Published: 2024-02-05

Table of Contents

Table of Contents

I to VI

ಔತ್ತರೇಯ ಭಾರತೀಯ ಭಾಷೆ-ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು

ವಿ. ಶಿವಾನಂದ

01 to 18

ಭಾರತದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಸಾಂಸ್ಕೃತಿಕ ಮೈತ್ರಿಯನ್ನು ಅರ್ಥೈಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಸಿಂಧೂ ಕಣಿವೆಯ ನಾಗರಿಕತೆಯಿಂದ ಆರಂಭಗೊಂಡು ವೇದ, ಪುರಾಣ, ಮಹಾಕಾವ್ಯಗಳು ಹಾಗೂ ಪಾಲಿ, ಪ್ರಾಕೃತ, ಅಪಭ್ರಂಶ, ಮರಾಠಿ, ಹಿಂದಿ ಮುಂತಾದ ಭಾಷೆಗಳ ಕೃತಿಗಳಲ್ಲಿ ಕರ್ನಾಟಕದ ಸಂಸ್ಕೃತಿಯು ವ್ಯಾಪಕವಾಗಿ ಉಲ್ಲೇಖಗೊಂಡಿದೆ. ಕನ್ನಡಿಗರ ಶೌರ್ಯ, ಕಲಾಭಿಮಾನ, ಜೈನ ಮತ್ತು ವೀರಶೈವ ಧರ್ಮಗಳ ಪ್ರಭಾವ, ದಾಸ ಪರಂಪರೆಯ ವಿಸ್ತರಣೆ ಹಾಗೂ ಕರ್ನಾಟಕ ಸಂಗೀತದ ಹಿರಿಮೆಗಳು ಉತ್ತರದ ರಾಜ್ಯಗಳಲ್ಲಿ ಆಳವಾದ ಪ್ರಭಾವ ಬೀರಿವೆ. ಭೌಗೋಳಿಕ ಗಡಿಗಳನ್ನು ಮೀರಿ, ಕರ್ನಾಟಕದ ಕಲೆ, ಆಡಳಿತ, ಮತ್ತು ಸಾಹಿತ್ಯವು ಅಖಂಡ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಹೇಗೆ ಶ್ರೀಮಂತಗೊಳಿಸಿದೆ ಎಂಬುದನ್ನು ಐತಿಹಾಸಿಕ ಆಧಾರಗಳೊಂದಿಗೆ ಇಲ್ಲಿ ಚರ್ಚಿಸಲಾಗಿದೆ.

Read More »

ಪ.ಪಂಗಡಗಳವರ ಪರಿಸ್ಥಿತಿ

ಮಂಗ್ಳೂರ ವಿಜಯ

19 to 26

ಭಾರತದಲ್ಲಿ ಪರಿಶಿಷ್ಟ ಪಂಗಡಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ಇಂದಿಗೂ ಶೋಚನೀಯವಾಗಿವೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಬಹುಪಾಲು ಬುಡಕಟ್ಟು ಜನರು ಇನ್ನು ಬಡತನ ರೇಖೆಗಿಂತ ಕೆಳಗಿದ್ದಾರೆ. ಸಂವಿಧಾನವು ಈ ಸಮುದಾಯಗಳಿಗೆ ವಿಶೇಷ ಹಕ್ಕುಗಳು, ಮೀಸಲಾತಿ ಹಾಗೂ ಸ್ವಾಯತ್ತ ಆಡಳಿತದ ಅವಕಾಶಗಳನ್ನು ಒದಗಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಶ್ರಮ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ ಸಾಕ್ಷರತೆ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಶಾಲೆ ಬಿಡುವ ಮಕ್ಕಳ ಪ್ರಮಾಣ ಗಣನೀಯವಾಗಿದೆ. ಮೂಲಭೂತ ಸೌಕರ್ಯಗಳು, ಉದ್ಯೋಗ ಕೌಶಲ್ಯ ಮತ್ತು ಭೂಹಂಚಿಕೆಯಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇನ್ನು ದೀರ್ಘಕಾಲದ ಹೋರಾಟದ ಅವಶ್ಯಕತೆಯಿದೆ.

