ಯುಗ ಪ್ರವರ್ತಕ ಕವಿ ಹರಿಹರ ಮತ್ತು ಮಹಾಕವಿ ಸೇಕ್ಕಿಲಾರ್

Main Article Content

ಇಂದಿರಾ ಶರಣ ಜಮ್ಮಲದಿನ್ನಿ

Abstract

ಮನುಷ್ಯನ ಸಂಕೀರ್ಣ ಜೀವನಕ್ಕೆ ಉನ್ನತವಾದ ಮೌಲ್ಯಗಳನ್ನು ದೊರಕಿಸಿಕೊಟ್ಟ ನಮ್ಮ ಅನೇಕ ಪ್ರಾಚೀನ ಕವಿಗಳ ಸಾಲಿನಲ್ಲಿ ನಿಲ್ಲುವ ಕವಿ; ಸಹಸ್ರ ವರ್ಷಗಳ ಕನ್ನಡ ಸಾಹಿತ್ಯ ಶ್ರೇಣಿಯಲ್ಲಿ ಪಂಪ, ಕುಮಾರವ್ಯಾಸನಂತೆ ಕಂಗೊಳಿಸುವ ಮಹೋನ್ನತ ಶಿಖರದಂತಿರುವ ಕವಿ ಹರಿಹರ, ಶರಣ ಜೀವನ ಮತ್ತು ವಚನ ಸಾಹಿತ್ಯ ಚಳವಳಿ ಒಂದು ಮಹಾಪೂರದಂತೆ ಬಂದು ಇಳಿದ ಮೇಲೆ ಅದರ ನೆನಪಿನಿಂದ ಪ್ರೇರಣೆ ಹೊಂದಿ ಸಾಹಿತ್ಯ ನಿರ್ಮಾಣ ಮಾಡಿದವರಲ್ಲಿ ಹರಿಹರನೂ ಒಬ್ಬ. ಹರಿಹರನು ಬಸವಾದಿ ಶರಣರ ಬಗ್ಗೆ ದಾಖಲಿಸದೇ ಹೋಗಿದ್ದರೆ ಕರ್ನಾಟಕದ ಬಹುಮುಖ್ಯ ಘಟ್ಟದ ವಿವರಗಳನ್ನು ಕಳೆದುಕೊಳ್ಳುತ್ತಿದ್ದೆವು. ಪುರಾತನ ಶರಣರ ಚರಿತ್ರೆಗಳನ್ನು ಕಾವ್ಯಗೊಳಿಸುವುದು ಎಂದರೆ ಅವರ ಮೌಲ್ಯಗಳನ್ನು ಕಾವ್ಯಗೊಳಿಸುವುದೇ ಆಗಿದೆ. ಇದೇ ರೀತಿ ಹರಿಹರನ ಸಮಕಾಲೀನರಾದ ತಮಿಳುನಾಡಿನ ಮಹಾಕವಿ ಸೇಕ್ಕಿಲಾ‌ರ್ ಅವರು ತಮಿಳಿನಲ್ಲಿ ಶೈವ ನಾಯನ್ ಮಾರರ (ಶರಣರ) ಜೀವನ ಕಥೆಯನ್ನು ವಿವರಿಸುವ 4253 ಪದ್ಯಗಳನ್ನು 'ಪೆರಿಯ ಪುರಾಣಂ' ಎಂಬ ಕೃತಿಯಲ್ಲಿ ರಚಿಸಿದ್ದಾರೆ. ಈ ಇಬ್ಬರು ಕವಿಗಳು ರಚಿಸಿರುವ ಶಿವಶರಣರ ಸಾಮಾನ್ಯ ಜೀವನದ ತಾತ್ವಿಕ ಚಿಂತನೆಗಳನ್ನು ತೌಲನಿಕವಾಗಿ ಅಭ್ಯಾಸ ಮಾಡುವುದು ನನ್ನ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ.

Article Details

Section

Essay

Author Biography

ಇಂದಿರಾ ಶರಣ ಜಮ್ಮಲದಿನ್ನಿ

ಕನ್ನಡ ಶಿಕ್ಷಕಿ, ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್, ಯಲಹಂಕ, ಬೆಂಗಳೂರು.

How to Cite

ಇಂದಿರಾ ಶರಣ ಜಮ್ಮಲದಿನ್ನಿ. (2024). ಯುಗ ಪ್ರವರ್ತಕ ಕವಿ ಹರಿಹರ ಮತ್ತು ಮಹಾಕವಿ ಸೇಕ್ಕಿಲಾರ್. ಅಕ್ಷರಸೂರ್ಯ (AKSHARASURYA), 3(01), 153 to 155. https://aksharasurya.com/index.php/latest/article/view/690

References

ಶಂಕರ ಕೆದಿಲಾಯ. (1974) ಪೆರಿಯ ಪುರಾಣಂ. ಮದ್ರಾಸ್ ವಿಶ್ವ ವಿದ್ಯಾಲಯ. ಮದ್ರಾಸ್.

ಹಿರೇಮಠ ಆರ್. ಸಿ. (ಸಂ). (1973) ಮಹಾಕವಿ ಹಂಪೆಯ ಹರಿಹರ ದೇವ ಕೃತ ಪುರಾತನರ ರಗಳೆಗಳು. ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ.

ಕಲಬುರ್ಗಿ ಎಂ. ಎಂ. (1991) ಹರಿಹರನ ರಗಳೆಗಳು. ಹಂಪಿ ವಿಶ್ವ ವಿದ್ಯಾಲಯ, ಹಂಪಿ.