Table of Contents
Trodden Path
ಕಂನಾಡು-ಕಂನುಡಿ ಆಕೃತಿ ಪಡೆದ ಬಗೆ
01 to 27
ಡಾ. ಶಂ.ಬಾ. ಜೋಶಿ ಅವರು ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಇತಿಹಾಸವನ್ನು ಬಹುಶಿಸ್ತೀಯ ನೆಲೆಗಳಲ್ಲಿ ಶೋಧಿಸಿದ ಅಗ್ರಗಣ್ಯ ವಿದ್ವಾಂಸರು. ಆರ್ಯಪೂರ್ವ ಕಂದಮಿಳು, ಆಸ್ಟ್ರೋಲಾಯ್ಡ್ ಭಾಷಿಕರ ಪ್ರಾಚೀನ ನೆಲೆಗಳು, ಪಟ್ಟಿ, ಪಾಡಿ, ಊರು, ಹಟ್ಟಿ ಮುಂತಾದ ಸ್ಥಳನಾಮಗಳು ಮತ್ತು ದನಗಾರಿಕೆಯ ಕುರುಹುಗಳನ್ನು ಆಧರಿಸಿ ಕರುನಾಡಿನ ಭೌಗೋಳಿಕ ಹಾಗೂ ಸಾಂಸ್ಕೃತಿಕ ವಿಸ್ತಾರವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ದಕ್ಷಿಣಾಪಥದ ಪ್ರಾಚೀನ ಅವಶೇಷಗಳ ಮೂಲಕ ಆ ಕಾಲದ ಜನರ ಜನಾಂಗೀಯ, ಭಾಷಿಕ ಹಾಗೂ ಧಾರ್ಮಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಶ್ರೌತ-ಸ್ಮಾರ್ಟ ಪರಂಪರೆ, ಜೈನ-ಬೌದ್ಧ ಧರ್ಮಗಳ ಪ್ರಭಾವ, ಲಾಟ-ಕರ್ಣಾಟಗಳ ಸಂಬಂಧ ಮತ್ತು ವಿರಕ್ತ ಪಂಥಗಳ ತಾತ್ವಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಕಂನಾಡು-ಕಂನುಡಿ ಆಕೃತಿ ಪಡೆದ ಬಗೆಯನ್ನು ಐತಿಹಾಸಿಕ ಮತ್ತು ಭಾಷಾವಿಜ್ಞಾನದ ಆಧಾರಗಳೊಂದಿಗೆ ಮೌಲ್ವಿಕರಿಸಲಾಗಿದೆ. ಕನ್ನಡದ ಅಸ್ಮಿತೆಯ ಮೂಲ ಬೇರುಗಳನ್ನು ಅರಿಯಲು ಇದು ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ.
Byway
ವಿಮಲಕೀರ್ತಿ ಎಂಬ ನಿತ್ಯಜ್ಞಾನಿ
28 to 39
ಭಾರತೀಯ ತತ್ವಜ್ಞಾನದ ಪರಂಪರೆಯಲ್ಲಿ ಸಂವಾದಗಳ ಮೂಲಕ ಜ್ಞಾನದ ವಿಸ್ತಾರವನ್ನು ಕಾಣಬಹುದು. ಬೌದ್ಧ ಧರ್ಮದ ಮಹಾಯಾನ ಪಂಥದ ಪ್ರಮುಖ ದಾರ್ಶನಿಕನಾದ ವಿಮಲಕೀರ್ತಿಯು ತನ್ನ 'ನಿರ್ದೇಶ ಸೂತ್ರ'ದ ಮೂಲಕ ಲೋಕಕಲ್ಯಾಣ, ಜ್ಞಾನ, ಕರುಣೆ ಮತ್ತು ಅಹಿಂಸೆಯನ್ನು ಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾನೆ. ಬುದ್ಧನ ಪ್ರಮುಖ ಶಿಷ್ಯರೊಂದಿಗಿನ ಆತನ ಸಂವಾದಗಳು ನಿರ್ವಾಣ, ಧ್ಯಾನ, ಭಾಷೆ ಮತ್ತು ಧರ್ಮದ ಸಾಂಪ್ರದಾಯಿಕ ಕಲ್ಪನೆಗಳನ್ನು ಪ್ರಶ್ನಿಸುತ್ತವೆ. ದ್ವಂದ್ವವಾದಗಳನ್ನು ಮೀರಿ, ಲೋಕದ ದೈನಂದಿನ ಬದುಕಿನಲ್ಲೇ ನಿತ್ಯಜ್ಞಾನವನ್ನು ಕಂಡುಕೊಳ್ಳುವ ಆತನ ಮಾರ್ಗವು ಅಲ್ಲಮಪ್ರಭುಗಳಂತಹ ಶರಣರ ಅನುಭಾವಿ ಚಿಂತನೆಗಳಿಗೆ ಹತ್ತಿರವಾಗಿದೆ. ಭಾಷೆಯನ್ನು ಬಂಧನವೆನ್ನದೆ ಮುಕ್ತ ಅಭಿವ್ಯಕ್ತಿಯ ಸಾಧನವಾಗಿಸುವ, ವೈರಾಗ್ಯಕ್ಕಿಂತ ನಿರ್ಮೋಹವನ್ನು ಎತ್ತಿಹಿಡಿಯುವ ಹಾಗೂ ರೋಗ-ದುಃಖಗಳನ್ನು ಅರಿವಿನ ಸಾಧನವನ್ನಾಗಿಸುವ ವಿಮಲಕೀರ್ತಿಯ ದಾರ್ಶನಿಕತೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Research Articles
ಕೆ. ಎಸ್. ನಿಸಾರ್ ಅಹಮದ್‌ರವರ 'ಶಿಲುಬೆ ಏರಿದ್ದಾನೆ' ಕವನದಲ್ಲಿನ ಸಮಕಾಲೀನ ತಲ್ಲಣಗಳು
40 to 45
ಜಗತ್ತಿಗೆ ಪ್ರೀತಿ, ದಯೆ, ಕರುಣೆಯ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಜೀಸಸ್ ಪ್ರಮುಖರು, ಸಾವಿನ ಸಂಕಟದಲ್ಲೂ ವಿಚಲಿತನಾಗದೆ ಲೋಕಕಲ್ಯಾಣಕ್ಕಾಗಿ ಮಿಡಿದ ಜೀಸಸ್‌ನ ವ್ಯಕ್ತಿತ್ವ ಇಂದು ಪ್ರಸ್ತುತ. ಹಿಂಸೆ ಆಧುನಿಕ ಸಮಾಜದ ಗುಣವೆಂಬಂತೆ ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಜೀಸಸ್‌ನ ಪ್ರೀತಿ, ಕರುಣೆ, ಔದಾರ್ಯ ನಮ್ಮೊಳಗೆ ಅನುರಣನಗೊಳ್ಳಬೇಕಾದ ಅಗತ್ಯವಿದೆ. ನಿಸಾರ್ ಅವರು ಜೀಸಸ್‌ನ ವ್ಯಕ್ತಿತ್ವದ ಬಗ್ಗೆ ಬರೆದಿರುವ ಈ ಕವಿತೆ ಪರಧರ್ಮ ಸಹಿಷ್ಣುತೆ ಹಾಗೂ ವಿಶ್ವಭಾತೃತ್ವಕ್ಕೆ ಬರೆದ ಹೊಸ ಭಾಷ್ಯದಂತಿದೆ. ಜೀಸಸ್‌ನ ವ್ಯಕ್ತಿತ್ವ, ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿರುವ ಕವಿ ಆ ಕಾಲದ ಹಿಂಸೆ, ಕ್ರೌರ್ಯ, ಈ ಕಾಲದಲ್ಲಿಯೂ ಹೊಸರೂಪದಲ್ಲಿ ಮುಂದುವರೆಯುತ್ತಿರುವ ದುರಂತವನ್ನು ಕಟ್ಟಿಕೊಟ್ಟಿದ್ದಾರೆ.