 
Read More »

ಜೈನ ಕಾವ್ಯಗಳಲ್ಲಿ ಸ್ತ್ರೀಪರ ಧೋರಣೆಗಳು

ಕೆ. ಜಿ. ಚವಾಣ

27 to 40

ಪ್ರಾಚೀನ ಕನ್ನಡ ಜೈನ ಸಾಹಿತ್ಯದ ಪರಂಪರೆಯಲ್ಲಿ ಪಂಪ, ಪೊನ್ನ, ರನ್ನ ಇವರ ಬಳಿಕ ಬಂದ ಕವಿ ಜನ್ನ ಇವರೆಲ್ಲರೂ ಪ್ರಾರಂಭಿಸಿದ ಧಾರ್ಮಿಕ, ತಾರ್ಕಿಕ ಕಾವ್ಯಗಳ ಪರಿಕಲ್ಪನೆಗಳಿಂದ ಜೈನ ಕಾವ್ಯಗಳಲ್ಲಿ ಸ್ತ್ರೀಪರ ಧೋರಣೆಗೆ ಚಂದ್ರಮತಿ, ಅಮೃತಮತಿ, ಅಭಯಮತಿ, ಕುಸುಮಾವಳಿ ಉದಾಹರಣೆಯಾಗಿದ್ದಾರೆ. ಇವರಲ್ಲಿ ಅಮೃತಮತಿಗೆ ಸಂಬಂಧಿಸಿದ ಕಥಾಭಾಗ ಜಾನಪದ ಕಥೆಗಳಲ್ಲಿ ದೊರೆಯುತ್ತದೆ. ಯಶೋಧರ ಚರಿತೆ ಕಾಲದ ದೃಷ್ಟಿಯಿಂದ ಮೊದಲನೆಯದಾಗಿದ್ದು, ಜನ್ನನ ಯಶೋಧರ ಚರಿತೆ ಆತನ ಸೃಜನಶೀಲತೆ ಕಾವ್ಯರೂಪದಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದೆ. 'ಮಾಡಿದುದಂ ನಾವುಣ್ಣದೆ ಪೋಕುಮೆ' ಎಂಬ ಕರ್ಮಸಿದ್ಧಾಂತದ ನೀತಿಯನ್ನು ಎತ್ತಿಹಿಡಿಯುತ್ತಾ ದಾಂಪತ್ಯದ ನಿಷ್ಠೆ ಹಾಗೂ ಸೃಷ್ಟಿಯ ನೆಮ್ಮದಿಗೆ ಅಗತ್ಯವಾದ ಜೀವ ಕಾರುಣ್ಯದ ಮಹತ್ವವನ್ನು ತಿಳಿಸುತ್ತದೆ.

Read More »

ಹೊಸ ತಲೆಮಾರಿನ ಟಿ.ಯಲ್ಲಪ್ಪನವರ ಕಾವ್ಯದ ತಾತ್ವಿಕ ನೆಲೆಗಳು

ಕರಿಬಸವನಗೌಡ ಜಿ., ಕುಮಾರ ಸಿ.

41 to 47

ಆಧುನಿಕ ಕಾವ್ಯ ಹೊಸತಿಗಾಗಿ ಹುಡುಕಾಡುವ ನೆಲೆಗಟ್ಟನ್ನು ಚರ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಕವಿ ಅಥವಾ ಕಾವ್ಯಪರಂಪರೆಯು ಆಧುನಿಕ ಆಗು ಹೋಗುಗಳಿಗೆ ಮುಖಾಮುಖಿಯಾಗುವ ಸಂವಾದಿ ನೆಲೆಯನ್ನು ಕಂಡುಕೊಳ್ಳುತ್ತದೆ. ಇದು ಸೃಜನಶೀಲ ನೆಲೆಗಟ್ಟನ್ನು ಪಡೆಯುತ್ತ ಸ್ತ್ರೀಯ ಬವಣೆಗಳನ್ನು ವಾಸ್ತವದ ನೆಲೆಯಲ್ಲಿ ನಿರೂಪಿಸುತ್ತದೆ. ಪ್ರಜಾಪ್ರಭುತ್ವ ಎನ್ನುವುದು ಇಂದು ಪ್ರಭು-ಪ್ರಭುತ್ವವಾಗಿ ಮಾರ್ಪಟ್ಟು ವ್ಯಂಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ನಿರೂಪಿಸಿದೆ. ಬದುಕು ನಿರಂತರ, ಅದು ಭಾವನಾತ್ಮಕ ಸಂಬಂಧಗಳನ್ನು ಕಳೆದುಕೊಳ್ಳುತ್ತಾ ವ್ಯಾವಹಾರಿಕ ನಿಲುವಿಗೆ ಬಂದಾಗ ಮನುಷ್ಯನ ಭಾವನೆಗಳಿಗೆ ಬೆಲೆಯಿಲ್ಲದಂತಾಗುತ್ತದೆ. ಅಪಮೌಲ್ಯಗೊಂಡ ಪಾರಂಪರಿಕ ಮೌಲ್ಯಗಳು, ದಲಿತರ ನೋವು, ಅವಮಾನ, ಸಿಟ್ಟು, ಸಂಕಟ ಮುಂತಾದ ಕಾವ್ಯ ವಸ್ತುವನ್ನು ವಸ್ತು ನಿಷ್ಠವಾಗಿ ಚರ್ಚಿಸುವ ಉದ್ದೇಶವನ್ನು ಇದು ಹೊಂದಿದೆ.

