Table of Contents
Trodden Path
ಗೀತನಾಟಕ ಪ್ರವೇಶ ಸಂಸ್ಕೃತ ನಾಟಕ ಮತ್ತು ನಾಟಕದಲ್ಲಿ ಸಂಗೀತ
01 to 32
ಭಾರತೀಯ ರಂಗಭೂಮಿಯ ವಿಕಾಸದಲ್ಲಿ ಸಂಗೀತ ಮತ್ತು ನಾಟಕದ ಅವಿನಾಭಾವ ಸಂಬಂಧವನ್ನು ಇಲ್ಲಿ ಐತಿಹಾಸಿಕವಾಗಿ ವಿಶ್ಲೇಷಿಸಲಾಗಿದೆ. ವೇದಗಳ ಸಂವಾದ ಗೀತೆಗಳು, ಮಹಾಕಾವ್ಯಗಳ ವಾಚನ ಪರಂಪರೆ ಹಾಗೂ ಭರತನ ನಾಟ್ಯಶಾಸ್ತ್ರದ ಹಿನ್ನೆಲೆಯಲ್ಲಿ ಸಂಸ್ಕೃತ ನಾಟಕಗಳ ಉಗಮವನ್ನು ಶೋಧಿಸಲಾಗಿದೆ. ಪ್ರಾಚೀನ ನಾಟಕಗಳಲ್ಲಿ ಕಥಾನಿರೂಪಣೆ, ಪಾತ್ರಗಳ ಮನಃಸ್ಥಿತಿ ಮತ್ತು ರಸಭಾವಗಳ ಅಭಿವ್ಯಕ್ತಿಗಾಗಿ 'ಧ್ರುವ' ಗೀತೆಗಳಂತಹ ಗೇಯ ಪ್ರಕಾರಗಳು ಬಳಕೆಯಾಗುತ್ತಿದ್ದ ಬಗೆಯನ್ನು ವಿವರಿಸಲಾಗಿದೆ. ಕೇವಲ ಗದ್ಯಕ್ಕಿಂತ ಕಾವ್ಯಮಯ ಹಾಗೂ ನಾದಮಯ ಮಾಧ್ಯಮವಾದ ಸಂಗೀತವು ಪ್ರೇಕ್ಷಕರಲ್ಲಿ ತೀವ್ರ ಹಾಗೂ ವಿಶಿಷ್ಟ ಅನುಭೂತಿಯನ್ನು ಮೂಡಿಸಲು ಹೆಚ್ಚು ಸಮರ್ಥವಾಗಿದೆ ಎಂಬ ವಿಚಾರವನ್ನು ಎತ್ತಿಹಿಡಿಯಲಾಗಿದೆ. ಕಾಲಕ್ರಮೇಣ ಸಂಸ್ಕೃತ ರಂಗಭೂಮಿಯ ಈ ಗೀತ-ನೃತ್ಯ ಸಂಪ್ರದಾಯವು ಯಕ್ಷಗಾನ, ಬಯಲಾಟದಂತಹ ಜಾನಪದ ಕಲೆಗಳ ಮೂಲಕ ವೃತ್ತಿ ರಂಗಭೂಮಿಯವರೆಗೂ (ರಂಗ ಸಂಗೀತ) ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಅಧ್ಯಯನವು ಸಮಗ್ರವಾಗಿ ತೆರೆದಿಡುತ್ತದೆ.
Byway
ನಿರಂಜನ ‘ವಿಮೋಚನೆ’ ಕಾದಂಬರಿ: ನಗರ ಬದುಕಿನ ವಾಸ್ತವ ಚಿತ್ರಣದ ಜೀವನ ವೃತ್ತಾಂತದ ಅನಾವರಣ
33 to 42
ಮಾರ್ಕ್ಸ್‌ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ನಿರಂಜನರು ವೈಚಾರಿಕ ಚಿಂತನೆಯುಳ್ಳವರಾಗಿದ್ದರು. ಅವರ ಮೊದಲ ಕಾದಂಬರಿಯಾದ ‘ವಿಮೋಚನೆ’ಯೂ ವರ್ತಮಾನದಲ್ಲಿ ನಿಂತು ಭೂತವನ್ನು ಕೆಣಕುತ್ತಾ ಹೋಗುವ ನಿರೂಪಣಾ ತಂತ್ರಗಾರಿಕೆಯ ಮೂಲಕ ಕಾದಂಬರಿಯ ಉದ್ದಕ್ಕೂ ನೀತಿಯಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ವ್ಯಂಗ್ಯಭರಿತ ದಾಟಿಯಲ್ಲಿ ಕುಟುಕಿದ್ದಾರೆ. ಬಾಲ್ಯದಿಂದಲೂ ಕಡುಬಡತನದ ಬದುಕು ನಡೆಸಿದ್ದ ಕಥಾನಾಯಕ ಚಂದ್ರಶೇಖರನಿಗೆ ತನ್ನ ಬದುಕಿನಲ್ಲಿ ಉಂಟಾದ ದುರ್ಘಟನೆಗಳು ದೊಡ್ಡ ಹೊಡೆತವನ್ನು ನೀಡುತ್ತವೆ. ಅವನು ಇಟ್ಟ ಪ್ರೀತಿ, ವಿಶ್ವಾಸ, ನಂಬಿಕೆಗಳೇ ಅವನಿಗೆ ಮುಳುವಾಗಿ ಸಾಮಾಜಿಕ ವ್ಯವಸ್ಥೆ ಅವನ ಬಡತನವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಜೈಲು ಶಿಕ್ಷೆಗೆ ಒಳಗಾದ ಚಂದ್ರಶೇಖರ ತಾನು ನಿರಪರಾಧಿ ಎಂದು ಸಮಾಜಕ್ಕೆ ತಿಳಿಸಲು ಬರವಣಿಗೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡು ತನ್ನ ‘ಆತ್ಮಕಥೆ’ಯನ್ನು ಬರೆಯುವ ಮೂಲಕ ಜನತಾ ನ್ಯಾಯಾಲಯದಲ್ಲಿ ಕಳಂಕ ರಹಿತ ವ್ಯಕ್ತಿಯೆಂದು ‘ವಿಮೋಚನೆ’ ಪಡೆಯುವ ಹಂಬಲವನ್ನು ವ್ಯಕ್ತಪಡಿಸುತ್ತಾನೆ.
Research Articles
ಕನ್ನಡ ಅನುವಾದಿತ ಮಹಿಳಾ ಆತ್ಮಕಥೆಗಳು: ವಿವಿಧ ಆಯಾಮಗಳು
43 to 49
ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಆತ್ಮಕಥೆಗಳನ್ನು ಕಟ್ಟಿಕೊಟ್ಟವರು ಬಹಳ ವಿರಳ. ಒಬ್ಬ ಮಹಿಳೆ ತನಗಿರುವ ಮಿತಿಗಳನ್ನು ಉಲ್ಲಂಘಿಸಿ ಸ್ಥಾಪಿತ ವ್ಯವಸ್ಥೆಯೊಂದು ಒಡ್ಡುವ ಸವಾಲುಗಳಿಗೆ ಎದುರಾಗುತ್ತಲೆ ತನ್ನ ಆತ್ಮವೃತ್ತಾಂತವನ್ನು ಸಾರ್ವಜನಿಕ ನೋಟಕ್ಕೆ ತೆರೆದಿಡುವ ದಿಟ್ಟತನಕ್ಕೆ ಬಹಳ ಸಮಯವೇ ಬೇಕಾಯಿತು. ಹೀಗೆ ಆರಂಭವಾದ ಮಹಿಳಾ ಆತ್ಮಕಥನಗಳೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸುತ್ತಿವೆ.
ಆತ್ಮಕಥೆ ಎಂದರೆ ತಮ್ಮ ಆತ್ಮ ವೃತ್ತಾಂತವನ್ನು ತಾವೆ ದಾಖಲಿಸುವ ಪ್ರಕ್ರಿಯೆ, ಮಹಿಳಾ ಆತ್ಮಕಥೆಗಳಲ್ಲಿ ಕೆಲವೊಮ್ಮೆ ತಮ್ಮ ಆತ್ಮ ವೃತ್ತಾಂತವನ್ನು ಸ್ವ್ವಗತದ ಮಾದರಿಯಲ್ಲಿ ಬರೆದಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಭಾರತದಂತಹ ಸಂಪ್ರದಾಯಿಕ ಸಮಾಜ ಮಹಿಳೆಗೆ ಕೆಲವು ಚೌಕಟ್ಟುಗಳನ್ನು ನಿರ್ಮಿಸಿದೆ. ಇಂತಹ ಸಂಕೀರ್ಣತೆಯನ್ನು ಭಂಜಿಸಿ ತಮ್ಮನ್ನು ತಾವು ದಾಖಲಿಸಿಕೊಳ್ಳುವ ತಣ್ಣನೆಯ ಪ್ರತಿರೋಧವನ್ನು ವ್ಯಕ್ತಪಡಿಸುತ್ತ ಭಯವನ್ನು, ಲಜ್ಜೆಯನ್ನು ಮೀರುವುದೇ ಮಹಿಳೆಯ ಎದುರಿರುವ ದೊಡ್ಡ ಸವಾಲು. ಹೀಗೆ ಸಮಾಜ, ಕುಟುಂಬ, ಸಮುದಾಯ ಒಟ್ಟಾರೆ ಹೊರಗಣ ಜಗತ್ತಿಗೆ ಒಳಗನ್ನು ತೆರೆದಿಟ್ಟು ಬೆತ್ತಲಾಗುವುದು ಅಷ್ಟು ಸುಲಭವಲ್ಲ. ಇಂತಹ ದಿಟ್ಟತನವನ್ನು ಮೆರೆದ ಅದೆಷ್ಟ್ಟೊ ದಿಟ್ಟೆಯರು ತಮ್ಮ ಆತ್ಮಕಥನಗಳ ಮೂಲಕವೇ ಉತ್ತರಿಸಿದ್ದಾರೆ.
ಹೀಗೆ ಎಲ್ಲಾ ಆತ್ಮಕಥೆಗಳಲ್ಲಿ ಕಂಡುಬರುವ ವಿವಿಧ ಮಹಿಳಾ ಪಾತ್ರಗಳು ತಮ್ಮ ಕುರುಹು ಅಮುಖ್ಯವಾದ ಸಮಾಜದಲ್ಲಿ ತಮ್ಮದೊಂದು ಅಸ್ಮಿತೆಯನ್ನು ಸೃಷ್ಟಿಸಿಕೊಂಡಿದೆ. ಜೊತೆಗೆ ಭೌಗೋಳಿಕ ಗಡಿಗಳನ್ನು ಮೀರಿ ತಮ್ಮ ಸ್ಥಾನವನ್ನು ನಿರ್ಮಿಸಿಕೊಂಡಿವೆ. ಜೊತೆಗೆ ಒಂದು ಚಳುವಳಿಯ ರೂಪವನ್ನು ಪಡೆದುಕೊಂಡಿವೆ. ಸಮಾಜ, ಕುಟುಂಬ, ಸಂಪ್ರದಾಯಿಕ ಚೌಕಟ್ಟುಗಳನ್ನು ಲಂಘಿಸಿ ಒಂದು ಸ್ಥಾಪಿತ ವ್ಯವಸ್ಥೆಯೊಳಗೆ ತನ್ನ ಒಳಗಣ್ಣು ತೆರೆದಿಟ್ಟು ಬಟಾ ಬಯಲಾಗುವುದಕ್ಕೆ ಬೇಕಾಗಿರುವುದು ನಿಷ್ಠುರ, ನಿರ್ಭಿಡೆಯ ಎದೆಗಾರಿಕೆ. ಅಂತಹ ಛಲದ, ಕೇವಲ ಹೆರುವ ಮತ್ತು ಹೊರುವ ಕಾಯಕಕ್ಕೆ ಸೀಮಿತವಾಗದೇ ಲೋಕ ಲಜ್ಜೆಯನ್ನು ಮೀರಿ ಮಾಡುವ ಕ್ರಾಂತಿ ತಮ್ಮನ್ನು ತಾವು ದಾಖಲಿಸಿಕೊಳ್ಳುವ ಹಾದಿಯಲ್ಲಿ ಬಹಳ ಮುಖ್ಯವೆನಿಸಿವೆ.
