ನಿರ್ಮಾಪಕ ಜಯಣ್ಣ – ಬೊಗೇಂದ್ರ ಅವರ ಕನ್ನಡ ಪ್ರೇಮ.

Authors

  • SHIVARAJU N.

Keywords:

ಮಾಧ್ಯಮ, ಸಿನಿಮಾ, ಸ್ಪರ್ಧೆ, ವಿತರಣೆ, ಕನ್ನಡ, ಭಾಷೆ, ನಿರ್ಮಾಣ, ತಾಂತ್ರಿಕತೆ

Abstract

ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆಯು ಅತಿ ಪ್ರಾಚೀನ ಭಾಷೆಯಾಗಿದ್ದು, ಕನಿಷ್ಠ ೨ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಸರಿ ಸುಮಾರು ೨ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಒಂದರ್ಥದಲ್ಲಿ ಅವನತಿಯ ಅಂಚಿನಲ್ಲಿದೆ. ದಿನೇ ದಿನೇ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡಿಗರು ಭಾಷಿಕ ಅಲ್ಪಸಂಖ್ಯಾತರಾಗಿದ್ದಾರೆ. ಹೊರ ರಾಜ್ಯದಿಂದ ಬಂದವರು ಕನ್ನಡ ಭಾಷೆ ಕಲಿಯಲು ಆಸಕ್ತಿ ತೋರುತ್ತಿಲ್ಲ. ಪೋಷಕರು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಉದ್ಯೋಗ ದೊರೆಯುವುದಿಲ್ಲ ಎಂಬ ಕಾರಣದಿಂದ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಇಷ್ಟ ಪಡುವುದಿಲ್ಲ. ಆಂಗ್ಲ ಮಾಧ್ಯಮದ ಪೈಪೊಟಿ, ಪರಭಾಷಿಕರ ಹಾವಳಿ, ಸರ್ಕಾರದ ಕಠಿಣ ನೀತಿ ನಿಯಮಗಳು, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸರ್ಕಾರಗಳು ವಿಫಲವಾಗಿರುವುದು ಇತ್ಯಾದಿ ಕಾರಣಗಳಿಂದ ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ. ಯಾವುದೇ ಒಂದು ಭಾಷೆಯ ಅಸ್ತಿತ್ವದ ಉಳಿವಿಗಾಗಿ ಶ್ರಮಿಸುವ ಮಾಧ್ಯಮಗಳ ಪೈಕಿ ದೃಶ್ಯ ಮಾಧ್ಯಮಗಳ ಪಾತ್ರ ಮಹತ್ವಪೂರ್ಣವಾದದ್ದು. ನಿರ್ಮಾಪಕ ಜಯಣ್ಣ-ಬೋಗೇಂದ್ರರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಕುರಿತು ಬೆಳಕು ಚೆಲ್ಲುವುದು ನನ್ನ ಲೇಖನ ರಚನೆಯ ಹಿಂದಿನ ಉದ್ದೇಶ.

Downloads

Published

05.11.2023

How to Cite

SHIVARAJU N. (2023). ನಿರ್ಮಾಪಕ ಜಯಣ್ಣ – ಬೊಗೇಂದ್ರ ಅವರ ಕನ್ನಡ ಪ್ರೇಮ. AKSHARASURYA, 2(12), 156 to 162. Retrieved from https://aksharasurya.com/index.php/latest/article/view/273

Issue

Section

ಪ್ರಬಂಧ. | ESSAY.