 
Read More »

ಕನ್ನಡ ನಾಡು-ನುಡಿ-ಜಲದ ಅಸ್ಮಿತೆ

ಪ್ರವೀಣ್ ಕುಮಾರ್ ಎಸ್.

48 to 53

ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯ ಬಗೆಗೆ ಇಂದು ಪ್ರತಿಯೊಬ್ಬರು ಆಲೋಚಿಸಬೇಕಿದೆ. ಕನ್ನಡ ಸಾಹಿತ್ಯದ ಕವಿಗಳಾದ ಶ್ರೀ ವಿಜಯ, ಪಂಪ, ಆಂಡಯ್ಯ, ನಯಸೇನ ಹಾಗೂ ಹೊಸಗನ್ನಡದ ಸಂದರ್ಭದ ಕವಿಗಳಾದ ಬಿ.ಎಂ.ಶ್ರೀ., ತೀ.ನಂ.ಶ್ರೀ., ಆನಂದಕಂದ, ಕುವೆಂಪು, ವಿ.ಸೀತಾರಾಮಯ್ಯ ಮೊದಲಾದವರು ನಾಡಿನ ಕುರಿತಾಗಿ ನುಡಿಯ ಕುರಿತಾಗಿ ಅಭಿಮಾನವನ್ನು ಹಾಗೂ ಕನ್ನಡದ ಸ್ಥಿತಿಯನ್ನು ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನಾಡಿನ ಏಕೀಕರಣ, ಭಾಷಾ ವರ್ಗೀಕರಣ, ಪ್ರಾಂತ್ಯ ವಿಭಜನೆ, ಕನ್ನಡಿಗರಲ್ಲಿನ ಒಗ್ಗಟ್ಟಿನ ಕೊರತೆ ಮೊದಲಾದವುಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿ ಕನ್ನಡದ ಅಸ್ತಿತ್ವಕ್ಕಾಗಿ ಶ್ರಮಿಸುವಂತೆ ಕನ್ನಡಿಗರನ್ನು ಎಚ್ಚರಿಸುತ್ತಾರೆ.

 
Read More »

ಸೀತೆ ಮತ್ತು ಅಹಲ್ಯ ಪಾತ್ರಗಳ ಒಂದು ಮುಖಾಮುಖಿ

ವೀಣಾ ಎನ್., ಶಾಂತರಾಜು

54 to 60

ಸೀತೆ ಮತ್ತು ಅಹಲೈ ಎಂಬ ಎರಡು ಪುರಾಣ ಪಾತ್ರಗಳ ಮುಖಾಮುಖಿಯೊಂದಿಗೆ ಅಂದಿನ ಪುರುಷ ಪ್ರಧಾನ ವ್ಯವಸ್ಥೆಯಿಂದ ತಾವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಸಂದರ್ಭವನ್ನು ಕಾಣಬಹುದು. ತನ್ನ ದಿವ್ಯಶಕ್ತಿಯ ಮೂಲಕ ಘೋರ ಶಾಪ ಮತ್ತು ಚಾಡಿ ಮಾತಿನಿಂದ ಘೋರ ಶಿಕ್ಷೆಯು ಇಲ್ಲಿ ದುರಂತ. ಈ ಪಾತ್ರಗಳು ಕೌಟುಂಬಿಕ ಪಾತ್ರಗಳಂತೆ ಕಂಡರೂ ಸಾಮಾಜಿಕ ಸಂದರ್ಭದಲ್ಲಿ ಒಟ್ಟು ಸ್ತ್ರೀ ಸಮುದಾಯವನ್ನು ಪ್ರತಿನಿಧಿಸುವ ಪಾತ್ರಗಳಾಗಿ ನನಗೆ ಕಾಣಿಸುತ್ತದೆ. ಪತಿಯ ಹೃದಯವನ್ನು ಪಡೆಯುವುದಲ್ಲದೆ ಸತಿಗೆ ಬೇರಾವ ಕೊರತೆ ಇರುತ್ತದೆ ಎಂದು ಸಮಾಜದ ಎಲ್ಲಾ ಪತ್ನಿಯರ ಮುಖವಾಣಿಯಂತಿದ್ದ ಸೀತೆ “ಸತಿಯ ಧ್ಯಾನ, ವ್ರತ, ತಪಸ್ಸುಗಳೇ ಪತಿಯ ರಕ್ಷೆ" ಎಂದು ನಂಬಿ ರಾಮನಿಗಾಗಿ ದಾರಿ ಕಾಯುವ ಇವಳು ಪುರಾಣದಲ್ಲಿ ಭಗ್ನ ಚಿತ್ರವಾಗಿ ಕಾಣುತ್ತಾಳೆ. ಪಾತಿವ್ರತೆಯನ್ನು ಸಾಬೀತುಪಡಿಸಿಕೊಳ್ಳಲು ಹಲವು ಆಚರಣೆಗಳು ಜಾರಿಯಲ್ಲಿದ್ದರೂ ಕಾಡಿಗೆ ಅಟ್ಟುವ ಅತೀ ಘೋರ ಶಿಕ್ಷೆ ಒಂದು ಮಾರ್ಗವೇ? ಎಂಬ ಆಲೋಚನೆಗಳು ನಮಗೆ ಮೂಡುತ್ತವೆ. ಕೆ. ಶರೀಫರು ಹೇಳುವ ಹಾಗೆ "ಹೆಣ್ಣು ಪ್ರಾರಂಭವನ್ನು ಸಹಿಸಿಕೊಳ್ಳುವ ಸಂದರ್ಭವೇ ಮುಂದಿನ ಅವಾಂತರಗಳಿಗೆ ದಾರಿ ಮಾಡಿಕೊಡುತ್ತದೆ" ಎಂಬ ಮಾತು ನಿಜಕ್ಕೂ ಸತ್ಯವಾಗಿ ಕಾಣಿಸುತ್ತದೆ. ಎರಡನೆಯದಾಗಿ ಇಂದ್ರನ ಕಾಮಕ್ಕೆ ಬಲಿಯಾಗಿ ತನ್ನ ಗಂಡನ ದಿವ್ಯ ಶಕ್ತಿಗೆ ಆಹುತಿಯಾಗಿ ಶತಮಾನಗಳ ಕಾಲ ಶಿಲೆಯಾಗಿ ನಿಂತಿದ್ದ ಅಹಲೈಯ ಪಾತ್ರವೂ ಕೂಡ ಶೋಚನೀಯವಾಗಿ ಕಾಣಿಸುತ್ತದೆ.