ಬ್ಯಾಡಗಿ ತಾಲೂಕಿನ ಕೃಷಿ ಆಚರಣೆಗಳು
50 to 58
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಆದಿಮಾನವನು ಆರಂಭದಲ್ಲಿ ಗಡ್ಡೆ -ಗೆಣಸುಗಳನ್ನು ತಿನ್ನುತ್ತಾ ಒಂದೆಡೆ ನೆಲೆ ನಿಂತು ಕೃಷಿ ಆರಂಭಿಸಿದ. ಇದನ್ನು ಅನಾದಿಕಾಲದಿಂದಲೂ ನಮ್ಮ ಜನಪದರು ಮಾಡಿಕೊಂಡು ಬರುತ್ತಿದ್ದಾರೆ. ಕೃಷಿಯನ್ನು ನಮ್ಮ ಜನಪದರು ಹಬ್ಬದ ರೀತಿ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೃಷಿಯನ್ನು ಮಾಡಲು ಅವಶ್ಯಕವಾಗಿ ಮಳೆಬೇಕು. ಮಳೆಯನ್ನು ಸಹ ಒಂದು ಆಚರಣೆಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಆಚರಣೆಯಲ್ಲಿ ನಮ್ಮ ಜನಪದರು ಮನೆಗಳಿಗೆ ಹೋಗಿ ಭಿಕ್ಷಾಟನೆ ಮಾಡಿಕೊಂಡು ಮಳೆ ಬರಲು ದೈವಕ್ಕೆ ಬೇಡಿಕೊಳ್ಳುತ್ತಾರೆ. ಅದೇ ರೀತಿ ಭಾದ್ರಪದ ಶುದ್ಧ ಅಷ್ಟಮಿಯಂದು ಜೋಕುಮಾರಸ್ವಾಮಿ ಹಬ್ಬವನ್ನು ಆಚರಿಸಿ ಮಳೆ ಬರಲು ಬೇಡಿಕೊಳ್ಳುತ್ತಾರೆ. ಭಾರತ ಸುಸಂಸೃತ ರಾಷ್ಟ್ರ. ಹಾಗಾಗಿ ಭಾರತೀಯರಿಗೆ ಪಂಚಾಂಗದ ಪ್ರಕಾರ ಹೊಸ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಆರಂಭವಾಗುತ್ತದೆ. ಇದನ್ನ ನಾವು ಯುಗಾದಿ ಹಬ್ಬ ಅಥವಾ ಹೊಸ ವರ್ಷ ಎಂದು ಆಚರಿಸುತ್ತಾರೆ. ಈ ಹಬ್ಬದಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ ಬೇವು-ಬೆಲ್ಲ ತಿನ್ನುವುದರ ಮೂಲಕ ಜೀವನ ಕಷ್ಟ ಸುಖಗಳಿಂದ ನಡೆಯುತ್ತದೆ ಎಂಬ ಸಂದೇಶವನ್ನು ನೀಡುತ್ತಾರೆ. ನಾವು ಬೆಳೆದ ಫಸಲು ಬಂದಾಗ ಭೂಮಿಯನ್ನು ಒಂದು ಹೆಣ್ಣಾಗಿ ನೋಡಿ ಆ ಹೆಣ್ಣಿಗೆ ಸೀಮಂತ ಕಾರ್ಯ ಮಾಡುವುದು ಹುಣ್ಣಿಮೆ ಹಬ್ಬದ ವಿಶೇಷತೆ. ನಂತರ ಕೃಷಿಕರು ನಮ್ಮ ಬೇಸರವನ್ನು ಕಳೆಯಲು ಹೋರಿ ಹಬ್ಬ ಆಚರಿಸುತ್ತಾರೆ. ಹಬ್ಬದಲ್ಲಿ ಎತ್ತುಗಳಿಗೆ ಕೊಬ್ಬರಿ ಹಾರ, ರಿಬ್ಬನ್ನು, ಜೂಲಾ ಹಣೆಪಟ್ಟಿ ಕಟ್ಟಿ ಸುಂದರವಾಗಿ ಅಲಂಕರಿಸಿ ಸಂತೋಷಪಡುತ್ತಾರೆ. ಬೆಳೆಯೆಲ್ಲ ಬೆಳೆದ ಮೇಲೆ ಅದನ್ನು ಒಕ್ಕಲು ಕಣದ ಹಬ್ಬ ಮಾಡುತ್ತಾರೆ. ಈ ಕಣದ ಹಬ್ಬ ತಿಂಗಳವರೆಗೂ ನಡೆಯುತ್ತದೆ. ಒಕ್ಕಿದ ನಂತರ ಕಾಳಿನ ರಾಶಿ ಮಾಡಿ ಊರಿಗೆಲ್ಲ ಊಟ ಹಾಕಿ ಅತಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದಲ್ಲಿ ಕಮ್ಮಾರ, ಚಮ್ಮಾರ, ಅಗಸ, ಮುಂತಾದ ವರ್ಗದ ಜನರಿಗೆ ದಾನ ಧರ್ಮ ಮಾಡುವುದರ ಮೂಲಕ ಜಗತ್ತಿಗೆ ಹಂಚಿ ತಿನ್ನಬೇಕು ಎಂಬ ಸಂದೇಶ ನೀಡುತ್ತಾರೆ. ಇಂತಹ ಅನೇಕ ಕೃಷಿ ಆಚರಣೆಗಳು ಇಂದು ನಶಿಸಿ ಹೋಗುತ್ತಿವೆ. ಅದರ ಬಗ್ಗೆ ನಾವು ತಿಳಿಯೋಣ.
