ಕಂನಾಡು-ಕಂನುಡಿ ಆಕೃತಿ ಪಡೆದ ಬಗೆ

Main Article Content

ಶಂ.ಬಾ. ಜೋಶಿ

Abstract

ಡಾ. ಶಂ.ಬಾ. ಜೋಶಿ ಅವರು ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಇತಿಹಾಸವನ್ನು ಬಹುಶಿಸ್ತೀಯ ನೆಲೆಗಳಲ್ಲಿ ಶೋಧಿಸಿದ ಅಗ್ರಗಣ್ಯ ವಿದ್ವಾಂಸರು. ಆರ್ಯಪೂರ್ವ ಕಂದಮಿಳು, ಆಸ್ಟ್ರೋಲಾಯ್ಡ್ ಭಾಷಿಕರ ಪ್ರಾಚೀನ ನೆಲೆಗಳು, ಪಟ್ಟಿ, ಪಾಡಿ, ಊರು, ಹಟ್ಟಿ ಮುಂತಾದ ಸ್ಥಳನಾಮಗಳು ಮತ್ತು ದನಗಾರಿಕೆಯ ಕುರುಹುಗಳನ್ನು ಆಧರಿಸಿ ಕರುನಾಡಿನ ಭೌಗೋಳಿಕ ಹಾಗೂ ಸಾಂಸ್ಕೃತಿಕ ವಿಸ್ತಾರವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ದಕ್ಷಿಣಾಪಥದ ಪ್ರಾಚೀನ ಅವಶೇಷಗಳ ಮೂಲಕ ಆ ಕಾಲದ ಜನರ ಜನಾಂಗೀಯ, ಭಾಷಿಕ ಹಾಗೂ ಧಾರ್ಮಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಶ್ರೌತ-ಸ್ಮಾರ್ಟ ಪರಂಪರೆ, ಜೈನ-ಬೌದ್ಧ ಧರ್ಮಗಳ ಪ್ರಭಾವ, ಲಾಟ-ಕರ್ಣಾಟಗಳ ಸಂಬಂಧ ಮತ್ತು ವಿರಕ್ತ ಪಂಥಗಳ ತಾತ್ವಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಕಂನಾಡು-ಕಂನುಡಿ ಆಕೃತಿ ಪಡೆದ ಬಗೆಯನ್ನು ಐತಿಹಾಸಿಕ ಮತ್ತು ಭಾಷಾವಿಜ್ಞಾನದ ಆಧಾರಗಳೊಂದಿಗೆ ಮೌಲ್ವಿಕರಿಸಲಾಗಿದೆ. ಕನ್ನಡದ ಅಸ್ಮಿತೆಯ ಮೂಲ ಬೇರುಗಳನ್ನು ಅರಿಯಲು ಇದು ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ.

Article Details

Section

Trodden Path

Author Biography

ಶಂ.ಬಾ. ಜೋಶಿ

ವಿದ್ವಾಂಸರು ಮತ್ತು ಸಾಹಿತಿಗಳು

References

ಮೂಲ: ಮಲ್ಲೇಪುರಂ ಜಿ. ವೆಂಕಟೇಶ (ಸಂ), ಶಂಬಾ ಕೃತಿ ಸಂಪುಟ-3: ಕರ್ಣಾಟ-ಸಂಸ್ಕೃತಿ (1999), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಪು.ಸಂ. 441 ರಿಂದ 470.