Published: 2024-01-05

Table of Contents

Table of Contents

I to VI

ಸಂಬಳಿಗೋಲು

ಎ. ಆರ್. ಕೃಷ್ಣಶಾಸ್ತ್ರಿ

01 to 19

"ಹರಿಶ್ಚಂದ್ರ ಕಾವ್ಯ ಸಂಗ್ರಹ"ದಲ್ಲಿ ಬರುವ 'ಸಂಬಳಿಗೋಲು' ಎಂಬ ಪದದ ಅರ್ಥ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಎ.ಆರ್. ಕೃಷ್ಣಶಾಸ್ತ್ರಿ ಅವರು ನಿಖರವಾಗಿ ವಿಶ್ಲೇಷಿಸಿದ್ದಾರೆ. ಸಂಪಾದಕರು ಊಹಿಸಿದ್ದ 'ಬಿದಿರುಕೋಲು' ಎಂಬ ಅರ್ಥವನ್ನು ನಿಕಷಕ್ಕೊಡ್ಡಿ, ಪದದ ದ್ರಾವಿಡ ಹಾಗೂ ಮಹಾರಾಷ್ಟ್ರೀಯ ಮೂಲಗಳನ್ನು ಶೋಧಿಸಿದ್ದಾರೆ. ಹೊಲೆಯರು ಇತರರಿಗೆ ಎಚ್ಚರಿಕೆ ಕೊಡಲು ಬಳಸುತ್ತಿದ್ದ 'ತುದಿ ಸೀಳಿದ ಬಿದಿರುಕೋಲು' ಎಂಬ ಅರ್ಥವೇ ಈ ಪದಕ್ಕೆ ಹೆಚ್ಚು ಸೂಕ್ತವೆಂಬುದನ್ನು ಅವರು ದೃಢಪಡಿಸಿದ್ದಾರೆ. ಕನ್ನಡದ ಇತರ ಪ್ರಾಚೀನ ಕಾವ್ಯಗಳಲ್ಲಿ ಬಳಕೆಯಾಗಿರುವ 'ಸಂಬಳಿ', 'ಗಗ್ಗರಿಗೋಲು' ಮುಂತಾದ ಪದಗಳನ್ನು ತುಲನಾತ್ಮಕವಾಗಿ ಚರ್ಚಿಸಿ, ಪದವೊಂದರ ಬಹುಮುಖಿ ಅರ್ಥಸಾಧ್ಯತೆಗಳನ್ನು ಲೇಖನವು ತೆರೆದಿಡುತ್ತದೆ.

 
Read More »

ತುಮಕೂರು ಪರಿಸರದ ಶೂನ್ಯ ಸಂಪಾದನೆಗಳು: ಒಂದು ಅವಲೋಕನ

ಸಿ. ನಾಗಭೂಷಣ

20 to 39

ಹನ್ನೆರಡನೆಯ ಶತಮಾನದ ವಚನಗಳನ್ನು ಸಂವಾದ ರೂಪದಲ್ಲಿ ಸಂಕಲಿಸಿದ 'ಶೂನ್ಯಸಂಪಾದನೆ'ಗಳ ರಚನೆ ಮತ್ತು ವಿಕಾಸದಲ್ಲಿ ತುಮಕೂರು ಜಿಲ್ಲೆಯ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಶಿವಗಣಪ್ರಸಾದಿ ಮಹಾದೇವಯ್ಯನಿಂದ ಆರಂಭವಾದ ಈ ವಿಶಿಷ್ಟ ಪರಂಪರೆಯನ್ನು ತುಮಕೂರು ಪರಿಸರದ ಹಲಗೆಯಾರ್ಯ, ಗುಮ್ಮಳಾಪುರದ ಸಿದ್ಧಲಿಂಗಯತಿ ಮತ್ತು ಗೂಳೂರು ಸಿದ್ಧವೀರಣ್ಣೊಡೆಯರು ಮುಂದುವರೆಸಿದರು. ಮೂಲ ಕೃತಿಗೆ ನೂತನ ಪ್ರಸಂಗಗಳು ಹಾಗೂ ವಚನಗಳನ್ನು ಸೇರ್ಪಡೆಗೊಳಿಸಿ, ಅಂದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಗತ್ಯಗಳಿಗೆ ತಕ್ಕಂತೆ ಪರಿಷ್ಕರಿಸಿದ ಈ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯಾಗಿವೆ.

Read More »

