Published: 2024-04-05

Table of Contents

Table of Contents

I to V

ನನ್ನಿಯೊಳಿನತನಯಂ

ಎಂ. ಎಂ. ಕಲಬುರ್ಗಿ

01 to 13

ಡಾ. ಎಂ.ಎಂ. ಕಲಬುರ್ಗಿ ಅವರು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಮೂಡಿಸಿದವರು. ಅವರು ತಮ್ಮ ಸಂಶೋಧನೆಯ ಮೂಲಕ ಕೇವಲ ಇತಿಹಾಸದ ಶೋಧವಲ್ಲದೆ, ವರ್ತಮಾನದ ಶೋಷಣೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಪಂಪಭಾರತದ ಪ್ರಮುಖ ಪಾತ್ರವಾದ ಕರ್ಣನ ವ್ಯಕ್ತಿತ್ವದ ದ್ವಂದ್ವಗಳು, ಆತನ ಕೀಳರಿಮೆ, ಮೇಲರಿಮೆ ಹಾಗೂ ತ್ಯಾಗದ ಅತಿರೇಕಗಳನ್ನು ವಿಶ್ಲೇಷಿಸಲಾಗಿದೆ. ಪಂಪನು ಕರ್ಣನನ್ನು 'ನನ್ನಿಯೊಳಿನತನಯಂ' ಎಂದು ಕರೆದಿರುವ ಔಚಿತ್ಯವನ್ನು ಪ್ರಶ್ನಿಸುತ್ತಾ, ಆತನ ಸ್ವಾಮಿನಿಷ್ಠೆ ಮತ್ತು ದಾನಶೂರತ್ವದ ಹಿಂದಿರುವ ವಾಸ್ತವಿಕ ಮಿತಿಗಳನ್ನು ತಾರ್ಕಿಕವಾಗಿ ಬಿಚ್ಚಿಡಲಾಗಿದೆ. ಕರ್ಣನ ದುರಂತಕ್ಕೆ ಆತನ ಆಂತರಿಕ ದೌರ್ಬಲ್ಯಗಳೇ ಹೇಗೆ ಕಾರಣವಾದವು ಎಂಬುದನ್ನು ಪರಾಮರ್ಶಿಸಲಾಗಿದೆ. (ಗಮನಿಸಿ: ಮೂಲ ಲೇಖನದಲ್ಲಿ Abstract ಇರಲಿಲ್ಲ, ಇದನ್ನು ವಿಷಯದ ಆಧಾರದ ಮೇಲೆ ರಚಿಸಲಾಗಿದೆ).

Read More »

ಕನ್ನಡ ಪತ್ರಿಕೋದ್ಯಮ ಮತ್ತು ಲಂಕೇಶ್

ಶ್ರೀಧ‌ರ್ ಆರ್.

14 to 18

ಪಿ. ಲಂಕೇಶ್ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ ಪ್ರಮುಖ ಸಾಂಸ್ಕೃತಿಕ ಚಿಂತಕರು. 'ಲಂಕೇಶ್ ಪತ್ರಿಕೆ'ಯ ಮೂಲಕ ಯಾವುದೇ ಮುಲಾಜಿಲ್ಲದೆ ಅಧಿಕಾರಸ್ಥರನ್ನು ವಿಮರ್ಶಿಸುತ್ತಾ, ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳ ದನಿಗಳಿಗೆ ವೇದಿಕೆ ಕಲ್ಪಿಸಿದರು. ಜಾಹೀರಾತುಗಳಿಲ್ಲದೆ ಓದುಗರ ವಿಶ್ವಾಸದ ಮೇಲೆಯೇ ಪತ್ರಿಕೆ ನಡೆಸಿ, ಸಮಾಜವಾದಿ ನಿಲುವು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದರು. ಅಧ್ಯಾಪಕ ವೃತ್ತಿ ತ್ಯಜಿಸಿ, ಸ್ವತಂತ್ರ ಪತ್ರಿಕೋದ್ಯಮದ ಮೂಲಕ ಯುವ ಜನತೆಯಲ್ಲಿ ಪ್ರಶ್ನಿಸುವ ಮನೋಭಾವ, ನೈತಿಕತೆ ಮತ್ತು ಜಾಗತಿಕ ದೃಷ್ಟಿಕೋನವನ್ನು ಬೆಳೆಸಿದ ಲಂಕೇಶರ ಅಪೂರ್ವ ಸಾಧನೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.

Read More »

MAHĀPAJĀPATĪ GOTAMĪ AND BHIKKHUNI SANGHA

NGUYEN THI SUONG

19 to 28

Mahāpajāpatī Gotamī was the stepmother and aunt of Siddhartha Gautama, who later became the Buddha. She played a crucial role in the Buddha's life, especially after his enlightenment. After the Buddha's mother, Queen Māyā, passed away, Mahāpajāpatī Gotamī took on the responsibility of raising Siddhartha. She later joined the Sangha, becoming one of the first Buddhist nuns (bhikkhunis). Mahāpajāpatī Gotamī is best known for her determination to seek ordination for women in the monastic community. She approached the Buddha three times before he finally agreed to establish the Bhikkhuni Sangha, the order of Buddhist nuns. The Bhikkhuni Sangha refers to the community of Buddhist nuns who follow the monastic discipline established by the Buddha. The establishment of the Bhikkhuni Sangha marked a significant step toward gender equality in the early Buddhist community. Before this, the monastic order consisted only of male monks (bhikkhus). The acceptance of Mahāpajāpatī Gotamī and other women into the Bhikkhuni Sangha highlighted the Buddha's teachings of equality and the possibility of spiritual attainment for both men and women. The Bhikkhuni Sangha played a crucial role in preserving and propagating the teachings of Buddhism. Bhikkhunis are engaged in study, meditation, and teaching, contributing to the spread of the Dharma.

Read More »

AN ANALYTICAL STUDY ON DIȚTHI (VIEW) ACCORDING TO BUDDDHIST LITERATURE

Vasettha

29 to 36

This research paper is "AN ANALYTICAL STUDY ON DITTHI (VIEW) ACCORDING TO BUDDHIST LITERATURE", which focuses on the scope of ditthi (view), right view and wrong view and its consequences. During the time of the Buddha, there existed various views or ideas regarding the concept of ditthi. Among them, the six majors 'outside teachers' (other view holders) (aññatitthiya) are described in Samaññaphala Sutta. Amidst the darkness of all these wrong views that shrouded the world, the Buddha's appearance in this world was the sunshine that dispels comes out of the darkness and enlightens the world. It was the Buddha who with his supreme wisdom and enlightenment understood and explained the doctrine of view (ditthi) properly and completely.