ಆಧುನಿಕ ಕನ್ನಡ ಸಾಮಾಜಿಕ ನಾಟಕಗಳು: ವಾಸ್ತವಿಕ ಪ್ರಜ್ಞೆಯ ನೆಲೆಗಳು
59 to 66
ಉತ್ತರ ಕನ್ನಡ ಜಿಲ್ಲೆಯ ಪ್ರಾದೇಶಿಕತೆಯ ಕಥಾಹಂದರವನ್ನು ಒಳಗೊಂಡಿರುವ ‘ಇಗ್ಗಪ್ಪ ಹೆಗ್ಗಡೆಯ ಪ್ರಹಸನ’ (1887) ನಾಟಕ ವಾಸ್ತವಿಕತೆಯನ್ನು ಕುರಿತು ಚರ್ಚಿಸುವಾಗ ಮುನ್ನೆಲೆಗೆ ಬರುತ್ತದೆ. ಉತ್ತರ ಕನ್ನಡದ ಜನರ ಸಾಮಾಜಿಕ ಹಿನ್ನೆಲೆಯಲ್ಲಿ ರಚಿತವಾದ ಈ ನಾಟಕವನ್ನು ವಾಸ್ತವಿಕ ರಂಗಭೂಮಿಯ ಪ್ರಪ್ರಥಮ ಸ್ವತಂತ್ರ ಕೃತಿ ಎನ್ನುವುದುಂಟು. ಇಳಿಯ ವಯಸ್ಸಿನ ಹವ್ಯಕ ಬ್ರಾಹ್ಮಣ ಇಗ್ಗಪ್ಪ ಹೆಗಡೆಯ ವಿಷಮ ವಿವಾಹ, ಅದರ ದುರಂತತೆ ಈ ನಾಟಕದ ವಸ್ತು. ಸ್ವತಂತ್ರವಾದ ಸಾಮಾಜಿಕ ವಸ್ತುವನ್ನು ಒಳಗೊಂಡು, ಅಪ್ಪಟ ಆಡುಮಾತನ್ನೇ ಬಳಸಿಕೊಂಡು ಬರೆದ ಈ ನಾಟಕ ಒಂದು ನೈಜವಾದ ಸಾಮಾಜಿಕ ಚಿತ್ರಣದಿಂದ ಕೂಡಿದೆ.
ಕನ್ನಡ ನಾಟಕದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಹೊಸ ಯುಗವನ್ನೇ ಸೃಷ್ಟಿಸಿದ ಕೀರ್ತಿ ಟಿ. ಪಿ. ಕೈಲಾಸ ಹಾಗೂ ಶ್ರೀರಂಗರಿಗೆ ಸಲ್ಲುತ್ತದೆ. ಇದಕ್ಕಿಂತ ಮೊದಲು ಮಾಡಿದ್ದರೂ ಹೆಚ್ಚು ಪ್ರಚುರಕ್ಕೆ ಬಂದದ್ದು ಈ ಇಬ್ಬರೂ ನಾಟಕಗಳಿಂದ ಎನ್ನಬಹುದು. ಇಗ್ಗಪ್ಪ ಹೆಗಡೆ ಪ್ರಹಸನದಂತೆ ಇವರ ನಾಟಕಗಳೂ ಸಮಾಜ ಸುಧಾರಣೆಯ ಪ್ರವಚನವನ್ನೇ ಉಕ್ಕಿಸುವುದರಿಂದ ಅವು ಹೆಚ್ಚು ಕಲಾತ್ಮಕತೆ ಸಾಧಿಸಲಿಲ್ಲ. ಪತಿತೋದ್ಧಾರದ ರಚನೆ ತೀರಾ ಜಾಳಾಗಿದ್ದು, ಅತಿಮುಗ್ಧ ಕಲ್ಪನೆಯಿಂದ ಕೂಡಿದೆ. ನಾಟಕದ ವಸ್ತು ಹೊಸತಾದರೂ ಅದರ ವಿನ್ಯಾಸದಲ್ಲಿ ನಾಟಕಕಾರ ಹೆಚ್ಚು ಸ್ಪಷ್ಟವಾದ ನವೀನತೆಯನ್ನಾಗಲೀ ಆತ್ಮಪ್ರತ್ಯಯವನ್ನಾಗಲೀ ಸಾಮಾಜಿಕ ಕಾಳಜಿಯನ್ನಾಗಲೀ ತೋರುವಂತೆ ಕಾಣುವುದಿಲ್ಲ. ಆದರೆ ನಿಜವಾದ ಸಾಮಾಜಿಕ ಅರಿವನ್ನು ನಾವು ಗುರುತಿಸುವುದು ಕೈಲಾಸಂ ಹಾಗೂ ಶ್ರೀರಂಗರ ನಾಟಕಗಳಲ್ಲಿ. ಇಬ್ಬರೂ ಪ್ರೌಢ ಶಿಕ್ಷಣದ ಸಲುವಾಗಿ ಕಡಲಾಚೆ ಪ್ರವಾಸ ನಡೆಸಿದಾಗ ಪಾಶ್ಚಾತ್ಯ ರಂಗಭೂಮಿಯ ಹಾಗೂ ಹೊಸ ಕಾಲದ ಜೀವನದ ಪ್ರಭಾವಗಳಿಗೆ ಮನವೊಡ್ಡಿ, ಅಲ್ಲಿ ಮೊಗೆದು ತಂದ ಸಂವೇದನೆ, ಪರಿಣತಿಗಳನ್ನು ಕನ್ನಡ ನಾಟಕಕ್ಕೆ ತುಂಬಿಸಿಕೊಟ್ಟರು. ಆಗ ಇಂಗ್ಲೆಂಡಿನಲ್ಲಿ, ಇಬ್ಸೆನ್ನನ ನಾಟಕದಿಂದ ಪ್ರೇರಿತರಾಗಿದ್ದ ಷಾ, ಗಾಲ್ಸ್ ಅಂತಹವರ ಪ್ರಭಾವ ಕೈಲಾಸಂ, ಶ್ರೀರಂಗರ ಮೇಲೂ ಬೀರಿರಬೇಕು. ಆದರೆ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಪಡೆದ ಅವರಿಬ್ಬರೂ ನಾಡಿನ ಪರಂಪರೆಯನ್ನು ಗಮನವಿಟ್ಟುಕೊಂಡೇ ನಾಟಕ ಬರೆದರು. ಹೊಸ ಪ್ರಭಾವ, ಅಂತರ್ಗತವಾದ ಪ್ರತಿಭೆಯೊಡನೆ ಸೇರಿ ಕನ್ನಡ ನಾಟಕ ಸಾಹಿತ್ಯದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ವಾಸ್ತವಿಕ ಪ್ರಜ್ಞೆಯ ನೆಲೆಗಳನ್ನು ಶೋಧಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.