ಲಂಕೇಶ್ ಅವರ ಸಣ್ಣಕತೆ ಮತ್ತು ಲೋಹಿಯಾ ಅವರ ಸಮಾನತೆಯ ಚಿಂತನೆ

ಎನ್. ಎಸ್. ಸತೀಶ್

40 to 52

ಭಾರತದ ಸನ್ನಿವೇಶಕ್ಕೆ ಅನುಗುಣವಾದ ಸಮಾಜವಾದದ ಪ್ರತಿಪಾದನೆ ಮಾಡಿದ ವಿಶಿಷ್ಟ ಚಿಂತಕರಲ್ಲಿ ಡಾ. ರಾಮಮನೋಹರ ಲೋಹಿಯಾ ಅವರು ಪ್ರಮುಖರು. ಸ್ವಾತಂತ್ರ್ಯಪೂರ್ವದಲ್ಲಿಯೇ ಅಂದಿನ ಮುಂಚೂಣಿ ನಾಯಕರುಗಳ ಜೊತೆಗೆ ಮುಂದೆ ಭಾರತ ಎದುರಿಸಬೇಕಾದ ಸಮಸ್ಯೆಗಳ ಬಗೆಗೆ ಲೋಹಿಯಾ ಚರ್ಚೆ ನಡೆಸುತ್ತಿದ್ದರು. ಭಾರತೀಯ ಸಮಾಜವಾದಿ ಚಳುವಳಿಯ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದರು. ವಸಾಹತುಶಾಹಿಯ ಪ್ರಭಾವದಿಂದ ಸ್ವತಂತ್ರ ಭಾರತದಲ್ಲಿಯೂ ಸಮಾಜಿಕ ಅಸಮಾನತೆ ಹೆಚ್ಚಾಗಿದ್ದನ್ನು ಮನಗಂಡ ಲೋಹಿಯಾ ಅವರು ಸಮಾನತೆಯ ತತ್ವವನ್ನು ತಮ್ಮ ಚಿಂತನೆಯ ತಳಹದಿಯಾಗಿಸಿದ್ದಾರೆ. ಮಾರ್ಕ್ಸ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದವರ ಚಿಂತನೆಗಳು ಕನ್ನಡ ಸಾಹಿತಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದರೊಂದಿಗೆ ಅವರ ಸಾಹಿತ್ಯ ಸೃಷ್ಟಿಯಲ್ಲಿ ಬಿಂಬಿತವಾಗಿರುವುದು ಸ್ಪಷ್ಟವಾಗಿ ಕಾಣಸಿಗುತ್ತದೆ. ಲೋಹಿಯಾ ಅವರು ಕರ್ನಾಟಕದ ಕಾಗೋಡಿಗೆ ಬಂದು ಕಾಗೋಡು ಸತ್ಯಾಗ್ರಹದಲ್ಲಿ ಭಾಗಿಯಾಗಿ ಜೈಲುವಾಸವನ್ನು ಅನುಭವಿಸಿದ ಮೇಲೆ ಕರ್ನಾಟಕದಲ್ಲಿ ಅವರ ಚಿಂತನೆಯ ಪ್ರಭಾವ ಹೆಚ್ಚಾಯಿತು. ಸಮಾನತೆಯು ಎಲ್ಲಾ ರಂಗಗಳಲ್ಲೂ ಅಸ್ತಿತ್ವಕ್ಕೆ ಬರಬೇಕೆನ್ನುವ ಲೋಹಿಯಾ ಅವರು ಸಮಾನತೆಯ ಬಗ್ಗೆ ತಮ್ಮ ಚಿಂತನೆಯನ್ನು ಪ್ರತಿಪಾದಿಸುತ್ತಾರೆ. ಲೋಹಿಯಾ ಅವರ ಚಿಂತನೆಗಳ ಪ್ರಭಾವಕ್ಕೆ ಒಳಗಾದ ಕನ್ನಡ ಸಾಹಿತಿಗಳಲ್ಲಿ ಲಂಕೇಶರು ಒಬ್ಬರು. ಲೋಹಿಯಾ ಚಿಂತನೆಗಳನ್ನು ತಮ್ಮ ಕತೆಗಳ ಮೂಲಕ ಸಹೃದಯರಲ್ಲಿ ಚಿಂತನೆಗೆ ಒಳಗುಮಾಡುವ, ಅವರಲ್ಲಿ ಜಾಗೃತಿ ಉಂಟಾಗಿಸುವ ಹಾಗೂ ಜವಾಬ್ದಾರಿಯನ್ನು ಮೂಡಿಸುವುದರೊಂದಿಗೆ ಸಮಾಜದ ಆರೋಗ್ಯವನ್ನು ಸದೃಢಗೊಳಿಸುವ ಪ್ರಾಮಾಣಿಕ ಪ್ರಯತ್ನ ಲಂಕೇಶರು ಮಾಡಿರುವುದು ಕಂಡುಬರುತ್ತದೆ. ಲಂಕೇಶರು ಲೋಹಿಯಾ ಅವರ ಸಮಾನತೆಯ ಪರಿಕಲ್ಪನೆಯನ್ನು ತಮ್ಮ ಕೆಲವು ಸಣ್ಣಕತೆಗಳಲ್ಲಿ ವ್ಯಕ್ತ ಪಡಿಸಿರುವ ಅಂಶಗಳನ್ನು ಅನಾವರಣಗೊಳಿಸಿರುವ ಉದ್ದೇಶ ಈ ಲೇಖನದ್ದಾಗಿದೆ.

Read More »

ಶಾಸನಗಳ ಹಿನ್ನಲೆಯಲ್ಲಿ 'ಆನೇಕಲ್ ತಾಲ್ಲೂಕು' ಒಂದು ಅವಲೋಕನ

ಮನೋಹರ್ ಎಂ., ಸುಮಾ ಆರ್.