Read More »

Cultural Representation in the Film Jai Bhim

Adnan Mohamed Ahmed Khan, Vandana Rajput

61 to 67

In India you have people living in various cultures and ethnicity in every 10kms there is demography change from urban world to rural world you have various tribes living in India with different culture practice. Jai Bhim a Tamil film Starring Actor Suriya who is essaying the role of the promient Justice K Chandru who fought against human rights violation. The Film revolves around Based on a true incident in 1993, which involves a case fought by Justice K. Chandru, it revolves around the lives of Sengeni and Rajakannu, a couple from the Irular tribe. Rajakannu was arrested by the police, and was later missing from the police station. Sengeni seeks the help of an advocate Chandru to seek justice for her husband. Jai Bhim has socially impacted all over the globe by showing the injustice of Irular tribe as the victims for torture by Tamilnadu Police.

Read More »

A Satirical representation of domestic abuse in the film Darlings

Simran Parveen

75 to 88

The study examines the representation of domestic violence in the film Darlings. It also aims to understand how the characters are represented in such abusive situations and how the film tries to show the abuse towards women despite being erratic lovers. In the film we see that Badhru and Hamza the lead characters have distinctively different personalities. However, we see another side of their personalities when they start abusing each other. The film takes a drastic turn when Hamza pushes pregnant Badhru off the staircase. After which she avenges her child death through violence towards her husband in the film. Darlings understands that abuse's tragedy lies in its pervasive malignancy rather than in a few horrifying acts of violence. It draws attention to how, in certain ways, the abuser is either a victim or a monster.

Read More »

Women Empowerment in India: a case study of the Kanyashree Prakalpa in West Bengal

Simran Parveen

75 to 88

The present study is related to the women empowerment in India, plight of women in Indian society, measure which have taken by both central government and state government for the empowerment and betterment of women and lastly will be focus on Kanyashree programme as a programme which help the poor women to continue their study and enhance the women empowerment in the society.

Read More »

Folk Literature and the Rise of Vernaculars in India

Vanitha P.

89 to 99

India is a vast and diverse country having a natural cashier of folk tales and folk literature. Folk literature may be a part and apportion of the language and culture of any society. Folk literature also called folklore or oral tradition is that the masters (traditional knowledge and beliefs) of cultures having no written communication. It is transmitted by word of mouth and contains, as does write literature, of both prose and verse narratives, poems and songs, myths, dramas, rituals, proverbs, riddles, and therefore the like. Nearly all known peoples, now or within the past, have produced it. The diversity of India's culture ensures a wide but complex range of literature which is based on the traditional language and customs from different regions, religious and social groups, and tribes. Most of the Folk tales are created, spread, and retained in the vernacular languages as Folktales exercise a powerful influence over the popular imagination, with folk heroes often being deified in villages. This paper deliberates on various aspects of the Indian Folk literature regarding its connection with the development of regional vernacular literature in India.

