Published: 2023-11-05

Table of Contents

Table of Contents

I to VI

ಶೂನ್ಯ ಸಂಪಾದನೆಯ ಮೂಲ ಮತ್ತು ಸ್ವರೂಪ

ಎಲ್. ಬಸವರಾಜು

01 to 36

ವಚನ ಸಾಹಿತ್ಯ ಮತ್ತು ಗ್ರಂಥಸಂಪಾದನಾ ಕ್ಷೇತ್ರಕ್ಕೆ ಎಲ್. ಬಸವರಾಜು ಅವರ ಕೊಡುಗೆ ಅಪಾರವಾಗಿದೆ. ಮತಾಚಾರ್ಯರ ಪ್ರಭಾವಳಿಯಲ್ಲಿ ಮುಚ್ಚಿಹೋಗಿದ್ದ ಶೂನ್ಯಸಂಪಾದನೆಯ ಪ್ರಥಮ ಆವೃತ್ತಿಯನ್ನು (ಶಿವಗಣಪ್ರಸಾದಿ ಮಹಾದೇವಯ್ಯನವರ ಕೃತಿ) ಬಯಲಿಗೆ ತರುವ ಮೂಲಕ ಇವರು ಕನ್ನಡ ಸಂಶೋಧನೆಗೆ ಹೊಸ ಆಯಾಮವನ್ನು ನೀಡಿದ್ದಾರೆ. ಹದಿನಾಲ್ಕನೆಯ ಶತಮಾನದಲ್ಲಿ ರಚಿತವಾದ ಮೂಲ ಶೂನ್ಯಸಂಪಾದನೆಯು ನಂತರದ ದಿನಗಳಲ್ಲಿ ಹಲಗೆಯಾರ್ಯ, ಗುಮ್ಮಳಾಪುರದ ಸಿದ್ದಲಿಂಗ ಮತ್ತು ಗೂಳೂರು ಸಿದ್ಧವೀರರಿಂದ ಹೇಗೆ ಪರಿಷ್ಕರಣಗೊಂಡಿತು ಎಂಬುದನ್ನು ಸಂಖ್ಯಾಶಾಸ್ತ್ರೀಯವಾಗಿ ವಿಶ್ಲೇಷಿಸಲಾಗಿದೆ. ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ನೆಲೆಯಲ್ಲಿ ಗ್ರಂಥಸಂಪಾದನೆಯನ್ನು ನಡೆಸಿದ ಬಸವರಾಜು ಅವರ ವೈಧಾನಿಕತೆ ಮತ್ತು ಪ್ರಯೋಗಶೀಲತೆಯನ್ನು ಇಲ್ಲಿ ಗುರುತಿಸಲಾಗಿದೆ.

Read More »

ಅರಿವಿನ ಬೆಳಗು

ವಿಶ್ವನಾಥ

32 to 37

ಪೂಜ್ಯ ಪ್ರಭುಚೆನ್ನಬಸವಸ್ವಾಮೀಜಿ ಅವರು ರಚಿಸಿದ 'ಮಹಾತ್ಮರ ಚರಿತಾಮೃತ' ಕೃತಿಯು ಜಗತ್ತಿನ ಶ್ರೇಷ್ಠ ಚೇತನಗಳ ಜೀವನ ಸಾಧನೆಗಳನ್ನು ಕಟ್ಟಿಕೊಡುತ್ತದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಬುದ್ಧ, ಮಹಾವೀರ, ಏಸುಕ್ರಿಸ್ತ, ವಿವೇಕಾನಂದ, ಗಾಂಧೀಜಿ ಸೇರಿದಂತೆ ಹಲವು ದಾರ್ಶನಿಕರು ಮತ್ತು ಸಮಾಜ ಸುಧಾರಕರ ಆದರ್ಶಗಳನ್ನು ಈ ಗ್ರಂಥವು ಒಳಗೊಂಡಿದೆ. ಮಾನವತೆ, ಅನ್ನದಾಸೋಹ, ಅಕ್ಷರದಾಸೋಹ ಮತ್ತು ಸಹಬಾಳ್ವೆಯ ಸಂದೇಶಗಳನ್ನು ಸಾರುವ ಈ ಕೃತಿಯು, ಜನಸಾಮಾನ್ಯರ ಬದುಕಿಗೆ ಬೆಳಕನ್ನು ನೀಡುತ್ತದೆ. ಅಸಮಾನತೆ ಹಾಗೂ ಕಂದಾಚಾರಗಳನ್ನು ಹೋಗಲಾಡಿಸಿ, ಸಮಾಜವನ್ನು ಜ್ಞಾನದ ವಾಹಿನಿಯತ್ತ ಕೊಂಡೊಯ್ಯುವ ಮಹಾಪುರುಷರ ತಪಸ್ಸಿನ ಫಲವನ್ನು ಓದುಗರಿಗೆ ಪರಿಚಯಿಸಲಾಗಿದೆ

Read More »

ಕನ್ನಡ ಮಹಿಳಾ ನಾಟಕಗಳಲ್ಲಿ ಸಾಮಾಜಿಕ ಪುನರ್‌ಮೌಲೀಕರಣದ ನೆಲೆ-ನಿಲುವು

ಹೇಮಲತ ಪಿ. ಎನ್.

