಿದೆ. ಕೃಷಿ ಸಾಹಿತ್ಯದ ನಿರ್ಮಾಣದ ಜೊತೆಗೆ ಅದರ ಪ್ರಸ್ತುತತೆ, ಸತ್ಯಾಸತ್ಯತೆ ಪ್ರತಿಯೊಂದು ವಿಚಾರಗಳು ಪರಿಶೀಲನೆ ಒಳಗಾಗಬೇಕಾಗಿದೆ. ಇದುವರೆಗೂ ಬಂದಿರುವ ಕೃಷಿ ಸಾಹಿತ್ಯಾವಲೋಕನ ಮಾಡಿದಾಗ ಕೃಷಿಕರಿಗೆ ಬೇಕಾದ ಆರ್ಥಿಕ ಲಾಭದ, ಮಾರುಕಟ್ಟೆಯ ಜ್ಞಾನಾಧಾರಿತ ಬರವಣಿಗೆಗಳು ಅಲ್ಪ ಪ್ರಮಾಣ. ಕೃಷಿ ಸಾಹಿತ್ಯ ಓದಿ ಅದನ್ನು ತಮ್ಮ ಭೂಮಿಯಲ್ಲಿ ಅಳವಡಿಸಿಕೊಂಡವರಿಗೆ ಲಾಭದ ಗ್ಯಾರಂಟಿ ಯಾವೊಬ್ಬ ಲೇಖಕ ಕೊಡಲಾರ. ಹೀಗೆ ಲೇಖಕ ಕೃಷಿ ಸಾಹಿತ್ಯ ರಚನೆಯ ಸಂದರ್ಭದಲ್ಲಿ ತನ್ನದೇ ಆದಂತಹ ಮಿತಿಗಳಿಗೆ ಸೀಮಿತವಾಗಬೇಕಾಗುತ್ತದೆ. 

Read More »

ನೇಯ್ಗೆ ಕಾಯಕದ ಶರಣ ಮತ್ತು ಶರಣೆಯರ ವಚನಗಳ ಮಹತ್ವ

ಮೋಹನ್‌ ಕುಮಾರ್‌ ಆರ್‌.

