ಸೀತೆ ಮತ್ತು ಅಹಲ್ಯ ಪಾತ್ರಗಳ ಒಂದು ಮುಖಾಮುಖಿ
Main Article Content
Abstract
ಸೀತೆ ಮತ್ತು ಅಹಲೈ ಎಂಬ ಎರಡು ಪುರಾಣ ಪಾತ್ರಗಳ ಮುಖಾಮುಖಿಯೊಂದಿಗೆ ಅಂದಿನ ಪುರುಷ ಪ್ರಧಾನ ವ್ಯವಸ್ಥೆಯಿಂದ ತಾವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಸಂದರ್ಭವನ್ನು ಕಾಣಬಹುದು. ತನ್ನ ದಿವ್ಯಶಕ್ತಿಯ ಮೂಲಕ ಘೋರ ಶಾಪ ಮತ್ತು ಚಾಡಿ ಮಾತಿನಿಂದ ಘೋರ ಶಿಕ್ಷೆಯು ಇಲ್ಲಿ ದುರಂತ. ಈ ಪಾತ್ರಗಳು ಕೌಟುಂಬಿಕ ಪಾತ್ರಗಳಂತೆ ಕಂಡರೂ ಸಾಮಾಜಿಕ ಸಂದರ್ಭದಲ್ಲಿ ಒಟ್ಟು ಸ್ತ್ರೀ ಸಮುದಾಯವನ್ನು ಪ್ರತಿನಿಧಿಸುವ ಪಾತ್ರಗಳಾಗಿ ನನಗೆ ಕಾಣಿಸುತ್ತದೆ. ಪತಿಯ ಹೃದಯವನ್ನು ಪಡೆಯುವುದಲ್ಲದೆ ಸತಿಗೆ ಬೇರಾವ ಕೊರತೆ ಇರುತ್ತದೆ ಎಂದು ಸಮಾಜದ ಎಲ್ಲಾ ಪತ್ನಿಯರ ಮುಖವಾಣಿಯಂತಿದ್ದ ಸೀತೆ “ಸತಿಯ ಧ್ಯಾನ, ವ್ರತ, ತಪಸ್ಸುಗಳೇ ಪತಿಯ ರಕ್ಷೆ" ಎಂದು ನಂಬಿ ರಾಮನಿಗಾಗಿ ದಾರಿ ಕಾಯುವ ಇವಳು ಪುರಾಣದಲ್ಲಿ ಭಗ್ನ ಚಿತ್ರವಾಗಿ ಕಾಣುತ್ತಾಳೆ. ಪಾತಿವ್ರತೆಯನ್ನು ಸಾಬೀತುಪಡಿಸಿಕೊಳ್ಳಲು ಹಲವು ಆಚರಣೆಗಳು ಜಾರಿಯಲ್ಲಿದ್ದರೂ ಕಾಡಿಗೆ ಅಟ್ಟುವ ಅತೀ ಘೋರ ಶಿಕ್ಷೆ ಒಂದು ಮಾರ್ಗವೇ? ಎಂಬ ಆಲೋಚನೆಗಳು ನಮಗೆ ಮೂಡುತ್ತವೆ. ಕೆ. ಶರೀಫರು ಹೇಳುವ ಹಾಗೆ "ಹೆಣ್ಣು ಪ್ರಾರಂಭವನ್ನು ಸಹಿಸಿಕೊಳ್ಳುವ ಸಂದರ್ಭವೇ ಮುಂದಿನ ಅವಾಂತರಗಳಿಗೆ ದಾರಿ ಮಾಡಿಕೊಡುತ್ತದೆ" ಎಂಬ ಮಾತು ನಿಜಕ್ಕೂ ಸತ್ಯವಾಗಿ ಕಾಣಿಸುತ್ತದೆ. ಎರಡನೆಯದಾಗಿ ಇಂದ್ರನ ಕಾಮಕ್ಕೆ ಬಲಿಯಾಗಿ ತನ್ನ ಗಂಡನ ದಿವ್ಯ ಶಕ್ತಿಗೆ ಆಹುತಿಯಾಗಿ ಶತಮಾನಗಳ ಕಾಲ ಶಿಲೆಯಾಗಿ ನಿಂತಿದ್ದ ಅಹಲೈಯ ಪಾತ್ರವೂ ಕೂಡ ಶೋಚನೀಯವಾಗಿ ಕಾಣಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಚಂದ್ರಶೇಖರ್ ಟಿ. ಆರ್. & ನಾಗಭೂಷಣ ಸ್ವಾಮಿ ಓ. ಎಲ್. (ಸಂ), (2016), ಮಹಿಳಾ ಅಧ್ಯಯನ ಪರಿಭಾಷೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಬೆಂಗಳೂರು.
ದಂಡಪ್ಪ ಎಚ್. & ಸುಮಿತ್ರಾಬಾಯಿ ಬಿ. ಎನ್. (ಸಂ), (2006) ಸುವರ್ಣ ಸಾಹಿತ್ಯ ವಿಮರ್ಶೆ, ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು.
ಬೋರಲಿಂಗಯ್ಯ ಹಿ. ಚಿ. (ಸಂ), (2014), ಕುವೆಂಪು ಮಹಿಳಾ ಮಂಥನ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.