ವೈದೇಹಿಯವರ ಶಕುಂತಲೆ ಎಂಬ ಎಚ್ಚರ

Main Article Content

ಶೋಭಾರಾಣಿ ಎನ್.

Abstract

ಶಕುಂತಲೆಯ ಕಥೆ ಮಹಾಭಾರತದ ಶಾಕುಂತಲೋಪಾಖ್ಯಾನದ ಕಾಲದಿಂದಲೂ ಭಾರತದ ಎಲ್ಲ ಭಾಷೆಗಳ ಕವಿಗಳನ್ನು ಆಕರ್ಷಿಸಿದೆ. ಸಂಸ್ಕೃತದ ಕವಿ ಕಾಳಿದಾಸನಂತೂ “ಅಭಿಜ್ಞಾನ ಶಾಕುಂತಲ”ವನ್ನೇ ಬರೆದ. ಶಕುಂತಲೆಯ ಮುಗ್ಧತೆ, ದುಷ್ಯಂತ-ಶಕುಂತಲೆಯರ ಪ್ರೇಮ, ವಿವಾಹ, ವಿಯೋಗ ಮತ್ತು ಮರು ಸಮಾಗಮಗಳನ್ನು ಕಾವ್ಯಾತ್ಮಕವಾಗಿಸಿ ರಮ್ಯ ನಾಟಕದ ಇತಿಹಾಸದಲ್ಲಿ ಶಕುಂತಲೆಯ ಕಥೆಯನ್ನು ಅಜರಾಮರಗೊಳಿಸಿದ. ಇದಕ್ಕೆ ಕಾರಣ ಹಲವು. ಶಾಕುಂತಲದ ಕಥೆಯಲ್ಲಿರುವ ರಮ್ಯತೆ, ಅದರ ವಸ್ತು ವಿಸ್ತಾರ, ಅಭಿಜಾತ ಗುಣಗಳು, ವಿಧಿವಾದ ಇತ್ಯಾದಿಗಳು ಒಂದು ಕಡೆಯಾದರೆ; ರಾಜಪ್ರಭುತ್ವ, ಸಿಂಹಾಸನ, ವಾರಸುದಾರಿಕೆಯ ಹಕ್ಕು-ಹಂಬಲಗಳು ಮತ್ತೊಂದು ಕಡೆ ನಿಂತು ಹಿಂದಿನ ಕವಿಗಳನ್ನು ಪ್ರೇರೇಪಿಸಿದೆ. ಹಾಗೆಯೇ ಕಥೆ ಹಳೆಯದಾದರೂ ಅದರೊಳಗೆ ಹುದುಗಿರುವ ಸತ್ವ ಇಂದಿನ ಲೇಖಕರನ್ನೂ ಚಿಂತನೆಗೆ ಹಚ್ಚಿದೆ. ಹೀಗೆ ಚಿಂತನೆಗೆ ತೊಡಗಿದ ಲೇಖಕರು ಕಥೆಯನ್ನು ವೈಚಾರಿಕತೆಯ, ನೈತಿಕತೆಯ ಒರೆಗೆ ಹಚ್ಚುವ ಪ್ರಯತ್ನ ಮಾಡಿದ್ದಾರೆ ಮತ್ತು ಪುರಾಣದ ಚಿಪ್ಪಿನಲ್ಲಿ ಅಂತರ್ಗತವಾಗಿರುವ ಅವಿತಿಟ್ಟ ಸತ್ಯಗಳ ಶೋಧನೆಗೆ ತೊಡಗಿದ್ದಾರೆ. ಇಂಥ ಒಂದು ಪ್ರಯತ್ನ ವೈದೇಹಿಯವರ “ಶಕುಂತಲೆಯೊಡನೆ ಕಳೆದ ಅಪರಾಹ್ನ” ಕಥೆಯಲ್ಲಿದೆ. ಪಿತೃಪ್ರಾಧಾನ್ಯತೆಯ, ರಾಜಪ್ರಭುತ್ವದ ಕೋರೈಸುವ ಬೆಳಕಿನಲ್ಲಿ ಕಳೆದು ಹೋದ ಶಕುಂತಲೆಯನ್ನು ಹುಡುಕುವ ಪ್ರಯತ್ನ ಇಲ್ಲಿನದು. ಇದನ್ನು ವೈದೇಹಿಯವರು ನಿರ್ವಹಿಸಿರುವ ರೀತಿಯನ್ನು ಕಂಡುಕೊಳ್ಳುವ ಮತ್ತು ಎಲ್ಲ ಹೆಣ್ಣುಗಳ ಪ್ರತಿನಿಧಿಯಾಗಿ ಶಕುಂತಲೆಯ ಪಾತ್ರವನ್ನು ಗ್ರಹಿಸುವ ಉದ್ದೇಶ ಪ್ರಸ್ತುತ ಲೇಖನದ ಹಿಂದಿದೆ.

Article Details

Section

Research Articles

Author Biography

ಶೋಭಾರಾಣಿ ಎನ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

How to Cite

ಶೋಭಾರಾಣಿ ಎನ್. (2024). ವೈದೇಹಿಯವರ ಶಕುಂತಲೆ ಎಂಬ ಎಚ್ಚರ. ಅಕ್ಷರಸೂರ್ಯ (AKSHARASURYA), 5(01), 73 to 78. https://aksharasurya.com/index.php/latest/article/view/1001

References

ವೈದೇಹಿ. (2006). ವೈದೇಹಿಯವರ ಆಯ್ದ ಕಥೆಗಳು. ಅಕ್ಷರ ಪ್ರಕಾಶನ. ಹೆಗ್ಗೋಡು.

ಸುಮಿತ್ರಾಬಾಯಿ ಬಿ. ಎನ್. (2006). ಸ್ತ್ರೀವಾದ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಪ್ರಭಾವತಿ ಎಸ್. ವಿ. (2011). ಸ್ತ್ರೀವಾದದ ಪ್ರಸ್ತುತತೆ. ಚಾರುಮತಿ ಪ್ರಕಾಶನ. ಬೆಂಗಳೂರು.

ರಂಗಣ್ಣ ಎಸ್. ವಿ. (2001). ಕಾಳಿದಾಸನ ನಾಟಕಗಳ ವಿಮರ್ಶೆ. ಎಸ್. ಆರ್.ಶಿವರಾಮ್‌ ಪ್ರಕಾಶನ. ಬೆಂಗಳೂರು.

Most read articles by the same author(s)