ಕಂಬಾರರ 'ಸಿರಿಸಂಪಿಗೆ' ನಾಟಕದಲ್ಲಿ ಸ್ತ್ರೀ ಸಂವೇದನೆ

Main Article Content

ಆರತಿ ಎಸ್.

Abstract

ಕನ್ನಡದ ನೆಲಕ್ಕೆ ಆಧುನಿಕ ಜನಪದ ನಾಟಕಗಳನ್ನು ಮೊದಲು ನೀಡಿದವರು ಚಂದ್ರಶೇಖರ ಕಂಬಾರರು. ಆಧುನಿಕ ಸಂವೇದನೆಯನ್ನು ಜನಪದದ ಮಾದರಿಯಲ್ಲಿ ಅಭಿವ್ಯಕ್ತಿಸುವ ಪ್ರಯತ್ನವನ್ನು ಮಾಡಿದರು. ಪದ್ಯಗಳಲ್ಲಿ ಗದ್ಯ, ಗದ್ಯದಲ್ಲಿ ಪದ್ಯ ಇದು ಕಂಬಾರರ ಶೈಲಿಯಾಗಿದೆ. ಜಾನಪದ ಅವರ ಸಾಹಿತ್ಯದ ಉಸಿರು ಹಾಗೂ ಮಿಡಿತವಾಗಿದೆ. ಹಾಗಾಗಿ ಕಂಬಾರರ ನಾಟಕಗಳು ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಹೊಸ ದೃಷ್ಟಿಕೋನಗಳನ್ನು, ಕಲ್ಪನೆಗಳನ್ನು ಮತ್ತು ವಿನ್ಯಾಸಗಳನ್ನು ನಿರ್ಮಿಸಿದೆ. ಇದಕ್ಕೆ ತಕ್ಕ ಉದಾಹರಣೆಯೆಂದರೆ 1989ರಲ್ಲಿ ಪ್ರಕಟವಾದ 'ಸಿರಿಸಂಪಿಗೆ' ನಾಟಕವಾಗಿದೆ. "ಸಿರಿಸಂಪಿಗೆ' ನಾಟಕಕ್ಕೆ ಎ.ಕೆ.ರಾಮಾನುಜನ್‌ರವರು ಹೇಳಿದ ಒಂದು ಜಾನಪದ ಕಥೆ ಮೂಲ ಸಾಮಗ್ರಿಯನ್ನು ಒದಗಿಸಿದೆ. ಹಾಗೆಯೇ ಇದೆ ಕಥೆ ಗಿರೀಶ್ ಕಾರ್ನಾಡರ 'ನಾಗಮಂಡಲ' ನಾಟಕ ರಚನೆಗೂ ಕಾರಣವಾಗಿದೆ. ಗಂಡು ಹೆಣ್ಣುಗಳ ಪರಸ್ಪರ ಸಂಬಂಧ, ಜೀವ ಆತ್ಮಗಳ ಸಮಸ್ಯೆ, ಸಮಸ್ಯೆಗಳಿಂದ ಅತೀತವಾದ ದೈವ, ಸಮಸ್ಯೆಯಲ್ಲಿ ಸಿಲುಕಿರುವ ಮಾನವ, ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳು ಇಲ್ಲಿ ನಾಟಕೀಯ ಜಿಜ್ಞಾಸೆಗೆ ಗುರಿಯಾಗುತ್ತವೆ. ಜೀವ ಮತ್ತು ಆತ್ಮಗಳ ನಡುವಿನ ಘರ್ಷಣೆಯು ಕಂಬಾರರ ಕವಿತೆಗಳಲ್ಲಿ ಮುಖ್ಯ ಆಶಯವಾಗಿದೆ. ಇಂತಹ ಆಶಯಕ್ಕೆ ಗಟ್ಟಿನೆಲೆಯನ್ನು 'ಸಿರಿಸಂಪಿಗೆ' ನಾಟಕ ನಿರ್ಮಿಸಿದೆ.

Article Details

Section

Book Review

Author Biography

ಆರತಿ ಎಸ್.

ಸಂಶೋಧನಾ ವಿದ್ಯಾರ್ಥಿನಿ, ಕನ್ನಡ ವಿಶ್ವವಿದ್ಯಾಲಯ ವಿಸ್ತಾರಣ ಕೇಂದ್ರ ದೇವದುರ್ಗ.

How to Cite

ಆರತಿ ಎಸ್. (2024). ಕಂಬಾರರ ’ಸಿರಿಸಂಪಿಗೆ’ ನಾಟಕದಲ್ಲಿ ಸ್ತ್ರೀ ಸಂವೇದನೆ. ಅಕ್ಷರಸೂರ್ಯ (AKSHARASURYA), 3(02), 100 to 107. https://aksharasurya.com/index.php/latest/article/view/700

References

ಚಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020) ಸಿರಿಸಂಪಿಗೆ, ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 4

ಚಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 50

ಚಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ, ಅಂಕಿತ ಪುಸ್ತಕ. ಪು.ಸಂ. 60-61

ಚಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020), ಸಿರಿಸಂಪಿಗೆ, ಅಂಕಿತ ಪುಸ್ತಕ. ಪು.ಸಂ. 60-61

ಚಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020) ಸಿರಿಸಂಪಿಗೆ, ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 11

ಚಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 16

ಚಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 54

Most read articles by the same author(s)