47 to 60

ಆದ್ಯವಚನಕಾರರಾದ ಜೇಡರ ದಾಸಿಮಯ್ಯನವರು ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಶ್ರೇಷ್ಠ ಶಿವಶರಣ ಹಾಗೆಯೇ ದೊರೆತಿರುವ ಆಧಾರಗಳ ಮೇರೆಗೆ ದಾಸಿಮಯ್ಯನ ಪತ್ನಿ ದುಗ್ಗಳೆ, ಅಮುಗಿ ದೇವಯ್ಯ, ಅಮುಗೆ ರಾಯಮ್ಮ, ಆದಯ್ಯ, ಕದಿರ ರೆಮ್ಮವ್ವೆ, ಕದಿರ ಕಾಯಕದ ಕಾಳವ್ವೆಯರು ಕೂಡ ನೇಯ್ಗೆ ಕಾಯಕವನ್ನು ಮಾಡುತ್ತ ಸಮಾಜಕ್ಕೆ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಸರ್ವೋನ್ನತಿಗೆ ಶ್ರಮಿಸಿದ ಕಾಯಕ ಶರಣ ಮತ್ತು ಶರಣೆಯರು. ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಈ ಶರಣ ಮತ್ತು ಶರಣೆಯರು ತಮ್ಮ ಅನುಭವ, ಆತ್ಮಾನುಭೂತಿಯನ್ನು ಸಮಾಜದ ಜನರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದರು. ಸರಳ ಮತ್ತು ಸ್ಪಷ್ಟ ನುಡಿಗಳಲ್ಲಿ ವಚನಗಳನ್ನು ಕಟ್ಟಿಕೊಟ್ಟು ದಾಂಪತ್ಯದಿಂದಲೂ ಮೋಕ್ಷ ಸಂಪಾದನೆ ಸಾಧ್ಯವೆಂಬ ಅಧ್ಯಾತ್ಮಿಕ ಚಿಂತನೆಯನ್ನು ತೋರಿದವರು. ಸತ್ಯದ ಪ್ರತಿಪಾದನೆ, ಸ್ತ್ರೀಪರ ಕಾಳಜಿ, ಸ್ತ್ರೀಸಮಾನತೆ, ವೈಶಾಲ್ಯ ಮನೋಭಾವ, ವಿಶ್ವಮಾನವತ್ವದ ಭಾವನೆ, ಸಂಕುಚಿತತೆಯ ವಿರೋಧ, ಆಡಂಬರ ಮೌಢ್ಯ ಚಿಂತನೆಗಳ ಖಂಡನೆ, ಡಾಂಭಿಕ ಭಕ್ತಿಯ ವಿಡಂಬನೆ, ಅಧ್ಯಾತ್ಮಿಕ ಚಿಂತನೆ, ಅಧ್ಯಾತ್ಮಿಕ ನಿಷ್ಠೆ, ಏಕದೇವೋಪಾಸನೆಯ ನಿಷ್ಠೆ, ನೈಜಭಕ್ತಿ ಪ್ರತಿಪಾದನೆ, ಪುರೋಹಿತಶಾಹಿಯ ನಿರಾಕರಣೆ, ದೃಢ ಭಕ್ತಿ, ಸತ್ಸಂಗಕ್ಕೆ ಆದ್ಯತೆ, ಜಾತಿ ಮತ್ತು ಅಸ್ಪೃಶ್ಯತೆಯ ನಿರಾಕರಣೆ ಮುಂತಾದ ಶ್ರೇಷ್ಠ ಚಿಂತನೆಗಳನ್ನು ಈ ನೇಯ್ಗೆ ಕಾಯಕದ ಶರಣರಲ್ಲಿ ಕಾಣಲು ಸಾಧ್ಯ. 

Read More »

ನವೋದಯ ಸಾಹಿತ್ಯದಲ್ಲಿನ ಪರಂಪರೆಯ ನೋಟ ಹಾಗೂ ಆಧುನಿಕ ಶಿಸ್ತುಗಳ ಮುಖಾಮುಖಿ

ನವೀನ್ ಕುಮಾರ್ ಸಿ.

61 to 71

ನವೋದಯ ಸಾಹಿತ್ಯವು ಕನ್ನಡ ಸಾಹಿತ್ಯದ ಒಂದು ತಿರುವುಬಂದ ಹಂತವಾಗಿದೆ, ಇದು ಪುರಾತನ ಪರಂಪರೆಯೊಂದಿಗೆ ಹೊಸ ಆಧುನಿಕ ಶಿಸ್ತುಗಳನ್ನು ಮುಖಾಮುಖಿ ಮಾಡಿತು. ಈ ಲೇಖನದಲ್ಲಿ ನವೋದಯ ಸಾಹಿತ್ಯದ ಮೂಲ ಚಿಂತನ ಶೈಲಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಭಾವ, ಮತ್ತು ಆಧುನಿಕತೆಯ ಆತ್ಮಪರ, ಸಮಾಜಪರ ದೃಷ್ಟಿಕೋನಗಳ ನಡುವಿನ ಸಂಪರ್ಕ ಮತ್ತು ವ್ಯತ್ಯಾಸಗಳನ್ನು ವಿಶ್ಲೇಷಿಸಲಾಗಿದೆ. ಸಾಹಿತ್ಯದ ವಿಷಯ, ರೂಪ, ಭಾಷಾ ಬಳಕೆ ಮತ್ತು ಲೇಖಕರ ಆಂತರಿಕ ನಿಲುವುಗಳಲ್ಲಿ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಮನ್ವಯದ ಪ್ರಯತ್ನವನ್ನು ಈ ಲೇಖನ ಮುಟ್ಟಿಸುತ್ತದೆ. ಈ ಮುಖಾಮುಖಿಯ ಮೂಲಕ ಕನ್ನಡ ಸಾಹಿತ್ಯವು ಹೇಗೆ ಹೊಸ ಬೆಳವಣಿಗೆಗೆ ದಾರಿ ಮಾಡಿತು ಎಂಬುದನ್ನು ಲೇಖನ ಸ್ಪಷ್ಟಪಡಿಸುತ್ತದೆ. 