Read More »

ಕಂಬಾರರ 'ಸಿರಿಸಂಪಿಗೆ' ನಾಟಕದಲ್ಲಿ ಸ್ತ್ರೀ ಸಂವೇದನೆ

ಆರತಿ ಎಸ್.

100 to 107

ಕನ್ನಡದ ನೆಲಕ್ಕೆ ಆಧುನಿಕ ಜನಪದ ನಾಟಕಗಳನ್ನು ಮೊದಲು ನೀಡಿದವರು ಚಂದ್ರಶೇಖರ ಕಂಬಾರರು. ಆಧುನಿಕ ಸಂವೇದನೆಯನ್ನು ಜನಪದದ ಮಾದರಿಯಲ್ಲಿ ಅಭಿವ್ಯಕ್ತಿಸುವ ಪ್ರಯತ್ನವನ್ನು ಮಾಡಿದರು. ಪದ್ಯಗಳಲ್ಲಿ ಗದ್ಯ, ಗದ್ಯದಲ್ಲಿ ಪದ್ಯ ಇದು ಕಂಬಾರರ ಶೈಲಿಯಾಗಿದೆ. ಜಾನಪದ ಅವರ ಸಾಹಿತ್ಯದ ಉಸಿರು ಹಾಗೂ ಮಿಡಿತವಾಗಿದೆ. ಹಾಗಾಗಿ ಕಂಬಾರರ ನಾಟಕಗಳು ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಹೊಸ ದೃಷ್ಟಿಕೋನಗಳನ್ನು, ಕಲ್ಪನೆಗಳನ್ನು ಮತ್ತು ವಿನ್ಯಾಸಗಳನ್ನು ನಿರ್ಮಿಸಿದೆ. ಇದಕ್ಕೆ ತಕ್ಕ ಉದಾಹರಣೆಯೆಂದರೆ 1989ರಲ್ಲಿ ಪ್ರಕಟವಾದ 'ಸಿರಿಸಂಪಿಗೆ' ನಾಟಕವಾಗಿದೆ. "ಸಿರಿಸಂಪಿಗೆ' ನಾಟಕಕ್ಕೆ ಎ.ಕೆ.ರಾಮಾನುಜನ್‌ರವರು ಹೇಳಿದ ಒಂದು ಜಾನಪದ ಕಥೆ ಮೂಲ ಸಾಮಗ್ರಿಯನ್ನು ಒದಗಿಸಿದೆ. ಹಾಗೆಯೇ ಇದೆ ಕಥೆ ಗಿರೀಶ್ ಕಾರ್ನಾಡರ 'ನಾಗಮಂಡಲ' ನಾಟಕ ರಚನೆಗೂ ಕಾರಣವಾಗಿದೆ. ಗಂಡು ಹೆಣ್ಣುಗಳ ಪರಸ್ಪರ ಸಂಬಂಧ, ಜೀವ ಆತ್ಮಗಳ ಸಮಸ್ಯೆ, ಸಮಸ್ಯೆಗಳಿಂದ ಅತೀತವಾದ ದೈವ, ಸಮಸ್ಯೆಯಲ್ಲಿ ಸಿಲುಕಿರುವ ಮಾನವ, ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳು ಇಲ್ಲಿ ನಾಟಕೀಯ ಜಿಜ್ಞಾಸೆಗೆ ಗುರಿಯಾಗುತ್ತವೆ. ಜೀವ ಮತ್ತು ಆತ್ಮಗಳ ನಡುವಿನ ಘರ್ಷಣೆಯು ಕಂಬಾರರ ಕವಿತೆಗಳಲ್ಲಿ ಮುಖ್ಯ ಆಶಯವಾಗಿದೆ. ಇಂತಹ ಆಶಯಕ್ಕೆ ಗಟ್ಟಿನೆಲೆಯನ್ನು 'ಸಿರಿಸಂಪಿಗೆ' ನಾಟಕ ನಿರ್ಮಿಸಿದೆ.

Read More »

ಸು. ರುದ್ರಮೂರ್ತಿಶಾಸ್ತ್ರಿಯವರ ಚಾರಿತ್ರಿಕ ಕಾದಂಬರಿಯಲ್ಲಿ ಕನಕದಾಸರ ವ್ಯಕ್ತಿತ್ವ

ಭೋಜೇಗೌಡ ಕೆ., ಸುಮಾ ಆರ್.

