ಸಿದ್ಧಲಿಂಗಯ್ಯನವರ ಬರಹಗಳು: ಜೀವನ್ಮುಖಿ ಜಗತ್ತಿನ ಅನಾವರಣ

Main Article Content

ಸುಧಾ ಬಿ. ಎಸ್.

Abstract

ಸಿದ್ಧಲಿಂಗಯ್ಯನವರು ಕನ್ನಡ ಕಾವ್ಯ ಜಗತ್ತು ಕಂಡ ಅಪ್ರತಿಮ ಪ್ರತಿಭಾನ್ವಿತ ಕವಿಗಳಲ್ಲಿ ಒಬ್ಬರು. ಅವರ ಬದುಕು ಮತ್ತು ಬರಹ ಮಾನವ ಪ್ರೇಮದ ಜೀವಂತಿಕೆಯನ್ನು ಜಗತ್ತಿಗೆ ಸಾರುವ ಮಹತ್ವಾಕಾಂಕ್ಷೆಯಿಂದ ರೂಪುಗೊಂಡವುಗಳಾಗಿವೆ. ಹಾಗಾಗಿ ಅವರ ಬರಹಗಳ ಜೀವಾಳವನ್ನು ಮೂರು ಆಯಾಮಗಳಲ್ಲಿ ಗುರುತಿಸುವುದು ಈ ಲೇಖನದ ಉದ್ದೇಶವಾಗಿದೆ. ಮೊದಲನೆಯದು ಬಹುಸಂಖ್ಯಾತ ಸಾಮಾಜಿಕ ವ್ಯವಸ್ಥೆ ಸಿದ್ಧಲಿಂಗಯ್ಯನವರ ಬದುಕು ಬರಹಗಳನ್ನು ನೋಡಿರುವ ಕ್ರಮ, ಮತ್ತು ಅದನ್ನು ನೋಡಬೇಕಾದ ವಿಧಾನ ಯಾವುದು ಎಂಬುದನ್ನು ಗುರುತಿಸುವುದು. ಎರಡನೆಯದಾಗಿ ಸಿದ್ಧಲಿಂಗಯ್ಯ, ದಲಿತ ಬದುಕು, ದಲಿತಾನುಭವಗಳು ಇವುಗಳ ನಡುವಿನ ಅಂತರ್ಸಂಬಂಧಗಳನ್ನು ಗುರುತಿಸುವುದು. ಮೂರನೆಯದಾಗಿ ಸಿದ್ಧಲಿಂಗಯ್ಯನವರ ಬರವಣಿಗೆಯಲ್ಲಿ ವ್ಯಕ್ತವಾಗುವ ಮಾನವ ಪ್ರೇಮದ ಮಾದರಿಗಳಾವುವು ಎಂಬುದನ್ನು ಗುರುತಿಸುವುದು.

Article Details

Section

Book Review

Author Biography

ಸುಧಾ ಬಿ. ಎಸ್.

ಸಹಾಯಕ ಪ್ರಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮನಗರ.

How to Cite

ಸುಧಾ ಬಿ. ಎಸ್. (2023). ಸಿದ್ಧಲಿಂಗಯ್ಯನವರ ಬರಹಗಳು: ಜೀವನ್ಮುಖಿ ಜಗತ್ತಿನ ಅನಾವರಣ. ಅಕ್ಷರಸೂರ್ಯ (AKSHARASURYA), 2(11), 85 to 95. https://aksharasurya.com/index.php/latest/article/view/267

References

ಸಿದ್ಧಲಿಂಗಯ್ಯ, ಊರು ಕೇರಿ-1 (2002), ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಸಿದ್ದಲಿಂಗಯ್ಯ, ಊರು ಕೇರಿ-2 (2009, ದ್ವಿತೀಯ ಮುದ್ರಣ), ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು.

ದೊಡ್ಡ ಹುಲ್ಲೂರು ರುಕ್ಕೋಜಿ (ಸಂ.), ಸಿದ್ದಲಿಂಗಯ್ಯನವರ ಸದನದ ಭಾಷಣಗಳು: ಭಾಗ-1. (2014), ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು.

ದೊಡ್ಡ ಹುಲ್ಲೂರು ರುಕ್ಕೋಜಿ (ಸಂ.), ಸಿದ್ದಲಿಂಗಯ್ಯನವರ ಸದನದ ಭಾಷಣಗಳು: ಭಾಗ-2. (2014), ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು.