ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಗಳಲ್ಲಿ ಸ್ತ್ರೀ ಸಂವೇದನೆ

Authors

  • VINODRAJ C. C.

Keywords:

ಗ್ರಾಮೀಣ, ಸಂಸ್ಕೃತಿ, ಮಹಿಳೆ, ಸ್ವಾತಂತ್ರ, ದೌರ್ಜನ್ಯ, ಕುಟುಂಬ, ಪ್ರಕೃತಿ, ಸಮಾಜ

Abstract

ಪೂರ್ಣಚಂದ್ರ ತೇಜಸ್ವಿಯವರು ಕನ್ನಡಕ್ಕೆ ಬಹು ಅಪರೂಪದ ಸಾಹಿತಿ. ಅವರ ಕೃತಿಗಳೆಲ್ಲವು ಪ್ರಯೋಗಾತ್ಮಕವಾಗಿಯೇ ಕಾಣಿಸಿಕೋಳ್ಳುತ್ತವೆ. ಮೇಲ್ನೋಟಕ್ಕೆ ಇವರ ಕತೆಗಳ ದಾಟಿ ಸರಳ ಎನಿಸಿದರೂ ಮನುಷ್ಯನ ಅಸ್ತಿತ್ವ ಹಾಗೂ ಸಕಲ ಜೀವರಾಶಿಗಳ ದುರಂತ ಬದುಕುಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ. ಮುಖ್ಯವಾಗಿ ಗ್ರಾಮೀಣ ಜನರ ಬದುಕಿನ ರೀತಿ-ನೀತಿ ಕಾಣಿಸುವಲ್ಲಿರುವ ಅನನ್ಯತೆ, ಕುತೂಹಲವೂ ಆದ ನಿರೂಪಣ ವಿಧಾನ, ಕಿರಿಯದರಲ್ಲೇ ಬದುಕಿನ ಮಹದರ್ಥಗಳನ್ನು ನಿರೂಪಿಸುವ ಕೌಶಲ್ಯ ಇವರ ಕತೆಗಳಲ್ಲಿ ಕಂಡುಬರುತ್ತದೆ. ತೇಜಸ್ವಿಯವರು ತಮ್ಮ ಸಮಕಾಲಿನ ಲೇಖಕರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಇವರ ಸಾಹಿತ್ಯ ಕಡಲೊಳಗಿರುವ ವೈವಿದ್ಯಮಯ ಜೀವರಾಶಿಯಷ್ಟೇ ಅಮೂಲ್ಯ ಮತ್ತು ಅನನ್ಯ. ಅದರಲ್ಲು ನಿಸರ್ಗ ಮೈಚಾಚಿರುವ ರೀತಿ ಓದಿಯೇ ಸುಖಿಸುವಂಥದ್ದು. ಇನ್ನು ಮಹಿಳಾ ಪಾತ್ರಗಳ ವಿಚಾರಕ್ಕೆ ಬಂದರಂತೂ ಇವರ ತಾತ್ವಿಕತೆ ಮತ್ತು ವರ್ತಮಾನಕ್ಕೆ ಸ್ಪಂದಿಸುವ ಗುಣ ಈ ಮುಖೇನ ಕಟ್ಟಿಕೊಳ್ಳುವಂತದ್ದು. ಹುಲಿಯೂರಿನ ಸರಹದ್ದು, ಅಬಚೂರಿನ ಫೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು ಕಥಾ ಸಂಕಲನಗಳು ಮುಖ್ಯವಾಗಿ ಗ್ರಾಮೀಣ ಬದುಕಿನ ಜೀವನ ಶೈಲಿಯನ್ನು ಅನಾವರಣಗೊಳಿಸುತ್ತವೆ. ಕಿರಗೂರಿನ ಗಯ್ಯಾಳಿಗಳು ಕಥಾಸಂಕಲನವನ್ನು ಆತ್ಮಗೌರವಕ್ಕಾಗಿ ಅವಿರತ ಹೋರಾಡುತ್ತಿರುವ ಮಹಿಳೆಯರಿಗೆ ಅರ್ಪಿಸಿದ್ದಾರೆ. ಈ ಕಥೆಗಳೆಲ್ಲವು ನಿಸರ್ಗ ಮತ್ತು ಗ್ರಾಮೀಣ ಹಿನ್ನೆಲೆಯಲ್ಲಿ ಅರಳಿದವುಗಳಾದ್ದರಿಂದ ಗ್ರಾಮೀಣ ಭಾಗದ ಅಧಿಕಾರ ಕೇಂದ್ರವಾದ ಗೌಡಿಕೆಯ ಮತ್ತು ಜಾತಿ-ವೃತ್ತಿ ಆಧಾರಿತ ವ್ಯವಸ್ಥೆಗಳೇ ಇವರ ಕತೆಗಳ ಜೀವಾಳವಾಗಿದೆ. ಇಲ್ಲಿನ ಕತೆಗಳಲ್ಲಿ ಕಾಣುವ ಮಹಿಳಾ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿವೆ. ಸ್ತ್ರೀವಾದವನ್ನು ಹೊರಗಿನಿಂದ ತಂದು ತುರುಕುವ ಕೆಲಸವಾಗಿಲ್ಲ. ತೇಜಸ್ವಿಯವರು ನಾಡು ಬಿಟ್ಟು ಕಾಡಿನತ್ತ ಮುಖ ಮಾಟಿದ್ದರಿಂದ ತಾವು ಕಂಡುಂಡ ಗ್ರಾಮೀಣ ಭಾರತವನ್ನು ಅದರ ಶಕ್ತಿ – ದೌರ್ಬಲ್ಯಗಳೊಟ್ಟಿಗೆ ಚಿತ್ರಿಸುವ ಕೆಲಸ ಮಾಡಿದ್ದರೆ. ಪುರುಷ ಪಾತ್ರಗಳ ನೆರಳಾಗಿ ಬರುವ ಇವರು ಪರೋಕ್ಷವಾಗಿ ಪುರುಷರಿಂದ ಶೋಷಣೆಗೆ ಒಳಗಾದ ಸ್ರೀಪಾತ್ರಗಳೇ ಹೆಚ್ಚು. ಇವೆಲ್ಲವು ಕೂಡ ಸಂಸ್ಕೃತಿ ಮತ್ತು ಜೀವನ ವಿಧಾನದ ಹಂತಗಳಲ್ಲೇ ನಿರ್ಣಯಿತ ವಾದವುಗಳಾಗಿವೆ. ವಾಸ್ತವವಾಗಿ ಮಹಿಳಾ ಜಗತ್ತು ಎಂದಿಗೂ ಪುರುಷರ ಪಾಲಿಗೆ ವಿಸ್ಮಯ ಮತ್ತು ನಿಗೂಢ-ಪ್ರಕೃತಿಯಂತೆ! ಹಾಗಾಗಿ ತೇಜಸ್ವಿಯವರ ಕತೆಗಳಲ್ಲಿ ಕಾಣಸಿಗುವ ಮಹಿಳಾ ಸ್ವರಗಳು ತನ್ನ ಸಹಜ ಸತ್ಯಗಳಿಂದ ಕಂಗೊಳಿಸುತ್ತದೆ; ವರ್ತಮಾನವನ್ನು ಫ್ರತಿಪಲಿಸುತ್ತದೆ.

Downloads

Published

05.12.2023

How to Cite

VINODRAJ C. C. (2023). ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಗಳಲ್ಲಿ ಸ್ತ್ರೀ ಸಂವೇದನೆ. AKSHARASURYA, 2(13), 75–82. Retrieved from https://aksharasurya.com/index.php/latest/article/view/279

Issue

Section

ಸಂಶೋಧನಾ ಲೇಖನಗಳು. | RESEARCH ARTICLE.