ಲಕ್ಷ್ಮೀಶನ ಜೈಮಿನಿಭಾರತದಲ್ಲಿ ಶೋಷಣೆಯ ನೆಲೆಗಳು

Authors

  • ASHWINI R. S.

Keywords:

ಲಕ್ಷ್ಮೀಶ, ಜೈಮಿನಿ ಭಾರತ, ಶೋಷಣೆಯ ನೆಲೆಗಳು, ಸೀತಾಪರಿತ್ಯಾಗ, ಅರ್ಜುನ-ಬಬ್ರುವಾಹನ ಕಾಳಗ, ಚಂದ್ರಹಾಸನ ಕಥೆ

Abstract

ಲಕ್ಷ್ಮೀಶನ ಜೈಮಿನಿ ಭಾರತ ಹಲವು ಕಥೆಗಳ ಒಂದು ಸಂಕಲನ. ವೈವಿಧ್ಯಮಯ ಉಪಕಥೆಗಳಿಂದ ವ್ಯಕ್ತಿ ಪ್ರಧಾನ ನೆಲೆಯಲ್ಲಿ ರಚಿತಗೊಂಡ ಸುಂದರ ಕಾವ್ಯ. ಸೀತೆ, ಬಬ್ರುವಾಹನ ಹಾಗೂ ಚಂದ್ರಹಾಸನ ಕಥೆಗಳು ಕರುಣಾ ರಸಗಳ ಸಂಗಮವಾಗಿವೆ. ಕಾವ್ಯದ ಪ್ರತಿ ಪಾತ್ರಗಳು ಮಾನವೀಯತೆಯ ನೆಲೆಯಲ್ಲಿ ಸಾಣೆಹಿಡಿದ ಸಮರ್ಥ ನಿರೂಪಣೆ ಎನಿಸಿದರೂ ಸೀತಾವನವಾಸ, ಬಬ್ರುವಾಹನನ ಕಾಳಗ ಹಾಗೂ ಚಂದ್ರಹಾಸನ ಬಾಲ್ಯದ ವಿವರಣೆಗಳು ಅಮಾನವೀಯತೆಯ ಸಂಕಟವನ್ನುಂಟುಮಾಡುತ್ತವೆ. ಕವಿ ತಾನು ಬದುಕಿದ್ದ ಸಾಮಾಜಿಕ ವಾತಾವರಣಕ್ಕೆ ಕಟ್ಟುಬಿದ್ದು ಈ ಪಾತ್ರಗಳನ್ನು ನಿರ್ವಹಿಸಿರುವುದು ದುರಂತವೇ ಸರಿ. ಎಲ್ಲಾ ಕಾಲದಲ್ಲೂ ಹೆಣ್ಣು ಶೋಷಣೆಗೆ ಒಳಪಡುವವಳು ಎಂಬುದನ್ನು ಸಾಬೀತುಮಾಡುವ ಸಾಮಾಜಿಕ ಶೋಷಣೆಯ ಪ್ರತೀಕದಂತೆ ಇಲ್ಲಿ ಸೀತೆ ಪಾತ್ರ ಚಿತ್ರಿಸಲ್ಪಟ್ಟಿದೆ. ವೈದಿಕಶಾಹಿ ವ್ಯವಸ್ಥೆ ಹಾಗೂ ಪ್ರಭುತ್ವ ಧೋರಣೆಗೆ ನಲುಗುವ ಪಾತ್ರಗಳಾಗಿ ಬಬ್ರುವಾಹನ ಹಾಗೂ ಚಂದ್ರಹಾಸರ ಪಾತ್ರಗಳು ಮೂಡಿಬಂದಿವೆ. ಹೀಗೆ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಈ ಮೂರು ಗತಿವಿಹೀನ ಪಾತ್ರಗಳ ಅಂತರಂಗಶೋಧನೆಯ ಕಿರು ಪ್ರಯತ್ನವೇ ಈ ಲೇಖನ.

Downloads

Published

05.12.2023

How to Cite

ASHWINI R. S. (2023). ಲಕ್ಷ್ಮೀಶನ ಜೈಮಿನಿಭಾರತದಲ್ಲಿ ಶೋಷಣೆಯ ನೆಲೆಗಳು. AKSHARASURYA, 2(13), 48–54. Retrieved from https://aksharasurya.com/index.php/latest/article/view/276

Issue

Section

ಸಂಶೋಧನಾ ಲೇಖನಗಳು. | RESEARCH ARTICLE.