53 to 58

ಕ್ರಿ.ಶ. 4ನೇ ಶತಮಾನದ ಐತಿಹಾಸಿಕ ದಾಖಲೆ ಹೊಂದಿರುವ ಆನೇಕಲ್ ತಾಲ್ಲೂಕಿನಲ್ಲಿ ಪ್ರಮುಖ ಶಾಸನಗಳು ಲಭ್ಯವಾಗಿವೆ. ಪ್ರಾಚೀನ ಆನೆಮಲೆ ಪ್ರದೇಶದ ಹುಲಿಕಲ್ಲು ಎಂಬ ಸ್ಥಳದಲ್ಲೇ ಆನೇಕಲ್ಲನ್ನು ಸ್ಥಾಪಿಸಲಾಯಿತೆಂಬ ವಿವರ ಆನೇಕಲ್ ಪಾಳೆಯಗಾರರ ಕೈಫಿಯತ್ತಿನಲ್ಲಿ ಗುರುತಿಸಲಾಗಿದೆ. ಕ್ರಿ.ಶ. 4ನೇ ಶತಮಾನದಿಂದ ಗಂಗರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಅರಸರು, ಸುಗಟೂರು ಪಾಳೆಗಾರರು ತಾಲ್ಲೂಕಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಲಭ್ಯವಾಗಿರುವ ಪ್ರತಿಯೊಂದು ಶಾಸನಗಳು ಆನೇಕಲ್ ತಾಲ್ಲೂಕಿನ ಸಮಗ್ರ ದಾಖಲೆಗಳನ್ನು ಒದಗಿಸುವಲ್ಲಿ ಮಹತ್ವದ ಆಧಾರವನ್ನು ಒದಗಿಸಿವೆ ಎಂಬುದರ ಬಗ್ಗೆ ತಿಳಿಸುವ ಪ್ರಯತ್ನವೇ ಈ ಲೇಖನ.

Read More »

ಸಿ. ಎನ್. ಮುಕ್ತಾರವರ ಕಾದಂಬರಿಗಳಲ್ಲಿ ವಿಧವಾವಿವಾಹ: ಒಂದು ವಿಹಂಗಮ ನೋಟ

ಪಲ್ಲವಿ ಎಸ್.

59 to 73

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿದ್ದ ಬಹುದೊಡ್ಡ ಸಾಮಜಿಕ ಸಮಸ್ಯೆಗಳಲ್ಲಿ ವಿಧವಾ ಸಮಸ್ಯೆಯೂ ಒಂದು. ಬಾಲ್ಯವಿವಾಹದಿಂದಾಗಿ ಬಹುಬೇಗನೆ ವಿವಾಹಕ್ಕೆ ಒಳಗಾಗುತ್ತಿದ್ದ ಹೆಣ್ಣುಮಕ್ಕಳು ಕಾರಣಾಂತರಗಳಿಂದ ಪತಿ ಮರಣ ಹೊಂದಿದಾಗ ವೈಧವ್ಯದ ಪಟ್ಟ ಹೊರುತ್ತಿದ್ದರು. ಬಾಲ್ಯದಲ್ಲಿಯೇ ವೈಧವ್ಯದ ಪಟ್ಟ ಮುಟ್ಟುತ್ತಿದ್ದ ಪುಟ್ಟ ವಿಧವೆಯರ ಗೋಳಂತೂ ಹೇಳತೀರದು. ವಿಧವೆಯರು ಅನುಸರಿಸಬೇಕಾದ ಜೀವನ-ಲಕ್ಷಣಗಳ ಕುರಿತಾಗಿ ಸಮಾಜ ಅಲಿಖಿತ ಶಾಸನವನ್ನೇ ಬರೆದಿತ್ತು. ವಿಧವೆಯರು ತನ್ನ ವಯೋಸಹಜವಾದ ಆಸೆ-ಆಕಾಂಕ್ಷೆಗಳನ್ನು ಅದುಮಿಟ್ಟು ನರಕ ಸದೃಶ ಬಾಳು ಬಾಳಬೇಕಿತ್ತು. ಬಳೆ ತೊಡದೆ, ಹೂಮುಡಿಯದೆ, ತಿಲಕವಿಡದೆ, ಬಿಳಿ ಅಥವಾ ಕೆಂಪು ಬಣ್ಣದ ಸೀರೆಯುಟ್ಟು ಕೇಶಮುಂಡನ ಮಾಡಿಸಿ ಅಪಶಕುನದ ಸಂಕೇತವೆಂಬಂತೆ ಬಿಂಬಿತವಾಗಿ ಮನೆಯವರಿಗೆ ಹೊರೆಯಾಗಿ ಬಾಳಬೇಕಿದ್ದ ವಿಧವೆಯರ ಸ್ಥಿತಿ ಹೀನಾಯವಾಗಿತ್ತು.

Read More »

ಬೆಸಗರಹಳ್ಳಿ ರಾಮಣ್ಣರವರ ಪ್ರೇಮ ಕಥೆಗಳು: ಮರು ಚಿಂತನೆ

ಶಿವರಾಜು ಎನ್‌.

74 to 81

ಕಥೆಯನ್ನು ಬರೆಯುವ ಕಥೆಗಾರನಿಗೆ ಕಥಾ ವಸ್ತುವಿನ ಆಯ್ಕೆಯಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಸತ್ಯ ಘಟನೆಗಳನ್ನು ಅನುಲಕ್ಷಿಸಿ ಕಥೆಗಳನ್ನು ಬರೆಯುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಕಾಲ್ಪನಿಕ ಕಥೆಗಳು ಸತ್ಯ ಘಟನೆಗಳಿಗೆ ಹೋಲಿಕೆಯಾಗುತ್ತವೆ. ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರೇಮ ಸಂಬಂಧಿ ಕಥೆಗಳು ಪ್ರಕಟವಾಗಿದೆ. ಪ್ರೇಮ ಸಂಬಂಧೀ ಕಥೆಗಳನ್ನು ಬರೆದವರ ಸಾಲಿನಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣನವರು ಸಹ ಪ್ರಮುಖರು. ಅವರ ಪ್ರೇಮ ಕಥೆಗಳ ಸ್ವರೂಪವನ್ನು ಅಧ್ಯಯನ ಮಾಡುವುದು ಪ್ರಸ್ತುತ ಲೇಖನ ರಚನೆಯ ಹಿಂದಿನ ಉದ್ದೇಶ.