ನುಡಿ ಸಂಕಥನ ಹಾಗೂ ನಮ್ಮ ಮುಂದಿನ ಸವಾಲುಗಳು
67 to 72
ಭಾರತವು ಹಲವು ಭಾಷೆಗಳಿಂದ ಕೂಡಿದೆ. ಒಂದೊಂದು ಭಾಷೆಗೆ ಒಂದೊಂದು ನುಡಿ ಇದೆ. ಒಂದು ನುಡಿಯನ್ನು ಆ ಸಮುದಾಯದ ಅಸ್ತಿತ್ವ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ನುಡಿಗಳ ಅಳಿವು ಆಗದಂತೆ ಜನಪ್ರಿಯ ನಾಯಕರು, ನುಡಿಯರಿಗರು, ಜನಪ್ರಿಯ ಮಾಧ್ಯಮಗಳು ಹಾಗೂ ವಿದ್ಯಾಮಾನಗಳು ಕಾರ್ಯ ಪ್ರವೃತ್ತರಾಗಬೇಕಿದೆ. ನುಡಿಗಳ ಅಳಿವನ್ನು ಕುರಿತಂತೆ ನುಡಿಯರಿಗರು ತಮ್ಮ ವಿಚಾರಗಳನ್ನು ತಮ್ಮದೇ ದಾಟಿಯಲ್ಲಿ ಮಂಡಿಸಿದ್ದಾರೆ. ನುಡಿಗಳು ಏಕೆ ಅಳಿಯುತ್ತವೆ, ಯಾವಾಗ ಅಳಿಯುತ್ತವೆ ಮತ್ತು ಹೇಗೆ ಅಳಿಯುತ್ತವೆ ಎಂಬ ನೆಲೆಗಳನ್ನು ವಿವರಿಸಲು ತೊಡಗಿದ್ದಾರೆ. ನುಡಿ ಅಳಿಯುವುದು ಎಂದರೇನು? ಆ ನುಡಿಯನ್ನು ಆಡುವ ಸಮುದಾಯದ ಎಲ್ಲಾ ಸದಸ್ಯರು ಯಾವುದೋ ಕಾರಣದಿಂದ ನಾಶವಾದಾಗ ಮತ್ತು ನೈಸರ್ಗಿಕ ವಿಕೋಪಕ್ಕೆ ತುತ್ತಾದಾಗ, ವಲಸೆ ಹೋದಾಗ ರಾಜಕೀಯ ಮತ್ತು ಆರ್ಥಿಕ ಕಾರಣಕ್ಕೆ ಮೂಲ ನೆಲೆಯಿಂದ ತನ್ನ ಬೇರುಗಳನ್ನು ಕಿತ್ತುಕೊಂಡು ಹೋದಾಗ ಆ ನುಡಿ ಗುರುತು ನಾಶವಾಗುತ್ತದೆ.
ವೈದೇಹಿಯವರ ಶಕುಂತಲೆ ಎಂಬ ಎಚ್ಚರ
73 to 78
ಶಕುಂತಲೆಯ ಕಥೆ ಮಹಾಭಾರತದ ಶಾಕುಂತಲೋಪಾಖ್ಯಾನದ ಕಾಲದಿಂದಲೂ ಭಾರತದ ಎಲ್ಲ ಭಾಷೆಗಳ ಕವಿಗಳನ್ನು ಆಕರ್ಷಿಸಿದೆ. ಸಂಸ್ಕೃತದ ಕವಿ ಕಾಳಿದಾಸನಂತೂ “ಅಭಿಜ್ಞಾನ ಶಾಕುಂತಲ”ವನ್ನೇ ಬರೆದ. ಶಕುಂತಲೆಯ ಮುಗ್ಧತೆ, ದುಷ್ಯಂತ-ಶಕುಂತಲೆಯರ ಪ್ರೇಮ, ವಿವಾಹ, ವಿಯೋಗ ಮತ್ತು ಮರು ಸಮಾಗಮಗಳನ್ನು ಕಾವ್ಯಾತ್ಮಕವಾಗಿಸಿ ರಮ್ಯ ನಾಟಕದ ಇತಿಹಾಸದಲ್ಲಿ ಶಕುಂತಲೆಯ ಕಥೆಯನ್ನು ಅಜರಾಮರಗೊಳಿಸಿದ. ಇದಕ್ಕೆ ಕಾರಣ ಹಲವು. ಶಾಕುಂತಲದ ಕಥೆಯಲ್ಲಿರುವ ರಮ್ಯತೆ, ಅದರ ವಸ್ತು ವಿಸ್ತಾರ, ಅಭಿಜಾತ ಗುಣಗಳು, ವಿಧಿವಾದ ಇತ್ಯಾದಿಗಳು ಒಂದು ಕಡೆಯಾದರೆ; ರಾಜಪ್ರಭುತ್ವ, ಸಿಂಹಾಸನ, ವಾರಸುದಾರಿಕೆಯ ಹಕ್ಕು-ಹಂಬಲಗಳು ಮತ್ತೊಂದು ಕಡೆ ನಿಂತು ಹಿಂದಿನ ಕವಿಗಳನ್ನು ಪ್ರೇರೇಪಿಸಿದೆ. ಹಾಗೆಯೇ ಕಥೆ ಹಳೆಯದಾದರೂ ಅದರೊಳಗೆ ಹುದುಗಿರುವ ಸತ್ವ ಇಂದಿನ ಲೇಖಕರನ್ನೂ ಚಿಂತನೆಗೆ ಹಚ್ಚಿದೆ. ಹೀಗೆ ಚಿಂತನೆಗೆ ತೊಡಗಿದ ಲೇಖಕರು ಕಥೆಯನ್ನು ವೈಚಾರಿಕತೆಯ, ನೈತಿಕತೆಯ ಒರೆಗೆ ಹಚ್ಚುವ ಪ್ರಯತ್ನ ಮಾಡಿದ್ದಾರೆ ಮತ್ತು ಪುರಾಣದ ಚಿಪ್ಪಿನಲ್ಲಿ ಅಂತರ್ಗತವಾಗಿರುವ ಅವಿತಿಟ್ಟ ಸತ್ಯಗಳ ಶೋಧನೆಗೆ ತೊಡಗಿದ್ದಾರೆ. ಇಂಥ ಒಂದು ಪ್ರಯತ್ನ ವೈದೇಹಿಯವರ “ಶಕುಂತಲೆಯೊಡನೆ ಕಳೆದ ಅಪರಾಹ್ನ” ಕಥೆಯಲ್ಲಿದೆ. ಪಿತೃಪ್ರಾಧಾನ್ಯತೆಯ, ರಾಜಪ್ರಭುತ್ವದ ಕೋರೈಸುವ ಬೆಳಕಿನಲ್ಲಿ ಕಳೆದು ಹೋದ ಶಕುಂತಲೆಯನ್ನು ಹುಡುಕುವ ಪ್ರಯತ್ನ ಇಲ್ಲಿನದು. ಇದನ್ನು ವೈದೇಹಿಯವರು ನಿರ್ವಹಿಸಿರುವ ರೀತಿಯನ್ನು ಕಂಡುಕೊಳ್ಳುವ ಮತ್ತು ಎಲ್ಲ ಹೆಣ್ಣುಗಳ ಪ್ರತಿನಿಧಿಯಾಗಿ ಶಕುಂತಲೆಯ ಪಾತ್ರವನ್ನು ಗ್ರಹಿಸುವ ಉದ್ದೇಶ ಪ್ರಸ್ತುತ ಲೇಖನದ ಹಿಂದಿದೆ.
