ನವ್ಯ ಕಾದಂಬರಿಗಳಲ್ಲಿ ಜಾತಿ ಸಮಸ್ಯೆ

Main Article Content

ಭೋಜೇಗೌಡ ಕೆ.
ಸುಮಾ ಆರ್.

Abstract

ನವ್ಯ ಕಾದಂಬರಿಗಳಲ್ಲಿ ಜಾತಿ ಸಮಸ್ಯೆ ಭಾರತದಲ್ಲಿನ ಜಾತಿ ಪದ್ಧತಿಯು ಸಾಮಾಜಿಕ ಶ್ರೇಣಿಕರಣವನ್ನು ವಿವರಿಸುತ್ತದೆ. ಅದಲ್ಲದೆ ಸಾಮಾಜಿಕ ನಿಬರ್ಂಧಗಳ ಅಡಿಯಲ್ಲಿ ಅನೇಕ ಪಂಗಡಗಳು ಆಳವಾಗಿ ಬೇರೂರಿರುವುದು ವಿಪರ್ಯಾಸವೇ ಸರಿ. ಜಾತಿಯಲ್ಲಿಯೇ ಅನ್ಯ ಗುಂಪುಗಳ ಅಸ್ತಿತ್ವ ಇದೆ ಇದನ್ನು ಗೋತ್ರಗಳು ವಂಶವಾಹಿನಿ ಅಥವಾ ಕುಟುಂಬದ ಕುಲ ಗೋತ್ರವನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಲಾಗುತ್ತದೆ. ಹಲವಾರು ಉಪಜಾತಿಗಳಲ್ಲಿ ಶಾಕಾದ್ವೀಪ ಕೂಡಾ ಒಂದು. ಹಿಂದುತ್ವದೊಂದಿಗೆ ಗುರುತಿಸಿಕೊಂಡಿರುವ ಇತರ ಮುಸ್ಲಿಂರ ಕೆಲವು ಗುಂಪುಗಳು ಮತ್ತು ಕ್ರಿಶ್ಚಿಯನ್ನರು ಇದೇ ತೆರನಾದ ಗುಂಪು ಪ್ರಭೇದ ಹೊಂದಿರುವುದು ಭಾರತದ ಉಪ ಪಂಗಡಗಳಲ್ಲಿ ಕಾಣುತ್ತೇವೆ. ನಗರಗಳಲ್ಲಿ ಜಾತಿ ನಿಬರ್ಂಧ ಅಷ್ಟಾಗಿ ಕಂಡು ಬರದಿದ್ದರೂ ಹಳ್ಳಿಗಳಲ್ಲಿ ಈ ಜಾತಿ ಇನ್ನೂ ಆಚರಣೆಯಲ್ಲಿ ಇರುವುದನ್ನು ಗುರುತಿಸಬಹುದಾಗಿದೆ. ಅದರಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ 'ಜಾತಿ' ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ರಚನೆಯಾದಂತಹ ಸಾಹಿತ್ಯ ಪಂಥಗಳು ಹಲವಾರು ಅದರಲ್ಲಿಯೂ ನವ್ಯ ಸಾಹಿತ್ಯದಲ್ಲಿ ಕಂಡು ಬರುವಂತಹ ಜಾತಿ ಸಮಸ್ಯೆಯನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biographies

ಭೋಜೇಗೌಡ ಕೆ.

ಸಂಶೋಧನಾ ವಿದ್ಯಾರ್ಥಿ, ಎಸ್.ಜೆ.ಬಿ.ಸಿ.ಎಂ.ಎಸ್. ಕನ್ನಡ ಸಂಶೋಧನಾ ಕೇಂದ್ರ, ಬಿ.ಜಿ.ಎಸ್ ಆರೋಗ್ಯ ಮತ್ತು ಶಿಕ್ಷಣ ನಗರ, ಕೆಂಗೇರಿ, ಬೆಂಗಳೂರು.

ಸುಮಾ ಆರ್.

ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್.ಜೆ.ಬಿ.ಸಿ.ಎಂ.ಎಸ್. ಕನ್ನಡ ಸಂಶೋಧನಾ ಕೇಂದ್ರ, ಬಿ.ಜಿ.ಎಸ್ ಆರೋಗ್ಯ ಮತ್ತು ಶಿಕ್ಷಣ ನಗರ, ಕೆಂಗೇರಿ, ಬೆಂಗಳೂರು.

How to Cite

ಭೋಜೇಗೌಡ ಕೆ., & ಸುಮಾ ಆರ್. (2023). ನವ್ಯ ಕಾದಂಬರಿಗಳಲ್ಲಿ ಜಾತಿ ಸಮಸ್ಯೆ. ಅಕ್ಷರಸೂರ್ಯ (AKSHARASURYA), 2(12), 50 to 57. https://aksharasurya.com/index.php/latest/article/view/275

References

ಶ್ರೀ ಕೃಷ್ಣ ಆಲನಹಳ್ಳಿ, ಭುಜಂಗಯ್ಯನ ದಶಾವತಾರ (ಮೊದಲ ಮುದ್ರಣ, 2001), ಅಂಕಿತ ಪ್ರಕಾಶನ. ಕುವೆಂಪು ನಗರ, ಮೈಸೂರು.

ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಸ್ವರೂಪ (ತೃತೀಯ ಮುದ್ರಣ, 2009), ಅಂಕಿತ ಪ್ರಕಾಶನ, ಕುವೆಂಪುನಗರ, ಮೈಸೂರು.

ಯಶವಂತ ಚಿತ್ತಾಲ, ಶಿಕಾರಿ (ಮೊದಲ ಮುದ್ರಣ, 1992) ನವ ಕರ್ನಾಟಕ ಪಬ್ಲಿಕೇಷನ್, ಗಾಂಧಿನಗರ, ಬೆಂಗಳೂರು.

ವ್ಯಾಸರಾಯ ಬಲ್ಲಾಳ, ವಾತ್ಸಲ್ಯ ಪಥ (ಮೊದಲ ಮುದ್ರಣ, 1996), ಕ್ಲವರ ವ್ಯಾಕ್ಸ್ ಪಬ್ಲಿಕೇಷನ್, ಜೆ.ಪಿ. ನಗರ, ಬೆಂಗಳೂರು.

ಶಾಂತಿನಾಥ ದೇಸಾಯಿ, ಬೀಜ (ನಾಲ್ಕನೇ ಮುದ್ರಣ, 2003), ಅಭಿಮಾನಿ ಪಬ್ಲಿಕೇಶನ್ ಲಿಮಿಟೆಡ್, ಬಾಲಾಜಿನಗರ, ಬೆಂಗಳೂರು.

ಯು. ಆರ್. ಅನಂತಮೂರ್ತಿ, ಸಂಸ್ಕಾರ (ದ್ವಿತೀಯ ಮುದ್ರಣ, 1990), ಸ್ವಪ್ನ ಬುಕ್ ಹೌಸ್, ಅರಮನೆ ರಸ್ತೆ, ಮೈಸೂರು.

Most read articles by the same author(s)