108 to 114

ಸು. ರುದ್ರಮೂರ್ತಿಶಾಸ್ತ್ರಿ ಅವರು ಕನ್ನಡ ನಾಡು ಕಂಡ ಅಪರೂಪದ ಸೃಜನಶೀಲ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವಂತಹ ಶಾಸ್ತ್ರಿಗಳು ಅಶೋಕ, ಔರಂಗಜೇಬ, ಚಾಣಕ್ಯ, ಕುಮಾರರಾಮ ಮೊದಲಾದ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಕನಕದಾಸ ಕೃತಿಯು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಮೌಲಿಕ ಸೇರ್ಪಡೆಯಾಗಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಕನಕದಾಸನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಕಂಗೊಳಿಸುವ ದೇಗುಲ ಒಂದನ್ನು ಕಡೆದು ಇಟ್ಟಿದ್ದಾರೆ. ಕಾದಂಬರಿಯ ಕಲೆ, ಜೀವನ ಚರಿತ್ರೆ ವಿನ್ಯಾಸ ಎರಡು ಇಲ್ಲಿ ಸಮ್ಮಿಲನಗೊಂಡಿದೆ.

 
Read More »

ಮಹಿಳೆ ಮತ್ತು ಸಮಾಜ

ಪ್ರಕಾಶ (ರಂಜೇರೆ), ಕಿಟ್ಟಪ್ಪ ಆರ್.

115 to 123

ಸ್ತ್ರೀಯರು ಪುರುಷರಿಗೆ ಸಮಾನರೆಂದು ಸಂವಿಧಾನದಲ್ಲಿ ಘೋಷಿತವಾದರೂ ವಾಸ್ತವದಲ್ಲಿ ಅದು ಸಾಧ್ಯವೇ ಆಗದಂಥಹ ಸ್ಥಿತಿ, ದೇಶ ಸ್ವತಂತ್ರವಾಗಿ ಅರ್ಧ ಶತಮಾನ ಕಳೆದರೂ ಉಳಿದುಕೊಂಡೇ ಬಂದಿದೆ. ಅದು ಮುಂದುವರಿಯುತ್ತಲೇ ಇದೆ. ಸ್ವಾತಂತ್ರ್ಯ ಹಾಗೂ ಸಮಾನತೆಗಳಿಗೆ ಸಂಬಂಧಿಸಿದಂತೆ ಸ್ತ್ರೀಯರ ಮಟ್ಟಿಗೆ ಬದಲಾವಣೆಯ ವೇಗ ಆಮೆಯ ನಡಿಗೆಯಂತೆ ನಿಧಾನವಾಗಿದೆ. ಲಿಂಗಭೇದದ ನೆಲೆಯಲ್ಲಿ ಮಾನವ ಜನಾಂಗವನ್ನು ಸ್ತ್ರೀ ಮತ್ತು ಪುರುಷರು ಎಂದು ಎರಡು ವರ್ಗಗಳಾಗಿ ಭಾಗ ಮಾಡಿರುವುದು ಸಹಜವೇ. ಇದೇ ಕಾರಣಕ್ಕಾಗಿ ಈ ಎರಡೂ ಗುಂಪುಗಳ ನಡುವೆ ಹೆಚ್ಚಿನ ವ್ಯತ್ಯಾಸಗಳು ಹುಟ್ಟಿಕೊಂಡಿವೆ. ಸ್ತ್ರೀ-ಪುರುಷರ ಪಾತ್ರಗಳು, ಕರ್ತವ್ಯಗಳು, ಹೊಣೆಗಾರಿಕೆಗಳು, ಅಂತಸ್ತುಗಳು ಮತ್ತು ನಿಯಮಗಳು ಯಾವುದೇ ಸಮಾಜದಲ್ಲಾದರೂ ಒಂದೇ ರೀತಿಯಾಗಿರಲು ಆಥವಾ ಸಮಾನವಾಗಿರಲು ಸಾಧ್ಯವಾಗಿಲ್ಲ. ಕೆಲವರು ಮಹಿಳೆಯರ ಸ್ಥಿತಿಗತಿಯ ಬಗ್ಗೆ ತಮ್ಮ ಸಂಕುಚಿತ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಭಾರತೀಯ ಸ್ತ್ರೀಯರ ಸ್ಥಿತಿಯನ್ನು ಕೀಳಾಗಿ ಚಿತ್ರಿಸಿದ್ದಾರೆ. ನಮ್ಮ ಪ್ರಾಚೀನ ಕಾಲದ ಧಾರ್ಮಿಕ ಪುರಾಣ ಗ್ರಂಥಗಳನ್ನು ಅವಲೋಕಿಸಿದಾಗ ಈ ಅಭಿಪ್ರಾಯಗಳು ಆಧಾರ ರಹಿತವಾದವು ಎಂಬುದು ಗೊತ್ತಾಗುತ್ತದೆ. ಪುರುಷ ಮತ್ತು ಮಹಿಳೆ ಒಂದು ನಾಣ್ಯದ ಎರಡು ಮುಖಗಳು, ಪುರುಷರನ್ನು ಹೊರತು ಪಡಿಸಿದ ಮಹಿಳೆಯ ಜೀವನ ಆಥವಾ ಮಹಿಳೆಯನ್ನು ಹೊರತುಪಡಿಸಿದ ಪುರುಷನ ಜೀವನವನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಮಹಿಳೆಯ ಸ್ಥಿತಿಯನ್ನು ಕುರಿತು ಚರ್ಚಿಸುವಾಗ ಸಾಮಾಜಿಕ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯ ಪಾತ್ರವು ಪ್ರಮುಖವಾಗಿ ಕಂಡು ಬರುತ್ತದೆ.