Read More »

ಮೀಮಾಂಸೆ: ಜೀವನ ಮತ್ತು ಕಾವ್ಯ

ಸುಮಾ ಆರ್.

72 to 79

ಮೀಮಾಂಸೆ ಯಾವುದೇ ವಿಷಯದ ವಿಚಾರಪೂರ್ಣ ಚಿಂತನೆ, ತಾರ್ಕಿಕ ತೀರ್ಮಾನ, ವಿಮರ್ಶೆ, ಚರ್ಚೆ, ವಿಶ್ಲೇಷಣೆ ಇತ್ಯಾದಿಯಾಗಿ ಅರ್ಥೈಸಲ್ಪಡುತ್ತದೆ. ಸಹೃದಯ ಓದುಗರಿಗೆ ತಿಳಿದಿರುವಂತೆ ಕಾವ್ಯ ಮೀಮಾಂಸೆ ಚಿರಪರಿಚಿತ. ಆದರೆ ಜೀವನ ಮೀಮಾಂಸೆ.. ಅಂತರ್ಗತ. ಜೀವನವು ಹಲವು ಮುಖಗಳನ್ನು ಹೊಂದಿದ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು-ಸಾವುಗಳ ನಡುವಿನ ಅಭಿವೃದ್ಧಿ ಮತ್ತು ಹೋರಾಟ. ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ, ಮದುವೆಗೊ, ಮಸಣಕೋ ಕರೆದಲ್ಲಿಗೆ ಹೋಗೆಂದ ಮಂಕುತಿಮ್ಮ’, ‘ಇರುವ ಭಾಗ್ಯವ ನೆನೆದು ಬಾರೆನೆನ್ನದಿರು, ಹರುಷಕ್ಕಿದೆ ದಾರಿ’, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ – ಎಂಬುದಾಗಿ ಹೇಳಿ ಜೀವನವನ್ನು ಮೀಮಾಂಸೆಗೆ ಒಳಪಡಿಸಿದ್ದಾರೆ.
ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವಿನ ಸಂಬಂಧಗಳ ಬಗ್ಗೆ ತೌಲನಿಕವಾಗಿ ಚರ್ಚಿಸುವಾಗ ಕಂಡುಬರುವ ಪ್ರಮುಖ ಸಂಗತಿಗಳೆಚಂದರೆ, ಕಾವ್ಯ ಮೀಮಾಂಸೆ ಕವಿ ಮತ್ತು ಸಹೃದಯರ ಜೀವನವನ್ನು ಕುರಿತಾದ ಲಿಖಿತ ಪರಂಪರೆಯ ದಾಖಲೆಯಾದರೆ, ಜೀವನ ಮೀಮಾಂಸೆ ಸಾಮಾನ್ಯ ವ್ಯಕ್ತಿಯ ಜೀವನದ ಅಲಿಖಿತ ಪರಂಪರೆಯ ದಾಖಲೆಯಾಗಿದೆ. ಅಕ್ಷರಗಳ ಪರಿಚಯವೇ ಇಲ್ಲದ ಜನಪದರು ತಮ್ಮ ವೈಯಕ್ತಿಕ ಬದುಕಿನ, ಸುತ್ತಲಿನ ಸಮಾಜದ, ಪ್ರಕೃತಿ ಪರಿಸರದೊಳಗಿನ ಸತ್ಯ ಮತ್ತು ಸೌಂದರ್ಯಗಳನ್ನು ಮೌಖಿಕ ಪರಂಪರೆಯ ಕಥೆ, ಹಾಡು, ಕುಣಿತ, ಆಚರಣೆ, ನಂಬಿಕೆಗಳ ಮೂಲಕ ಹಿಡಿದಿಟ್ಟುಕೊಂಡು ಬಂದಿರುವುದು ಇದಕ್ಕೆ ಉತ್ತಮ ನಿದರ್ಶನಗಳಾಗಿವೆ. ಕಾವ್ಯ ಮೀಮಾಂಸೆಯಲ್ಲಿ ಶಬ್ದ ಅರ್ಥಗಳ ಆಟವಿದ್ದರೆ ಜೀವನ ಮೀಮಾಂಸೆಯಲ್ಲಿ ಜೀವ-ಭಾವಗಳ ಆಟವಿದೆ. ಈ ಆಟದಲ್ಲಿ ಶಬ್ದ-ಅರ್ಥಗಳಾಗಲಿ, ಜೀವ ಭಾವಗಳಾಗಲಿ ಸೋಲುವಂತಿಲ್ಲ. ಶಬ್ದ-ಅರ್ಥಗಳು ಸೋತರೆ ಕಾವ್ಯ ಸೋಲುತ್ತದೆ, ಜೀವ-ಭಾವಗಳು ಸೋತರೆ ಬದುಕು ಸೋಲುತ್ತದೆ. ಏಕೆಂದರೆ ಜನಪ್ರಿಯ ಪಳೆಯುಳಿಕೆಗಳಿಂದ ಜಾನಪದ ಸೃಷ್ಟಿಯಾಗಿದೆ. ಹಾಗಾಗಿ ಕಾವ್ಯ ಮತ್ತು ಜೀವನದ ನಡುವೆ ಅವಿನಾಭಾವ ಸಂಬಂಧವಿದೆ. ‘ಜೀವನಕ್ಕಾಗಿ ಕಾವ್ಯ, ಜೀವನದಿಂದ ಕಾವ್ಯ’ ಎಂಬ ಮಾತು ಅರ್ಥಪೂರ್ಣವಾಗಿದೆ.