 
Read More »

ತೇಜಸ್ವಿ ಕಥನ ಸಾಹಿತ್ಯದಲ್ಲಿ ಪ್ರಕೃತಿ ಮತ್ತು ಮನುಷ್ಯ ಲೋಕ

ವನಜಾಕ್ಷಿ ಎಂ.

82 to 89

ಪ್ರಕೃತಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಕಾಡು, ಬೆಟ್ಟ, ಗುಡ್ಡ, ನದಿ, ಹಳ್ಳ, ಹಚ್ಚ ಹಸುರಿನ ಬೆಟ್ಟಗಳ ಸಾಲು, ಹರಿಯುವ ನೀರು ಹಾಗೂ ಅಲ್ಲಿನ ಜೀವಸಂಕುಲವೆಂದು ಹೇಳಬಹುದು. ಇಂತಹ ಸುಂದರವಾದ ಪ್ರಕೃತಿಯು ಹಲವಾರು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ. ಕವಿಯ ಪ್ರತಿಭೆ ಹಾಗೂ ಭಾವನೆಗಳು ಅಕ್ಷರಗಳಾಗಿ ಸಾಹಿತ್ಯವನ್ನು ಸೆಳೆಯುವಂತೆ ಮಾಡಿದೆ. ಪ್ರಕೃತಿಯನ್ನು ವಿಭಿನ್ನವಾದ ದೃಷ್ಟಿಕೋನಗಳಿಂದ ನೋಡಲು ಸೂಕ್ಷ್ಮ ಮನಸ್ಸಿನ ಕವಿಯಿಂದ ಮಾತ್ರ ಸಾಧ್ಯವಾಗುತ್ತದೆ. ಮಲೆನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವಂತೆ, ಹಲವು ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರ ಜನ್ಮಭೂಮಿಯೂ ಹೌದು.

Read More »

ಕಾವ್ಯ ಕುರಿತ ಕವಿಗಳ ಜಿಜ್ಞಾಸೆಗಳು

ಜೆ. ರಾಜ ಗುಂಡಾಪುರ

90 to 99

ಲೋಕಾನುಭವ ಮತ್ತು ಕಾವ್ಯಾನುಭವ ಅಥವಾ ಕಲಾನುಭವ ಭಿನ್ನವಾದವು. ಕಲಾ ಮಾಧ್ಯಮಗಳು ಬೇರೆ ಬೇರೆಯಾದರೂ ಅವುಗಳಿಂದ ಉಂಟಾಗುವ ಪರಿಣಾಮ ಮಾತ್ರ ಒಂದೇ ಆಗಿರುತ್ತದೆ. ಅದು ಆನಂದಾನುಭವ. ಚಿತ್ರ, ಸಂಗೀತ, ನೃತ್ಯ, ಸಾಹಿತ್ಯ ಈ ಎಲ್ಲಾ ಕಲಾನುಭವಗಳು ನೀಡುವ ಪರಿಣಾಮವೇ ಆನಂದಾನುಭವ. ಈ ಕಲಾನುಭವಕ್ಕೆ ಕಲಾಭಿವ್ಯಕ್ತಿಗೆ ಮೂಲ ದ್ರವ್ಯವೇ ಲೋಕಾನುಭವ. ಕಲಾ ಮಾಧ್ಯಮಗಳಲ್ಲಿ ಶಾಬ್ಲಿಕ ಮಾಧ್ಯಮವಾದ ಕಾವ್ಯ ಪ್ರಕಾರಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ. ಹಾಗೆಯೇ ಕಾವ್ಯವನ್ನು ಕುರಿತ ಚರ್ಚೆ, ಜಿಜ್ಞಾಸೆಗೂ ಅಷ್ಟೇ ಪ್ರಾಚೀನತೆಯಿರುವುದನ್ನು ನಾವು ಕಾಣಬಹುದು.

 
Read More »

ಕನ್ನಡದ ಕೆಲವು ಅಪರೂಪದ ಕವಿತೆಗಳು

ಪ್ರವೀಣ್ ಕುಮಾರ್ ಎಸ್.

100 to 105

ಹೊಸಗನ್ನಡದ ಭಾವಗೀತೆಗಳಲ್ಲಿ ಅಷ್ಟೇನು ಪರಿಚಿತವಿರದ ಕೆಲವು ಕವಿತೆಗಳ ಮಹತ್ವವನ್ನು ಚರ್ಚಿಸುವ ಉದ್ದೇಶವಿದೆ. ಇಲ್ಲಿ ಕೆ. ಎಸ್. ನರಸಿಂಹಸ್ವಾಮಿ, ದ. ರಾ. ಬೇಂದ್ರೆ, ಕುವೆಂಪು, ಅಡಿಗರ ಕವಿತೆಗಳ ಕೆಲವು ಸಾಲಗಳನ್ನು ಉಲ್ಲೇಖ ನೀಡಲಾಗಿದೆ. ಪ್ರಕೃತಿಯ ಮಹತ್ವವನ್ನು ಸಾರುವ ಕವಿತೆಗಳನ್ನು ಓದುಗರಿಗೆ ಪರಿಚಯಿಸುವ ಮೂಲಕ ಭಾವಗೀತೆಗಳ ಹಿರಿಮೆಯನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬದಲಾದ ಸಾಮಾಜಿಕ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಮನುಷ್ಯನನ್ನಾಗಿಸುವಲ್ಲಿ ಕಲೆ, ಸಾಹಿತ್ಯ, ಸಂಗೀತ ಪ್ರಮುಖವಾಗುತ್ತವೆ. ಆದರೆ, ಅತ್ಯಂತ ಅಮುಲ್ಯವಾದ ಹಲವು ಕವಿತೆಗಳು ನಾನಾ ಕಾರಣಗಳಿಗಾಗಿ ಶಾಲಾ, ಕಾಲೇಜು, ವಿಶ್ವವಿದ್ಯಾನಿಯಲಗಳ ಪಠ್ಯಗಳಲ್ಲಿ ಸೇರದಿರುವುದು ದುರಂತ.

