ಸಮಾಜಮುಖಿ ಭಾವ ಪ್ರಜ್ಞೆಯ ಮಡಿವಾಳಪ್ಪನವರ ತತ್ವಪದಗಳು

Main Article Content

ಸಾಯಿಬಣ್ಣ

Abstract

ಪ್ರಸ್ತುತ ಸಮಕಾಲಿನ ಸಾಮಾಜಿಕ ಸಂದರ್ಭದಲ್ಲಿ ತತ್ವಪದಗಳು ಮತ್ತು ತತ್ವಪದಕಾರರ ತಾತ್ವಿಕತೆಯನ್ನು ಅಭಿವ್ಯಕ್ತಿಪಡಿಸುತ್ತದೆ. ಆಧುನಿಕರಣ, ಜಾಗತಿಕರಣ, ನಗರಿಕರಣದಲ್ಲಿ ಮಿಂದೇಳುತ್ತಿರುವ ಇಂದಿನ ಸಮಾಜವು ಮೌಲ್ಯಾಧಾರಿತ ವಾತಾವರಣವನ್ನು ಮೀರಿ ನಾಗರಿಕತೆಯೆನ್ನುವ ವೈಭೋಗದ ಬದುಕಿಗೆ ಅಂಟಿಕೊಂಡು, ಮೌಲ್ಯ, ಆದರ್ಶ, ನೈತಿಕತೆಯನ್ನು ಬರಿದಾಗಿಸಿಕೊಳ್ಳುತ್ತಿದೆ. ಮನುಷ್ಯ ಕಲ್ಯಾಣ, ಸದಾಶಯದ ಭಾವ ಇಂದಿನ ಯುವಸಮುದಾಯಗಳಲ್ಲಿ ಗಣನಿಯವಾಗಿ ಕುಸಿಯುತ್ತಿದೆ. ಪರಿಣಾಮವಾಗಿ ಸಮಾಜದಲ್ಲಿ ಸಮುದಾಯ ಮತ್ತು ವಿವಿಧ ಸಮೂಹಗಳು, ನೈತಿಕ ಮತ್ತು ಆಲಿಂಗನ ಮನೋಭಾವವನ್ನು ಬರಿದಾಗಿಸಿಕೊಳ್ಳುತ್ತಿವೆ. ಇಂತಹ ಕ್ಲಿಷ್ಟಕರವಾದ ಹಾದಿಯೆಡೆಗೆ ಸಾಗುತ್ತಿರುವ ಸಮಾಜವನ್ನು ನೈತಿಕತೆಯೆಡೆಗೆ ಕರೆತರಲು ತತ್ವಪದಗಳು ಅತ್ಯಂತ ಪರಿಣಾಮಕಾರಿ ಮತ್ತು ಕ್ರೀಯಾತ್ಮಕವಾಗಿ ಕೆಲಸ ಮಾಡಿವೆಯೆಂದು ನಿರ್ವಿವಾದವಾಗಿ ಹೇಳಬಹುದು. ಈ ದೆಸೆಯಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಸಮಾಜದಲ್ಲಿ ವೈಚಾರಿಕತೆಯ ಕೂಗೆಬ್ಬಿಸಿ, ಸಮಾಜಕ್ಕೆ ಚಲನಾಶೀಲತೆಯೆಂಬ ಮೌಲಿಕತೆಯನ್ನು ತುಂಬಿ ಸಮಾಜದ ಪ್ರಗತಿಗೆ ಕಾರಣವಾಗಿವೆ. ಪ್ರಸ್ತುತ ಲೇಖನವು ತತ್ವಪದ ಸಾಹಿತ್ಯವನ್ನು ಕೇವಲ ಸಾಹಿತ್ಯಕ ಪರಿಧಿಯಿಂದ ಗ್ರಹಿಸದೆ, ಸಾಮಾಜಿಕ ಕಣೋಟಗಳಿಂದ ನೋಡಬೇಕಾದ ಅಗತ್ಯತೆಯನ್ನು ಪ್ರತೀಪಾದಿಸುತ್ತದೆ. ಕಡಕೋಳ ಮಡಿವಾಳಪ್ಪನವರನ್ನು ಕೇವಲ ತತ್ವಪದಕಾರನಷ್ಟೆ ಅಲ್ಲ, ಅವರೊಬ್ಬ ಸಮಾಜದ ಬಗ್ಗೆ ಸದಾ ಚಿಂತಿಸುತ್ತಿದ್ದ ಸಾಮಾಜಿಕ ಸಹೃದಯಿಯಾಗಿದ್ದರು.