ಭಾಷೆಯಲ್ಲಿ ಮಹಿಳಾ ಪ್ರತಿನಿಧೀಕರಣ
46 to 51
ನಮ್ಮ ಇಡೀ ವ್ಯವಸ್ಥೆ ಪುರುಷ ಕೇಂದ್ರಿತ ನೆಲೆಯಲ್ಲಿ ರೂಪಿತವಾಗಿದೆ. ಜೀವನದ ಪ್ರತಿಯೊಂದು ಭಾಗವೂ ಶತಶತಮಾನಗಳಿಂದಲೂ ಅದೇ ನೆಲೆಗಟ್ಟಿನಲ್ಲಿ ಮುಂದುವರೆದಿವೆ. ಭಾಷೆಯೂ ಇದಕ್ಕೆ ಹೊರತಾಗಿಲ್ಲ. ಏನನ್ನೇ ಹೇಳಬೇಕಾದರೂ ಪುರುಷ ಕೇಂದ್ರಿತ ಭಾಷೆ ಅಥವಾ ಪುರುಷವಾಚಿ ಭಾಷೆ ಇಂದಿಗೂ ಅತಿ ಸರಾಗವಾಗಿ ಬಳಕೆಯಾಗುತ್ತದೆ. ಹೆಣ್ಣಿಗೆ ಅವಳದೇ ಆದ ಅಭಿವ್ಯಕ್ತಿ, ಭಾಷೆ ಇದೆ ಎಂಬುದನ್ನು ಇಂದಿಗೂ ಸಮಾಜ ಒಪ್ಪಿಕೊಂಡಿಲ್ಲ. ಇಂದಾದರೂ ಅಷ್ಟೆ ಭಾಷೆಯ ಅಭಿವ್ಯಕ್ತಿಯಲ್ಲಿ ಮಹಿಳಾ ಭಾಷೆ, ಹೆಣ್ಣು ಭಾಷೆ ಎಂಬುದು ತನ್ನ ಅಸ್ತಿತ್ವಕ್ಕಾಗಿ ಪ್ರಶ್ನೆಗಳನ್ನು ಹಾಕುತ್ತಲೇ ಇದೆ. ಮಾಧ್ಯಮಗಳಲ್ಲೂ ಮಹಿಳಾ ಅಭಿವ್ಯಕ್ತಿ ಪೂರ್ಣಪ್ರಮಾಣದಲ್ಲಿ ಸಾಧಿತವಾಗಿಲ್ಲ.
ಬೇಂದ್ರೆಯವರ ಕಾವ್ಯಗಳಲ್ಲಿ ಮೌನ ಧ್ಯಾನದ ನೆಲೆಗಳು
52 to 57
ಬೇಂದ್ರೆಯವರು ತಮ್ಮ ಕಾವ್ಯದಲ್ಲಿ ಒಳನುಡಿಯಾಗಿ ಹಿಡಿಗಾಳಿನಂತೆ ಒಡಮೂಡಿಸಿರುವ ಧ್ಯಾನ ಹಾಗೂ ಮೌನದ ನೆಲೆಗಳನ್ನು ವಿಶ್ಲೇಷಿಸುವುದು. ಗಾಳಿಹೆಜ್ಜೆಯನ್ನು ಧ್ಯಾನಿಸುತ್ತಾ ಅಮೃತಕ್ಕೆ ಹಾರುವ ಗರುಡನಂತೆ ಮೌನದ ಯಾನದ ಜೊತೆಗೆ ಸಾಮಾನ್ಯ ಬದುಕನ್ನು ಅನುಭಾವದ ಎತ್ತರಕ್ಕೆ ಕೊಂಡೊಯ್ಯುವ ಒಲವಿನ ಕಾವ್ಯದ ಮೌನ ಮತ್ತು ಧ್ಯಾನದ ನೆಲೆಗಳನ್ನು ಹುಡುಕುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.
Deficit of Cultures: Chinta - An Ecofeminist Study
58 to 64
The proposed paper studies the short story Chinta from an ecofeminist perspective. Mahasweta Devi, a well known Bengali writer has produced a plethora of creative writing on tribal India. From the early age itself she penned her interest in the lives of tribal people of Bengal, Jarkhand, Madya Pradesh and surrounding states. She took a journey into these places on foot to understand and experience the life of tribal community. The very first book 'Jansi ka Rani' is the best example for her dedication towards her profession. She collected the required information from the people than referring back to already produced stuff in the field. The proposed short story also presents a realistic portrayal of a woman in a postcolonial India.
