ಲಲಿತಾ ಸಿದ್ದಬಸವಯ್ಯನವರ ಇನ್ನೊಂದು ಸಭಾಪರ್ವ - ತಾತ್ವಿಕ ವಿಶ್ಲೇಷಣೆ

Main Article Content

ದಿವ್ಯಶ್ರೀ ಬಿ. ಎನ್.

Abstract

ಮಹಾಭಾರತದಲ್ಲಿ ಪ್ರತಿ ನಾಯಕತ್ವಕ್ಕೆ ಅವಕಾಶವೇ ಇಲ್ಲದಂತಹ ಒಂದು ಪಾತ್ರವೂ ಇದೆ. ಅದು “ದೌಪದಿಯ" ಪಾತ್ರ. "ಇನ್ನೊಂದು ಸಭಾಪರ್ವ" ನಾಟಕದಲ್ಲಿ ದೌಪದಿಯ ವ್ಯಕ್ತಿತ್ವವನ್ನು 'ಬೆಳಗಿಸುವ' ಶುದ್ದೀಕರಿಸುವ ರೂಪದಲ್ಲಿ ಕಂಡುಕೊಳ್ಳಲಾಗಿದೆ. ಬ್ರೌಪದಿಯ ಸೀರೆಯನ್ನು ತುಂಬಿದ ಸಭೆಯಲ್ಲಿ ಸೆಳೆದಾಗ ಹತ್ತಿಕೊಂಡ ಜ್ವಾಲೆ ವ್ಯಾಪಿಸಿ ಕೊಳ್ಳಬೇಕಾಗಿತ್ತಲ್ಲವೇ ಅದು ಬೆಳಗಿಸುವ ರೂಪವನ್ನು ಪಡೆದುಕೊಂಡದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ “ತಾಯ್ತನ”. ರಾಜ ಭಾಷೆಯಲ್ಲಿ ಮಹಾಭಾರತವನ್ನು ಸ್ವೀಕರಿಸುವಾಗ ಇದು ಒಂದು ಊನತೆ ಎನ್ನುವುದು ಹೊಳೆಯುವುದೇ ಇಲ್ಲ, ಆದರೆ ಮಾನವಭಾಷೆ ಬಳಕೆಯಾದಾಗ ಇದೆಲ್ಲ ಮುಖ್ಯವಾಗಿ ಬಿಡುತ್ತದೆ. ಅದರೊಂದಿಗೆ ಅವರ ತಂದೆಯಂದಿರ ವಿಭಿನ್ನ ಹಿತಾಸಕ್ತಿಗಳು ಹೊಳೆಯುತ್ತದೆ, ಈ ಎಲ್ಲದರ ಆಚೆ ನಾಟಕವು ಒಂದು ಸತ್ಯವನ್ನು ಹೇಳಲು ತೊಡಗುತ್ತದೆ, ಅದೇನೆಂದರೆ "ಒಳ್ಳೆಯವರಾಗಿರುವುದೆಂದರೆ ನಮ್ಮ ಮೇಲೆ ನಡೆಯುವ ಶೋಷಣೆಯನ್ನು ಅನುಭವಿಸಿಕೊಂಡೆ ಬಾಳುವುದಲ್ಲ" ಎಂಬ ಮಾತನ್ನು ಮಾರ್ಮಿಕವಾಗಿ ಧ್ವನಿಸುತ್ತದೆ.

Article Details

Section

Book Review

Author Biography

ದಿವ್ಯಶ್ರೀ ಬಿ. ಎನ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸವಣೂರ, ಜಿ: ಹಾವೇರಿ.

How to Cite

ದಿವ್ಯಶ್ರೀ ಬಿ. ಎನ್. (2023). ಲಲಿತಾ ಸಿದ್ದಬಸವಯ್ಯನವರ ಇನ್ನೊಂದು ಸಭಾಪರ್ವ - ತಾತ್ವಿಕ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 2(12), 106 to 120. https://aksharasurya.com/index.php/latest/article/view/282

References

ಲಲಿತಾ ಸಿದ್ಧಬಸವಯ್ಯ, ಇನ್ನೊಂದು ಸಭಾಪರ್ವ (2010), ಚಾಣಕ್ಯ ಪ್ರಕಾಶನ, ವಿಜಾಪುರ

ಶಿವಾರೆಡ್ಡಿ ಕೆ. ಸಿ. (ಸಂ), ಕುವೆಂಪು ಸಮಗ್ರ ಗದ್ಯ: ಸಂಪುಟ-01 (2017), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಭೈರಪ್ಪ ಎಸ್. ಎಲ್., ಪರ್ವ (1979), ಸಾಹಿತ್ಯ ಭಂಡಾರ, ಬೆಂಗಳೂರು

ರೇ ಪ್ರತಿಭಾ, ಯಾಜ್ಞಸೇನಿ (1987), ರಾಜಪಾಲ್ ಅಂಡ್ ಸನ್ಸ್, ನವದೆಹಲಿ

ಸಾವಂತ ಶಿವಾಜಿ, ಅಶೋಕ ನೀಲಗಾರ (ಅನುವಾದ), ಮೃತ್ಯುಂಜಯ (1991), ಅಮಿತ ಪ್ರಕಾಶನ, ಬೆಳಗಾಂ

ರಾಮಸ್ವಾಮಿ ಎಸ್. ಆರ್., ಮಹಾಭಾರತದ ಬೆಳವಣಿಗೆ (1972), ಕಾವ್ಯಾಲಯ, ಮೈಸೂರು