Read More »

ಸಮಾಜಮುಖಿ ಭಾವ ಪ್ರಜ್ಞೆಯ ಮಡಿವಾಳಪ್ಪನವರ ತತ್ವಪದಗಳು

ಸಾಯಿಬಣ್ಣ

124 to 130

ಪ್ರಸ್ತುತ ಸಮಕಾಲಿನ ಸಾಮಾಜಿಕ ಸಂದರ್ಭದಲ್ಲಿ ತತ್ವಪದಗಳು ಮತ್ತು ತತ್ವಪದಕಾರರ ತಾತ್ವಿಕತೆಯನ್ನು ಅಭಿವ್ಯಕ್ತಿಪಡಿಸುತ್ತದೆ. ಆಧುನಿಕರಣ, ಜಾಗತಿಕರಣ, ನಗರಿಕರಣದಲ್ಲಿ ಮಿಂದೇಳುತ್ತಿರುವ ಇಂದಿನ ಸಮಾಜವು ಮೌಲ್ಯಾಧಾರಿತ ವಾತಾವರಣವನ್ನು ಮೀರಿ ನಾಗರಿಕತೆಯೆನ್ನುವ ವೈಭೋಗದ ಬದುಕಿಗೆ ಅಂಟಿಕೊಂಡು, ಮೌಲ್ಯ, ಆದರ್ಶ, ನೈತಿಕತೆಯನ್ನು ಬರಿದಾಗಿಸಿಕೊಳ್ಳುತ್ತಿದೆ. ಮನುಷ್ಯ ಕಲ್ಯಾಣ, ಸದಾಶಯದ ಭಾವ ಇಂದಿನ ಯುವಸಮುದಾಯಗಳಲ್ಲಿ ಗಣನಿಯವಾಗಿ ಕುಸಿಯುತ್ತಿದೆ. ಪರಿಣಾಮವಾಗಿ ಸಮಾಜದಲ್ಲಿ ಸಮುದಾಯ ಮತ್ತು ವಿವಿಧ ಸಮೂಹಗಳು, ನೈತಿಕ ಮತ್ತು ಆಲಿಂಗನ ಮನೋಭಾವವನ್ನು ಬರಿದಾಗಿಸಿಕೊಳ್ಳುತ್ತಿವೆ. ಇಂತಹ ಕ್ಲಿಷ್ಟಕರವಾದ ಹಾದಿಯೆಡೆಗೆ ಸಾಗುತ್ತಿರುವ ಸಮಾಜವನ್ನು ನೈತಿಕತೆಯೆಡೆಗೆ ಕರೆತರಲು ತತ್ವಪದಗಳು ಅತ್ಯಂತ ಪರಿಣಾಮಕಾರಿ ಮತ್ತು ಕ್ರೀಯಾತ್ಮಕವಾಗಿ ಕೆಲಸ ಮಾಡಿವೆಯೆಂದು ನಿರ್ವಿವಾದವಾಗಿ ಹೇಳಬಹುದು. ಈ ದೆಸೆಯಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಸಮಾಜದಲ್ಲಿ ವೈಚಾರಿಕತೆಯ ಕೂಗೆಬ್ಬಿಸಿ, ಸಮಾಜಕ್ಕೆ ಚಲನಾಶೀಲತೆಯೆಂಬ ಮೌಲಿಕತೆಯನ್ನು ತುಂಬಿ ಸಮಾಜದ ಪ್ರಗತಿಗೆ ಕಾರಣವಾಗಿವೆ. ಪ್ರಸ್ತುತ ಲೇಖನವು ತತ್ವಪದ ಸಾಹಿತ್ಯವನ್ನು ಕೇವಲ ಸಾಹಿತ್ಯಕ ಪರಿಧಿಯಿಂದ ಗ್ರಹಿಸದೆ, ಸಾಮಾಜಿಕ ಕಣೋಟಗಳಿಂದ ನೋಡಬೇಕಾದ ಅಗತ್ಯತೆಯನ್ನು ಪ್ರತೀಪಾದಿಸುತ್ತದೆ. ಕಡಕೋಳ ಮಡಿವಾಳಪ್ಪನವರನ್ನು ಕೇವಲ ತತ್ವಪದಕಾರನಷ್ಟೆ ಅಲ್ಲ, ಅವರೊಬ್ಬ ಸಮಾಜದ ಬಗ್ಗೆ ಸದಾ ಚಿಂತಿಸುತ್ತಿದ್ದ ಸಾಮಾಜಿಕ ಸಹೃದಯಿಯಾಗಿದ್ದರು.

