ಹೊಸ ತಲೆಮಾರಿನ ಟಿ.ಯಲ್ಲಪ್ಪನವರ ಕಾವ್ಯದ ತಾತ್ವಿಕ ನೆಲೆಗಳು
Main Article Content
Abstract
ಆಧುನಿಕ ಕಾವ್ಯ ಹೊಸತಿಗಾಗಿ ಹುಡುಕಾಡುವ ನೆಲೆಗಟ್ಟನ್ನು ಚರ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಕವಿ ಅಥವಾ ಕಾವ್ಯಪರಂಪರೆಯು ಆಧುನಿಕ ಆಗು ಹೋಗುಗಳಿಗೆ ಮುಖಾಮುಖಿಯಾಗುವ ಸಂವಾದಿ ನೆಲೆಯನ್ನು ಕಂಡುಕೊಳ್ಳುತ್ತದೆ. ಇದು ಸೃಜನಶೀಲ ನೆಲೆಗಟ್ಟನ್ನು ಪಡೆಯುತ್ತ ಸ್ತ್ರೀಯ ಬವಣೆಗಳನ್ನು ವಾಸ್ತವದ ನೆಲೆಯಲ್ಲಿ ನಿರೂಪಿಸುತ್ತದೆ. ಪ್ರಜಾಪ್ರಭುತ್ವ ಎನ್ನುವುದು ಇಂದು ಪ್ರಭು-ಪ್ರಭುತ್ವವಾಗಿ ಮಾರ್ಪಟ್ಟು ವ್ಯಂಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ನಿರೂಪಿಸಿದೆ. ಬದುಕು ನಿರಂತರ, ಅದು ಭಾವನಾತ್ಮಕ ಸಂಬಂಧಗಳನ್ನು ಕಳೆದುಕೊಳ್ಳುತ್ತಾ ವ್ಯಾವಹಾರಿಕ ನಿಲುವಿಗೆ ಬಂದಾಗ ಮನುಷ್ಯನ ಭಾವನೆಗಳಿಗೆ ಬೆಲೆಯಿಲ್ಲದಂತಾಗುತ್ತದೆ. ಅಪಮೌಲ್ಯಗೊಂಡ ಪಾರಂಪರಿಕ ಮೌಲ್ಯಗಳು, ದಲಿತರ ನೋವು, ಅವಮಾನ, ಸಿಟ್ಟು, ಸಂಕಟ ಮುಂತಾದ ಕಾವ್ಯ ವಸ್ತುವನ್ನು ವಸ್ತು ನಿಷ್ಠವಾಗಿ ಚರ್ಚಿಸುವ ಉದ್ದೇಶವನ್ನು ಇದು ಹೊಂದಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಯಲ್ಲಪ್ಪ ಟಿ. (2013). ಚಿಟ್ಟೆ ಮತ್ತು ಜೀವಯಾನ. ಅಭಿನವ ಪ್ರಕಾಶನ. ಬೆಂಗಳೂರು.
ಯಲ್ಲಪ್ಪ ಟಿ. (2014). ನವಿಲಿಗೆ ಬಿದ್ದ ಕತ್ತಲ ಕನಸು. ಪ್ರಜ್ಞೆ ಪ್ರಕಾಶನ. ಬಳ್ಳಾರಿ.
ಯಲ್ಲಪ್ಪ ಟಿ. (2008). ಕಡಲಿಗೆ ಕಳಿಸಿದ ದೀಪ. ಸಂಚಯ ಪ್ರಕಾಶನ, ಬೆಂಗಳೂರು.
ಯಲ್ಲಪ್ಪ ಟಿ. (2016), ಕಣ್ಣ ಪಾಪೆಯ ಬೆಳಕು. ಬೆಳಕು ಪ್ರಕಾಶನ. ಬೆಂಗಳೂರು.