 
Read More »

Development of Communal Life at an ĀVĀSA

Ven. Thumana

37 to 41

This article explores the structure and organization of Buddhist monastic communities, with a particular focus on communal property ownership and the roles of various officers within the community. In Āvāsas, designated areas for monks, communal facilities such as vihāras, kitchens, bathhouses, and promenades were provided within Bhikkhu colonies or donated Ārāmas. Property within these areas belonged to the Sangha as a whole, rather than to individuals. The article highlights rules regarding the non-transferability of certain items and outlines procedures for resolving disputes over agricultural rights. Various officers were appointed to manage different aspects of community life, including overseeing provisions, distributing necessities, managing chambers, and supervising novices and servants. The roles of permanent and temporary officers are described, demonstrating the intricacies of governance within Buddhist monastic communities.

Read More »

A STUDY ON EFFECT OF WORKING ENVIRONMENT ON EMPLOYEES PRODUCTIVITY OF ARECA LEAF BIO PLATES VITTAL

Nishmitha P

42 to 51

A workplace is a place where someone goes to work, either for their employer or for themselves. The effectiveness of the workforce has a significant impact on the organization's success. The simple concept underpinning the movement for better working environment is that comfortable workers are more productive. Businesses now understand how critical it is to boost productivity, retain great employees, and keep a competitive edge by fostering a comfortable work environment. Eco-Bliss is an India's leading Areca leaf plates exporter and manufacturer locating in Balipaguli of Vittal. They offer a gilt free dining solution with its eco-friendly range is cutlery, plates, and bowls of superior quality. It is the first Areca Leaf plates manufacturing and exporting company of India. This research paper can throw some light into the effect of working environment on employees productivity with special reference to the eco-bliss manufacturer and exporter of areca leaf bio plates.

Read More »

ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ

ವಿನಯ ಕುಮಾರ್, ನಾಗಪ್ಪ ಗೌಡ ಆರ್.

52 to 60

ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅವರು ಈ ವರ್ಗಗಳಿಂದ ಬಂದು ಇವರ ಏಳಿಗೆಗಾಗಿ ಶ್ರಮಿಸಿದರು. ಮೂಕವಾಗಿಸಿದ್ದ ಸಮುದಾಯವು ಶಿಕ್ಷಣವನ್ನು ಪಡೆದು ಮಾತನಾಡಲು ಕಾರಣರಾದವರು ಡಾ. ಬಿ. ಆರ್. ಅಂಬೇಡ್ಕರ್. ಮುಂದೇ ಇವರು ಭಾರತದ ಸಂವಿಧಾನದ ಶಿಲ್ಪಿಯಾಗಿ ಎಲ್ಲರಿಗೂ ಸಮಾನತೆ ನೀಡುವ, ಸಾಮಾಜಿಕ ನ್ಯಾಯವನ್ನು ಕೊಡುವ ಸಂವಿಧಾನವನ್ನು ನೀಡಿದರು. ಈ ಕಾರಣದಿಂದಾಗಿ ಇಲ್ಲಿನ ಹಿಂದುಳಿದ ಕೆಳವರ್ಗಗಳು ಮಾತನ್ನು ದಕ್ಕಿಸಿಕೊಂಡವು. ಈ ಎಲ್ಲಾ ಹಿನ್ನಲೆಯಿಂದ ಕನ್ನಡದ ದಲಿತ ಸಾಹಿತ್ಯವನ್ನು ಮತ್ತು ಸಿದ್ಧಲಿಂಗಯ್ಯವರನ್ನು ಕಾಣುವುದು ಹೆಚ್ಚು ಸೂಕ್ತ. ಸಹಜ ಸಜ್ಜನಿಕೆಯ ವ್ಯಕ್ತಿತ್ವವಾದ ಸಿದ್ಧಲಿಂಗಯ್ಯನವರ ಕಾವ್ಯ ಭಾಷೆ ಅಕ್ಷರಶಃ ಬೆಂಕಿಯ ಉಂಡೆಗಳು. ಶತಮಾನಗಳಿಂದ ಸ್ವಾತಂತ್ರ್ಯ, ಶಿಕ್ಷಣ, ಸಮಾನತೆ ಮೊದಲಾದ ಮುಖ್ಯವಾದ ಜೀವನ ಅಗತ್ಯಗಳೇ ಇಲ್ಲದೇ ಬದುಕಿದ ಸಮುದಾಯಕ್ಕೆ ಶಿಕ್ಷಣದೊರೆತಾಗ ಸಹಜವಾಗಿ ಈ ವ್ಯವಸ್ಥೆಯ ವಿರುದ್ಧ ಆಕ್ರೋಶ ಉಂಟಾಗುವಂತದ್ದು. ಈ ಆಕ್ರೋಶವು ಶತಮಾನಗಳ ಶೋಷಣೆಯ ಚರಿತ್ರೆಯನ್ನು ತಿಳಿದುಕೊಂಡು ಪ್ರಜ್ಞಾವಂತರಾಗುತ್ತಿರುವ ಸಂಕೇತವು ಹೌದು. ಈ ದಲಿತ ವಿಚಾರಶೀಲತೆಯ ಪ್ರತೀಕವಾಗಿ ಕವಿ ಸಿದ್ಧಲಿಂಗಯ್ಯನವರ ಸಾಹಿತ್ಯವನ್ನು ವಿವೇಚಿಸಲಾಗಿದೆ.

Read More »

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಪಾಶುಪತ-ಕಾಳಾಮುಖ ಸಾಧನ ಪಂಥ

ಶೋಭಾರಾಣಿ ಎನ್.