The Influence of Indian Music on Socio-Cultural Development in 20th Century in India
65 to 71
Music is as old as our civilization. The presence of music / dance in Indus Valley Civilization is evident from some musical instruments, such as the arched or bow-shaped harp and few varieties of drums on terracotta figures and pictographs on the seals. Further, the dancing girl figurine is a testimony to this. However, what kind of music or dance was prevalent that time, we are totally ignorant about it.
'रवीन्द्र कालिया' की कहानियों में चित्रित उच्च वर्गीय समाज
72 to 77
अपने समय के समाज को रवीन्द्र कालिया ने बडी ही गहराई के साथ अपने कथा साहित्य में चित्रित किया है। युग विशेष की सामाजिक, आर्थिक और धार्मिक परिस्थिति में समाज के उच्च वर्ग, मध्यम वर्ग और निम्न वर्ग किस तरह एक दुसरे के प्रति व्यवहार कर रहा था उसका भी चित्रण किया है। समय परिवर्तनशील है। युगीन परिस्थितियाँ हमेशा एक सी नहीं रहती। युग बदलने के साथ-साथ किसी समाज विशेष की परिस्थितियाँ भी बदल जाती है। इसलिए जिस रचनाकार के पास संवेदनाओं को गहराई से समझने और उसे विश्लेषित करने की समझ नहीं होगी, उसका साहित्य कभी भी कालजयी नहीं हो सकता। रवीन्द्र कालिया अपने कहानियों में उच्च वर्गीय समाज के लोगों कि जीवन शैली के साथ ही उनका ऐश्वर्यपूर्ण जीवन उनकी सामाजिक प्रतिष्ठा एवं आस्तित्व का परिचय कराते है। उच्च वर्ग किस तरह समाज के अन्य लोगों के साथ दुराव रखता है, उसके साथ समाज में