38 to 49

ಪ್ರಾಚೀನಕಾಲದಿಂದಲೂ ಈ ಹೊತ್ತಿನ ವರೆಗೂ ಸ್ತ್ರೀಯರು ಸಾಮಾಜಿಕವಾಗಿ ಶೋಷಣೆ, ಅವಮಾನಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಸಮಾನತೆಯನ್ನು ಗಳಿಸುವ ಹೋರಾಟದಲ್ಲಿ ಇಂದಿನ ಸ್ತ್ರೀಯ ಸ್ಥಾನವನ್ನು ಗುರುತಿಸುವುದು ತುಂಬಾ ಅವಶ್ಯಕವಾದದ್ದು. ಸ್ತ್ರೀಯು ಭಾರತದ ಸಂದರ್ಭದಲ್ಲಿ ತನ್ನ ಬದುಕಿನ ಸ್ವಾತಂತ್ರ್ಯಕ್ಕಾಗಿ ಕಾಲಕಾಲಕ್ಕೆ ಸಾಮಾಜಿಕವಾಗಿ ನೆರವಾದ ದಾರ್ಶನಿಕ ದಾರಿಗಳು ಹಾಗೂ ಕ್ರಾಂತಿಕಾರಿಣಿಯಾಗಿ ತಾನೇ ಕಂಡುಕೊಂಡ ಪ್ರತಿರೋಧ ಮಾರ್ಗಗಳು ಹಲವಾರಿವೆ. ಆಧುನಿಕ ಕನ್ನಡ ನಾಟಕಕಾರ್ತಿಯರು ತಮ್ಮ ನಾಟಕಗಳಲ್ಲಿ ಇಂತಹ ಮಾರ್ಗಗಳನ್ನು ಹೇಗೆ ಪುನರ್‌ಮೌಲೀಕರಿಸಿದ್ದಾರೆ ಎಂಬುದನ್ನು ಇಲ್ಲಿ ಆಯ್ದ ನಾಟಕಗಳ ಅನುಸಂಧಾನದ ಮೂಲಕ ಅರಿತುಕೊಳ್ಳಲು ಪ್ರಯತ್ನಿಸಲಾಗಿದೆ.

Read More »

ನವ್ಯ ಕಾದಂಬರಿಗಳಲ್ಲಿ ಜಾತಿ ಸಮಸ್ಯೆ

ಭೋಜೇಗೌಡ ಕೆ., ಸುಮಾ ಆರ್.

50 to 57

ನವ್ಯ ಕಾದಂಬರಿಗಳಲ್ಲಿ ಜಾತಿ ಸಮಸ್ಯೆ ಭಾರತದಲ್ಲಿನ ಜಾತಿ ಪದ್ಧತಿಯು ಸಾಮಾಜಿಕ ಶ್ರೇಣಿಕರಣವನ್ನು ವಿವರಿಸುತ್ತದೆ. ಅದಲ್ಲದೆ ಸಾಮಾಜಿಕ ನಿಬರ್ಂಧಗಳ ಅಡಿಯಲ್ಲಿ ಅನೇಕ ಪಂಗಡಗಳು ಆಳವಾಗಿ ಬೇರೂರಿರುವುದು ವಿಪರ್ಯಾಸವೇ ಸರಿ. ಜಾತಿಯಲ್ಲಿಯೇ ಅನ್ಯ ಗುಂಪುಗಳ ಅಸ್ತಿತ್ವ ಇದೆ ಇದನ್ನು ಗೋತ್ರಗಳು ವಂಶವಾಹಿನಿ ಅಥವಾ ಕುಟುಂಬದ ಕುಲ ಗೋತ್ರವನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಲಾಗುತ್ತದೆ. ಹಲವಾರು ಉಪಜಾತಿಗಳಲ್ಲಿ ಶಾಕಾದ್ವೀಪ ಕೂಡಾ ಒಂದು. ಹಿಂದುತ್ವದೊಂದಿಗೆ ಗುರುತಿಸಿಕೊಂಡಿರುವ ಇತರ ಮುಸ್ಲಿಂರ ಕೆಲವು ಗುಂಪುಗಳು ಮತ್ತು ಕ್ರಿಶ್ಚಿಯನ್ನರು ಇದೇ ತೆರನಾದ ಗುಂಪು ಪ್ರಭೇದ ಹೊಂದಿರುವುದು ಭಾರತದ ಉಪ ಪಂಗಡಗಳಲ್ಲಿ ಕಾಣುತ್ತೇವೆ. ನಗರಗಳಲ್ಲಿ ಜಾತಿ ನಿಬರ್ಂಧ ಅಷ್ಟಾಗಿ ಕಂಡು ಬರದಿದ್ದರೂ ಹಳ್ಳಿಗಳಲ್ಲಿ ಈ ಜಾತಿ ಇನ್ನೂ ಆಚರಣೆಯಲ್ಲಿ ಇರುವುದನ್ನು ಗುರುತಿಸಬಹುದಾಗಿದೆ. ಅದರಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ 'ಜಾತಿ' ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ರಚನೆಯಾದಂತಹ ಸಾಹಿತ್ಯ ಪಂಥಗಳು ಹಲವಾರು ಅದರಲ್ಲಿಯೂ ನವ್ಯ ಸಾಹಿತ್ಯದಲ್ಲಿ ಕಂಡು ಬರುವಂತಹ ಜಾತಿ ಸಮಸ್ಯೆಯನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.