 
Read More »

IMPLEMENTATION OF NEP 2020 IN SCHOOL EDUCATION

Mamatha Kumari, Jayashree K.

106 to 114

The National Education Policy 2020 envisions an India centered education system that contributes directly to transforming our nation sustainably into an equitable and vibrant knowledge society by providing high quality education to all. The Union Cabinet in JULY 2020 approved the new Education Policy (NEP). This aims at universalization of education from preschool to secondary level. Education improves everyone's knowledge, skills and develops personality and attitude. To get success in life, it is very important to be educated.

 
Read More »

ಉರಿವ ಕೆಂಡದ ಮೇಲೆ ಉರುಳಿ ಆಡಿದ ಮನಸ್ಸು

ರವೀಂದ್ರ ಕತ್ತಿ

115 to 123

'ಬಸವರಾಜ ಡೋಣೂರ' ಇವರು ವೃತ್ತಿಯಿಂದ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಿಂದ ಕವಿ, ವಿಮರ್ಶಕ, ಸಂಶೋಧಕ, ಕಥೆಗಾರ, ನಾಟಕಕಾರಾಗಿ ಗುರುತಿಸಿಕೊಂಡವರು. ಇತ್ತೀಚೆಗೆ, ಅವರು ಕಾದಂಬರಿಯ ಕ್ಷೇತ್ರವನ್ನೂ ಪ್ರವೇಶಿಸಿ 'ಕ್ಯಾಂಪಸ್' ಮಾದರಿಯ ಕಾದಂಬರಿಯೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಇವರು ಈ ಕೃತಿಯ ಮೂಲಕ ತಮ್ಮ ಬದುಕಿನ ಅನೇಕ ವಾಸ್ತವ ಸಂಗತಿಗಳನ್ನು ಕಲೆಯಾಗಿಸುವಲ್ಲಿ, ಸಾಹಿತ್ಯ ಸೌಂದರ್ಯಕ್ಕೆ ಸಾಧನವಾಗಿಸುವಲ್ಲಿ ಅನೇಕ ವಿಧಾನಗಳನ್ನು ಬಳಸಿಕೊಂಡದ್ದಿದೆ. ಹಣ, ಅಧಿಕಾರ, ರಾಷ್ಟ್ರ, ಧರ್ಮಗಳ ಹಿನ್ನೆಲೆಯಲ್ಲಿ ಅನುಭವಿಸುವ ಕುತುಹಲ, ತಳಮಳ, ಮೋಹ, ಸ್ವಾರ್ಥ ಚಿಂತನೆ, ವ್ಯಕ್ತಿ ನಿಷ್ಠತೆ ಇತ್ಯಾದಿ ದೋಷಪೂರ್ಣ ಆಲೋಚನಾ ಕ್ರಮಗಳ ಧಾರುಣ ಸ್ಥಿತಿಗಳು ಕಟ್ಟಿಕೊಡುವ ಸೈದ್ಧಾಂತಿಕ ನಿಲುವುಗಳನ್ನು ಇಲ್ಲಿಯ ಪಕ್ವ ಮನಕ್ಕೊಂದು ಸೃಷ್ಟಿಸಿದ ಕಲ್ಪನೆಗಳಲ್ಲಿ ಅಡಕವಾಗಿವೆ. ಈ ರೀತಿಯ ಸೈದ್ದಾಂತಿಕ ನೆಲೆಯಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅದು ಯಾವುದೋ ಒಂದು ಸಿದ್ಧಾಂತ, ತಾತ್ವಿಕತೆಯನ್ನು ಅಂದಶ್ರದ್ದೆಯಿಂದ ಅನುಸರಿಸದೆ ಮನುಷ್ಯ ಕುಲಕ್ಕೆ ಹೆಚ್ಚು ಸೂಕ್ತವಾಗುವ ಹೊಸ ಆಲೋಚನೆಗಳ ಹುಡುಕಾಟದಲ್ಲಿ ಸಾಗಿರುವುದು ಕಂಡುಬರುತ್ತದೆ. ಈ ಹುಡುಕಾಟವು ಅಂದಶ್ರದ್ಧೆಯನ್ನು ಪ್ರಚೋಧಿಸುವ ವ್ಯಕ್ತಿಗಳು ಪ್ರತಿನಿಧಿಸುವ ಬಹುತ್ವದ ಪ್ರತಿನಿಧೀಕರಣವಲ್ಲ. ಬಹುತ್ವವು ಇಂತಹ ವ್ಯಕ್ತಿಗಳಿಂದ ಸೂಚಿಸಲ್ಪಡುವ ಜನಸಂಖ್ಯೆ, ಸಮುದಾಯ, ಸಂಸ್ಕೃತಿಗಳ ಸಮನ್ವಯಕ್ಕೆ ಮಾತ್ರ ಸೀಮಿತಗೊಳ್ಳುವುದಿಲ್ಲ. ಅದು ದೇಶದ ಏಕತೆಗೆ ದಕ್ಕೆ ತರುವ ಬಹುತ್ವದ ಕೆಲವು ಕೆಡುಕಿನ ವಿಚಾರಗಳನ್ನೂ ವಿರೋಧಿಸುತ್ತದೆ. ದೇಶದ ಐಕ್ಯತೆಗೆ ದಕ್ಕೆ ತರುವ ಮತ್ತು ಕೆಡುಕನ್ನು ವಿರೋಧಿಸುವ ಇತ್ತೀಚಿನ ಕೃತಿಗಳಲ್ಲಿ 'ಉರಿವ ಕೆಂಡದ ಮೇಲೆ' ಎಂಬ ಕಾದಂಬರಿಯೂ ಒಂದಾಗಿದೆ.