प्रतिष्ठा रखने के लिए किस तरह संघर्ष करता है। और गरीबों के प्रति सहानुभूति दिखाकर अपने सुविधानुसार स्वार्थ के लिए उनका उपयोग करने की प्रवृति को दिखाया गया है, आदि का अपने कहानियों में चित्रित किया है।
Book Review
ನಾ. ಡಿಸೋಜರವರ 'ದ್ವೀಪ': ವಸ್ತು ವಿನ್ಯಾಸ
78 to 84
ಕನ್ನಡ ಕಥನ ಸಾಹಿತ್ಯದಲ್ಲಿ ಮುಳುಗಡೆ ಸಮಸ್ಯೆಯನ್ನು ಕುರಿತು ರಚನೆಯಾದಂತಹ ಕಥೆಗಳು ಬಹಳ ಕಡಿಮೆ. ಸಾರ್ವಜನಿಕ ಕಾಮಗಾರಿಗಳಿಂದ ನಿರಾಶ್ರಿತರಾದ ಜನತೆಯ ತಲ್ಲಣಗಳನ್ನು ಕುರಿತು ರಚನೆಯಾದ ಕಥಾ ಸಾಹಿತ್ಯವೂ ಕಡಿಮೆ. ಪ್ರಸ್ತುತ 'ದ್ವೀಪ' ಕೃತಿಯು ಮುಳುಗಡೆ ಸಮಸ್ಯೆಯನ್ನು ಕುರಿತು ಮಾತನಾಡುತ್ತದೆ. ಮುಳುಗಡೆ ಆಗಲಿರುವ ಪ್ರದೇಶದಲ್ಲಿ ಎಲ್ಲರಿಗೂ ಪರಿಹಾರ ಸಿಕ್ಕಿ ಗಣಪಯ್ಯನಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ ಎಂದು ಹೇಳುತ್ತಲೇ ಆರಂಭವಾಗುವ ಕಾದಂಬರಿಯು ನೇರವಾಗಿ ಕೇಂದ್ರ ಸ್ಥಾನಕ್ಕೆ ಪ್ರವೇಶ ಪಡೆಯುತ್ತದೆ. ಅಣೆಕಟ್ಟೆಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರವೂ ಗಣಪಯ್ಯನ ಸಂಸಾರಕ್ಕೆ ಪರಿಹಾರ ದೊರೆಯುವುದಿಲ್ಲ. ಕನ್ನಡ ಕಾದಂಬರಿ ಪ್ರಪಂಚದಲ್ಲಿ ಪ್ರಕೃತಿಯೇ ಒಂದು ಪಾತ್ರವಾಗಿ ಬಂದದ್ದು ತೀರ ಅಪರೂಪ. ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿಗಳಲ್ಲಿ, ಕಥೆಗಳಲ್ಲಿ, ಶಿವರಾಮ ಕಾರಂತ, ಯು. ಆರ್. ಅನಂತಮೂರ್ತಿ, ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕೆಲವು ಕಾದಂಬರಿಗಳಲ್ಲಿ ತುಂಬಾ ಪರಿಣಾಮಕಾರಿಯಾಗಿ ಬಳಸಲ್ಪಟ್ಟ ನಿದರ್ಶನಗಳಿವೆ. ಕನ್ನಡ ಸಿನಿಮಾ ರಂಗದಲ್ಲಂತೂ ಪ್ರಕೃತಿ ಕೇವಲ ಹಿನ್ನೆಲೆಯಾಗಿ ಬಂದಿದೆ. ಪ್ರಕೃತಿ ಒಂದು ಪಾತ್ರವಾಗಿ ಬಂದ ನಿದರ್ಶನವೇ ಇಲ್ಲ. 'ದ್ವೀಪ' ದಲ್ಲಿ ಅಂತಹ ಸಾಧ್ಯತೆಗಳಿವೆ. 