Read More »

ಧ್ವನಿ ಬದಲಾವಣೆ ಮತ್ತು ಆರ್ಥಿಕ ತತ್ವ (ಉತ್ತರ ಕರ್ನಾಟಕ ಜಿಲ್ಲೆಗಳನ್ನು ಅನುಲಕ್ಷಿಸಿ)

ಆಯ್. ಬಿ. ಸಾತಿಹಾಳ

58 to 63

ಕರ್ನಾಟಕದಲ್ಲಿ ಬಳಕೆಯಲ್ಲಿರುವ ಕನ್ನಡ ಭಾಷೆಯನ್ನು ಆಯಾ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕನ್ನಡವನ್ನು ಧ್ವನಿ ವ್ಯತ್ಯಾಸಗಳ ಆಧಾರದ ಮೇಲೆ ಪ್ರಾದೇಶಿಕ ಉಪಭಾಷೆ ಎಂದು ಗುರುತಿಸುವ ಪದ್ಧತಿ ಸಾವಿರ ವರ್ಷಗಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕವಿರಾಜ ಮಾರ್ಗಕಾರನ ಕಾಲದಲ್ಲಿಯೆ ಕರ್ನಾಟಕದಲ್ಲಿ ಹಲವು ಕನ್ನಡಗಳಿದ್ದವು. ಇಂದಿನಂತೆ ಅಂದೂ ಆಯಾ ಕನ್ನಡ ಪ್ರದೇಶಗಳ ಮೇಲೆ ಅನ್ಯ ಭಾಷೆಗಳ ಪ್ರಭಾವವಿತ್ತು. ಅವರು ಉಚ್ಚರಿಸುವ ಧ್ವನಿಗಳಲ್ಲಿ ವ್ಯತ್ಯಾಸವಿದ್ದರೂ ಅವು ಪರಸ್ಪರರಿಗೆ ಅರ್ಥವಾಗುತ್ತಿದ್ದವು . ಅದರಲ್ಲಿ ಶುದ್ಧ (ತಿರುಳು) ಕನ್ನಡವು ಒಕ್ಕುಂದ, ಕೊಪಣನಗರ, ಪುಲಿಗೆರೆ ಮತ್ತು ಕಿಸುವಳಲು ಪ್ರದೇಶಗಳಲ್ಲಿ ಬಳಕೆಯಲ್ಲಿತ್ತು. ಇವುಗಳಲ್ಲಿ ಕನ್ನಡ ಸಾಹಿತ್ಯ ರಚನೆಗೆ ಈ ತಿರುಳುಗನ್ನಡವೆ ಸೂಕ್ತವಾಗಿತ್ತು ಎಂದು ಹೇಳಿದ್ದಾನೆ. ಮುಂಬರುವ ನಯಸೇನ ಮತ್ತು ಚಂದ್ರರಾಜರು (12ನೇ ಶತಮಾನ) ತಮ್ಮ ಕಾವ್ಯಗಳ ಭಾಷೆ ಪೊಸಗನ್ನಡವೆಂದು ಹೇಳಿದರೆ ಆಂಡಯ್ಯನು (13ನೆಯ ಶತಮಾನ) ತನ್ನ ಕಾವ್ಯದ ಭಾಷೆಯನ್ನು ಅಚ್ಚಗನ್ನಡವೆಂದು ಕರೆದಿದ್ದಾನೆ. ಹೀಗೆ ಕ್ರಿ.ಶ 9 ರಿಂದಕ್ರಿ.ಶ 13 ರ ವರೆಗಿನ ನಾಲ್ಕು ಶತಮಾನಗಳ ಅವಧಿಯಲ್ಲಿ ಹಳೆಗನ್ನಡ, ತಿರುಳುಗನ್ನಡ, ಹೊಸಗನ್ನಡ ಮತ್ತು ಅಚ್ಚಗನ್ನಡ ಎಂಬ ನಾಲ್ಕು ಅವಸ್ಥಾಬೇಧಗಳ ಮಾತುಗಳು ಬಂದು ಹೋಗಿವೆ.

Read More »

ಕೆ. ಷರೀಫಾರವರ ಕಾವ್ಯದಲ್ಲಿ ಪ್ರತಿರೋಧದ ನೆಲೆಗಳು

ಮಾದೇಶ ಎನ್.