Read More »

ಕಗ್ಗರಸಧಾರೆ ಬಹುಶಿಸ್ತೀಯ ನೋಟಗಳು

ಶೈಲಜ ವಿ.

124 to 136

ಮಾನವನ ಉನ್ನತಿಗೆ ಏನೆಲ್ಲಾ ಬೇಕು ಎಲ್ಲವನ್ನೂ ಕಗ್ಗದಲ್ಲಿ ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ. ಮೌಲಿಕವಾದ ಈ ಕೃತಿಯಲ್ಲಿ ತತ್ವಶಾಸ್ತ್ರ, ಸ್ತ್ರೀ ವಾದಿ ಚಿಂತನೆ, ತಾರ್ಕಿಕತೆ, ದಾರ್ಶನಿಕತೆ, ವೈಜ್ಞಾನಿಕ ಚಿಂತನೆ, ದೈವೀಕ ನಂಬಿಕೆ, ಸಂಸ್ಕೃತಿ, ಆರೋಗ್ಯ ಶಾಸ್ತ್ರ, ಯೋಗ ಶಾಸ್ತ್ರ ಹೀಗೆ ನಾನ ಜ್ಞಾನ ಶಾಖೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಭುವಿಯಿಂದ ಬ್ರಹ್ಮಾಂಡದವರೆಗೆ, ಅಣುವಿನಿಂದ ಆಗಸದವರೆಗಿನ ವಿವಿಧ ಆಯಾಮಗಳನ್ನು ಸೆರೆಹಿಡಿದಿದೆ. ಪ್ರಬಂಧ, ಭಾಷಣ, ಚರ್ಚೆಯಲ್ಲಿಯೂ ಕಗ್ಗ ಸ್ಥಾನ ಪಡೆದು ಜನಪ್ರಿಯವಾಗಿದೆ. ಮುದ್ರಣ, ಮರು ಮುದ್ರಣ, ಅನುವಾದಗಳ ಚೌಕಟ್ಟಿನಲ್ಲಿ ನಿಲ್ಲದೆ ಗಮಕ ಸುಗಮ ಸಂಗೀತದಂತ ಸಾಧನಗಳ ಮೂಲಕ ಜನಪ್ರಿಯತೆಯನ್ನು ಮತ್ತಷ್ಟು ಸದೃಢಗೊಳಿಸಿದೆ. ಕಗ್ಗವನ್ನು 'ಕನ್ನಡದ ಭಗವದ್ಗೀತೆ' ಎಂದು ಕರೆಯುತ್ತೇವೆ. ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆಗೆ ಹೋಲಿಸಿದರೆ, ಗೀತೆಯಲ್ಲಿ ಸಮಸ್ಯೆಯ ಮೂಲ ತಿಳಿಯುವುದಾದರೆ ಕಗ್ಗದಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಲಾಗಿದೆ. ಕಗ್ಗದ ಪದ್ಯಗಳು ಶಾಸ್ತ್ರ ಅಧ್ಯಯನ ಮಾತ್ರವಲ್ಲದೆ ಗಾಢವಾದ ಜೀವನಾನುಭವದಿಂದ ದಕ್ಕಿರುವ ಸೋಪಜ್ಞ ಚಿಂತನೆಗಳೆನ್ನುವ ಅರಿವು ಮೂಡುತ್ತದೆ. ಬಹುತೇಕ ಎಲ್ಲ ಪದ್ಯಗಳು ಸಾಮಾನ್ಯ ಜನರಿಗೆ ಸುಲಭ ಗ್ರಾಹ್ಯವಾಗಿದ್ದು ಅಲ್ಲಿನ ಭಾಷೆಯು ಕಾವ್ಯಾಲಂಕಾರ ಸೌಂದರ್ಯದ ದೃಷ್ಟಿಯಿಂದಲೂ ತತ್ವ ವಿಚಾರಗಳಿಂದಲೂ ಅನನ್ಯವಾಗಿದೆ. ಕಂಗೊಳಿಸುವ ಅಸುರಿನ ಸೊಬಗಿಗೆ ಕಾರಣವೇನು? ಬೇರು? ಮಣ್ಣು? ಬೆಳಕು? ಯಾವುದು ಕಾರಣ? ಎನ್ನುವ ಡಿವಿಜಿರ ಮಾತನೇ ಪುನರುಚ್ಚರಿಸಬೇಕಾಗುತ್ತದೆ. ಕಗ್ಗದ ಜನಪ್ರಿಯತೆಗೆ ಅಲ್ಲಿನ ಪದ್ಯಗಳೇ ಕಾರಣವೆನ್ನಬಹುದು. ಇಲ್ಲಿನ ಪದ್ಯಗಳು ಸಾಮಾನ್ಯ ಜನರ ಮನ, ಮನೆಯ ಬೆಳಕಾಗಿ ಪ್ರಜ್ವಲಿಸುತ್ತಿವೆ. ಇದು ಪಂಡಿತ ಪಾಮರರನ್ನು ಉದ್ದೇಶಿಸಿದ್ದಲ್ಲ. ಸಾಮಾನ್ಯ ಜನರನ್ನು, ಜೀವನ ಪ್ರೀತಿಯನ್ನು ಉಣಬಡಿಸುವ ಸಾಹಿತ್ಯವಾಗಿ ಮನದ ಮಲಿನವನ್ನು ಸ್ವಚ್ಛಗೊಳಿಸಿ ಬದುಕಿನ ನಂಬಿಕೆಯನ್ನು ಹೆಚ್ಚಿಸುತ್ತದೆ.