Read More »

ಕನ್ನಡ ಮತ್ತು ಬಂಗಾಳಿ ಸಾಹಿತ್ಯಕ್ಕಿರುವ ಸಂಬಂಧ

ಸುನಿತಾ ಜೆ.ಕೆ.

80 to 84

ಒಂದೂವರೆ ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವು ಕನ್ನಡ ನಾಡು-ನುಡಿಗಿದೆ. ದ್ರಾವಿಡ ಭಾಷಾ ವರ್ಗದಲ್ಲಿ ಕನ್ನಡ ಭಾಷೆಯ ಶ್ರೀಮಂತಿಕೆ ಮತ್ತು ಅದರ ಸಾಂಸ್ಕೃತಿಕ ವೈವಿಧ್ಯ ಎದ್ದು ಕಾಣುತ್ತದೆ. ಕನ್ನಡ ಭಾಷಾ ಸಾಹಿತ್ಯ ತನ್ನ ಭಾಷಿಕ, ಸಾಂಸ್ಕೃತಿಕ, ಸಾಹಿತ್ಯಕ ಅನನ್ಯತೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಭಾರತೀಯ ಅನೇಕ ಭಾಷೆಗಳೊಂದಿಗೆ ಇದರ ಕೊಂಡುಕೊಳ್ಳುವಿಕೆ ನಿರಂತರ ಸಾಗುತ್ತಿದೆ. 
ಬ್ರಿಟಿಷರು ಭಾರತದಲ್ಲಿ ಮೊದಲು ಕಾಲಿಟ್ಟಿದ್ದು ಬಂಗಾಳದಲ್ಲಿ. ಹೀಗಾಗಿ ಮಿಕ್ಕೆಲ್ಲಾ ಭಾರತೀಯ ಭಾಷೆಗಳಿಗಿಂತ ಮೊದಲೇ ಬಂಗಾಲಿ ಭಾಷೆ ಇಂಗ್ಲೀಷಿನ ಪ್ರಭಾವಕ್ಕೆ ಒಳಗಾಯಿತು. ಅದರಲ್ಲಿಯೂ ಇಂಗ್ಲೀಷಿನ ನವೋದಯ ಸಾಹಿತ್ಯವು ಬಂಗಾಳಿ ಸಾಹಿತ್ಯ ಸೇರಿದಂತೆ ಇತರೆ ಭಾಷೆಯ ಲೇಖಕರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಭಾರತದ ಇತರೆ ಭಾಷೆ ಸಾಹಿತ್ಯಗಳಿಗೆ ಜಾಗತಿಕ ಮನ್ನಣೆಗಳಿಸಿಕೊಡುವಲ್ಲಿ ಬಂಗಾಳಿ ಲೇಖಕರು, ಅದರಲ್ಲೂ ರವೀಂದ್ರನಾಥ ಠಾಕೂರರು ಮೊಟ್ಟ ಮೊದಲಿಗರು, ಇದರ ದೆಸೆಯಿಂದಾಗಿ ಬಂಗಾಳಿ ಭಾಷೆ, ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಮೇಲೆ ತನ್ನದೇ ಆದ ವಿಶಿಷ್ಟ ಪ್ರಭಾವವನ್ನು ಬೀರಿತು ಜೊತೆ ಜೊತೆಗೆ ಅವುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. 