64 to 69

ಮಹಿಳಾ ಸಾಹಿತ್ಯ ಚಳವಳಿಯು 70-80ರ ದಶಕದಲ್ಲಿ ಒಂದು ಹೊಸ ಮನ್ವಂತರಕ್ಕೆ ದಾರಿ ಮಾಡಿಕೊಟ್ಟಿತು. ಮಹಿಳೆಯು ಕೂಡ ಅನೇಕ ಶತಮಾನಗಳಿಂದ ಪುರುಷ ಪ್ರಧಾನ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಸಿಲುಕಿ ತಮ್ಮನ್ನು ತಾವು ಕಳೆದುಕೊಂಡಿದ್ದರು. ಇದಕ್ಕೆ ಪೂರಕವಾದ ವಾತಾವರಣ 70ರ ದಶಕದಲ್ಲಿ ನಿರ್ಮಾಣವಾದ್ದರಿಂದ ಮಹಿಳೆಯೂ ಕೂಡ ತನಗಾದ ಶೋಷಣೆಗಳನ್ನು ತನಗೆ ಇರುವ ಹಕ್ಕುಗಳನ್ನು ಕುರಿತು ಧ್ವನಿಯೆತ್ತಲಾರಂಭಿಸಿದಳು. ಅಂಥವರಲ್ಲಿ ಪ್ರತಿಭಾನಂದಕುಮಾ‌ರ್ ಸವಿತಾ ನಾಗಭೂಷಣ್, ಗೀತಾ ನಾಗಭೂಷಣ್, ಸಾ. ರಾ. ಅಬೂಬಕರ್, ಹೆಚ್. ಎಲ್. ಪುಷ್ಪ, ಸುಕನ್ಯಾ ಮಾರುತಿ, ಕೆ. ಆರ್. ಸಂಧ್ಯಾರೆಡ್ಡಿ, ಕೆ. ಷರೀಫಾ, ದು. ಸರಸ್ವತಿ, ಪಿ. ಚಂದ್ರಿಕಾ, ಉಷಾ ಸರ್ವಮಂಗಳ, ಆರ್. ಸುನಂದಮ್ಮ ಮೊದಲಾದವರನ್ನು ಈ ಸಾಲಿನಲ್ಲಿ ಗುರುತಿಸಬಹುದಾಗಿದೆ.

Read More »

ಕನ್ನಡ ಭಾಷೆಯ ಇಂದಿನ ಸ್ಥಿತಿ-ಗತಿ

ಮಹೇಶ್ ಬಿ. ಡಿ.

70 to 79

ಕಾವೇರಿಯಿಂದ ಗೋದಾವರಿಯ ತೀರದವರೆಗೆ ಹಬ್ಬಿದ ನಮ್ಮ ವಿಶಾಲವಾದ ಕನ್ನಡ ನಾಡು ವಸಾಹತುಶಾಹಿಯ ಆಡಳಿತ ಪರಿಣಾಮವಾಗಿ ಹರಿದು ಹಂಚಿಹೋಗಿತ್ತು. ಕನ್ನಡದ ಪ್ರಜ್ಞೆ ಮಾಯವಾಗಿದ್ದ ಕಾಲ ಘಟ್ಟದಲ್ಲಿ ಡೆಪ್ಯೂಟಿ ಚೆನ್ನಬಸಪ್ಪ, ಆಲೂರು ವೆಂಕಟರಾಯರಂಥ ಮಹನೀಯರು ನಾಡು-ನುಡಿ ಪ್ರಜ್ಞೆಯನ್ನು ಮರು ಸ್ಥಾಪಿಸಿ ಕನ್ನಡ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿದರು. ಭಾರತದ ಸ್ವತಂತ್ರ್ಯ ಮತ್ತು ಕರ್ನಾಟಕದ ಏಕೀಕರಣ ಚಳವಳಿಗಳೆರಡೂ ಏಕಕಾಲದಲ್ಲಿ ನಡೆದು ಸ್ವತಂತ್ರ ಭಾರತದಲ್ಲಿ 1956ರ ನವೆಂಬರ್ 1ರಂದು ನಮ್ಮ ಚೆಲುವ ಕನ್ನಡನಾಡು ಉದಯವಾಗಿ ಕನ್ನಡಿಗರೆಲ್ಲರೂ ಸಂಭ್ರಮ ಪಡುವಂತಾಯಿತು. ಕನ್ನಡ ಭಾಷೆ ಅತ್ಯಂತ ಪ್ರಾಚೀನತೆ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪಂಪ, ರನ್ನ, ಬಸವಣ್ಣ, ಹರಿಹರ, ರಾಘವಾಂಕ, ಕುಮಾರ ವ್ಯಾಸ, ದಾಸರು ಮುಂತಾದ ಪ್ರಾಚೀನ ಕವಿಗಳು ಹಾಗೂ ಕುವೆಂಪು, ಬೇಂದ್ರೆ, ಕಣವಿ, ಶಿವರುದ್ರಪ್ಪ ನಂತಹ ಆಧುನಿಕ ಕವಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಸಂವೃದ್ಧಗೊಳಿಸಿದ್ದಾರೆ. ಈ ರೀತಿಯ ಭವ್ಯ ಪರಂಪರೆಯುಳ್ಳ ಕರುನಾಡು ಅನೇಕ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕಾಲದಲ್ಲಿ ಕರ್ನಾಟಕದ ಏಕೀಕರಣದ ಕನಸು ಕಂಡವರು ಅನೇಕರು. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ, ಉದಯವಾಗಲಿ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ಎಂದೆಲ್ಲ ನಾಡು ನುಡಿಯ ಶ್ರೇಷ್ಠತೆ ಮತ್ತು ಪಾವಿತ್ರತೆಯನ್ನು ನೀಡಿ ಹೋದರು ಇಂತ ಕನ್ನಡ ಮೂಲೆಗುಂಪಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.

Read More »

ವಚನಕಾರರ ವಚನಗಳಲ್ಲಿ ಆರ್ಥಿಕ ಚಿಂತನೆಗಳು

ತಿಮ್ಮೇಗೌಡ ಬಿ. ಪಿ., ಸುಮಾ ಆರ್.

80 to 85

12 ನೇ ಶತಮಾನವು ಅನೇಕ ಕಾರಣಗಳಿಂದಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ರಾಜಕೀಯ ಮತ್ತು ಸಂಘರ್ಷ, ಮೇಲು ಕೀಳೆಂಬ ಅಂಶಗಳಿಗೆ ಒಳಗಾಗಿದ್ದ ಕಾಲದಲ್ಲಿ ಬಂದವರು ಶಿವಶರಣರು, ಇವರು ವೀರಶೈವ ಧರ್ಮವನ್ನು ಹರಡುವುದಕ್ಕೆ ಸೀಮಿತವಾಗಿರದೇ ಧರ್ಮ ಪ್ರಚಾರದಲ್ಲಿ ಅನೇಕ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳ ಮೂಲಕ ಪ್ರಚಾರಮಾಡಿದರು. ಮಾನವನ ಜೀವನ ನಿರ್ವಹಣೆಗೆ ಹಣಕಾಸು ಕೂಡ ಪ್ರಮುಖವಾದದ್ದು ಅದು ಸಮಾಜದ ಉತ್ಪಾದನೆ, ವಿನಿಮಯ ಹಂಚಿಕೆಗೆ ಸಂಬಂಧಪಟ್ಟಿದೆಯಲ್ಲದೆ, ಉದ್ಯೋಗ ಮತ್ತು ವರಮಾನಕ್ಕೂ ಆಧಾರವಾಗಿದೆ. ರಾಷ್ಟ್ರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತರುವಂತಹ ಜವಾಬ್ದಾರಿಯನ್ನು ಕೈಗೊಂಡವರು ಶಿವಶರಣರಾಗಿದ್ದಾರೆ. ಅರ್ಥಕ್ಕೆ ನಿರ್ಣಾಯಕ ಪಾತ್ರವಿದೆ ಎಂದು ಗುರುತಿಸಿ ಅದನ್ನು ಜಾರಿಗೆ ತರಲು ಭಕ್ತಿಮಾರ್ಗವನ್ನು ಅನುಸರಿಸಿದರು. 20ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್, ಮಾರ್ಷಲ್, ಹೇಗೆಲ್, ಕೇನ್ಸ್, ಗಾಂಧೀಜಿ ಇತ್ತೀಚಿನ ಅಮರ್ಥ್ಯಸೇನ್ ಪ್ರಚಾರಕ್ಕೆ ತಂದ ವಿಚಾರಗಳನ್ನು 800 ವರ್ಷಗಳ ಹಿಂದೆಯೇ ನಮ್ಮ ಶಿವಶರಣರು ಅಳವಡಿಸಿಕೊಳ್ಳಲು ಪ್ರೇರೇಪಿಸಿದವರು.

Read More »

ಚಲನಚಿತ್ರ ಮಾಧ್ಯಮ ಮತ್ತು ಭಾಷೆ ಬಳಕೆ

ಗೋಪಾಲಯ್ಯ ಜಿ.

