ಲಿಪಿ ಸುಧಾರಣೆ: ಜಾಗತಿಕ ನೋಟ.

Authors

  • Raveenadra Batageri

Abstract

ಲಿಪಿ ಎನ್ನುವುದು ಭಾಷೆಯನ್ನು ಪ್ರತಿನಿಧಿಸುವ ಲಿಖಿತ ಸಂಕೇತಗಳಾಗಿರುತ್ತವೆ. ಈ ಸಂಕೇತಗಳು ಯಾವುದೇ ಭಾಷೆಯ ಧ್ವನಿ ಸಂಕೇತಗಳನ್ನು ದಾಖಲಿಸುತ್ತವೆ. ಪ್ರತಿಯೊಂದು ಭಾಷೆಯು ಧ್ವನಿ ಸಂಕೇತಗಳನ್ನು ಹೊಂದಿರುತ್ತವೆ. ಆದರೆ ಪ್ರತಿಯೊಂದು ಭಾಷೆಯು ಲಿಪಿ ಸಂಕೇತ ಹೊಂದಿರಲಾರವು ಮತ್ತು ಲಿಪಿ ಸಂಕೇತಗಳು ಯಾವುದೇ ಭಾಷೆಯ ಎಲ್ಲ ಧ್ವನಿ ಸಂಕೇತಗಳನ್ನು ಪ್ರತಿನಿಧಿಸಲಾರವು. ಲಿಪಿ ಸಂಕೇತಗಳನ್ನು ಭಾಷೆಯ ಪ್ರಮಾಣಿತ ರೂಪಗಳೆಂದು ನಂಬಿಕೆಯಿದ್ದರು ವಾಸ್ತವದಲ್ಲಿ ಅದು ಹಾಗಿಲ್ಲ. ಏಕೆಂದರೇ ಹಲವು ಸಲ ತನ್ನದಲ್ಲದ ಭಾಷಿಕ ಸಂಕೇತಗಳನ್ನು ಬರವಣಿಗೆಯಲ್ಲಿ ಬಳಕೆಯ ಸಾಧ್ಯತೆಯಿದೆ. ಅದರಲ್ಲೂ ಭಾರತದಂತ ಪರಿಸ್ಥಿತಿಯಲ್ಲಿ ಅನೇಕ ಭಾಷೆಗಳು ಇತರ ಪ್ರಬಲ ಭಾಷೆಗಳ ಪ್ರಭಾವಕ್ಕೊಳಗಾಗಿವೆ. ಮಾತನಾಡುವಾಗ ಮತ್ತು ಬರೆಯುವಾಗ ಬೇರೆ ಬೇರೆ ಮಾದರಿಗಳನ್ನು ಅನುಸರಿಸುತ್ತೀವೆ. ಇದಕ್ಕೆ ಭಾಷೆಯ ಚಲನಶೀತೆಯೇ ಕಾರಣವಾಗಿರುತ್ತದೆ. ಭಾಷಿಕ ಚಲನಶೀಲತೆಯು ಯಾವಾಗಲೂ ಬದಲಾವಣೆ ಹೊಂದುತ್ತಿರುತ್ತದೆ. ಆದರೇ ಲಿಪಿ (ಬರವಣಿಗೆ) ಈ ಚಲನಶೀಲತೆಯನ್ನು ನಿರಾಕರಿಸುತ್ತದೆ. ಅಥವಾ ಅನ್ಯ ಭಾಷಾ ಪ್ರಭಾವಕ್ಕೊಳಗಾದ ಭಾಷೆಗಳು ಮೌಖಿಕವಾಗಿ ಪ್ರತಿನಿಧಿಸುವ ಧ್ವನಿ ಸಂಕೇತಕ್ಕೂ ಲಿಪಿ ಮೂಲಕ ಗುರುತಿಸುವ ಧ್ವನಿ ಸಂಕೇತಕ್ಕೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ.

Downloads

Published

05.06.2023

How to Cite

Raveenadra Batageri. (2023). ಲಿಪಿ ಸುಧಾರಣೆ: ಜಾಗತಿಕ ನೋಟ. AKSHARASURYA, 2(06), 136–147. Retrieved from https://aksharasurya.com/index.php/latest/article/view/148

Issue

Section

Article