ಕೆ. ಎಸ್. ನಿಸಾರ್ ಅಹಮದ್‌ರವರ 'ಶಿಲುಬೆ ಏರಿದ್ದಾನೆ' ಕವನದಲ್ಲಿನ ಸಮಕಾಲೀನ ತಲ್ಲಣಗಳು
Main Article Content
Abstract
ಜಗತ್ತಿಗೆ ಪ್ರೀತಿ, ದಯೆ, ಕರುಣೆಯ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಜೀಸಸ್ ಪ್ರಮುಖರು, ಸಾವಿನ ಸಂಕಟದಲ್ಲೂ ವಿಚಲಿತನಾಗದೆ ಲೋಕಕಲ್ಯಾಣಕ್ಕಾಗಿ ಮಿಡಿದ ಜೀಸಸ್‌ನ ವ್ಯಕ್ತಿತ್ವ ಇಂದು ಪ್ರಸ್ತುತ. ಹಿಂಸೆ ಆಧುನಿಕ ಸಮಾಜದ ಗುಣವೆಂಬಂತೆ ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಜೀಸಸ್‌ನ ಪ್ರೀತಿ, ಕರುಣೆ, ಔದಾರ್ಯ ನಮ್ಮೊಳಗೆ ಅನುರಣನಗೊಳ್ಳಬೇಕಾದ ಅಗತ್ಯವಿದೆ. ನಿಸಾರ್ ಅವರು ಜೀಸಸ್‌ನ ವ್ಯಕ್ತಿತ್ವದ ಬಗ್ಗೆ ಬರೆದಿರುವ ಈ ಕವಿತೆ ಪರಧರ್ಮ ಸಹಿಷ್ಣುತೆ ಹಾಗೂ ವಿಶ್ವಭಾತೃತ್ವಕ್ಕೆ ಬರೆದ ಹೊಸ ಭಾಷ್ಯದಂತಿದೆ. ಜೀಸಸ್‌ನ ವ್ಯಕ್ತಿತ್ವ, ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿರುವ ಕವಿ ಆ ಕಾಲದ ಹಿಂಸೆ, ಕ್ರೌರ್ಯ, ಈ ಕಾಲದಲ್ಲಿಯೂ ಹೊಸರೂಪದಲ್ಲಿ ಮುಂದುವರೆಯುತ್ತಿರುವ ದುರಂತವನ್ನು ಕಟ್ಟಿಕೊಟ್ಟಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಗೋವಿಂದ ಪೈ ಎಂ., ಗೊಲ್ಗೊಥಾ (2008), ಅಭಿನವ ಪ್ರಕಾಶನ, ಬೆಂಗಳೂರು.
ಕನ್ನಡ ಪಠ್ಯ ಪುಸ್ತಕ (2022), ಬಿ.ಎ. 5ನೇ ಸೆಮಿಸ್ಟರ್, ರಾಣಿಚೆನ್ನಮ್ಮ ವಿ.ವಿ., ಕಾಲೇಜು ಶಿಕ್ಷಣ ಇಲಾಖೆ.