ರಕ್ತತರ್ಪಣ ತೊಟ್ಟ ಸ್ವಾತಂತ್ರ್ಯ ಹೂರಣ

Authors

  • MAHESH B. D.

Keywords:

ಪ್ರಗತಿಶೀಲ, ಕ್ರಾಂತಿಕಾರಿ, ಹೋರಾಟ, ಹೇಡಿಗಳು, ಸಾಮ್ರಾಜ್ಯಶಾಹಿ, ಹುಲ್ಲಿನಗಾಡಿ, ಶಾನುಭೋಗ, ಚಳವಳಿ, ಸ್ವಾತಂತ್ರ್ಯ

Abstract

ಸಾಹಿತ್ಯವು ನಿಂತ ನೀರಲ್ಲ ಅದು ಯಾವಾಗಲೂ ಹರಿಯುವ ನದಿ ಇದ್ದಂತೆ, ಬದಲಾವಣೆ ಎನ್ನವುದು ಸಾಹಿತ್ಯದ ಒಂದು ವಿಶಿಷ್ಟ ಗುಣ ಲಕ್ಷಣವಾಗಿದೆ. ಸಾಹಿತ್ಯವು ಆರಂಭದಿಂದ ಇಂದಿನವರೆಗೆ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು ವಿಂಗಡಣೆಗೊಂಡು ಸಾಹಿತ್ಯವು ಆಯಾ ಕಾಲಘಟ್ಟದ ನಿಲುವುಗಳಿಗೆ ಹೊಂದಿಕೊಂಡು ಸಾಹಿತ್ಯವು ವಿಪುಲವಾಗಿಯೇ ರಚನೆಗೊಂಡಿದೆ. ಅದರಲ್ಲಿ ಪ್ರಮುಖವಾಗಿ ‘ಪ್ರಗತಿಶೀಲ’ ಪಂಥದ ಲೇಖಕರು ಸಮಾಜದಲ್ಲಿ ತುಂಬಿರುವ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸಬೇಕೆಂಬ ಮಹಾದಾಶೆಯನ್ನು ಹೊಂದಿದ್ದರು, ನವೋದಯ ಸಾಹಿತ್ಯ ಘಟ್ಟದ ಪೂರ್ವಾರ್ಧ ಪರಂಪರೆಯು ಯಾವುದನ್ನು ಮುಟ್ಟದೆ ಮಡಿವಂತಿಕೆಯ ಸೋಗಿನಲ್ಲಿ ಗೌಪ್ಯವಾಗಿರಿಸಿತೋ ಅದನ್ನೆ ತಮ್ಮ ಕೃತಿಗೆ ವಸ್ತುವನ್ನಾಗಿಸಿಕೊಂಡು ಸಾಹಿತ್ಯ ರಚನೆ ಮಾಡಿದ ಕೀರ್ತಿ ‘ಪ್ರಗತಿಶೀಲ’ ಪಂಥದ ಲೇಖಕರಿಗೆ ಸಲ್ಲುತ್ತದೆ. ತಮ್ಮ ಮೊನಚಾದ ಬರಹದಿಂದ ಸಮಾಜದಲ್ಲಿ ನಡೆಯುತ್ತಿದ್ದ ಅಪರಾಧಗಳನ್ನು ಬೆತ್ತಲು ಮಾಡಿದರು. ಅಂತವರಲ್ಲಿ ನವೋದಯ ಕಾಲಘಟ್ಟದ ಕೆಲವು ಲೇಖಕರು ಹಾಗೂ ಪ್ರಗತಿಶೀಲ ಪರಂಪರೆಯ ಅ.ನ.ಕೃ, ನಿರಂಜನ, ಬಸವರಾಜ ಕಟ್ಟೀಮನಿ, ತ.ರಾ.ಸು ಮತ್ತು ಚದುರಂಗ ಮುಂತಾದವರು ಪ್ರಮುಖರಾದವರು. ಪ್ರಸ್ತುತ ಲೇಖನದಲ್ಲಿ ರಚನೆಗಾಗಿ ಆಯ್ದುಕೊಂಡಿರುವ ಪ್ರಗತಿಶೀಲ ಕಾಲದ ತ.ರಾ.ಸು ಪ್ರಮುಖರು. ಸ್ವಾತಂತ್ರ್ಯದ ವಸ್ತುವನ್ನು ತಮ್ಮ ಕಾದಂಬರಿಗೆ ಆಯ್ದುಕೊಂಡಿದ್ದಾರೆ. ಕಾದಂಬರಿಯಲ್ಲಿ ಒಂದು ಗ್ರಾಮದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯು ಕಾಣಿಸಿಕೊಳ್ಳುತ್ತದೆ, ಯುವಕನ ಮುಖಾಂತರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಚಿತ್ರಣವು ಕಾದಂಬರಿಯಲ್ಲಿ ಕಂಡು ಬರುತ್ತದೆ. ತ.ರಾ.ಸು. ಚಿತ್ರಿಸಿರುವ ಹಳ್ಳಿ ಅಲ್ಲಿಯ ಸಮಾಜ ಇದು ಯಾವ ಕಲ್ಪನೆಯು ಅಲ್ಲ. ಆಗಸ್ಟ್ ಕ್ರಾಂತಿಯ ಕಾಲಕ್ಕೆ ವಾಸ್ತವವಾಗಿ ಕಂಡ ಒಂದು ಗ್ರಾಮದ ಚಿತ್ರಣ.

Downloads

Published

05.12.2023

How to Cite

MAHESH B. D. (2023). ರಕ್ತತರ್ಪಣ ತೊಟ್ಟ ಸ್ವಾತಂತ್ರ್ಯ ಹೂರಣ. AKSHARASURYA, 2(13), 104–110. Retrieved from https://aksharasurya.com/index.php/latest/article/view/283

Issue

Section

ಪುಸ್ತಕ ವಿಮರ್ಶೆ. | BOOK REVIEW.