Read More »

ಆಧ್ಯಾತ್ಮಿಕತೆಯ ಹಿನ್ನೆಲೆಯಲ್ಲಿ ನಾಕುತಂತಿ ಕವನದ ವಿಶ್ಲೇಷಣೆ

ವಾಣಿ ಡಿ.ಎಸ್.

85 to 96

ದ.ರಾ. ಬೇಂದ್ರೆಯವರ ʼನಾಕುತಂತಿʼ ಎಂಬ ಕಾವ್ಯವು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯದ ಒಂದು ಮಹತ್ವಪೂರ್ಣ ಕಾವ್ಯವಾಗಿದೆ. ತಮ್ಮ ಭಾಷೆಯ ಮೂಲಕವೇ ಕೋಟ್ಯಂತರ ಸಾಹಿತ್ಯಾಸಕ್ತರನ್ನು ಹೊಂದಿದ್ದು ದ. ರಾ. ಬೇಂದ್ರೆ ನಿಜಕ್ಕೂ ಕನ್ನಡಕ್ಕೆ ದೇವರು ಕರುಣಿಸಿದ “ವರಕವಿ”ಯೇ ಸರಿ. 
ಆದ್ಯಾತ್ಮ ನೆಲೆಯ ಒಂದು ನಿಗೂಢ ಕವನವಾಗಿದೆ. ಸಮಸ್ತ ವಿಶ್ವವನ್ನು ವೀಣೆಗೆ ಹೋಲಿಸಿ ಅದಕ್ಕಿರುವುದು ನಾನು, ನೀನು, ಆನು, ತಾನು ಎಂಬ ನಾಲ್ಕು ತಂತಿಗಳು ಇದು ನಾಲ್ಕುಭಾಗಗಳಲ್ಲಿ ವಿಂಗಡಿತವಾಗಿದ್ದು ಪ್ರತಿಯೊಂದು ಭಾಗವೂ ಆಧ್ಯಾತ್ಮಿಕ ಮತ್ತು ತಾತ್ವಿಕ ಅರ್ಥಗಳನ್ನು ಒಳಗೊಂಡಿದೆ. ಇವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವಿರಾಟ್‌ ವೀಣೆ. 

Read More »

ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಯ ಮೌಲ್ಯಯುತ ವಿವೇಚನೆ

ವೆಂಕಟೇಶ ಪಿ.

