ಜೈನ ಕಾವ್ಯಗಳಲ್ಲಿ ಸ್ತ್ರೀಪರ ಧೋರಣೆಗಳು

Main Article Content

ಕೆ. ಜಿ. ಚವಾಣ

Abstract

ಪ್ರಾಚೀನ ಕನ್ನಡ ಜೈನ ಸಾಹಿತ್ಯದ ಪರಂಪರೆಯಲ್ಲಿ ಪಂಪ, ಪೊನ್ನ, ರನ್ನ ಇವರ ಬಳಿಕ ಬಂದ ಕವಿ ಜನ್ನ ಇವರೆಲ್ಲರೂ ಪ್ರಾರಂಭಿಸಿದ ಧಾರ್ಮಿಕ, ತಾರ್ಕಿಕ ಕಾವ್ಯಗಳ ಪರಿಕಲ್ಪನೆಗಳಿಂದ ಜೈನ ಕಾವ್ಯಗಳಲ್ಲಿ ಸ್ತ್ರೀಪರ ಧೋರಣೆಗೆ ಚಂದ್ರಮತಿ, ಅಮೃತಮತಿ, ಅಭಯಮತಿ, ಕುಸುಮಾವಳಿ ಉದಾಹರಣೆಯಾಗಿದ್ದಾರೆ. ಇವರಲ್ಲಿ ಅಮೃತಮತಿಗೆ ಸಂಬಂಧಿಸಿದ ಕಥಾಭಾಗ ಜಾನಪದ ಕಥೆಗಳಲ್ಲಿ ದೊರೆಯುತ್ತದೆ. ಯಶೋಧರ ಚರಿತೆ ಕಾಲದ ದೃಷ್ಟಿಯಿಂದ ಮೊದಲನೆಯದಾಗಿದ್ದು, ಜನ್ನನ ಯಶೋಧರ ಚರಿತೆ ಆತನ ಸೃಜನಶೀಲತೆ ಕಾವ್ಯರೂಪದಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದೆ. 'ಮಾಡಿದುದಂ ನಾವುಣ್ಣದೆ ಪೋಕುಮೆ' ಎಂಬ ಕರ್ಮಸಿದ್ಧಾಂತದ ನೀತಿಯನ್ನು ಎತ್ತಿಹಿಡಿಯುತ್ತಾ ದಾಂಪತ್ಯದ ನಿಷ್ಠೆ ಹಾಗೂ ಸೃಷ್ಟಿಯ ನೆಮ್ಮದಿಗೆ ಅಗತ್ಯವಾದ ಜೀವ ಕಾರುಣ್ಯದ ಮಹತ್ವವನ್ನು ತಿಳಿಸುತ್ತದೆ.

Article Details

Section

Research Articles

Author Biography

ಕೆ. ಜಿ. ಚವಾಣ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್.ಜೆ.ಎಂ. ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು, ತರೀಕೆರೆ, ಚಿಕ್ಕಮಗಳೂರು.

How to Cite

ಕೆ. ಜಿ. ಚವಾಣ. (2024). ಜೈನ ಕಾವ್ಯಗಳಲ್ಲಿ ಸ್ತ್ರೀಪರ ಧೋರಣೆಗಳು. ಅಕ್ಷರಸೂರ್ಯ (AKSHARASURYA), 3(02), 27 to 40. https://aksharasurya.com/index.php/latest/article/view/693

References

ಸುಬ್ರಹ್ಮಣ್ಯಶಾಸ್ತ್ರಿ ಎಂ. ಎಸ್. (ಸಂ) (1956), ಯಶೋಧರ ಚರಿತೆ. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.

ತೆಕ್ಕುಂಜ ಗೋಪಾಲಕೃಷ್ಣಭಟ್. (1976). ಯಶೋಧರ ಚರಿತೆ (ಗದ್ಯಾನುವಾದ). ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.

ಕೀರ್ತಿನಾಥ ಕುರ್ತಕೋಟಿ. (1982), ಯಶೋಧರ ಚರಿತೆಯ ಕಾವ್ಯತಂತ್ರ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ಪುಷ್ಪ ಹೆಚ್. ಎಲ್. (1992). ಅಮೃತಮತಿಯ ಸ್ವಗತ. ಅನ್ವೇಷಣೆ ಪ್ರಕಾಶನ, ಬೆಂಗಳೂರು.

ಸಿದ್ದಲಿಂಗಯ್ಯ ಜಿ. ಎಸ್. (ಸಂ). (2009). ಯಶೋಧರ ಚರಿತೆ. ಸಾಹಿತ್ಯ ಅಕಾಡೆಮಿ, ಬೆಂಗಳೂರು.

ರಾಘವಾಚಾರ್ ಕ. ವೆಂ. (ಸಂ), (1941), ಯಶೋಧರ ಚರಿತೆ. ಮೈಸೂರು ವಿಶ್ವವಿದ್ಯಾನಿಲಯ.

ರಂಗಣ್ಣ ಎಸ್. ವಿ. (1971). ಜನ್ನನ ಶೈಲಿ (ಭಾಗ-2). ಮೈಸೂರು ವಿಶ್ವವಿದ್ಯಾನಿಲಯ.

ಸೀತಾರಾಮಯ್ಯ ವಿ. (ಸಂ), (1975), ಜನ್ನ ಐ.ಬಿ.ಹೆಚ್. ಪ್ರಕಾಶನ, ಬೆಂಗಳೂರು.

ಗಿರಡ್ಡಿ ಗೋವಿಂದರಾಜ (ಸಂ). (2008). ಜನ್ನ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಕುವೆಂಪು. (1960). ಯಶೋಧರ ಚರಿತೆಯಲ್ಲಿ ಕಾಮ ವಿಕಾರ ನಿರೂಪಣೆಯ ಉದ್ದೇಶ. ದ್ರೌಪದಿಯ ಶ್ರೀಮುಡಿ. ಉದಯರವಿ ಪ್ರಕಾಶನ. ಮೈಸೂರು.