61 to 67

ಭಾರತೀಯ ಮತ್ತು ವಿಶೇಷವಾಗಿ ಕರ್ನಾಟಕದ ಆಧ್ಯಾತ್ಮಿಕ ಆರಾಧನಾ ಪಂಥ ಗಳಲ್ಲಿ ಪಾಶುಪತ-ಕಾಳಾಮುಖ ಪಂಥವು ಬಹು ಮುಖ್ಯವಾದುದು. ಆಧ್ಯಾತ್ಮಿಕ ಪರಂಪರೆಯ ಹಿನ್ನೆಲೆಯಲ್ಲಿ ಮಾತ್ರವಲ್ಲದೇ, ದೇವಾಲಯ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೂಡ ಈ ಸಾಧನಾ ಪಂಥದ ಸಾಧಕರು ನೀಡಿರುವ ಕೊಡುಗೆ ಅಪಾರವಾದುದು. ಕರ್ನಾಟಕದ ಬಹುತೇಕ ದೇವಾಲಯಗಳು ಪಾಶುಪತ-ಕಾಳಾಮುಖರಿಂದ ನಿರ್ಮಾಣಗೊಂಡಿವೆ. ಒಂದು ಕಾಲದಲ್ಲಿ ಅಂದರೆ ಕ್ರಿ.ಶ. 12ನೇ ಶತಮಾನಕ್ಕಿಂತ ಸಾಕಷ್ಟು ಪೂರ್ವದಲ್ಲೆ ಈ ಮಾರ್ಗವು ಕರ್ನಾಟಕದಲ್ಲಿ ಪ್ರಮುಖ ಆಧ್ಯಾತ್ಮಿಕ ಮಾರ್ಗವಾಗಿ ಪ್ರಭಾವಶಾಲಿಯಾಗಿತ್ತು. ಹಲವು ರಾಜರುಗಳು ಈ ಮಾರ್ಗಕ್ಕೆ ಪ್ರೋತ್ಸಾಹ ಮತ್ತು ಆಶ್ರಯವನ್ನು ನೀಡಿದ್ದಲ್ಲದೆ, ಸ್ವತಃ ಇದರ ಅನುಯಾಯಿಗಳೂ ಆಗಿದ್ದ ಉದಾಹರಣೆಗಳಿವೆ. ಲಾಕುಳೀಶ, ಕಾಳಾಮುಖ, ಪಾಶುಪತ, ಕಾಪಾಲಿಕ ಮೊದಲಾದ ದಕ್ಷಿಣಾಚಾರದ ಪಂಥಗಳೆಲ್ಲ ಒಂದೆಯೇ ಅಥವಾ ಬೇರೆ ಬೇರೆಯೇ, ಒಂದೇ ಪಂಥದ ವಿಭಿನ್ನ ಶಾಖೆಗಳೇ ಎಂಬುದರ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಡಾ. ಭಂಡಾರ್ಕರ್, ಕಪಟರಾಳ ಕೃಷ್ಣರಾವ್ ಮೊದಲಾದ ದೇಶೀ ವಿದ್ವಾಂಸರೂ, ಡಾ. ಲಾರೆನ್ ಝನ್ ರಂತಹ ವಿದೇಶೀ ವಿದ್ವಾಂಸರು, ಮತ್ತು ಈಚೆಗೆ ಡಾ. ವಸುಂಧರ ಫಿಯೋಜಾರಂತಹ ಆಧುನಿಕ ವಿದ್ವಾಂಸರೂ ಶೈವ ಸಾಧನಾ ಪಂಥ ಗಳನ್ನು ಕುರಿತು ಸಂಶೋಧನೆ ನಡೆಸಿದ್ದಾರಾದರೂ ಸಾಕಷ್ಟು ಅಗತ್ಯ ದಾಖಲೆಗಳ ಅಭಾವದಿಂದ ಈ ಶೈವಪಂಥಗಳನ್ನು ಕುರಿತು ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. ಲಾಕುಳೀಶರು ಕರ್ನಾಟಕದಲ್ಲಿ ನೆಲೆನಿಂತದ್ದು ಸರಿಸುಮಾರು ಬಾದಾಮಿ ಚಾಲುಕ್ಯರ ಕಾಲದಲ್ಲಾದರೂ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಈ ಪಂಥ ದ ಮಹತ್ವ ಉತ್ಕರ್ಷಕ್ಕೇರಿದ್ದು ಕ್ರಿ.ಶ.12ನೇ ಶತಮಾನದಲ್ಲಿ, ಕಲ್ಯಾಣಿ ಚಾಲುಕ್ಯರ ಆಡಳಿತದ ಅವಧಿಯಲ್ಲಿ. ಈ ಕಾಲದಲ್ಲಿ ಕಾಳಾಮುಖರು ಕರ್ನಾಟಕದ ರಾಜ ಕೀಯದಲ್ಲೂ ಪ್ರಭಾವಿಗಳಾಗಿದ್ದುದಾಗಿ ಅರಸೀಕೆರೆಯ ಸೋಮೇಶ್ವರನ ಶಾಸನ ಮೊದಲಾದವುಗಳಿಂದ ತಿಳಿದುಬರುತ್ತದೆ. ಈ ಮಾರ್ಗದ ಪ್ರಭಾವ ಕರ್ನಾಟಕದ ವಚನ ಚಳುವಳಿಯ ಮೇಲೂ ಸಾಕಷ್ಟು ಆಗಿದ್ದು, ಬಹಳಷ್ಟು ವಚನಕಾರರ ಸಾಧನೆ ಮತ್ತು ವೈಚಾರಿಕತೆಯನ್ನು ಈ ಪಂಥ ಪ್ರಭಾವಿಸಿದೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಇಷ್ಟು ಮಹತ್ವದ್ದಾಗಿದ್ದ ಆಧ್ಯಾತ್ಮಿಕ ಪಂಥವು ಇಂದು ಮುಖ್ಯವಾಹಿನಿಯಿಂದ ದೂರವಾಗಿದೆ. ಇದನ್ನು ಮತ್ತೆ ಶೋಧಿಸಿಕೊಳ್ಳಬೇಕಾದ ಅಗತ್ಯವನ್ನು ವಿವರಿಸಿಕೊಳ್ಳುವುದು ಮತ್ತು ಕಂಡುಕೊಳ್ಳುವುದು ಇಲ್ಲಿನ ಉದ್ದೇಶವಾಗಿದೆ.