97 to 103

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ರಾಘವೇಂದ್ರ ಪಾಟೀಲರು ಅಪ್ಪಟ ಗ್ರಾಮೀಣ ಪ್ರತಿಭೆ. ಗ್ರಾಮ ಬದುಕಿನ ಅನನ್ಯ ಅನುಭವಗಳಿಗೆ ಸಾಹಿತ್ಯದ ಆಧುನಿಕ ಚಿಂತನಾ ಮಾರ್ಗಗಳನ್ನು ಬೆಸೆದವರು. ಇವರು ವೃತ್ತಿಯಿಂದ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ತಮ್ಮ ಮೂಲ ಸಾಹಿತ್ಯಿಕ ಪ್ರವೃತ್ತಿಯನ್ನು ಉಳಿಸಿ ಬೆಳೆಸಿಕೊಂಡು ಬಂದು ಅದರಲ್ಲಿ ಅತ್ಯುಚ್ಚ ಸಾಧನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾವ್ಯ ರಚನೆಯ ಕ್ಷೇತ್ರದಲ್ಲಿ ಕೈ ಆಡಿಸಿದರೂ, ಕಥೆ-ಕಾದಂಬರಿಗಳ ಕ್ಷೇತ್ರವನ್ನು ಆಪ್ತವಾಗಿ ಅಪ್ಪಿಕೊಂಡ ಅವರು ಕನ್ನಡ ನಾಡಿನ ಪ್ರಮುಖ ಕಥೆಗಾರರಾಗಿ, ಕಾದಂಬರಿಕಾರರಾಗಿ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. ವಸ್ತು ವೈವಿಧ್ಯ ಮತ್ತು ಭಾಷಿಕ ವೈಶಿಷ್ಯಗಳಿಂದ ಒಂದು ರೀತಿಯ ಅನನ್ಯತೆಯನ್ನು ಮೆರೆದಿದ್ದಾರೆ. ಪಾಟೀಲರ ಸೃಜನಶೀಲ ಸಂವೇದನೆಯ ಮುಪ್ಪುರಿಗೊಂಡು ವಿಶಿಷ್ಟ ರೀತಿಯಲ್ಲಿ `ತೇರು’ ಕಾದಂಬರಿಯ ಮೂಲಕ ಒಡಮೂಡಿದ್ದು ಕನ್ನಡ ಸಾಹಿತ್ಯದ ಚಲನಶೀಲತೆಗೆ ಹೊಸ ಆಯಾಮವನ್ನು ತಂದುಕೊಟ್ಟಿತು. ಈ `ತೇರು’ ಕಾದಂಬರಿಯಲ್ಲಿ ರಾಘವೇಂದ್ರ ಪಾಟೀಲ ಅವರ ಸೂಕ್ಷ್ಮ ಅವಲೋಕನ, ವಸ್ತು ನಿಷ್ಠದೃಷ್ಟಿಯ ಪ್ರತೀಕಗಳು, ಮೌಲ್ಯಯುತ ವಿವೇಚಗಳು ಬಹುಸ್ತರಗಳಲ್ಲಿ ಹೇಗೆ ಬಿತ್ತರಗೊಂಡಿವೆ ಎಂಬುದನ್ನು ತಿಳಿಯುವುದು ಅತ್ಯವಶ್ಯಕ.

Read More »

The Illusion of Transparency: Analyzing ‘The Circle’ as a Critique of Social Media’s Role in Shaping Digital Identities and Cultural Expression

Sangeetha J

104 to 114

Social media has transformed from just a basic communication tool into a major force for cultural expression and identity creation, changing how people and communities connect, perform, and define themselves in our digital world. This research delves into how Dave Eggers’ novel, The Circle, critiques the overwhelming influence of social media platforms on individual identities and cultural expression. The story paints a dystopian picture of a society stripped of privacy, where personal lives are under constant watch, reflecting the social media-driven reality we face today. By examining the narrative and characters in The Circle, this paper investigates how social media platforms provide avenues for self-representation while also commodifying and distorting personal identity. Through the character of Mae Holland, who gradually loses her independence as she dives deeper into the Circle’s ideology of complete transparency, the research draws connections to how actual social media platforms promote identity performance for public viewing. By engaging critically with the novel, this study highlights the repercussions of a culture that values visibility and engagement over privacy and authenticity, offering valuable insights into the intricate relationship between digital spaces, cultural expression, and personal identity.

Read More »