Read More »

ಕರ್ನಾಟಕ ಏಕೀಕರಣ ಮತ್ತು ಕುವೆಂಪು

ಸೀತಾ ಹೆಚ್. ಎನ್.

131 to 136

ಕನ್ನಡ, ಕರ್ಣಾಟಕ ಮತ್ತು ಕುವೆಂಪು ಈ ಮೂರೂ ಈಗ ಅವಿಭಾಜ್ಯವಾದ ಮತ್ತು ಅಭಿನ್ನವಾದ ವಸ್ತುಗಳಾಗಿವೆ, ತತ್ತ್ವಗಳಾಗಿವೆ, ಶಕ್ತಿಗಳಾಗಿವೆ. ಕನ್ನಡ ಮತ್ತು ಕರ್ಣಾಟಕ ಕುವೆಂಪು ಅವರನ್ನು ಕಡೆದಂತೆ, ಕುವೆಂಪು ಕನ್ನಡ ಮತ್ತು ಕರ್ಣಾಟಕಗಳ ಕೀರ್ತಿ ಮಹಿಮೆಗಳನ್ನು ಮುಗಿಲೆತ್ತರಕ್ಕೇರಿಸಿದ್ದಾರೆ, ಜಗದಗಲಕ್ಕೂ ಹರಡಿದ್ದಾರೆ. ಕುವೆಂಪು ಅವರು ರಾಜಕೀಯದೊಳಗಿರಲಿ, ಆಚೆಯಿರಲಿ ಕುಳಿತಲ್ಲಿಂದಲೇ ವಿದ್ಯಮಾನಗಳನ್ನು ಗ್ರಹಿಸುವ ಶಕ್ತಿ ಅವರ ಕಲ್ಪನಾ ಪ್ರತಿಭೆಗಿದೆ. ಕನ್ನಡದ ಪಾರಮ್ಯಕ್ಕಾಗಿ, ನಾಡಿನ ಏಕೀಕರಣಕ್ಕಾಗಿ ಬರಹ, ಭಾಷಣಗಳ ಮೂಲಕ ನಿರಂತರವಾಗಿ ಹೋರಾಟ ನಡೆಸಿದ್ದಾರೆ. ಸಂಕುಚಿತ ದೃಷ್ಟಿಯ ಜಡವಾದಿ ಪ್ರಗತಿ ವಿರೋಧಿ ರಾಜಕೀಯ ವಿರುದ್ಧವಾಗಿ ಸಮರವನ್ನೇ ಘೋಷಿಸಿದ್ದುಂಟು. ಕನ್ನಡ ನಾಡು ಒಂದಾಗಬೇಕು, ಕನ್ನಡ ಜನ ಒಂದಾಗಬೇಕು ಎಂದು ಹಂಬಲಿಸಿ. ಲೇಖನ ಭಾಷಣಗಳ ಮೂಲಕ ಹಂಬಲವನ್ನು ತೋಡಿಕೊಳ್ಳುತ್ತ, ರಾಜಕಾರಣಿಗಳಿಗೂ ಯುವಕರಿಗೂ ಪ್ರಚೋದಕ ಶಕ್ತಿಯಾಗಿ, ಪ್ರವಾದಿಯಾಗಿ ಕಾಣಿಸಿಕೊಳ್ಳುತ್ತಾರೆ. ಮೈಮನಗಳಲ್ಲಿ, ಕನ್ನಡತನ ಹರಿದಾಡುವುದಾದರೆ ಮೆಟ್ಟುವ ನೆಲ ಕರ್ಣಾಟಕವಾಗುತ್ತದೆ. ಕರ್ಣಾಟಕ ಏಕೀಕರಣ ಆಗಬೇಕೆಂಬುದೇ ಕುವೆಂಪು ಅವರ ಆಶಯವಾಗಿತ್ತು ಎಂಬುದೇ ಲೇಖನದ ಉದ್ದೇಶವಾಗಿದೆ.

Read More »