Read More »

ಹೊಸಗನ್ನಡದ ಆರಂಭಿಕ ಕತೆಗಳು

ಪ್ರವೀಣ್ ಕುಮಾರ್ ಎಸ್.

68 to 74

ಕನ್ನಡ ಸಾಹಿತ್ಯ ಲೋಕ ಹಲವಾರು ಪ್ರಕಾರಗಳ ಮೂಲಕ ಮಹತ್ವವನ್ನು ಪಡೆದಿದೆ. ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಎಲ್ಲಾ ಕಾಲಘಟ್ಟಗಳಲ್ಲಿಯೂ ಕನ್ನಡದ ಕತೆಗಾರರು ತಮ್ಮ ಕಥಾಬರವಣಿಗೆಯ ಮೂಲಕ ಕಥಾಲೋಕವನ್ನು ಹಾಗೂ ಸಾಹಿತ್ಯಲೋಕವನ್ನು ವಿಸ್ತರಿಸಿದ್ದಾರೆ. ಆದರೆ, ಹೊಸಗನ್ನಡದ ಆರಂಭಿಕ ಬರಹಗಾರರ ಕಥೆಗಳ ವಸ್ತು ಆಲೋಚನ ಕ್ರಮ ಹಾಗೂ ಉದ್ದೇಶಗಳನ್ನು ಅರ್ಥೈಸಿಕೊಳ್ಳದೆ ನಂತರದ ಕಥೆ ಗಳನ್ನು ಅಭ್ಯಾಸ ಮಾಡಿದರೆ ಕನ್ನಡ ಕಥಾ ಸಾಹಿತ್ಯದ ಸಂಪೂರ್ಣ ಅರಿವು ಆಗುವುದಿಲ್ಲ. ಹಾಗಾಗಿ, ಪ್ರಾರಂಭದ ಕಥೆಗಾರರ ಕೆಲವು ಕಥೆ ಗಳ ಚರ್ಚೆಯನ್ನು ಇಲ್ಲಿ ಮಾಡಲಾಗಿದೆ.

Read More »

‘ಅವಳ ಪಥ’ ಒಂದು ನೋಟ

ಸಂದೇಶ್ ಎ. ಎಸ್.

75 to 87

ಜನಪದ ಸಾಹಿತ್ಯದಿಂದ ಇಂದಿನವರೆಗಿನ ಮಹಿಳಾ ಪಯಣವನ್ನು ಇಲ್ಲಿ ದಾಖಲಿಸಲಾಗಿದೆ. ಮಾತೃಪ್ರಧಾನ ಸಂಸ್ಕೃತಿಯಿಂದ, ಪಿತೃಪ್ರಧಾನ ಸಂಸ್ಕೃತಿಯವರೆಗಿನ ಚಲನೆಯನ್ನು ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಧಾರ್ಮಿಕ ನೆಲೆಯ ಹಿನ್ನೆಲೆಯಲ್ಲಿ ಶೋಧಿಸಿದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀ ಪರ ಆಲೋಚನಾ ಕ್ರಮಗಳ ವಿಕಾಸವನ್ನು ಗುರುತಿಸಲಾಗಿದೆ. ಜನಪದ ಸಾಹಿತ್ಯ ಹಾಗೂ ಹಳಗನ್ನಡ ಕಾವ್ಯಗಳಿಂದ ಹಿಡಿದು ಮಹಿಳೆಯರ ಪ್ರಸ್ತುತ ಸಾಹಿತ್ಯಾಭಿವ್ಯಕ್ತಿಯನ್ನು ರೂಪಿಸುತ್ತಿರುವ ಬೌದ್ಧಿಕ ದ್ರವ್ಯ ಯಾವುದೆಂಬುದು ಇಲ್ಲಿ ಶೋಧಿತವಾಗಿದೆ. ವಚನಕಾರ್ತಿಯರ ದೇಸಿ ಮಾದರಿಯಿಂದ ತೊಡಗಿ, ಈ ಕಾಲದ ಪ್ರಮುಖ ತಾತ್ವಿಕತೆಯಾದ ಸ್ತ್ರೀವಾದಿ ಸಿದ್ದಾಂತಗಳವರೆಗೆ ಇಲ್ಲಿನ ಚರ್ಚೆಯ ಹರಹಿದೆ. ನವೋದಯ ಸಾಹಿತ್ಯದ ಸಾಮಾಜಿಕ ಅರಿವು, ಪ್ರಗತಿಶೀಲ ಸಾಹಿತ್ಯದ ವೈಚಾರಿಕ ನಿಲುವು, ನವ್ಯದ ಅಂತರಂಗ ಜಗತ್ತಿನ ಒಳಮುಖಿ ಚಲನೆ, ದಲಿತ-ಬಂಡಾಯ ಕಾಲದಲ್ಲಾದ ರಾಜಕೀಯ ಪ್ರಜ್ಞೆಯ ವಿಕಾಸ, ಪ್ರತಿರೋಧ ಹಾಗೂ ಹಕ್ಕು ಪ್ರತಿಪಾದನೆಗಳ ಹೊಸ ಚಲನೆ, ಸ್ತ್ರೀ ಸಂವೇದನೆಯ ಸೂಕ್ಷ್ಮ ಸ್ತರಗಳ ಅರಿವುಗಳನ್ನು ಇಲ್ಲಿ ಗುರುತಿಸಲಾಗಿದ್ದು, ಮಹಿಳಾ ಕಥಾ ಸಾಹಿತ್ಯದ ಚಲನಶೀಲತೆಯನ್ನು ಸಮಗ್ರವಾಗಿ ಹಿಡಿದಿಡಲಾಗಿದೆ. ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಹೆಣ್ಣು ನಡೆಸುವ ಹೋರಾಟ, ತನ್ನತನದ ಹುಡುಕಾಟವನ್ನು ಒಂದೇ ಸೂತ್ರದಲ್ಲಿ ಹಿಡಿದಿಡಲಾಗಿದೆ.

Read More »

ಅಗ್ನಿ ಶ್ರೀಧರ್ ರವರ ಎದೆಗಾರಿಕೆ: ವಿಮರ್ಶಾತ್ಮಕ ವಿಶ್ಲೇಷಣೆ

ಶಿವರಾಜು ಎನ್‌.

