ಮೀಮಾಂಸೆ: ಜೀವನ ಮತ್ತು ಕಾವ್ಯ

Main Article Content

ಸುಮಾ ಆರ್.

Abstract

ಮೀಮಾಂಸೆ ಯಾವುದೇ ವಿಷಯದ ವಿಚಾರಪೂರ್ಣ ಚಿಂತನೆ, ತಾರ್ಕಿಕ ತೀರ್ಮಾನ, ವಿಮರ್ಶೆ, ಚರ್ಚೆ, ವಿಶ್ಲೇಷಣೆ ಇತ್ಯಾದಿಯಾಗಿ ಅರ್ಥೈಸಲ್ಪಡುತ್ತದೆ. ಸಹೃದಯ ಓದುಗರಿಗೆ ತಿಳಿದಿರುವಂತೆ ಕಾವ್ಯ ಮೀಮಾಂಸೆ ಚಿರಪರಿಚಿತ. ಆದರೆ ಜೀವನ ಮೀಮಾಂಸೆ.. ಅಂತರ್ಗತ. ಜೀವನವು ಹಲವು ಮುಖಗಳನ್ನು ಹೊಂದಿದ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು-ಸಾವುಗಳ ನಡುವಿನ ಅಭಿವೃದ್ಧಿ ಮತ್ತು ಹೋರಾಟ. ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ, ಮದುವೆಗೊ, ಮಸಣಕೋ ಕರೆದಲ್ಲಿಗೆ ಹೋಗೆಂದ ಮಂಕುತಿಮ್ಮ’, ‘ಇರುವ ಭಾಗ್ಯವ ನೆನೆದು ಬಾರೆನೆನ್ನದಿರು, ಹರುಷಕ್ಕಿದೆ ದಾರಿ’, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ – ಎಂಬುದಾಗಿ ಹೇಳಿ ಜೀವನವನ್ನು ಮೀಮಾಂಸೆಗೆ ಒಳಪಡಿಸಿದ್ದಾರೆ.
ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವಿನ ಸಂಬಂಧಗಳ ಬಗ್ಗೆ ತೌಲನಿಕವಾಗಿ ಚರ್ಚಿಸುವಾಗ ಕಂಡುಬರುವ ಪ್ರಮುಖ ಸಂಗತಿಗಳೆಚಂದರೆ, ಕಾವ್ಯ ಮೀಮಾಂಸೆ ಕವಿ ಮತ್ತು ಸಹೃದಯರ ಜೀವನವನ್ನು ಕುರಿತಾದ ಲಿಖಿತ ಪರಂಪರೆಯ ದಾಖಲೆಯಾದರೆ, ಜೀವನ ಮೀಮಾಂಸೆ ಸಾಮಾನ್ಯ ವ್ಯಕ್ತಿಯ ಜೀವನದ ಅಲಿಖಿತ ಪರಂಪರೆಯ ದಾಖಲೆಯಾಗಿದೆ. ಅಕ್ಷರಗಳ ಪರಿಚಯವೇ ಇಲ್ಲದ ಜನಪದರು ತಮ್ಮ ವೈಯಕ್ತಿಕ ಬದುಕಿನ, ಸುತ್ತಲಿನ ಸಮಾಜದ, ಪ್ರಕೃತಿ ಪರಿಸರದೊಳಗಿನ ಸತ್ಯ ಮತ್ತು ಸೌಂದರ್ಯಗಳನ್ನು ಮೌಖಿಕ ಪರಂಪರೆಯ ಕಥೆ, ಹಾಡು, ಕುಣಿತ, ಆಚರಣೆ, ನಂಬಿಕೆಗಳ ಮೂಲಕ ಹಿಡಿದಿಟ್ಟುಕೊಂಡು ಬಂದಿರುವುದು ಇದಕ್ಕೆ ಉತ್ತಮ ನಿದರ್ಶನಗಳಾಗಿವೆ. ಕಾವ್ಯ ಮೀಮಾಂಸೆಯಲ್ಲಿ ಶಬ್ದ ಅರ್ಥಗಳ ಆಟವಿದ್ದರೆ ಜೀವನ ಮೀಮಾಂಸೆಯಲ್ಲಿ ಜೀವ-ಭಾವಗಳ ಆಟವಿದೆ. ಈ ಆಟದಲ್ಲಿ ಶಬ್ದ-ಅರ್ಥಗಳಾಗಲಿ, ಜೀವ ಭಾವಗಳಾಗಲಿ ಸೋಲುವಂತಿಲ್ಲ. ಶಬ್ದ-ಅರ್ಥಗಳು ಸೋತರೆ ಕಾವ್ಯ ಸೋಲುತ್ತದೆ, ಜೀವ-ಭಾವಗಳು ಸೋತರೆ ಬದುಕು ಸೋಲುತ್ತದೆ. ಏಕೆಂದರೆ ಜನಪ್ರಿಯ ಪಳೆಯುಳಿಕೆಗಳಿಂದ ಜಾನಪದ ಸೃಷ್ಟಿಯಾಗಿದೆ. ಹಾಗಾಗಿ ಕಾವ್ಯ ಮತ್ತು ಜೀವನದ ನಡುವೆ ಅವಿನಾಭಾವ ಸಂಬಂಧವಿದೆ. ‘ಜೀವನಕ್ಕಾಗಿ ಕಾವ್ಯ, ಜೀವನದಿಂದ ಕಾವ್ಯ’ ಎಂಬ ಮಾತು ಅರ್ಥಪೂರ್ಣವಾಗಿದೆ.

Article Details

Section

Research Articles

Author Biography

ಸುಮಾ ಆರ್.

ಪ್ರಾಧ್ಯಾಪಕರು, ಬಿ.ಜಿ.ಎಸ್. ಬಿ ಸ್ಕೂಲ್, ಬಿಜಿಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿ, ಕೆಂಗೇರಿ, ಬೆಂಗಳೂರು.

How to Cite

ಸುಮಾ ಆರ್. (2025). ಮೀಮಾಂಸೆ: ಜೀವನ ಮತ್ತು ಕಾವ್ಯ . ಅಕ್ಷರಸೂರ್ಯ (AKSHARASURYA), 6(06), 72 to 79. https://aksharasurya.com/index.php/latest/article/view/1158

References

ಶ್ರೀಕಂಠಯ್ಯ ತೀ.ನಂ., (1953), ಭಾರತೀಯ ಕಾವ್ಯ ಮೀಮಾಂಸೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಆದ್ಯ ರಂಗಾಚಾರ್ಯ, (2017), ಭರತಮುನಿ ವಿರಚಿತ ನಾಟ್ಯಶಾಸ್ತ್ರ, ಅಕ್ಷರ ಪ್ರಕಾಶನ. ಹೆಗ್ಗೋಡು.

ಪರಮಶಿವಯ್ಯ ಜೀ.ಶಂ., (2015), ದಕ್ಞಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು, ಅಭಿನವ ಪ್ರಕಾಶನ, ಬೆಂಗಳೂರು.

Most read articles by the same author(s)