Read More »

ಡಾ. ಹೆಬ್ಬಾಲೆ ಕೆ. ನಾಗೇಶ ಅವರ ಬಾಡಿಗೆದೇವರು ಕಥೆ: ದಲಿತ ವಿಮರ್ಶೆ

ಎನ್. ಎಸ್. ವೀರೇಶ ಉತ್ತಂಗಿ

137 to 146

ಡಾ. ಹೆಬ್ಬಾಲೆ ಕೆ. ನಾಗೇಶ ಅವರು ಕೊಡಗು ಮೂಲದವರು. ಈಗ ಹೊಸಪೇಟೆಯಲ್ಲಿ ನೆಲೆಸಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಸಮಕಾಲೀನ ದಲಿತ ಕಥೆಗಾರರಲ್ಲಿ ಒಬ್ಬರು. ಇವರ ಬಾಡಿಗೆದೇವರು ಕಥಾ ಸಂಕಲನದಲ್ಲಿ 5 ಕಥೆಗಳಿವೆ. ಬಾಡಿಗೆ ದೇವರು ಕಥೆಯು ಕೊಡಗಿನ ದಲಿತರ ಬದಕನ್ನು ಎಳೆ ಎಳೆಯಾಗಿ ಚಿತ್ರಿಸುತ್ತದೆ. ಸವರ್ಣೀಯರು ಮತ್ತು ದಲಿತರ ನಡುವಿನ ಸಂಘರ್ಷವು ಕಥಾವಸ್ತುವಾಗಿದೆ. ದಲಿತ ಯುವಕರು ಸರಕಾರದ ಸೌಲಭ್ಯ ಪಡೆದು ಶಿಕ್ಷಣ ಪಡೆಯದೆ ಕೂಲಿ ಆಳುಗಳಾಗಿ ದುಡಿಯುವುದು, ಕೆಲಸ ಸಿಗದಿದ್ದಾಗ ಕುಡಿಯುವುದು, ಇಸ್ಪೀಟ್ ಆಡುವುದು ಮುಂತಾದ ದುಶ್ಚಟಗಳಿಗೆ ಬಲಿಯಾಗವುದನ್ನು ಮನಕಲಕುವಂತೆ ಚಿತ್ರಿಸಿದ್ದಾರೆ. ಉಪ್ಪಾರ ಗೆಡ್ಡೆಶೆಟ್ಟಿಯು ಊರ ಜನರಿಗೆ ದೇವರ ಹೆಸರಿನಲ್ಲಿ ಮಾಡುವ ಮೋಸವನ್ನು ಬಯಲಿಗೆಳೆಯುವಷ್ಟು ದಲಿತರು ಬಲಿಷ್ಟರು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳಲು ಬಯಸುವ ಹಿರಿಯ ತಲೆಗಳು, ಅದನ್ನು ವಿರೋಧಿಸುವ ಯುವ ಮನಸ್ಸುಗಳ ಆತುರದ ನಿರ್ಧಾರ, ಅದರಿಂದ ಮೇಲ್ವರ್ಗದಿಂದ ಬಂದ ಬಹಿಷ್ಕಾರ, ದಲಿತರನ್ನು ಏಕಾಂಗಿಯಾಗಿಸಿದ ಪರಿಣಾಮ, ಪಕ್ಕದೂರಿಂದ ಮಾರೆವ್ವ ಎಂಬ ದೇವರನ್ನು ಬಾಡಿಗೆ ತಂದು ಹಬ್ಬ ಆಚರಿಸುವ ರೋಚಕತೆ ಹೃದಯಕಲಕುವಂತಿದೆ.

Read More »

ಪ್ರೊ. ಬಿ. ಗಂಗಾಧರಮೂರ್ತಿಯವರ ಅನುವಾದ ಕೃತಿಗಳ ಕಿರು ಪರಿಚಯ

ವಿಜಯಲಕ್ಷ್ಮಿ ಡಿ., ಸುಮಾ ಆರ್.