88 to 93

ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಪ್ರಕಟವಾದ ಅಸಲೀ ಕಥನಗಳ ಪೈಕಿ ಅಗ್ನಿ ಶ್ರೀಧರ್ ರವರ 'ಎದೆಗಾರಿಕೆ' ಕಾದಂಬರಿಗೆ ಮಹತ್ವದ ಸ್ಥಾನವಿದೆ. ಕಥೆಯೊಳಗಿರುವ ಪ್ರೇಮ ಕಥೆಯೂ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅಗ್ನಿ ಶ್ರೀಧರ್ ರವರು ಭೂಗತ ಜಗತ್ತಿನ ತಲ್ಲಣಗಳನ್ನು ವಿಭಿನ್ನ ಶೈಲಿಯಲ್ಲಿ ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಎದೆಗಾರಿಕೆ ಸೋನ ಎಂಬ ಮುಂಬೈನ ಸುಫಾರಿ ಕಿಲ್ಲರ್‌ನ ಬದುಕಿನ ತಲ್ಲಣಗಳನ್ನು ಕುರಿತು ಮಾತನಾಡುತ್ತದೆ. ಭಾರತದಂತಹ ದೇಶದಲ್ಲಿ ಉದ್ಯೋಗ ದೊರೆಯದ ಕೆಲ ನಿರುದ್ಯೋಗಿ ಯುವಕರು ಕಾರಣಾಂತರಗಳಿಂದ ಭೂಗತ ಜಗತ್ತನ್ನು ಪ್ರವೇಶಿಸುತ್ತಾರೆ. ಪ್ರಸ್ತುತ ಕೃತಿಯು ಕೆಳ ಮಧ್ಯಮ ವರ್ಗದ ಜನತೆಯ ಬದುಕಿನ ತಲ್ಲಣಗಳನ್ನು ಕುರಿತು ಮಾತನಾಡುತ್ತದೆ. ಏಕೆಂದರೆ ಪ್ರಸ್ತುತ ಕಾದಂಬರಿಯ ಕಥಾನಾಯಕ, ಕಥಾನಾಯಕಿ ಇಬ್ಬರೂ ಸಹ ಕೆಳ ಮಧ್ಯಮ ವರ್ಗದವರೇ. ಅವರ ಜೀವನದಲ್ಲಿ ದಡ ಸೇರದಿರಲು ಅವರ ಬಡತನವೇ ಕಾರಣವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾದಂಬರಿಯ ಶೀರ್ಷಿಕೆಯ ಬಗ್ಗೆ ಒಂದೆರಡು ಮಾತುಗಳನ್ನಾಡಲೇಬೇಕು. ಕಥಾನಾಯಕ ಸೋನುವಿಗೆ ಸಾವು ಎದುರಾಗಿದ್ದರೂ ಆತ ಸಾವಿಗೆ ಅಂಜುವುದಿಲ್ಲ. ಸೋನು ತಪ್ಪಿಸಿಕೊಳ್ಳಲು ಶ್ರೀಧರ್ ರವರು ಹಲವಾರು ಬಾರಿ ಅವಕಾಶಗಳನ್ನು ಸೃಜನೆ ಮಾಡಿಕೊಟ್ಟರೂ ಸಹ ಸೋನು ತಪ್ಪಿಸಿಕೊಳ್ಳುವುದಿಲ್ಲ. ಆ ಕಾರಣದಿಂದ ಕೃತಿಗೆ ನೀಡಿರುವ ಎದೆಗಾರಿಕೆ ಎಂಬ ಶೀರ್ಷಿಕೆ ಅರ್ಥಪೂರ್ಣವಾಗಿದೆ.

Read More »

ಶಾಸ್ತ್ರೀಯ ಭಾಷಾ ಸ್ಥಾನಮಾನದ ಚಾರಿತ್ರಿಕ ಹಿನ್ನೋಟ

ಮನೋಹರ ಕೆ. ಜಿ.

