ಕೃಷಿ ವಿಜ್ಞಾನ ಸಾಹಿತ್ಯದ ಬೆಳವಣಿಗೆಯ ವಿಶ್ಲೇಷಣಾತ್ಮಕ ಅಧ್ಯಯನ

Main Article Content

ಮಲ್ಲಿಕಾರ್ಜುನ ಎಂ.ಸಿ.

Abstract

ಕೃಷಿ ಸಾಹಿತ್ಯ ಬರಹಗಾರರನ್ನು ಹೇಗೆ ಗುರುತಿಸಿಕೊಳ್ಳುವುದಾದರೂ ಹೇಗೆ? ಕೃಷಿಯಲ್ಲಿ ತೊಡಗಿಸಿಕೊಂಡು ತಾನು ಕಂಡುಂಡ ಸತ್ಯವನ್ನು ಬರಹದಲ್ಲಿ ರೂಪದಲ್ಲಿ ಪ್ರಕಟಿಸಿದ ಸಾಹಿತ್ಯವನ್ನು ನೆಚ್ಚಬೇಕೇ? ಅಥವಾ ಭಾವನಾತ್ಮಕವಾಗಿ ಬರೆಯುವ ಬರವಣಿಗೆಯನ್ನು ನೆಚ್ಚಬೇಕೇ? ಕೃಷಿ ವಿಜ್ಞಾನಿಗಳು ಬರೆದ ಸಲಹೆ, ಮಾರ್ಗದರ್ಶನದ ಆಧುನಿಕ ಕೃಷಿ ಮಾಹಿತಿಯನ್ನೇ? ಸಂದೇಶಗಳ ಮಾದರಿಯಲ್ಲಿರುವ ಬರವಣಿಗೆಯನ್ನೇ? ನಾವು ಎಂತಹ ಕೃಷಿ ಸಾಹಿತ್ಯವನ್ನು ನಿರೀಕ್ಷಿಸಬಹುದು. ಇಂತಹ ಜಿಜ್ಞಾಸೆ ನಮ್ಮ ಮುಂದೆ ಕಾಡುತ್ತದೆ. ಕೃಷಿಕ ಬರೆದ ಬರವಣಿಗೆಯನ್ನೇ, ಕೃಷಿಯಲ್ಲಿ ಆಸಕ್ತಿ ಹೊಂದಿ ಆಳವಾಗಿ ಅಧ್ಯಯನ ನಿರತರಾದ ಬರಹಗಾರರನ್ನೇ, ಕೃಷಿ ಅನುವಾದಗಳನ್ನೇ, ಕೃಷಿಯೇತರರು ಬರೆದ ಬರವಣಿಗೆಯನ್ನೇ, ಕೃಷಿ ವಿಜ್ಞಾನಿಗಳು ಬರೆದ ಬರವಣಿಗೆಯನ್ನೇ, ಸಾಂಸ್ಥಿಕ ಪ್ರಕಟಣೆಗಳನ್ನೇ ಇವುಗಳಲ್ಲಿ ನಾವು ಯಾವುದನ್ನು ಒಪ್ಪಬೇಕು ಎಂಬುದು ಚರ್ಚಿತ ವಿಚಾರ. ಒಟ್ಟಾರೆ ಕೃಷಿ ಸಾಹಿತ್ಯದ ನಿರ್ಮಾಣದ ನಂತರದಲ್ಲ್ಲಿ ಅದರ ಪರಿಣಾಮದ ಬಗ್ಗೆ ಗಮನಿಸಬೇಕಾದ ಅಗತ್ಯವಿದೆ. 
ಕೃಷಿ ಎಂಬುದೇ ಒಂದು ಜೀವನ ವಿಧಾನ. ಇದಕ್ಕೆ ಪೂರಕವಾಗಿ ಆಯಾ ಕಾಲದ ಕೃಷಿಯ ಅಗತ್ಯತೆ ಅನುಗುಣವಾಗಿ ಕೃಷಿ ಸಾಹಿತ್ಯ ಸೃಷ್ಟಿಯಾಗುತ್ತ ಬಂದಿದೆ. ಬಹುಪಾಲು ಕೃಷಿಕರು ಅಕ್ಷರಸ್ಥರಲ್ಲದ ತಳಮಟ್ಟದ ಹಾಗೂ ತಳ ಸಮುದಾಯದವರಿದ್ದಾರೆ. ಕೃಷಿಕರು ತಮ್ಮ ಬೇಸಾಯ ಚುಟವಟಿಕೆಗಳನ್ನು ಪರಿಸರ, ಹವಾಮಾನ ಹಾಗೂ ಕಾಲಾಧಾರಿತ ವಿಧಾನಗಳನ್ನು ಅನುಸರಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಒತ್ತಡಗಳನ್ನು ನಿಭಾಯಿಸುವಂತಹ ಕೃಷಿ ಸಾಹಿತ್ಯ ಸೃಷ್ಟಿಯಾಗಬೇಕಿದೆ. ಕೃಷಿ ಸಾಹಿತ್ಯದ ನಿರ್ಮಾಣದ ಜೊತೆಗೆ ಅದರ ಪ್ರಸ್ತುತತೆ, ಸತ್ಯಾಸತ್ಯತೆ ಪ್ರತಿಯೊಂದು ವಿಚಾರಗಳು ಪರಿಶೀಲನೆ ಒಳಗಾಗಬೇಕಾಗಿದೆ. ಇದುವರೆಗೂ ಬಂದಿರುವ ಕೃಷಿ ಸಾಹಿತ್ಯಾವಲೋಕನ ಮಾಡಿದಾಗ ಕೃಷಿಕರಿಗೆ ಬೇಕಾದ ಆರ್ಥಿಕ ಲಾಭದ, ಮಾರುಕಟ್ಟೆಯ ಜ್ಞಾನಾಧಾರಿತ ಬರವಣಿಗೆಗಳು ಅಲ್ಪ ಪ್ರಮಾಣ. ಕೃಷಿ ಸಾಹಿತ್ಯ ಓದಿ ಅದನ್ನು ತಮ್ಮ ಭೂಮಿಯಲ್ಲಿ ಅಳವಡಿಸಿಕೊಂಡವರಿಗೆ ಲಾಭದ ಗ್ಯಾರಂಟಿ ಯಾವೊಬ್ಬ ಲೇಖಕ ಕೊಡಲಾರ. ಹೀಗೆ ಲೇಖಕ ಕೃಷಿ ಸಾಹಿತ್ಯ ರಚನೆಯ ಸಂದರ್ಭದಲ್ಲಿ ತನ್ನದೇ ಆದಂತಹ ಮಿತಿಗಳಿಗೆ ಸೀಮಿತವಾಗಬೇಕಾಗುತ್ತದೆ. 