86 to 95

ಕನ್ನಡ ಚಲನಚಿತ್ರಗಳು ಲಿಖಿತ ಅಥವಾ ಅಲಿಖಿತ ಸಾಹಿತ್ಯವನ್ನು ಆಧರಿಸಿ ರಚನೆಯಾಗಿವೆ. ಅನೇಕ ಪೌರಾಣಿಕ ಚಲನಚಿತ್ರಗಳು ರಚನೆಯಾಗಿವೆ. ಪುರಾಣಗಳನ್ನು ಆಧರಿಸಿ ರಚನೆಯಾದ ಹಳೆಗನ್ನಡ, ನಡುಗನ್ನಡ, ಪ್ರಗತಿಪರ, ಬಂಡಾಯ, ದಲಿತ ಸಾಹಿತ್ಯ ಕೃತಿಗಳು ಹಲವು ಚಲನಚಿತ್ರಗಳಿಗೆ ಪ್ರೇರಣೆಯಾಗಿವೆ. ಕಥಾಚಿತ್ರಗಳ ವಿಷಯಕ್ಕೆ ಬಂದಾಗಲೂ ಸಿನಿಮಾ ಸಾಹಿತ್ಯಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಹೀಗೆ ಸಾಹಿತ್ಯದಂತಹ ಗಂಭೀರ ಮಾಧ್ಯಮದೊಂದಿಗೆ ಸಂಬಂಧವನ್ನಿಟ್ಟುಕೊಂಡು ಗಂಭೀರ ಚರ್ಚೆಗೆ ಗುರಿಯಾದ ಚಲನಚಿತ್ರಗಳನ್ನು ಸಾಹಿತ್ಯ, ಭಾಷೆಯ ಅಂತರ್ ಸಂಬಂಧದ ಹಿನ್ನೆಲೆಯಲ್ಲಿ ಚಲನಚಿತ್ರ ಮಾಧ್ಯಮ ಮತ್ತು ಭಾಷೆ ಬಳಕೆ ಅಧ್ಯಯನ ನಡೆಸುವುದು ಅಗತ್ಯವಾಗಿದೆ.

Read More »

A Critical Analysis of the Representation of Tribal Culture and Colonization in Films

Sushma Meti

96 to 105

This essay explores the nuances of how films, a new age media, portray tribal culture. The media, which is governed by the capitalist and aristocratic elite, seldom portrays tribe and tribal culture. Both conventional print media and more recent, technologically sophisticated media, like film, are affected by this. Is it neutral when tribal culture is depicted, is the crucial issue to ask? Does the media practice discrimination base on race, religion, skin color, and other characteristics that have long been used to categorise people into categories like white-black, western-eastern, ethnic-oriented, man-woman, and others? Do these films exhibit stereotyping or do they accurately depict the tribe's culture and way of life? Fourth World Literature, therefore, provides a platform for comprehending the shared cultural experiences of the people who formerly made up the majority of the population but who now suffer as a result of colonial dominance. Fourth World Literature's linguistic variety and terminological variations might be perplexing. It is best understood when viewed through this lens because of the relationship between sociolinguistics and indigenous cultures, as well as their spoken language and practices.

Read More »

ಲಲಿತಾ ಸಿದ್ದಬಸವಯ್ಯನವರ ಇನ್ನೊಂದು ಸಭಾಪರ್ವ - ತಾತ್ವಿಕ ವಿಶ್ಲೇಷಣೆ

ದಿವ್ಯಶ್ರೀ ಬಿ. ಎನ್.

106 to 120

ಮಹಾಭಾರತದಲ್ಲಿ ಪ್ರತಿ ನಾಯಕತ್ವಕ್ಕೆ ಅವಕಾಶವೇ ಇಲ್ಲದಂತಹ ಒಂದು ಪಾತ್ರವೂ ಇದೆ. ಅದು “ದೌಪದಿಯ" ಪಾತ್ರ. "ಇನ್ನೊಂದು ಸಭಾಪರ್ವ" ನಾಟಕದಲ್ಲಿ ದೌಪದಿಯ ವ್ಯಕ್ತಿತ್ವವನ್ನು 'ಬೆಳಗಿಸುವ' ಶುದ್ದೀಕರಿಸುವ ರೂಪದಲ್ಲಿ ಕಂಡುಕೊಳ್ಳಲಾಗಿದೆ. ಬ್ರೌಪದಿಯ ಸೀರೆಯನ್ನು ತುಂಬಿದ ಸಭೆಯಲ್ಲಿ ಸೆಳೆದಾಗ ಹತ್ತಿಕೊಂಡ ಜ್ವಾಲೆ ವ್ಯಾಪಿಸಿ ಕೊಳ್ಳಬೇಕಾಗಿತ್ತಲ್ಲವೇ ಅದು ಬೆಳಗಿಸುವ ರೂಪವನ್ನು ಪಡೆದುಕೊಂಡದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ “ತಾಯ್ತನ”. ರಾಜ ಭಾಷೆಯಲ್ಲಿ ಮಹಾಭಾರತವನ್ನು ಸ್ವೀಕರಿಸುವಾಗ ಇದು ಒಂದು ಊನತೆ ಎನ್ನುವುದು ಹೊಳೆಯುವುದೇ ಇಲ್ಲ, ಆದರೆ ಮಾನವಭಾಷೆ ಬಳಕೆಯಾದಾಗ ಇದೆಲ್ಲ ಮುಖ್ಯವಾಗಿ ಬಿಡುತ್ತದೆ. ಅದರೊಂದಿಗೆ ಅವರ ತಂದೆಯಂದಿರ ವಿಭಿನ್ನ ಹಿತಾಸಕ್ತಿಗಳು ಹೊಳೆಯುತ್ತದೆ, ಈ ಎಲ್ಲದರ ಆಚೆ ನಾಟಕವು ಒಂದು ಸತ್ಯವನ್ನು ಹೇಳಲು ತೊಡಗುತ್ತದೆ, ಅದೇನೆಂದರೆ "ಒಳ್ಳೆಯವರಾಗಿರುವುದೆಂದರೆ ನಮ್ಮ ಮೇಲೆ ನಡೆಯುವ ಶೋಷಣೆಯನ್ನು ಅನುಭವಿಸಿಕೊಂಡೆ ಬಾಳುವುದಲ್ಲ" ಎಂಬ ಮಾತನ್ನು ಮಾರ್ಮಿಕವಾಗಿ ಧ್ವನಿಸುತ್ತದೆ.

