ಕನ್ನಡ ಮತ್ತು ಬಂಗಾಳಿ ಸಾಹಿತ್ಯಕ್ಕಿರುವ ಸಂಬಂಧ

Main Article Content

ಸುನಿತಾ ಜೆ.ಕೆ.

Abstract

ಒಂದೂವರೆ ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವು ಕನ್ನಡ ನಾಡು-ನುಡಿಗಿದೆ. ದ್ರಾವಿಡ ಭಾಷಾ ವರ್ಗದಲ್ಲಿ ಕನ್ನಡ ಭಾಷೆಯ ಶ್ರೀಮಂತಿಕೆ ಮತ್ತು ಅದರ ಸಾಂಸ್ಕೃತಿಕ ವೈವಿಧ್ಯ ಎದ್ದು ಕಾಣುತ್ತದೆ. ಕನ್ನಡ ಭಾಷಾ ಸಾಹಿತ್ಯ ತನ್ನ ಭಾಷಿಕ, ಸಾಂಸ್ಕೃತಿಕ, ಸಾಹಿತ್ಯಕ ಅನನ್ಯತೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಭಾರತೀಯ ಅನೇಕ ಭಾಷೆಗಳೊಂದಿಗೆ ಇದರ ಕೊಂಡುಕೊಳ್ಳುವಿಕೆ ನಿರಂತರ ಸಾಗುತ್ತಿದೆ. 
ಬ್ರಿಟಿಷರು ಭಾರತದಲ್ಲಿ ಮೊದಲು ಕಾಲಿಟ್ಟಿದ್ದು ಬಂಗಾಳದಲ್ಲಿ. ಹೀಗಾಗಿ ಮಿಕ್ಕೆಲ್ಲಾ ಭಾರತೀಯ ಭಾಷೆಗಳಿಗಿಂತ ಮೊದಲೇ ಬಂಗಾಲಿ ಭಾಷೆ ಇಂಗ್ಲೀಷಿನ ಪ್ರಭಾವಕ್ಕೆ ಒಳಗಾಯಿತು. ಅದರಲ್ಲಿಯೂ ಇಂಗ್ಲೀಷಿನ ನವೋದಯ ಸಾಹಿತ್ಯವು ಬಂಗಾಳಿ ಸಾಹಿತ್ಯ ಸೇರಿದಂತೆ ಇತರೆ ಭಾಷೆಯ ಲೇಖಕರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಭಾರತದ ಇತರೆ ಭಾಷೆ ಸಾಹಿತ್ಯಗಳಿಗೆ ಜಾಗತಿಕ ಮನ್ನಣೆಗಳಿಸಿಕೊಡುವಲ್ಲಿ ಬಂಗಾಳಿ ಲೇಖಕರು, ಅದರಲ್ಲೂ ರವೀಂದ್ರನಾಥ ಠಾಕೂರರು ಮೊಟ್ಟ ಮೊದಲಿಗರು, ಇದರ ದೆಸೆಯಿಂದಾಗಿ ಬಂಗಾಳಿ ಭಾಷೆ, ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಮೇಲೆ ತನ್ನದೇ ಆದ ವಿಶಿಷ್ಟ ಪ್ರಭಾವವನ್ನು ಬೀರಿತು ಜೊತೆ ಜೊತೆಗೆ ಅವುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. 

Article Details

Section

Research Articles

Author Biography

ಸುನಿತಾ ಜೆ.ಕೆ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ.

How to Cite

ಸುನಿತಾ ಜೆ.ಕೆ. (2025). ಕನ್ನಡ ಮತ್ತು ಬಂಗಾಳಿ ಸಾಹಿತ್ಯಕ್ಕಿರುವ ಸಂಬಂಧ. ಅಕ್ಷರಸೂರ್ಯ (AKSHARASURYA), 6(06), 80 to 84. https://aksharasurya.com/index.php/latest/article/view/1159

References

ಆಮೂರ ಜಿ.ಎಸ್., (1994), ಕನ್ನಡ ಕಥನ ಸಾಹಿತ್ಯ: ಕಾದಂಬರಿ, ಶ್ರೀಹರಿ ಪ್ರಕಾಶನ, ಧಾರವಾಡ.

ಕೃಷ್ಣಶಾಸ್ತ್ರಿ ಎ.ಆರ್., (2007), ಬಂಕಿಮಚಂದ್ರ, ಹೇಮಂತ ಸಾಹಿತ್ಯ, ಬೆಂಗಳೂರು.

ನರಸಿಂಹಾಚಾರ್ಯ ಆರ್., (2011), ಕವಿಚರಿತೆ: ತೃತೀಯ ಸಂಪುಟ (18 ಮತ್ತು 19ನೇ ಶತಮಾನಗಳು), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ರಾಘವೇಂದ್ರರಾವ್ ಹೆಚ್.ಎಸ್., (2005), ಜನಗಣಮನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಶ್ರೀನಿವಾಸ ಹಾವನೂರ, (2000), ಹೊಸಗನ್ನಡದ ಅರುಣೋದಯ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಶ್ರೀಮತಿ ಎಚ್.ಎಸ್., (2005), ಮಹಾಶ್ವೇತಾದೇವಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಹರಿಕೃಷ್ಣ ಭರಣ್ಯ, (1990), ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಪ್ರಭಸ ಬಿಡುಗಡೆ, ಮಧುರೈ.

ಮೋಹನ ಕುಂಟಾರ್ (ಸಂ), (2015), ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ: ಸಂಪುಟ-10, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

Most read articles by the same author(s)