'ದ್ವೀಪ' ಕೃತಿಯನ್ನು ಸಿನಿಮಾ ಮಾಡಿದ ನಟಿ, ನಿರ್ಮಾಪಕಿ ಸೌಂದರ್ಯ ಅವರ ಧೈರ್ಯವನ್ನು ಮೆಚ್ಚಲೇಬೇಕು. ಸೀಮಿತ ಮಾರುಕಟ್ಟೆ ವ್ಯಾಪ್ತಿಯನ್ನು ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗುವುದಿಲ್ಲವೆಂಬ ವಿಚಾರ ತಿಳಿದಿದ್ದರೂ ಅವರು 'ದ್ವೀಪ' ಸಿನಿಮಾವನ್ನು ನಿರ್ಮಿಸುತ್ತಾರೆ. 'ದ್ವೀಪ' ಕತೆಯೂ ಅಲ್ಲ, ಕಾದಂಬರಿಯೂ ಅಲ್ಲ. ಅದೊಂದು ಶ್ರೇಷ್ಠ ನೀಳತೆ 'ದ್ವೀಪ' ನೀಳತೆಯ ಮತ್ತೊಂದು ವಿಶೇಷತೆ ಎಂದರೆ ಅಧ್ಯಾಯಗಳಿಗೆ ಮಳೆಯ ಹೆಸರನ್ನಿಟ್ಟಿರುವುದು. ಏಳು ಅಧ್ಯಾಯಗಳಿವೆ. ಏಳು ಮಳೆಯ ಹೆಸರುಗಳನ್ನಿಡಲಾಗಿದೆ.
ಸಿದ್ಧಲಿಂಗಯ್ಯನವರ ಬರಹಗಳು: ಜೀವನ್ಮುಖಿ ಜಗತ್ತಿನ ಅನಾವರಣ
85 to 95
ಸಿದ್ಧಲಿಂಗಯ್ಯನವರು ಕನ್ನಡ ಕಾವ್ಯ ಜಗತ್ತು ಕಂಡ ಅಪ್ರತಿಮ ಪ್ರತಿಭಾನ್ವಿತ ಕವಿಗಳಲ್ಲಿ ಒಬ್ಬರು. ಅವರ ಬದುಕು ಮತ್ತು ಬರಹ ಮಾನವ ಪ್ರೇಮದ ಜೀವಂತಿಕೆಯನ್ನು ಜಗತ್ತಿಗೆ ಸಾರುವ ಮಹತ್ವಾಕಾಂಕ್ಷೆಯಿಂದ ರೂಪುಗೊಂಡವುಗಳಾಗಿವೆ. ಹಾಗಾಗಿ ಅವರ ಬರಹಗಳ ಜೀವಾಳವನ್ನು ಮೂರು ಆಯಾಮಗಳಲ್ಲಿ ಗುರುತಿಸುವುದು ಈ ಲೇಖನದ ಉದ್ದೇಶವಾಗಿದೆ. ಮೊದಲನೆಯದು ಬಹುಸಂಖ್ಯಾತ ಸಾಮಾಜಿಕ ವ್ಯವಸ್ಥೆ ಸಿದ್ಧಲಿಂಗಯ್ಯನವರ ಬದುಕು ಬರಹಗಳನ್ನು ನೋಡಿರುವ ಕ್ರಮ, ಮತ್ತು ಅದನ್ನು ನೋಡಬೇಕಾದ ವಿಧಾನ ಯಾವುದು ಎಂಬುದನ್ನು ಗುರುತಿಸುವುದು. ಎರಡನೆಯದಾಗಿ ಸಿದ್ಧಲಿಂಗಯ್ಯ, ದಲಿತ ಬದುಕು, ದಲಿತಾನುಭವಗಳು ಇವುಗಳ ನಡುವಿನ ಅಂತರ್ಸಂಬಂಧಗಳನ್ನು ಗುರುತಿಸುವುದು. ಮೂರನೆಯದಾಗಿ ಸಿದ್ಧಲಿಂಗಯ್ಯನವರ ಬರವಣಿಗೆಯಲ್ಲಿ ವ್ಯಕ್ತವಾಗುವ ಮಾನವ ಪ್ರೇಮದ ಮಾದರಿಗಳಾವುವು ಎಂಬುದನ್ನು ಗುರುತಿಸುವುದು.
ರಾಘವೇಂದ್ರ ಖಾಸನೀಸರ 'ಅಶ್ವಾರೋಹಿ' ಒಂದು ವಿಶ್ಲೇಷಣೆ
96 to 100
ನವೋತ್ತರ ಕನ್ನಡ ಸಾಹಿತ್ಯದಲ್ಲಿ ರಾಘವೇಂದ್ರ ಖಾಸನೀಸರು ಒಬ್ಬರು. ಕಡಿಮೆ ಸಂಖ್ಯೆಯ ಕತೆಗಳನ್ನು ರಚಿಸಿದರೂ ಸಹ ಅವುಗಳಲ್ಲಿ ಬಹುತೇಕ ಕತೆಗಳು ವಿಶೇಷವೆನಿಸುತ್ತದೆ. ಈ ಹಿನ್ನೆಲೆಯಲ್ಲಿ 'ಅಶ್ವಾರೋಹಿ' ಕತೆ ಮನುಷ್ಯ ಸಮಾಜದ ಪ್ರತಿಬಿಂಬದಂತೆ ಕಾಣುತ್ತದೆ. ಇಲ್ಲಿ ಕಾಣುವ ಸಮಸ್ಯೆಗಳು ಸಮಾಜದ ಕೊಡುಗೆ ಆಗಿದ್ದರೂ, ಅದಕ್ಕೆ ಪರಿಹಾರ ಏನು ಎಂಬುದು ನಮ್ಮದೇ ಎನ್ನುವ ಪರಿಹಾರ ಸೂಚಿತ ಕಥಾತಂತ್ರವನ್ನು ಕತೆಯಲ್ಲಿ ಕಾಣಬಹುದು.