94 to 106

ಅತ್ಯಂತ ಪ್ರಾಚೀನವೂ ಸ್ವತಂತ್ರವೂ ಸುದೀರ್ಘ ಸಮೃದ್ಧ ಸಾಹಿತ್ಯ ಪರಂಪರೆಯನ್ನು ಉಳ್ಳದ್ದು ಮತ್ತು ಹೆಚ್ಚು ಜನಬಳಕೆಯಲ್ಲಿದ್ದ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಕರೆಯುತ್ತಾರೆ. ಶಾಸ್ತ್ರೀಯ ಎನ್ನುವುದಕ್ಕೆ ಸನಾತನ, ಪ್ರಾಚೀನ, ಪಾರಂಪರಿಕ, ಶಾಸ್ತ್ರ ಸಮ್ಮತವಾದ ಎಂಬರ್ಥಗಳಿವೆ. ಪ್ರಪಂಚದ ಅತಿ ಪ್ರಾಚೀನ ಮತ್ತು ಸಮೃದ್ಧವಾದ ಭಾಷೆಗಳನ್ನು ಕ್ಲಾಸಿಕಲ್ ಭಾಷೆಗಳೆಂದು, ಶಾಸ್ತ್ರೀಯಭಾಷೆಗಳೆಂದು ಕರೆಯುತ್ತಾರೆ. ಪ್ರಪಂಚದಲ್ಲಿರುವ ಶಾಸ್ತ್ರೀಯ (ಕ್ಲಾಸಿಕಲ್) ಭಾಷೆಗಳನ್ನು ಯುನೆಸ್ಕೋ ಮೂರು ವರ್ಗದಲ್ಲಿ ಗುರುತಿಸಿದೆ. ಕ್ಲಾಸಿಕಲ್ ಗ್ರೀಕ್, 1. ಇಂಡೋ ಯುರೋಪಿಯನ್ ಭಾಷೆಗಳು ಲ್ಯಾಟಿನ್, ಸಂಸ್ಕೃತ, ಕ್ಲಾಸಿಕಲ್, ಪರ್ಷಿಯನ್. 2. ಆಪ್ರೊ ಏಷಿಯಾಟಿಕ್ ಭಾಷೆಗಳು - ಕ್ಲಾಸಿಕಲ್ ಅರೇಬಿಕ್, ಹೀಬ್ರೂ. 3. ಸಿನೋ ಟಿಬೇಟಿಯನ್ ಭಾಷೆಗಳು - ಕ್ಲಾಸಿಕಲ್ ಚೈನೀಸ್. ಈ ರೀತಿಯಾಗಿ ಯುನೆಸ್ಕೋ ಪಟ್ಟಿ ಮಾಡಿದ ಕ್ಲಾಸಿಕಲ್ ಭಾಷೆಗಳು ಒಂದು ಕಾಲದಲ್ಲಿ ಜೀವಂತ ಭಾಷೆ ಸಾಹಿತ್ಯ ಸಮೃದ್ಧಿಗಳನ್ನು ಹೊಂದಿದ್ದು, ಅನ್ಯ ಭಾಷೆ ಸಾಹಿತ್ಯಗಳ ಮೇಲೆ ಪ್ರಭಾವ ಪ್ರೇರಣೆಗಳನ್ನು ನೀಡಬಲ್ಲ ಮೌಲ್ಯಗಳಿಂದ ಕೂಡಿದ್ದು ಕ್ರಮೇಣ ಬಳಕೆಯಿಲ್ಲದ ಕಾರಣದಿಂದಾಗಿ ಈ ಭಾಷೆಗಳು ಅವಸಾನಗೊಂಡಿವೆ. ಹೀಗೆ ಅವಸಾನಗೊಂಡಂತಹ ಭಾಷೆಗಳನ್ನು ಅವುಗಳ ಲಿಖಿತ ಸ್ವರೂಪದ ಸಾಹಿತಿಕ ದಾಖಲೆಗಳನ್ನು ಆಧರಿಸಿ ಅವುಗಳನ್ನು ಜಾಗತಿಕ ಕ್ಲಾಸಿಕಲ್ ಭಾಷೆಯೆಂದು ಕರೆಯುತ್ತಾರೆ. ಭಾಷೆಗಳನ್ನು ಶಾಸ್ತ್ರೀಯ ಭಾಷೆಯೆಂದು ಮಾನ್ಯ ಮಾಡುವ ಪರಿಪಾಠ ಹಿಂದೇ ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿ ಬಳಕೆಯಲ್ಲಿರುವುದು ಚರಿತ್ರೆಯಲ್ಲಿ ಉಲ್ಲೇಖಗೊಂಡಿದೆ. ಮೊಘಲರ ನಂತರ ಆಡಳಿತದ ಚುಕ್ಕಾಣಿ ಹಿಡಿದ ಬ್ರಿಟಿಷರು ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಪರಿಗಣಿಸಿದರು. ಇದಕ್ಕೆ ಮುಖ್ಯ ಕಾರಣ ಪರ್ಶಿಯನ್, ಅರೇಬಿಕ್ ಧಾರ್ಮಿಕ ಕೆಲಸಗಳಲ್ಲಿ ಬಳಕೆಯಾಗುತ್ತಿದ್ದು, ಶ್ರೇಷ್ಠವೆಂದು ಭಾವಿಸಿದ್ದುದ್ದು ಅಲ್ಲದೆ ಇವುಗಳು ತಮ್ಮ ಶಬ್ದ ಸಂಪತ್ತಿನ ಮೂಲಕ ಇತರೆ ಭಾಷೆಗಳನ್ನು ಬೆಳೆಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. ಹಾಗಾಗಿ ಇವುಗಳನ್ನು ಯುನೆಸ್ಕೋ ಸಹ ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಿದೆ. ಭಾರತವೂ ಬಹುಭಾಷಿಕ ದೇಶ, ಇಲ್ಲಿ ನೂರಾರು ಭಾಷೆಗಳು, ಉಪಭಾಷೆಗಳು, ಬುಡಕಟ್ಟು ಭಾಷೆಗಳು ಇವೆ. ಇವುಗಳಲ್ಲಿ ಪ್ರಮುಖವಾದವುಗಳನ್ನು ಸಂವಿಧಾನ 8ನೇ ಅನುಸೂಚಿಯಲ್ಲಿ ಅಧಿಕೃತ ಭಾರತದ ಭಾಷೆಗಳೆಂದು ಗುರುತಿಸಿದೆ.

Read More »