Read More »

ಸಿ. ಎನ್. ಮುಕ್ತಾರವರ ಕಾದಂಬರಿಗಳಲ್ಲಿ ವಿವಾಹ ವಿಚ್ಛೇದನ-ಒಂದು ವಿಮರ್ಶಾತ್ಮಕ ನೋಟ

ಪಲ್ಲವಿ ಎಸ್.

121 to 133

ಮುಕ್ತಾರವರ ಕಾದಂಬರಿಗಳ ಸ್ತ್ರೀ ಸಂವೇದನೆಯ ನೆಲೆಯನ್ನು ಗ್ರಹಿಸುವಲ್ಲಿ ವಿವಾಹ ವಿಚ್ಛೇದನ ಪರಿಕಲ್ಪನೆ ಒಂದು ಉತ್ತಮ ವಸ್ತು ವಿಷಯವಾಗಿ ಪರಿಣಮಿಸಿದೆ. ಇಂಗ್ಲಿಷ್ ಶಿಕ್ಷಣ ಪದ್ಧತಿಯ ಮೂಲಕ ಆಧುನಿಕತೆಯ ನದಿಯಲ್ಲಿ ಮಿಂದೆದ್ದ ಮಹಿಳೆಯ ಜೀವನದಲ್ಲಿ ಹೊಸ ಬದುಕಿನ ಸಾಧ್ಯತೆಗಳು ಮತ್ತು ಅವಕಾಶಗಳು ತೆರೆದುಕೊಂಡಿವೆ. ವಿವಾಹ ಮೌಲ್ಯಗಳನ್ನು ರೂಢಿಸಿಕೊಂಡ ಮಹಿಳೆಯರ ಬದುಕಿನಲ್ಲಿ ವಿವಾಹ ವಿಚ್ಛೇದನವು ರೂಪಿಸಿದ ದ್ವಂದ್ವ, ತಾಕಲಾಟಗಳನ್ನು ಬಹಳ ಹತ್ತಿರದಿಂದ ಗ್ರಹಿಸಿದ ಲೇಖಕಿ ಆಧುನಿಕತೆಯ ನಡೆ-ನುಡಿ, ಆಚಾರ-ವಿಚಾರಗಳ ಇತಿಮಿತಿಯಲ್ಲಿ ವಿಚಾರವಂತಿಕೆಯ ನೆಲೆಯ ಜೀವನ ಶೈಲಿಯಲ್ಲಿ ತಮ್ಮ ಕಾದಂಬರಿಗಳ ಸ್ತ್ರೀ ಪಾತ್ರಗಳನ್ನು ಪರಾಮರ್ಶಿಸಿದ್ದಾರೆ. ಸಂಪ್ರದಾಯವಾದಿಗಳು ವಿವಾಹ ವಿಚ್ಛೇದನದ ಬಗೆಗೆ ತಳೆದಿದ್ದ ಮನೋಭಾವ, ವಿವಾಹ ವಿಚ್ಛೇದನಕ್ಕೆ ನೀಡಿದ ಪ್ರತಿಕ್ರಿಯೆ ಮತ್ತು ಆಧುನಿಕತೆಯೆಡೆಗೆ ಮನಸ್ಸು ಮಾಡಿದ ಜನತೆ ವಿವಾಹ ವಿಚ್ಛೇದನಕ್ಕೆ ನೀಡಿದ ಪ್ರೋತ್ಸಾಹದ ಪರಿಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Read More »

'ख़ुदा सही सलामत है' उपन्यास में नारी संघर्ष

विनोद बाबुराव मेघशाम, शक्तिकुमार द्विवेदी

134 to 141

रवीन्द्र कालिया साठोत्तरी साहित्य के प्रसिद्ध कथाकार के रूप में जाने जाते हैं । 'ख़ुदा सही सलामत है' उपन्यास में नारी के सामाजिक स्थिति को बहुत ही मार्मिकता के साथ स्त्री शोषण एवं उसके संघर्ष को दशार्या है । भारतीय समाज में स्त्री का सामाजिक एवं पारिवारिक रूप से कैसे शोषण होता है और समाज में स्त्री अपने गौरव एवं सम्मान के लिए कैसे संघर्ष करती है, जैसे की उपन्यास का पात्र अज़ीज़न एक तवायफ़ होते हुए भी अपनी पुत्री का जीवन एक सामान्य युवती के समान ही समाज में गौरव के साथ उसका विवाह करने की अपेक्षा रखती है । भारतीय नारी को परिवार में मात्र पति से ही नहीं बल्कि समाज में अन्य लोगों के द्वारा भी अनेक यातनाएँ सहनी पड़ती है और साथ में वह भी सामान्य लोगों की तरह ही एक गौरवमय जीवन जीने का संघर्ष करती है ।