Article Details

Section

Essay

Author Biography

ಸಾಯಿಬಣ್ಣ

ಸಹಾಯಕ ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಶ್ರೀ ಪ್ರಭು ಕಲಾ, ವಿಜ್ಞಾನ ಮತ್ತು ಜೆ. ಎಂ. ಬೋಹರಾ ವಾಣಿಜ್ಯ ಪದವಿ ಮಹಾವಿದ್ಯಾಲಯ, ಸುರಪುರ, ಯಾದಗಿರಿ.

References

ರೆಹಮತ್ ತರೀಕೆರೆ. (2017). ತತ್ವಪದಗಳ ಪ್ರವೇಶಿಸುವಿಕೆ. ರಾಷ್ಟ್ರೀಯ ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ. ಬೆಂಗಳೂರು.

ಲಟ್ಟೆ ಎಂ. ಎಸ್. (1994). ಕಡಕೋಳ ಮಡಿವಾಳಪ್ಪ. ಕನ್ನಡ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ನಾಗಭೂಷಣ ಬುಗನಡ್ಡು. (2015). ಕಡಕೋಳ ಮಡಿವಾಳಪ್ಪ ಬಸವ ಅಧ್ಯಯನ ಪೀಠ, ಮೈಸೂರು ವಿಶ್ವವಿದ್ಯಾಲಯ. ಮೈಸೂರು.

ರೆಹಮತ್ ತರೀಕೆರೆ. (2018). ಕನ್ನಡ ಸಂಶೋಧನೆ ತಾತ್ವಿಕ ವಿಚಾರ. ಪ್ರಸಾರಾಂಗ, ಕನ್ನಡ ವಿಶ್ವವಿಧ್ಯಾಲಯ. ಹಂಪಿ.

ಆಲ್ದಾಳ ಎಲ್. ಬಿ. ಕೆ. (2019). ಕಡಕೋಳ ಮಡಿವಾಳಪ್ಪನವರು. ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರು.

ಮೀನಾಕ್ಷಿ ಬಾಳಿ (ಸಂ). (2017). ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯರ ತತ್ವಪದಗಳು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.

ವಿಶ್ವರಾದ್ಯ ಸತ್ಯಂಪೇಟೆ. (2017). ಅನುಭಾವಿ ಕವಿ ಮಡಿವಾಳಪ್ಪ (ಲೇ). ಬಸವಮಾರ್ಗ ಪ್ರತಿಷ್ಠಾನ ಪ್ರಕಾಶನ. ಶಹಾಪುರ.

ಮೀನಾಕ್ಷಿ ಬಾಳಿ. (2015). ಬಂಡಾಯದ ಕಿಡಿ ಮಡಿವಾಳಪ್ಪ, ನ್ಯಾಷನಲ್ ಬುಕ್ ಟ್ರಸ್ಟ್. ಇಂಡಿಯಾ.

ಮಲ್ಲಿಕಾರ್ಜುನ ಕಡಕೋಳ (ಸಂ) (2022). ಕಡಕೋಳ ನೆಲದ ನೆನಪುಗಳು. ಶ್ರೀ ವೀರೇಶ್ವರ ಪ್ರಕಾಶನ, ಕಡಕೋಳ ಮಹಾಮಠ, ಕಡಕೋಳ.

ಮೋಹನದಾಸ್ ಮುಖರ್ಜಿ, (2012), ಸಾಹಿತ್ಯ ಮತ್ತು ಸಮಾಜ. ಪ್ರಕಾಶ ಪಬ್ಲಿಕೇಷನ್ಸ್. ಸಹನಾಪುರ.