ಕಂಪ್ಲಿಯ 'ಕುಮಾರ ರಾಮ: ಒಂದು ಚಾರಿತ್ರಿಕ ನೋಟ

ನಾಯಕರ ಹುಲುಗಪ್ಪ

107 to 113

ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ಕುಮಾರ ರಾಮನ ಇತಿಹಾಸ ಭವ್ಯವಾದುದು ಮತ್ತು ಅಮೋಘವಾದುದು. ತಾನು ಬದುಕಿ ಬಾಳಿದ ಕಡಿಮೆ ಅವಧಿಯಲ್ಲಿ ಚರಿತ್ರೆಯನ್ನು ಸೃಷ್ಟಿಸಿದ ತಳಸಮುದಾಯದ ವ್ಯಕ್ತಿ ಎಂದರೆ ಕುಮಾರರಾಮ. ಇವರ ಕುಮ್ಮಟದುರ್ಗದ ಮನೆತನದ ಇತಿಹಾಸ ಕೇವಲ ಐವತ್ತು ವರ್ಷ. ಆ ಸಂದರ್ಭದಲ್ಲಿ ಉತ್ತರ ಭಾರತದ ಬಲಾಡ್ಯ ಮುಸ್ಲಿಂ ಸೈನ್ಯವನ್ನು ದಕ್ಷಿಣದ ಕಡೆಗೆ ಬಾರದಂತೆ ತಡೆದಿದ್ದ ವ್ಯಕ್ತಿ ಕುಮಾರರಾಮ. ಅಂತಹ ವ್ಯಕ್ತಿಯ ಐತಿಹಾಸಿಕ ನೋಟವನ್ನು ಈ ಲೇಖನದ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ವಿಜಯನಗರ ಪೂರ್ವದ ಇತಿಹಾಸದಲ್ಲಿ ಕುಮ್ಮಟದ ನಾಯಕರ ಮನೆತನದಲ್ಲಿ ಮೂರನೇಯ ಹಾಗೂ ಕೊನೆಯ ಅರಸನಾಗಿ ಕುಮಾರ ರಾಮ ಉಲ್ಲೇಖಿತನಾಗಿದ್ದ. ಐತಿಹಾಸಿಕ ಆಕರಗಳಲ್ಲಿ ಈತನ ಬಗೆಗೆ ಹೆಚ್ಚಿನ ವಿವರಗಳು ಲಭಿಸದೆ ಹೋದರೂ ಮೌಖಿಕ ಸಾಹಿತ್ಯ ಪರಂಪರೆಯಲ್ಲಿ, ಆಧುನಿಕ ಪೂರ್ವ ಸಾಹಿತ್ಯ ಕೃತಿಗಳಲ್ಲೂ ಈತನ ಬಗೆಗೆ ಸಾಕಷ್ಟು ವಿವರಗಳು ಲಭ್ಯವಾಗುತ್ತವೆ. ಪರನಾರಿ ಸಹೋದರನಾಗಿ, ಶತ್ರು ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದ ಪರಾಕ್ರಮಿ ಎಲ್ಲಕ್ಕೂ ಮುಖ್ಯವಾಗಿ ಜನಪದರ ಆರಾಧ್ಯ ದೈವವಾಗಿ, ಸ್ಥಳೀಯ ಜನಮಾಸದಲ್ಲಿ ನೆಲೆ ನಿಂತಿರುವ ಕುಮಾರ ರಾಮ ಕನ್ನಡ ನಾಡಿನ ಓರ್ವ ಸಾಂಸ್ಕೃತಿಕ ನಾಯಕನನ್ನಾಗಿ ಕಾವ್ಯಗಳು ರಚನೆಗೊಂಡಿವೆ. ಅವುಗಳಲ್ಲಿ ಹದಿನಾರನೇ ಶತಮಾನದ ನಂಜುಂಡ ಕವಿಯ 'ರಾಮನಾಥ ಚರಿತೆ'ಯು ಕುಮಾರ ರಾಮನ ಸಾಂಗತ್ಯ ಎಂದೇ ಪ್ರಸಿದ್ಧವಾಗಿದೆ. ಐತಿಹಾಸಿಕ ಆಕರಗಳೊಂದಿಗೆ ಸಾಂಗತ್ಯ ಕೃತಿಯನ್ನು ಪ್ರಮುಖ ಆಧಾರವಾಗಿಸಿಕೊಂಡು ಹೊಸಗನ್ನಡ ಸಂದರ್ಭದಲ್ಲೂ ಕುಮಾರ ರಾಮನಿಗೆ ಸಂಬಂಧಿಸಿದ ವಿವಿಧ ಪ್ರಕಾರಗಳು ಹಲವಾರು ಕೃತಿಗಳು ರಚನೆಗೊಂಡಿವೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಐತಿಹಾಸಿಕ ವ್ಯಕ್ತಿ ಮತ್ತು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಸ್ಪೂರ್ತಿ ಎಂದು ಪೂಜಿಸಲ್ಪಟ್ಟಿದ್ದಾನೆ. ಕುಮಾರ ರಾಮ ಕಂಪ್ಲಿ ಕೋಟೆಯ, ಕಂಪಿಲಿ ರಾಯನ ಮಗ, ಕಂಪ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ ಮತ್ತು ಇದು ಕಂಪ್ಲಿ ತಾಲೂಕಿನ ಕೇಂದ್ರಸ್ಥಾನವಾಗಿದೆ. ಕುಮಾರ ರಾಮನು ವಾರಂಗಲ್‌ನ ಕಾಕತೀಯರು, ಹಳೇಬೀಡಿನ ಹೊಯ್ಸಳರು ಮತ್ತು ಉತ್ತರ ಭಾರತದ ಮುಸ್ಲಿಂ ಅರಸರ ನಡುವೆ ನಿರಂತರ ಯುದ್ಧಗಳನ್ನು ಮಾಡಿ ಜಯಶೀಲನಾಗಿದ್ದನು. ಉತ್ತಮ ಸದ್ಗುಣಗಳನ್ನು ಹೊಂದಿದ್ದ ಕುಮಾರ ರಾಮನು, ತನ್ನ ಚಿಕ್ಕ ವಯಸ್ಸಿನಲ್ಲಿಯೇ ಮುಸ್ಲಿಂ ಸೇನೆಯೊಂದಿಗೆ ಹೋರಾಡಿ ಮರಣಹೊಂದಿದನು.

Read More »

ಧರ್ಮದ ಒಳಗಡೆ ಸಿಲುಕಿದ ಮುಸ್ಲಿಂ ಮಹಿಳೆ

ನೇತ್ರಾವತಿ ಎಸ್.

114 to 127

ಧರ್ಮ ಎಂದರೆ ಮಾನವೀಯ ಮೌಲ್ಯಗಳನ್ನು, ಅಹಿಂಸೆಯಿಂದ ಕೂಡಿರುವಂತಹದ್ದು, ಎಲ್ಲರನ್ನು ಪ್ರೀತಿಯಿಂದ, ಮಮತೆಯಿಂದ ನೋಡಿಕೊಳ್ಳುವುದನ್ನು ಧರ್ಮ ಎನ್ನಬಹುದು. ಹಾಗೆಯೇ ಯಾವುದೇ ಆಚಾರ-ವಿಚಾರಗಳನ್ನು, ಮಾನವ ಸಂಬಂಧಗಳನ್ನು ಪವಿತ್ರ ಭಾವನೆಯಿಂದ, ಯಾವುದೇ ಜೀವಿಗೂ ತೊಂದರೆಯನ್ನು ನೀಡದೆ ನಡೆಸಿಕೊಳ್ಳುವುದನ್ನು ಧರ್ಮ ಎಂದು ಹೇಳಬಹುದು. ಭಾರತ ಹಲವು ಧರ್ಮಗಳನ್ನು ಒಳಗೊಂಡಿದೆ, ಅದರಲ್ಲಿ ಮುಸ್ಲಿಂ ಧರ್ಮವೂ ಒಂದು. ಹಿಂದೂಗಳಂತೆ ಮುಸ್ಲಿಂ ಧರ್ಮದವರನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗುರುತಿಸಬಹುದು. ಯಾವುದೇ ಧರ್ಮದಲ್ಲಾದರೂ ಮಹಿಳೆಯರಿಗೆ ಸ್ವಾತಂತ್ರ್ಯ ದೊರೆಯುವುದು ತೀರ ಕಡಿಮೆ ಪ್ರಮಾಣದಲ್ಲಿ, ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪ್ರಾಚೀನ ಕಾಲದಲ್ಲಿ ಗೌರವ, ಮನ್ನಣೆ, ತಮ್ಮ ಬದುಕನ್ನು ಅವರೇ ನಿರ್ಮಿಸಿಕೊಳ್ಳುವ ಅವಕಾಶ, ಸ್ವಾತಂತ್ರ್ಯ ಇತ್ತು. ಆದರೆ ಕಾಲಾನಂತರ ಎಲ್ಲವೂ ಕಣ್ಮರೆಯಾಗಿ ಮಹಿಳೆಯರು ಕೇವಲ ಪುರುಷನ ಬೇಕುಬೇಡಗಳನ್ನು ಈಡೇರಿಸುವ ಒಂದು ವಸ್ತುವಾಗಿ ಮಾರ್ಪಟ್ಟಿದ್ದನ್ನು ಕಾಣಬಹುದು. ಪ್ರಸ್ತುತ ಲೇಖನವನ್ನು ಮುಸ್ಲಿಂ ಧರ್ಮದ ಮಹಿಳೆ ಧರ್ಮದ ಹಿನ್ನೆಲೆಯಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಮುಸ್ಲಿಂ ಲೇಖಕರು ರಚಿಸಿದ ಕತೆ, ಕಾದಂಬರಿಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗುತ್ತದೆ.