137 to 146

ಪ್ರೊ. ಬಿ. ಗಂಗಾಧರಮೂರ್ತಿರವರು ಕನ್ನಡ ಸಾಹಿತ್ಯಕ್ಕೆ ತಮ್ಮ ಅನುವಾದ ಸಾಹಿತ್ಯದ ಮೂಲಕ ಸಾಹಿತ್ಯಕವಾಗಿ ಹಾಗೂ ಸಾಂಸ್ಕೃತಿಕವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನುವಾದ ಕೃತಿಗಳ ಮುಖಾಂತರ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂದಾದರು. ಇವರು ಅನುವಾದಿಸಿರುವ ಕೃತಿಗಳ ಮೂಲ ಉದ್ದೇಶ ಸಾಮಾಜಿಕ ಬದಲಾವಣೆ. ಬೌದ್ಧಿಕವಾಗಿ ಜನರ ವಿಚಾರಗಳನ್ನು ಬದಲಿಸುವುದೇ ಆಗಿದೆ. ಸಾಮಾನ್ಯವಾಗಿ ಅನುವಾದ ಯಾವುದೇ ಭಾಷಾ ಸಾಹಿತ್ಯದ ಬೆಳವಣಿಗೆಗೆ ಅಗತ್ಯವಾದ ಅಂಶವಾಗಿದೆ. ಭಾಷೆಯಿಂದ ಭಾಷೆಗೆ ಅನುವಾದವಾಗುವಾಗ ಹಲವು ವ್ಯತ್ಯಾಸಗಳುಂಟಾಗುವುದು ಸಹಜವಾದುದು. ಕೆಲವು ಸಾರಿ ಅನುವಾದದ ಅಳವಡಿಕೆಯ ಕೆಲಸವೂ ನಡೆಯಬಹುದು. ಅನುವಾದವು ಕೃತಿಯೊಂದರ ಭಾಷಾಂತರವಾಗಿರುತ್ತದೆ. ಅಳವಡಿಸುವ ಬರಹಗಾರ ತನಗೆ ಅಗತ್ಯವೆನಿಸಿದ ಯಾವುದೇ ವಿಷಯಗಳನ್ನು ಸೇರಿಸುವ ಸಾದ್ಯತೆಗಳಿರುತ್ತದೆ. ಮೂಲ ಸಾಹಿತ್ಯ ಕೃತಿಗೆ ಸ್ವಲ್ಪವೂ ಚ್ಯುತಿಬಾರದ ಹಾಗೆ ಅಲ್ಲಿರುವ ಅಂಶಗಳನ್ನೆಲ್ಲಾ ಕನ್ನಡಕ್ಕೆ ಅನುವಾದಿಸಿ, ಕನ್ನಡ ನೆಲದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

 
Read More »

ಯುಗ ಪ್ರವರ್ತಕ ಕವಿ ಹರಿಹರ ಮತ್ತು ಮಹಾಕವಿ ಸೇಕ್ಕಿಲಾರ್

ಇಂದಿರಾ ಶರಣ ಜಮ್ಮಲದಿನ್ನಿ

153 to 155

ಮನುಷ್ಯನ ಸಂಕೀರ್ಣ ಜೀವನಕ್ಕೆ ಉನ್ನತವಾದ ಮೌಲ್ಯಗಳನ್ನು ದೊರಕಿಸಿಕೊಟ್ಟ ನಮ್ಮ ಅನೇಕ ಪ್ರಾಚೀನ ಕವಿಗಳ ಸಾಲಿನಲ್ಲಿ ನಿಲ್ಲುವ ಕವಿ; ಸಹಸ್ರ ವರ್ಷಗಳ ಕನ್ನಡ ಸಾಹಿತ್ಯ ಶ್ರೇಣಿಯಲ್ಲಿ ಪಂಪ, ಕುಮಾರವ್ಯಾಸನಂತೆ ಕಂಗೊಳಿಸುವ ಮಹೋನ್ನತ ಶಿಖರದಂತಿರುವ ಕವಿ ಹರಿಹರ, ಶರಣ ಜೀವನ ಮತ್ತು ವಚನ ಸಾಹಿತ್ಯ ಚಳವಳಿ ಒಂದು ಮಹಾಪೂರದಂತೆ ಬಂದು ಇಳಿದ ಮೇಲೆ ಅದರ ನೆನಪಿನಿಂದ ಪ್ರೇರಣೆ ಹೊಂದಿ ಸಾಹಿತ್ಯ ನಿರ್ಮಾಣ ಮಾಡಿದವರಲ್ಲಿ ಹರಿಹರನೂ ಒಬ್ಬ. ಹರಿಹರನು ಬಸವಾದಿ ಶರಣರ ಬಗ್ಗೆ ದಾಖಲಿಸದೇ ಹೋಗಿದ್ದರೆ ಕರ್ನಾಟಕದ ಬಹುಮುಖ್ಯ ಘಟ್ಟದ ವಿವರಗಳನ್ನು ಕಳೆದುಕೊಳ್ಳುತ್ತಿದ್ದೆವು. ಪುರಾತನ ಶರಣರ ಚರಿತ್ರೆಗಳನ್ನು ಕಾವ್ಯಗೊಳಿಸುವುದು ಎಂದರೆ ಅವರ ಮೌಲ್ಯಗಳನ್ನು ಕಾವ್ಯಗೊಳಿಸುವುದೇ ಆಗಿದೆ. ಇದೇ ರೀತಿ ಹರಿಹರನ ಸಮಕಾಲೀನರಾದ ತಮಿಳುನಾಡಿನ ಮಹಾಕವಿ ಸೇಕ್ಕಿಲಾ‌ರ್ ಅವರು ತಮಿಳಿನಲ್ಲಿ ಶೈವ ನಾಯನ್ ಮಾರರ (ಶರಣರ) ಜೀವನ ಕಥೆಯನ್ನು ವಿವರಿಸುವ 4253 ಪದ್ಯಗಳನ್ನು 'ಪೆರಿಯ ಪುರಾಣಂ' ಎಂಬ ಕೃತಿಯಲ್ಲಿ ರಚಿಸಿದ್ದಾರೆ. ಈ ಇಬ್ಬರು ಕವಿಗಳು ರಚಿಸಿರುವ ಶಿವಶರಣರ ಸಾಮಾನ್ಯ ಜೀವನದ ತಾತ್ವಿಕ ಚಿಂತನೆಗಳನ್ನು ತೌಲನಿಕವಾಗಿ ಅಭ್ಯಾಸ ಮಾಡುವುದು ನನ್ನ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ.

Read More »