Read More »

ಏಣಗಿ ಬಾಳಪ್ಪನವರ 'ನನ್ನ ಬಣ್ಣದ ಬದುಕು' ಆತ್ಮಕಥನಾವಲೋಕನ

ಎಸ್. ವಿ. ಮನಗುಂಡಿ

142 to 154

ಕರ್ನಾಟಕದ ವೃತ್ತಿರಂಗಭೂಮಿಯ ಹಿರಿಯ ನಟರಾದ ಏಣಗಿ ಬಾಳಪ್ಪನವರ ಆತ್ಮಕಥೆ “ನನ್ನ ಬಣ್ಣದ ಬದುಕು"ನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯವು 1999ನೇ ವರ್ಷದಲ್ಲಿ ಪ್ರಕಟಿಸಿದ್ದು ವಿಶೇಷ. ರಂಗಕರ್ಮಿ ನಾಟ್ಯಭೂಷಣ ಏಣಗಿ ಬಾಳಪ್ಪನವರ ಆತ್ಮಕತೆಯನ್ನು ದು.ನಿಂ.ಬೆಳಗಲಿ ಅವರು ನಿರೂಪಿಸಿರುವುದು ವಿಶೇಷ. ಏಣಗಿ ಬಾಳಪ್ಪನವರ "ನನ್ನ ಬಣ್ಣದಬದುಕು" ಆತ್ಮಕಥೆಯು ಅವರ ಪರಿಪೂರ್ಣ ಆತ್ಮಕಥೆಯಾಗಿಲ್ಲ. ಬೆಳಗಲಿ ಅವರು ನೀಡಿದ ವಿವರವು 1971ರ ಪೂರ್ವದ ಅವಧಿಯಾಗಿದ್ದು ಅನಂತರದ ಏಣಗಿಯವರ ಬದುಕಿನ ವಿವರಗಳು 'ಬಣ್ಣದ ಬದುಕಿನ ಚಿನ್ನದ ದಿನಗಳು' (2007) ಕೃತಿಯಲ್ಲಿ ಬೆಳಕು ಕಂಡುದಾಗಿ ತಿಳಿಯುತ್ತದೆ. ಗಣೇಶ ಅಮೀನಗಡ ಅವರು ಎರಡನೇ ಆತ್ಮಕಥನದ ನಿರೂಪಣೆಯನ್ನು ಕೈಗೊಂಡಿದುದಾಗಿ ತಿಳಿಯುತ್ತದೆ. 'ನನ್ನ ಬಣ್ಣದ ಬದುಕು' ಆತ್ಮಕಥನ ಅವಲೋಕನ ಕಾರ್ಯ ಕೈಗೊಳ್ಳುವುದಾಗಿದೆ.

Read More »

ನಿರ್ಮಾಪಕ ಜಯಣ್ಣ - ಬೊಗೇಂದ್ರ ಅವರ ಕನ್ನಡ ಪ್ರೇಮ

ಶಿವರಾಜು ಎನ್‌.

155 to 162

ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆಯು ಅತಿ ಪ್ರಾಚೀನ ಭಾಷೆಯಾಗಿದ್ದು, ಕನಿಷ್ಠ 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಸರಿ ಸುಮಾರು 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಒಂದರ್ಥದಲ್ಲಿ ಅವನತಿಯ ಅಂಚಿನಲ್ಲಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡಿಗರು ಭಾಷಿಕ ಅಲ್ಪಸಂಖ್ಯಾತರಾಗಿದ್ದಾರೆ. ಆಂಗ್ಲ ಮಾಧ್ಯಮದ ಪೈಪೊಟಿ, ಪರಭಾಷಿಕರ ಹಾವಳಿ, ಸರ್ಕಾರದ ಕಠಿಣ ನೀತಿ ನಿಯಮಗಳು, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸರ್ಕಾರಗಳು ವಿಫಲವಾಗಿರುವುದು ಇತ್ಯಾದಿ ಕಾರಣಗಳಿಂದ ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ. ಯಾವುದೇ ಒಂದು ಭಾಷೆಯ ಅಸ್ತಿತ್ವದ ಉಳಿವಿಗಾಗಿ ಶ್ರಮಿಸುವ ಮಾಧ್ಯಮಗಳ ಪೈಕಿ ದೃಶ್ಯ ಮಾಧ್ಯಮಗಳ ಪಾತ್ರ ಮಹತ್ವಪೂರ್ಣವಾದದ್ದು. ನಿರ್ಮಾಪಕ ಜಯಣ್ಣ-ಬೋಗೇಂದ್ರರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಕುರಿತು ಬೆಳಕು ಚೆಲ್ಲುವುದು ನನ್ನ ಲೇಖನ ರಚನೆಯ ಹಿಂದಿನ ಉದ್ದೇಶ.

Read More »