Read More »

ಕೊಡಗು ಜಿಲ್ಲೆಯಲ್ಲಿ ಎರವ ಬುಡಕಟ್ಟು ಜನರ ಸ್ಥಿತಿಗತಿ

ಪ್ರಸನ್ನ

128 to 131

ಎರವ ಬುಡಕಟ್ಟು ಜನರು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಅವರ ಸಂಖ್ಯೆ ಹೆಚ್ಚಾಗಿ ಇದ್ದು ಪೊನ್ನಂಪೇಟೆ ಬಳಿ ತಿತಿಮತಿ ಗ್ರಾಮಕ್ಕೆ ಹೊಂದಿಕೊಂಡಂತೆ ಎರವರ ಸಾಕಷ್ಟು ಹಾಡಿಗಳು ಇರುತ್ತವೆ. ಈ ಎಲ್ಲಾ ಹಾಡಿಗಳು ತಮ್ಮದೇ ಆದ ಮೂಲ ಸ್ವರೂಪವನ್ನು ಉಳಿಸಿಕೊಂಡು ಸಾಗುತ್ತಿರುವುದು ಕಂಡುಬರುತ್ತದೆ. ಆದರೆ ಇಂದಿಗೆ ಈ ಹಾಡಿಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಆತಂಕದಲ್ಲಿವೆ. ಯಾವುದೇ ಬುಡಕಟ್ಟು ಜನರು ಅರಣ್ಯದಲ್ಲಿ ಇದ್ದಷ್ಟು ದಿನ ಅವರುಗಳು ಕಾಡನ್ನು ದೇವರಂತೆ ಪೂಜಿಸುತ್ತಾ ಈ ಮುಲಕ ಕಾಡುಗಳನ್ನು ರಕ್ಷಿಸುವುದರೊಂದಿಗೆ ಕಾಡನ್ನು ಬೆಳೆಸುತ್ತಾರೆ. ಅರಣ್ಯದಲ್ಲಿ ಬುಡಕಟ್ಟು ಜನರು ವಾಸವಿದ್ದಾರೆ ಎಂಬ ಭಯದಿಂದಲೇ ಕಾಡುಗಳ್ಳರ ಹಾವಳಿ ತಪ್ಪುತ್ತದೆ ಮತ್ತು ಅರಣ್ಯದೊಳಗಿರುವ ಔಷಧಿಯ ಗುಣದ ಸಾಕಷ್ಟು ಗಿಡಗಳು ಸಂರಕ್ಷಿಸಲ್ಪಡುತ್ತವೆ. ಇದು ರಾಷ್ಟ್ರದ ಸಂಪತ್ತಾಗಿ ಗೋಚರಿಸುತ್ತದೆ. ಆದರೆ ಇಂದು ಬುಡಕಟ್ಟು ಜನರಲ್ಲಿ ಅದರಲ್ಲಿಯೂ ಎರವರಲ್ಲಿ ಆಧುನಿಕತೆ, ನವನಗರಿಕತೆ ಹೆಸರಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸರ್ಕಾರಗಳ ಕೆಲವು ನೀತಿ-ನಿಯಮಗಳಿಂದಾಗಿ ತಮ್ಮೆಲ್ಲ ಮೂಲ ಸ್ವರೂಪವನ್ನು ಕಳಚಿಕೊಳ್ಳುವ ಹಂತಕ್ಕೆ ಇವರು ತಲುಪಿದ್ದಾರೆ. ಇದಕ್ಕೆ ಹಲವಾರು ಕಾರಣಗಳು ಕಂಡುಬರುತ್ತವೆ. ಸರ್ಕಾರವು ಈ ಬಡಜನರ ಒಕ್ಕಲೆಬ್ಬಿಸುವ ಕೆಲವು ನೀತಿಗಳು, ಹಲವಾರು ಸರ್ಕಾರದ ಯೋಜನೆಗಳು ಇಂತಹ ಎರವ ಬುಡಕಟ್ಟು ಜನರನ್ನು ತಲುಪದೇ ಇರುವಂತಹ ಸ್ಥಿತಿ, ಬರುತ್ತಿರುವ ಸೌಲಭ್ಯಗಳನ್ನು ಕೆಲವು ಪಟ್ಟಭದ್ರಹಿತಾಸಕ್ತಿಗಳು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಹಾಗೂ ಈ ಎಲ್ಲಾ ಸವಲತ್ತುಗಳು ಇದ್ದರು ಬಳಸಿಕೊಳ್ಳಲು ಸಾಧ್ಯವಾಗದಿರುವುದು. ಈ ಎಲ್ಲಾ ವಿಷಯಗಳನ್ನು ಗುರುತಿಸುವುದು ಈ ಲೇಖನದ ಉದ್ದೇಶವಾಗಿದೆ.

Read More »