Essay
ಸಂಶೋಧನೆಯ ಆಕರವಾಗಿ ಕೀರ್ತನಸಾಹಿತ್ಯ
101 to 108
ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾಗಿ ಎರಡು ಸಾಹಿತ್ಯದ ಪ್ರಕಾರಗಳನ್ನು ಕಾಣುತ್ತೇವೆ. ಅವುಗಳೆಂದರೆ ಒಂದು ಶಿವಶರಣರಿಂದ ರಚಿತವಾದ ವಚನಸಾಹಿತ್ಯ, ಇನ್ನೊಂದು ಹರಿದಾಸರ ಅನುಭವದ ನುಡಿಗಳಿಂದ ರಚಿತವಾದ ಕೀರ್ತನಸಾಹಿತ್ಯ. ವಚನಕಾರರು ಅಂದಿನ ಕಾಲದ ಸಾಮಾಜಿಕ ಪರಿಸ್ಥಿತಿಯ ಕುರಿತು ರಾಜಪ್ರಭುತ್ವವನ್ನು ವಿರೋಧಿಸಿತ್ತಾ ಒಂದು ಆಯಾಮವನ್ನು ಕಂಡುಕೊಂಡರೆ, ಕೀರ್ತನಸಾಹಿತ್ಯವು ತಾಳ-ತಂಬೂರಿಯನ್ನು ಮೀಟುತ್ತಾ, ಊರೂರು ತಿರುಗುತ್ತಾ ಜನಭಾಷೆಯಾದ ಆಡುಭಾಷೆಯಲ್ಲಿ ಕೀರ್ತನೆಗಳನ್ನು ಹಾಡುವ ಹರಿದಾಸರ ಮೂಲಕ ಜನಸಮೂಹಕ್ಕೆ ಹತ್ತಿರವಾದ ಸಾಹಿತ್ಯದ ಪ್ರಕಾರವಾಗಿದೆ. ಹರಿದಾಸರು ಹಾಡಲೆಂದೇ ಕೀರ್ತನೆಗಳನ್ನು ರಚಿಸಲಿಲ್ಲ. ರಚಿಸಿದ ಕೀರ್ತನೆಗಳನ್ನು ರಾಗ-ತಾಳಯುಕ್ತವಾಗಿ ಹಾಡಿ ಜನಸಮೂಹಕ್ಕೆ ಹತ್ತಿರವಾದವರು. ಆ ಮೂಲಕ ಮತ ಪ್ರಸಾರದ ದೃಷ್ಟಿಯಿಂದ ರಚಿತವಾದ ಹರಿದಾಸರ ಕೀರ್ತನೆಗಳು ಮತಪ್ರಸಾರದ ಜೊತೆಗೆ ಸಾಮಾನ್ಯ ಜನರ ಅದೆಷ್ಟೋ ವಿಚಾರಗಳನ್ನು ತಿಳಿಸಿ, ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಗಳನ್ನು ತಿಳಿಸುವ ಕೀರ್ತನೆಗಳನ್ನು ರಚಿಸಿದ್ದಾರೆ. ಆ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಸರಿಮಾಡುವಲ್ಲಿ ಹರಿದಾಸರ ಕೊಡುಗೆ ಮಹತ್ವದ್ದೆನಿಸಿದೆ. ಇಂತಹ ಹರಿದಾಸರಿಂದ ರಚಿತವಾದ ಕೀರ್ತನಸಾಹಿತ್ಯವು ಇಂದಿನ ಸಂಶೋಧನೆಗಳಿಗೆ ಒಂದು ಆಕರವಾಗಿ ದೊರೆಯುವ ಹಲವು ಸಂದರ್ಭ, ವಿಷಯ, ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ.
ವರ್ತಮಾನದಲ್ಲಿ ಕನ್ನಡದ ಅಸ್ಮಿತೆ-ತಾತ್ವಿಕತೆಯ ಒಳನೋಟ
109 to 116
ಸಮಕಾಲಿನ ಅಗತ್ಯಗಳಿಗೆ ಕನ್ನಡವನ್ನು ಸಜ್ಜುಗೊಳಿಸಬೇಕು. ಕನ್ನಡ ಅಭಿಮಾನ ರೋಚಕತೆಯ ಬದಲು ರಚನಾತ್ಮಕವಾಗಬೇಕು ರಚನಾತ್ಮಕತೆಯನ್ನು ಸ್ಥಾಪಿಸುವ ಕನ್ನಡ ಸೈದ್ಧಾಂತಿಕತೆ ನಮ್ಮದಾಗಬೇಕು. ಹೊಸ ಸಮಸ್ಯೆ ಸವಾಲುಗಳ ಸಂದರ್ಭದಲ್ಲಿ ರೂಪಿಸುವ ಅಸ್ಮಿತೆಯ ಯೋಜನೆಗಳ ಅಗತ್ಯವನ್ನು ನಾವು ಮನಗಾಣಬೇಕಾಗಿದೆ ಈ ದಿಕ್ಕಿನಲ್ಲಿ ಇಂದಿನ ಪೀಳಿಗೆಗೆ ಕನ್ನಡದ ಪರಂಪರೆಯನ್ನು ಪರಿಚಯಿಸಿ ಅಸ್ಮಿತೆಗಾಗಿ ಶ್ರಮಿಸಬೇಕಾದ ತುರ್ತಿದೆ.