ಸಂಶೋಧನೆಯ ಆಕರವಾಗಿ ಕೀರ್ತನಸಾಹಿತ್ಯ

Main Article Content

ತಿಪ್ಪೇರುದ್ರಯ್ಯಸಿದ್ಧಯ್ಯ ಮಠದ

Abstract

ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾಗಿ ಎರಡು ಸಾಹಿತ್ಯದ ಪ್ರಕಾರಗಳನ್ನು ಕಾಣುತ್ತೇವೆ. ಅವುಗಳೆಂದರೆ ಒಂದು ಶಿವಶರಣರಿಂದ ರಚಿತವಾದ ವಚನಸಾಹಿತ್ಯ, ಇನ್ನೊಂದು ಹರಿದಾಸರ ಅನುಭವದ ನುಡಿಗಳಿಂದ ರಚಿತವಾದ ಕೀರ್ತನಸಾಹಿತ್ಯ. ವಚನಕಾರರು ಅಂದಿನ ಕಾಲದ ಸಾಮಾಜಿಕ ಪರಿಸ್ಥಿತಿಯ ಕುರಿತು ರಾಜಪ್ರಭುತ್ವವನ್ನು ವಿರೋಧಿಸಿತ್ತಾ ಒಂದು ಆಯಾಮವನ್ನು ಕಂಡುಕೊಂಡರೆ, ಕೀರ್ತನಸಾಹಿತ್ಯವು ತಾಳ-ತಂಬೂರಿಯನ್ನು ಮೀಟುತ್ತಾ, ಊರೂರು ತಿರುಗುತ್ತಾ ಜನಭಾಷೆಯಾದ ಆಡುಭಾಷೆಯಲ್ಲಿ ಕೀರ್ತನೆಗಳನ್ನು ಹಾಡುವ ಹರಿದಾಸರ ಮೂಲಕ ಜನಸಮೂಹಕ್ಕೆ ಹತ್ತಿರವಾದ ಸಾಹಿತ್ಯದ ಪ್ರಕಾರವಾಗಿದೆ. ಹರಿದಾಸರು ಹಾಡಲೆಂದೇ ಕೀರ್ತನೆಗಳನ್ನು ರಚಿಸಲಿಲ್ಲ. ರಚಿಸಿದ ಕೀರ್ತನೆಗಳನ್ನು ರಾಗ-ತಾಳಯುಕ್ತವಾಗಿ ಹಾಡಿ ಜನಸಮೂಹಕ್ಕೆ ಹತ್ತಿರವಾದವರು. ಆ ಮೂಲಕ ಮತ ಪ್ರಸಾರದ ದೃಷ್ಟಿಯಿಂದ ರಚಿತವಾದ ಹರಿದಾಸರ ಕೀರ್ತನೆಗಳು ಮತಪ್ರಸಾರದ ಜೊತೆಗೆ ಸಾಮಾನ್ಯ ಜನರ ಅದೆಷ್ಟೋ ವಿಚಾರಗಳನ್ನು ತಿಳಿಸಿ, ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಗಳನ್ನು ತಿಳಿಸುವ ಕೀರ್ತನೆಗಳನ್ನು ರಚಿಸಿದ್ದಾರೆ. ಆ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಸರಿಮಾಡುವಲ್ಲಿ ಹರಿದಾಸರ ಕೊಡುಗೆ ಮಹತ್ವದ್ದೆನಿಸಿದೆ. ಇಂತಹ ಹರಿದಾಸರಿಂದ ರಚಿತವಾದ ಕೀರ್ತನಸಾಹಿತ್ಯವು ಇಂದಿನ ಸಂಶೋಧನೆಗಳಿಗೆ ಒಂದು ಆಕರವಾಗಿ ದೊರೆಯುವ ಹಲವು ಸಂದರ್ಭ, ವಿಷಯ, ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ.

Article Details

Section

Essay

Author Biography

ತಿಪ್ಪೇರುದ್ರಯ್ಯಸಿದ್ಧಯ್ಯ ಮಠದ

ಸಾ/ಪೋ- ಚಿಕ್ಕಯಡಚಿ, ರಟ್ಟಿಹಳ್ಳಿ ತಾಲ್ಲೂಕು, ಹಾವೇರಿ ಜಿಲ್ಲೆ.

How to Cite

ತಿಪ್ಪೇರುದ್ರಯ್ಯಸಿದ್ಧಯ್ಯ ಮಠದ. (2023). ಸಂಶೋಧನೆಯ ಆಕರವಾಗಿ ಕೀರ್ತನಸಾಹಿತ್ಯ. ಅಕ್ಷರಸೂರ್ಯ (AKSHARASURYA), 2(11), 101 to 108. https://aksharasurya.com/index.php/latest/article/view/269

References

ಬಸವರಾಜ ಸಬರದ, ಪುರಂದರದಾಸರ ಆಯ್ದ ಕೀರ್ತನೆಗಳು (2002), ಬಂಜಾರ ಪ್ರಕಾಶನ, ಕಲಬುರ್ಗಿ.

ಪಾವಂಜೆ ಗುರುರಾವ್, ದಾಸರ ಪದಗಳು: ಪುರಂದರದಾಸರ ಕೀರ್ತನೆಗಳು ಭಾಗ-1,2,3,4,5 (1925), ಶ್ರೀಕೃಷ್ಣ ಮುದ್ರಣಾಲಯ, ಉಡುಪಿ.

ಸತ್ಯನಾರಾಯಣರಾವ್ ಹೊ. ರಾ., ಕನಕದಾಸರ ಜನಪ್ರಿಯ ಕೀರ್ತನೆಗಳು (2003), ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.

ಸುಬೋಧ ರಾಮರಾವ್, ಹರಿದಾಸ ಕೀರ್ತನ ತರಂಗಿಣಿ (1928), ಸುಬೋಧ ಪ್ರಕಟಣಾಲಯ, ಬೆಂಗಳೂರು.