ಪ್ರೊ. ಬಿ. ಗಂಗಾಧರಮೂರ್ತಿಯವರ ಅನುವಾದ ಕೃತಿಗಳ ಕಿರು ಪರಿಚಯ
Main Article Content
Abstract
ಪ್ರೊ. ಬಿ. ಗಂಗಾಧರಮೂರ್ತಿರವರು ಕನ್ನಡ ಸಾಹಿತ್ಯಕ್ಕೆ ತಮ್ಮ ಅನುವಾದ ಸಾಹಿತ್ಯದ ಮೂಲಕ ಸಾಹಿತ್ಯಕವಾಗಿ ಹಾಗೂ ಸಾಂಸ್ಕೃತಿಕವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನುವಾದ ಕೃತಿಗಳ ಮುಖಾಂತರ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂದಾದರು. ಇವರು ಅನುವಾದಿಸಿರುವ ಕೃತಿಗಳ ಮೂಲ ಉದ್ದೇಶ ಸಾಮಾಜಿಕ ಬದಲಾವಣೆ. ಬೌದ್ಧಿಕವಾಗಿ ಜನರ ವಿಚಾರಗಳನ್ನು ಬದಲಿಸುವುದೇ ಆಗಿದೆ. ಸಾಮಾನ್ಯವಾಗಿ ಅನುವಾದ ಯಾವುದೇ ಭಾಷಾ ಸಾಹಿತ್ಯದ ಬೆಳವಣಿಗೆಗೆ ಅಗತ್ಯವಾದ ಅಂಶವಾಗಿದೆ. ಭಾಷೆಯಿಂದ ಭಾಷೆಗೆ ಅನುವಾದವಾಗುವಾಗ ಹಲವು ವ್ಯತ್ಯಾಸಗಳುಂಟಾಗುವುದು ಸಹಜವಾದುದು. ಕೆಲವು ಸಾರಿ ಅನುವಾದದ ಅಳವಡಿಕೆಯ ಕೆಲಸವೂ ನಡೆಯಬಹುದು. ಅನುವಾದವು ಕೃತಿಯೊಂದರ ಭಾಷಾಂತರವಾಗಿರುತ್ತದೆ. ಅಳವಡಿಸುವ ಬರಹಗಾರ ತನಗೆ ಅಗತ್ಯವೆನಿಸಿದ ಯಾವುದೇ ವಿಷಯಗಳನ್ನು ಸೇರಿಸುವ ಸಾದ್ಯತೆಗಳಿರುತ್ತದೆ. ಮೂಲ ಸಾಹಿತ್ಯ ಕೃತಿಗೆ ಸ್ವಲ್ಪವೂ ಚ್ಯುತಿಬಾರದ ಹಾಗೆ ಅಲ್ಲಿರುವ ಅಂಶಗಳನ್ನೆಲ್ಲಾ ಕನ್ನಡಕ್ಕೆ ಅನುವಾದಿಸಿ, ಕನ್ನಡ ನೆಲದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಗಂಗಾಧರಮೂರ್ತಿ ಬಿ. (1977). ಭಾರತೀಭಾಷಾ ಸಾಹಿತ್ಯಗಳ ವರ್ಗಸೆಲೆ. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (1978). ಸಂಸ್ಕಾರ-ಸಮೀಕ್ಷೆ. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (1995). ಹಿಂದೂಧರ್ಮದ ತಾತ್ವಿಕತೆ. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2014). ಸೂಫಿಕಥಾಲೋಕ: ಒಂದು ನೂರು ಸೂಫಿ ಕಥೆಗಳ ಸಂಕಲನ. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2015). ಕತ್ತೆ ಪುರಾಣ. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2016). ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ ಮತ್ತು ಭಾರತದ ಬೌದ್ಧಿಕ ದಾರಿದ್ರ. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2016). ಅಂಬೇಡ್ಕರ್ ಮತ್ತು ಮುಸ್ಲಿಮರು. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2016). ಹಿಂದುತ್ವ ಮತ್ತುದಲಿತರು. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2016). ಕೋಮುವಾದ ಮತ್ತುದಲಿತ ಪ್ರತಿಸ್ಪಂದನೆ. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2016). ಭಗವದ್ಗೀತೆ ಒಳಗಿನ ಸತ್ಯ ಏನು?. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2019). ಲಕ್ಷ್ಮೀಪುರಾಣ. ಲಡಾಯಿ ಪ್ರಕಾಶನ. ಗದಗ.
ಗಂಗಾಧರಮೂರ್ತಿ ಬಿ. (2019). ಅಂಬೇಡ್ಕರ್ ಅನುಭವದ ಆರು ಕಥನಗಳು. ಲಡಾಯಿ ಪ್ರಕಾಶನ. ಗದಗ.
ಮೋಹನ ಕುಂಟಾರ್. (2021) ಅನುವಾದ, ಅನುಸೃಷ್ಟಿ, ರೂಪಾಂತರ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.