ʼಸ್ತ್ರೀ ಅಸ್ಮಿತೆ: ವಿಭಿನ್ನ ನೆಲೆಗಳುʼ ಕೃತಿಯ ಒಳನೋಟ

Main Article Content

ಕೆ. ಅನಂತಾಚಾರ್

Abstract

ಹೆಣ್ಣು ಯಾವಾಗಲೂ ಒಂದು ಮೂಲೆಗುಂಪಿನಂತೆ ಎಂಬ ವಾದ ಸದಾ ಹರಡಿ ಹೋಗಿರುವ ಸಂದರ್ಭದಲ್ಲಿ ಚೇತನಾ ಹೆಗಡೆ ಅವರ “ಸ್ತ್ರೀ ಅಸ್ಮಿತೆ : ವಿಭಿನ್ನ ನೆಲೆಗಳು” ಕೃತಿಯು ವಿಭಿನ್ನ ಮಾದರಿಯ ಅಧ್ಯಯನವನ್ನು ನಮ್ಮ ಮುಂದಿಡುತ್ತದೆ. ಈ ಕೃತಿಯು ವ್ಯಕ್ತಿ ಮತ್ತು ವ್ಯಕ್ತಿತ್ವಗಳನ್ನು ಸದಾ ಕಾಲ ಬೇರೆಯಾಗಿ ಕಾಣುವ ವ್ಯತ್ಯಾಸಗಳಿಂದ ಹೊರತಾಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಒಂದೇ ಎಂದು ಭಾವಿಸುವ ಹಾಗಿಲ್ಲ. ಜೈವಿಕ ವ್ಯತ್ಯಾಸಗಳನ್ನು ಅಂಗೀಕರಿಸುತ್ತಲೇ ಹೆಣ್ಣಿನ ಅಸ್ಮಿತೆಯನ್ನು ಗುರುತಿಸುವ ಕೆಲಸವನ್ನು ಲೇಖಕಿ ಮಾಡಿದ್ದಾರೆ. ಹೆಣ್ಣು ಮತ್ತು ಹೆಣ್ತನವನ್ನು ಹೆಣ್ಣು ಅಧ್ಯಯನ ಮಾಡಿದಾಗ ಉಂಟಾಗುವ ತೀಕ್ಷ್ಣ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಕಟ್ಟಿಕೊಡುವಲ್ಲಿ ಈ ಕೃತಿಯು ಪರಿಣಾಮಕಾರಿಯಾಗಿದೆ ಎನ್ನಲು ಅಡ್ಡಿಯಿಲ್ಲ. ವರ್ಜೀನಿಯಾ ವೂಲ್ಫ್ ಕೇಳುತ್ತಾಳೆ ಹೆಣ್ಣಿಗೆ ಒಂದು ಪ್ರತ್ಯೇಕವಾದ ಕೊಠಡಿಯನ್ನು ಕೊಡಿ ಎಂದು. ಆದರೆ ಹಾಗೆ ಕೊಠಡಿಯನ್ನು ಕೊಡುವ ಮೂಲಕ ಅವಳನ್ನು ಮತ್ತೊಮ್ಮೆ ಅವಳದ್ದೇ ಕೊಠಡಿಯಲ್ಲಿ, ಅವಳದ್ದೇ ಕೈಯನ್ನು, ಅವಳದ್ದೇ ಹಗ್ಗದಿಂದ ಕಟ್ಟಿದಂತಾದೀತು. ಬದಲಾಗಿ ಪ್ರತ್ಯೇಕವಾದ ಕೊಠಡಿ ಎಂಬುದನ್ನು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ಹಾಗೂ ಅವಳ ಆಲೋಚನೆಗಳಿಗೂ ನೀಡುವುದು ಒಳಿತು.

Article Details

Section

Research Articles

Author Biography

ಕೆ. ಅನಂತಾಚಾರ್

ಸಂಶೋಧನಾರ್ಥಿ, ಭಾಷಾಂತರ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

References

ಚೇತನಾ ಹೆಗಡೆ, (2025), ಸ್ತ್ರೀ ಅಸ್ಮಿತೆ: ವಿಭಿನ್ನ ನೆಲೆಗಳು, ಅವ್ಯಕ್ತ ಪ್ರಕಾಶನ, ಬೆಂಗಳೂರು.