Navigating The Work Force: The Intersection of Emotional Intelligence and Working Women
79 to 87
Emotional intelligence is a tool used to understand and manage one’s emotions. The major five aspects involved in emotional intelligence are self-awareness, self-regulation, motivation, empathy and social skills. Unfortunately, in the real sense none has got the ability to fully understand and tackle human emotions. It is very evident that emotional intelligence is beneficial both in and out of the workplace. So, the present study has been taken up to explore the emotional intelligence of working women at RIE Mysuru and to compare their emotional intelligence with respect to different work positions that they occupy. Descriptive study design has been employed with an intact group of 53 working women from different positions they occupy (i.e., school teachers, college teachers and non-teaching staffs) at RIE Mysuru. Emotional Intelligence Questionnaire from Leadership Toolkit has been adopted and it consists of 50 items which intended to get the information about self-awareness, managing emotions, motivating oneself, empathy and social skills from the target groups. The data collected have been qualitatively analysed by using percentage analysis. The results revealed that working women at RIE Mysuru have got good emotional intelligence and they develop higher emotional intelligence when they go up the ladder of the work positions. This research provides new and original context-specific insights on emotional intelligence among women; these findings can be used as a basis for future research on emotional intelligence among women of different status while providing a knowledge base for contemporary emotional intelligence research.
Marginalised Writing Emerged and Focusing on the Identities of Ethnic Groups in India
88 to 95
In the late 20th century, a political and social movement emerged to elevate the identities of ethnic groups like Tribes, Dalits, Women, and Peasants through marginalized writing. Tribal culture, the longest tradition in Indian culture, is reflected in ancient texts like The Ramayana and The Mahabharata. However, urbanization, print culture, and commerce have marginalized these groups and their languages, highlighting the need for more coordinated efforts to preserve and collect tribal languages and literature.
Girish Karnad’s Evolutionary Impact on Indian Cinema: A Comprehensive Study
96 to 103
Girish Karnad, a luminary in Indian cinema, has left an indelible mark on the industry through his multifaceted contributions as an actor, playwright, director, and cultural commentator. This abstract delves into the evolutionary impact of Karnad’s work on Indian cinema, presenting a comprehensive study of his enduring influence.
Karnad’s journey began in the 1960s, where he pioneered a shift in the Indian cinematic landscape by blending traditional storytelling with contemporary themes. As a playwright, his works like “Tughlaq” and “Hayavadana” introduced a fresh narrative sensibility, juxtaposing historical and mythological contexts with modern sociopolitical issues. This fusion challenged conventional storytelling norms, enriching Indian cinema with intellectual depth.
Karnad’s prowess extended beyond the stage, as he seamlessly transitioned into acting and directing. His performances in iconic films like “Manthan” and “Nishant” showcased his versatility as an actor. His directorial ventures, including “Vamsha Vriksha” and “Utsav,” demonstrated his commitment to promoting regional narratives and cultural diversity.
Moreover, Karnad’s astute commentary on Indian society and identity resonated with a global audience. He effectively bridged the gap between Indian cinema and international film communities, garnering recognition and accolades on the world stage.
In conclusion, Girish Karnad’s evolutionary impact on Indian cinema is a testament to his artistic vision and relentless dedication. This study illuminates how his pioneering approach redefined Indian cinema, intertwining tradition with modernity, and inspiring future generations to explore the rich tapestry of Indian culture through the lens of cinema.
Book Review
ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಣ್ಣ ಕಥೆಗಳಲ್ಲಿನ ಕೌಟುಂಬಿಕ ಸಫಲತೆ
104 to 113
ಸಣ್ಣ ಕತೆಗಳ ಜನಕ ಎಂದೇ ಪ್ರಸಿದ್ಧರಾದವರು ಮಾಸ್ತಿ ವೆಂಕಟೇಶ ಅಯ್ಯಂಗಾರರು. ಶ್ರೀನಿವಾಸ ಎಂಬ ಕಾವ್ಯನಾಮದಿಂದ ಸಣ್ಣ ಕಥೆಗಳನ್ನು ರಚಿಸಿದ್ದಾರೆ. ಅವರ ಕೆಲವು ಸಣ್ಣ ಕಥೆಗಳಲ್ಲಿ ಬರುವ ಕೌಟುಂಬಿಕ ಸಫಲತೆಯನ್ನು ಶೋಧಿಸುವ ಪ್ರಯತ್ನವೇ ಈ ಲೇಖನದ ಉದ್ಧೇಶ. ‘ರಂಗನ ಮದುವೆ’ ಯಿಂದ ಹಿಡಿದು ಮಾಯಣ್ಣನ ಕನ್ನಡಿ ತನಕ ಅವರ ಸಣ್ಣ ಕಥೆಗಳಲ್ಲಿ ಕಾಣುವುದು ಸಾಮಾನ್ಯ ಘಟನೆಗಳನ್ನು ಮತ್ತು ಉತ್ಪ್ರೇಕ್ಷೆಯಿಲ್ಲದೆ ನಿರೂಪಿಸುವ ಶೈಲಿಯನ್ನು. ‘ವೆಂಕಟಿಗನ ಹೆಂಡತಿ’ಯಲ್ಲಿ ನೀತಿ ತಪ್ಪಿದ ಹೆಂಡತಿಯನ್ನು ಮತ್ತೆ ಅನುಕಂಪದಿಂದ ಸ್ವೀಕರಿಸುವ ಕಟ್ಟಿಗೆ ಮಾರುವ ವೆಂಕಟಿಗನಿಂದ ಹಿಡಿದು ಕರ್ಮಯೋಗದ ಕೊನೆಯದಿನದಲ್ಲಿ ನಿರ್ಲಿಪ್ತರಾಗಿ ಬೆಳಕಿನ ಲೋಕಕ್ಕೆ ತೆರಳಿದ ಮಹ಼ರ್ಷಿ ವಾಮದೇವ ದ್ವೈಪಾಯನರವರೆಗೆ ಎಲ್ಲಾ ಪಾತ್ರಗಳ ಜೀವನವನ್ನು ಚಿತ್ರಿಸಿರುವುದು ಸಹಾನುಭೂತಿಯುತವಾದ ದೃಷ್ಠಿಯಿಂದ. ಇವರ ಕಥೆಗಳಲ್ಲಿ ಆವೇಶವಿಲ್ಲ. ಸಮಾಜ ಸುಧಾರಣೆಯ ತವಕವಿಲ್ಲ. ದೋಷಗಳನ್ನು ತೊಡೆಯುವ ಆಗ್ರಹವಿಲ್ಲ. ಜೀವನದ ಕಷ್ಟ ಸುಖ, ಆತ್ಮದ ಅನುಭವ ಇವುಗಳನ್ನು ಚಿತ್ರಿಸಿದರೆ ತಾನಾಗಿಯೇ ಮನುಷ್ಯನ ಹೃದಯ ಪಕ್ವವಾಗುತ್ತದೆ, ಮೃದುವಾಗುತ್ತದೆ ಎಂಬ ನಿಲುವಿನ ಮೇಲೆ ಕಥೆಗಳನ್ನು ರಚಿಸಿರುವುದು ಈ ಅಧ್ಯಯನದಿಂದ ತಿಳಿದು ಬರುತ್ತದೆ.