Article Details

Section

Research Articles

Author Biography

ಮಲ್ಲಿಕಾರ್ಜುನ ಎಂ.ಸಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ. 

References

Randhawa M.S., (1980), A History of Agriculture in India, ICAR, New Delhi.

ಹಿತ್ತಲಮನಿ ವೀ.ಸಿ., (1985), ಕೃಷಿ ವಿಜ್ಞಾನ ಕನ್ನಡ ಪುಸ್ತಕಗಳ ಸಮೀಕ್ಷೆ, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

ಕುಮುದಿನಿ ಸಿ.ಕೆ. (ಅನು), (1987), ಪ್ರಾಚೀನ ಭಾರತದಲ್ಲಿ ಬೇಸಾಯ, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

Lowie R.H., (1940), An Introduction to cultural Anthropology, George H Harrap and Co, Ltd. London.

ದ್ವಾರಕೀನಾಥ್ ಆರ್., (1980), ಶ್ರೀ ಡಿ.ಎಸ್.ಮುರಿಗ್ಯೆಪ್ಪ ಶ್ರೇಷ್ಠಿ, ಕೃಷಿ ಕರ್ನಾಟಕ-ಕೃಷಿ, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

ಹಿತ್ತಲಮನಿ ವೀ.ಸಿ. (ಸಂ), (1973), ಮೈಸೂರು ರಾಜ್ಯದಲ್ಲಿ ಕೃಷಿ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

ಬಾಲಕೃಷ್ಣ ಜೆ., (2010), ಕೃಷಿ ವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ವಿರೇಶ್ ಜಿ.ಕೆ., (2009), ಕೃಷಿ ವಿಜ್ಞಾನದ ಉಗಮ ಮತ್ತು ವಿಕಾಸ, ಸಾವಯವಉತ್ತೇಜನ ಸಂಘ, ಬೆಂಗಳೂರು.

ಮುಖ್ಯ ಸಂಶೋಧನಾ ಕೇಂದ್ರ, (2008), ಹೆಬ್ಬಾಳ ಶತಮಾನೋತ್ಸವ ಸಮಾರಂಭ ಸ್ಮರಣ ಸಂಚಿಕೆ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

Gold Track: 1946-1996, (1996), Souvenir of the Golden Jubilee Celebrations of the Agricultural College, Hebbal. Alumni Association. UAS, Hebbal, Bangalore.