ಮಹಿಳೆ ಮತ್ತು ಸಮಾಜ
Main Article Content
Abstract
ಸ್ತ್ರೀಯರು ಪುರುಷರಿಗೆ ಸಮಾನರೆಂದು ಸಂವಿಧಾನದಲ್ಲಿ ಘೋಷಿತವಾದರೂ ವಾಸ್ತವದಲ್ಲಿ ಅದು ಸಾಧ್ಯವೇ ಆಗದಂಥಹ ಸ್ಥಿತಿ, ದೇಶ ಸ್ವತಂತ್ರವಾಗಿ ಅರ್ಧ ಶತಮಾನ ಕಳೆದರೂ ಉಳಿದುಕೊಂಡೇ ಬಂದಿದೆ. ಅದು ಮುಂದುವರಿಯುತ್ತಲೇ ಇದೆ. ಸ್ವಾತಂತ್ರ್ಯ ಹಾಗೂ ಸಮಾನತೆಗಳಿಗೆ ಸಂಬಂಧಿಸಿದಂತೆ ಸ್ತ್ರೀಯರ ಮಟ್ಟಿಗೆ ಬದಲಾವಣೆಯ ವೇಗ ಆಮೆಯ ನಡಿಗೆಯಂತೆ ನಿಧಾನವಾಗಿದೆ. ಲಿಂಗಭೇದದ ನೆಲೆಯಲ್ಲಿ ಮಾನವ ಜನಾಂಗವನ್ನು ಸ್ತ್ರೀ ಮತ್ತು ಪುರುಷರು ಎಂದು ಎರಡು ವರ್ಗಗಳಾಗಿ ಭಾಗ ಮಾಡಿರುವುದು ಸಹಜವೇ. ಇದೇ ಕಾರಣಕ್ಕಾಗಿ ಈ ಎರಡೂ ಗುಂಪುಗಳ ನಡುವೆ ಹೆಚ್ಚಿನ ವ್ಯತ್ಯಾಸಗಳು ಹುಟ್ಟಿಕೊಂಡಿವೆ. ಸ್ತ್ರೀ-ಪುರುಷರ ಪಾತ್ರಗಳು, ಕರ್ತವ್ಯಗಳು, ಹೊಣೆಗಾರಿಕೆಗಳು, ಅಂತಸ್ತುಗಳು ಮತ್ತು ನಿಯಮಗಳು ಯಾವುದೇ ಸಮಾಜದಲ್ಲಾದರೂ ಒಂದೇ ರೀತಿಯಾಗಿರಲು ಆಥವಾ ಸಮಾನವಾಗಿರಲು ಸಾಧ್ಯವಾಗಿಲ್ಲ. ಕೆಲವರು ಮಹಿಳೆಯರ ಸ್ಥಿತಿಗತಿಯ ಬಗ್ಗೆ ತಮ್ಮ ಸಂಕುಚಿತ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಭಾರತೀಯ ಸ್ತ್ರೀಯರ ಸ್ಥಿತಿಯನ್ನು ಕೀಳಾಗಿ ಚಿತ್ರಿಸಿದ್ದಾರೆ. ನಮ್ಮ ಪ್ರಾಚೀನ ಕಾಲದ ಧಾರ್ಮಿಕ ಪುರಾಣ ಗ್ರಂಥಗಳನ್ನು ಅವಲೋಕಿಸಿದಾಗ ಈ ಅಭಿಪ್ರಾಯಗಳು ಆಧಾರ ರಹಿತವಾದವು ಎಂಬುದು ಗೊತ್ತಾಗುತ್ತದೆ. ಪುರುಷ ಮತ್ತು ಮಹಿಳೆ ಒಂದು ನಾಣ್ಯದ ಎರಡು ಮುಖಗಳು, ಪುರುಷರನ್ನು ಹೊರತು ಪಡಿಸಿದ ಮಹಿಳೆಯ ಜೀವನ ಆಥವಾ ಮಹಿಳೆಯನ್ನು ಹೊರತುಪಡಿಸಿದ ಪುರುಷನ ಜೀವನವನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಮಹಿಳೆಯ ಸ್ಥಿತಿಯನ್ನು ಕುರಿತು ಚರ್ಚಿಸುವಾಗ ಸಾಮಾಜಿಕ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯ ಪಾತ್ರವು ಪ್ರಮುಖವಾಗಿ ಕಂಡು ಬರುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶ್ರೀಮತಿ ಹೆಚ್. ಎಸ್. (2001). ಆಧುನಿಕ ಭಾರತದಲ್ಲಿ ಮಹಿಳೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಜನಿನ್ ಬೇಗಂ ನಾ. (2000). ಗ್ರಾಮೀಣ ಬದುಕು ಮತ್ತು ಮಹಿಳೆ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಗಾಯತ್ರಿ ಎನ್. (2013). ಮಹಿಳೆ ಬಿಡುಗಡೆಯ ಹಾದಿಯಲ್ಲಿ. ನವಕರ್ನಾಟಕ ಪಬ್ಲಿಕೇಶನ್ಸ್. ಬೆಂಗಳೂರು.