ಆರ್. ಕೆ. ನಲ್ಲೂರು ಪ್ರಸಾದ್ ಅವರ ಕಾವ್ಯಗಳಲ್ಲಿ ಕೌಟುಂಬಿಕ ನೆಲೆಗಳು
114 to 123
ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ ಎಂಬುದು ಚರಿತ್ರೆಕಾರರ ಅಭಿಪ್ರಾಯ. ಅಭಿಪ್ರಾಯಕ್ಕೆ ಕನ್ನಡಿ ಹಿಡಿದ ಹಾಗೆ ಕನ್ನಡ ಸಾಹಿತ್ಯ ನಿಂತ ನೀರಾಗದೆ ಚಲನಶೀಲತೆಯನ್ನು ಪಡೆದು ಸಾಗುತ್ತಾ ಬಂದಿದೆ. ಪಂಪ, ರನ್ನ, ಕುಮಾರವ್ಯಾಸ, ಮುದ್ದಣ ಹೀಗೆ ಬಹುದೊಡ್ಡ ಪರಂಪರೆಯಿದೆ. ಚಂಪುವಿನಿಂದ ಪ್ರಾರಂಭವಾಗಿ ಅನೇಕ ಪ್ರಕಾರಗಳಲ್ಲಿ ಬೆಳೆದು ಬಂದಿರುವುದನ್ನು ಗಮನಿಸಬಹುದು. ಆತ್ಮಕಥೆ ವ್ಯಕ್ತಿಯ ಬದುಕಿನ ಪ್ರಮುಖ ಚಿತ್ರಣಗಳನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ವ್ಯಕ್ತಿ ಚಿತ್ರಣಗಳು ಸಾಹಿತ್ಯ, ಕ್ರೀಡೆ ಅಥವಾ ಇನ್ನಿತರ ಯಾವುದೇ ಕ್ಷೇತ್ರದಲ್ಲಿ ಬಹುಮುಖ ಸಾಧನೆ ಮಾಡಿ ಸಮಾಜದ ಬಗ್ಗೆ ತನ್ನದೇ ಆದ ಕಾಳಜಿ ಹೊಂದಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಕೆಲವರದು ವೃತ್ತಿ ಒಂದಾದರೆ ಪ್ರವೃತ್ತಿ ಇನ್ನೊಂದಾಗಿರುತ್ತದೆ. ಅಂತೆಯೇ ಆರ್. ಕೆ. ನಲ್ಲೂರು ಪ್ರಸಾದರು ಅಧ್ಯಾಪಕ ವೃತ್ತಿಯ ಜೊತೆಗೆ ಸಾಹಿತ್ಯ ರಚನೆ ಮಾಡಿ ಸಮಾಜವನ್ನು ತಿದ್ದುವ ಕೆಲಸ ಮಾಡಿದವರು. ಅಷ್ಟಕ್ಕೇ ಅವರ ಕಾರ್ಯ ನಿಲ್ಲದೆ ಕರ್ನಾಟಕ ರಾಜ್ಯದ ಅತ್ಯುತ್ತಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಸಾಧಾರಣ ಸೇವೆ ಸಲ್ಲಿಸಿದವರು. ಅವರ ಕಾವ್ಯಗಳಲ್ಲಿ ಹಳ್ಳಿಯ ಸೊಗಡಿದೆ, ತಂದೆ-ತಾಯಿಯ ಕರುಳು ಬಳ್ಳಿಯ ಸಂಬಂಧವಿದೆ, ನೋವಿಗೆ ಮಿಡಿಯುವ ಸಹನೆ ಇದೆ, ಬಡ ಜನರ ಬದುಕಿನ ಅನಾವರಣವಿದೆ. ಇವರ ಕಾವ್ಯಗಳಲ್ಲಿನ ಕೌಟುಂಬಿಕ ನೆಲೆಯನ್ನು ತಿಳಿಸಿಕೊಡುವುದೇ ಈ ಲೇಖನದ ಮುಖ್ಯ ಉದ್ದೇಶ. ಚುರುಕಾದ ವ್ಯಕ್ತಿತ್ವದಿಂದ ಸೂಜಿಗಲ್ಲಿನಂತೆ ಸೆಳೆಯುವ ನಲ್ಲೂರರು ನಮ್ಮ ನಡುವೆ ಎಲೆ ಮರೆ ಕಾಯಿಯಂತೆ ಇರುವವರು. ಈ ನಿಟ್ಟಿನಲ್ಲಿ ಅವರ ಕಾವ್ಯದ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
Essay
ಕನ್ನಡ ಚಿತ್ರರಂಗದಲ್ಲಿ ಮಹಿಳೆ
124 to 127
ಸಿನಿಮಾ ವಿವಿಧ ಮಜಲುಗಳನ್ನು ದಾಟುತ್ತಾ ಸಮಾಜದ ವಿವಿಧ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಸಾಮಾಜಿಕ ಪರಿವರ್ತನೆ ಮಾಡುವ ಉದ್ದೇಶದಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿತಾದರೂ ಬರು ಬರುತ್ತಾ ಅದರ ಗುರಿ ಮನೋರಂಜನೆಯತ್ತ ತಿರುಗಿ ಮಹಿಳೆಯನ್ನು ಒಂದು ವಸ್ತುವನ್ನಾಗಿಸಿ ಮಹಿಳೆಯ ಚಾರಿತ್ರ್ಯವನ್ನೇ ಬಂಡವಾಳವನ್ನಾಗಿಸಿ ಮಹಿಳೆಯ ಸ್ಥಾನಮಾನಕ್ಕೆ ಚ್ಯುತಿ ಬರುವಂತೆ ಮಾಡಿತು.
ಕುವೆಂಪುರವರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ: ಒಂದು ಚಿಂತನೆ
128 to 133
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕುವೆಂಪು ಎಂಬ ಹೆಸರಿನಲ್ಲಿ ಪ್ರಸಿದ್ದವಾಗಿರುವ ಕವಿ. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಈ ಲೇಖನದಲ್ಲಿ ಕವಿ ಕುವೆಂಪು ಅವರ ಸಾಹಿತ್ಯದಲ್ಲಿ ಕಂಡು ಬಂದಿರುವ ಸಾಮಾಜಿಕ ಕಳಕಳಿ ಹೇಗೆ ಮೂಡಿಬಂದಿದೆ ಎಂದು ಕೆಲವು ಪದ್ಯಗಳ ಉದಾಹರಣೆಯನ್ನು ತೆಗೆದುಕೊಂಡು ವಿವರಿಸಲಾಗಿದೆ. ಸುಂದರವಾದ ಮಲೆನಾಡಿನ ಕುಪ್ಪಳ್ಳಿಯಲ್ಲಿ ಕವಿ ಕುವೆಂಪು ಅವರ ಜನನ 1904 ನೇ ಇಸವಿ ಡಿಸೆಂಬರ್ 29 ರಂದು ಆಯಿತು. ಆ ಕಾಲದ ಮಲೆನಾಡು ಈಗಿನಂತೆ ತೆಳ್ಳಗಿರಲಿಲ್ಲ. ಸಹ್ಯಾದ್ರಿ ಶ್ರೇಣಿ ಎಂದು ಕರೆಯುವ ಪ್ರದೇಶದಲ್ಲಿ ದಟ್ಟವಾದ ಅರಣ್ಯವಿತ್ತು. ಇಂಥಹ ಮಲೆನಾಡಿನ ಗರ್ಭದಲ್ಲಿ ಜನ್ಮತಾಳಿದ ಕವಿ ಕುವೆಂಪುವಿಗೆ ಪೂರ್ವ ಜನ್ಮದ ಪುಣ್ಯವೇ ಮೈವೆತ್ತಂತೆ ಅನಿಸಿತು. ಚಿಕ್ಕವಯಸ್ಸಿನಿಂದಲೂ ಪ್ರಕೃತಿಯ ಜೊತೆಯಲ್ಲಿಯೇ ಬೆಳೆದ ಕವಿಗೆ ನಿತ್ಯವೂ ಹೊಸದಾಗಿಯೇ ಗೋಚರಿಸುವ ದೃಷ್ಯಗಳು. ಕುವೆಂಪು ಅವರ ವೈಚಾರಿಕತೆಯು ಅವರ ಸಾಹಿತ್ಯದಲ್ಲಿ ಮೂಡಿಬಂದಿದೆ.
ಬಸವಣ್ಣನವರ ದೃಷ್ಟಿಯಲ್ಲಿ ಅಸ್ಪೃಶ್ಯತೆ
134 to 138
೧೨ನೇ ಶತಮಾನದ ಆಂದೋಲನದ ನಾಯಕ ಮತ್ತು ಕೇಂದ್ರ ವ್ಯಕ್ತಿ ಆದ ಬಸವಣ್ಣ ಸಾಹಿತ್ಯದೃಷ್ಟಿಯಿಂದ ನೋಡಿದಾಗ ಆತ ಒಬ್ಬ ಅತ್ಯುತ್ತಮ ಕೃತಿಕಾರ ಸಮಾನತೆಯ ತತ್ವವನ್ನು ಸಾರಿದ ಹರಿಕಾರ ಎಂದು ಹೇಳುವುದು ಆಕಸ್ಮಿಕವೇ ಸರಿ. ಆತ ಹುಟ್ಟಿದ್ದು ಬಿಜಾಪುರ್ ಜಿಲ್ಲೆಯ ಬಸವನಬಾಗೇವಾಡಿ ಅಗ್ರಹಾರ ಎಂಬ ಊರಲ್ಲಿ ೧೧೩೪ಲ್ಲಿ ಜನನವಾಯಿತು. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಇವರು ಬಾಲ್ಯದಿಂದಲೇ ವೈದಿಕ ಸಂಸ್ಕೃತಿಯ ವಿರೋಧಿಗಳಾಗಿದ್ದರು. ಇವರು ಹುಟ್ಟಿದ್ದು ಉತ್ತಮ ಬ್ರಾಹ್ಮಣ ಮನೆತನದಲ್ಲಿ ಆದರು ದಲಿತ ವರ್ಗದ ಜೊತೆ ಬೆರೆತು ಅವರಿಗಾಗಿ ತನ್ನ ಜೀವನದುದ್ದಕ್ಕೂ ಹೋರಾಡಿದನೆಂದು ತಿಳಿದು ಬರುತ್ತದೆ. ಹೊಸ ಹೊಸ ಬಗೆಯ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ನಮ್ಮ ಆಡಳಿತವನ್ನು ಸರಳಗೊಳಿಸಿದರು. ಎಲ್ಲಾ ಶರಣರನ್ನು ಕೂಡಿಸಿ ಎಲ್ಲಾ ಜಾತಿಯವರೊಡನೆ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾನತೆಯ ತತ್ವವನ್ನು ಬೀರಿದರು. ಹೀಗೆ ಸಮಾನತೆಯ ತತ್ವವನ್ನು ಸಾರಿದ ಬಸವಣ್ಣನವರ ವಚನಗಳಲ್ಲಿ ಅಸ್ಪೃಶ್ಯತೆ ಹೇಗೆ ಮೂಡಿ ಬಂದಿದೆ ಎಂದು ಈ ಲೇಖನದಲ್ಲಿ ಚರ್ಚಿಸಲಾಗಿದೆ.