ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಯ ಮೌಲ್ಯಯುತ ವಿವೇಚನೆ

Main Article Content

ವೆಂಕಟೇಶ ಪಿ.

Abstract

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ರಾಘವೇಂದ್ರ ಪಾಟೀಲರು ಅಪ್ಪಟ ಗ್ರಾಮೀಣ ಪ್ರತಿಭೆ. ಗ್ರಾಮ ಬದುಕಿನ ಅನನ್ಯ ಅನುಭವಗಳಿಗೆ ಸಾಹಿತ್ಯದ ಆಧುನಿಕ ಚಿಂತನಾ ಮಾರ್ಗಗಳನ್ನು ಬೆಸೆದವರು. ಇವರು ವೃತ್ತಿಯಿಂದ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ತಮ್ಮ ಮೂಲ ಸಾಹಿತ್ಯಿಕ ಪ್ರವೃತ್ತಿಯನ್ನು ಉಳಿಸಿ ಬೆಳೆಸಿಕೊಂಡು ಬಂದು ಅದರಲ್ಲಿ ಅತ್ಯುಚ್ಚ ಸಾಧನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾವ್ಯ ರಚನೆಯ ಕ್ಷೇತ್ರದಲ್ಲಿ ಕೈ ಆಡಿಸಿದರೂ, ಕಥೆ-ಕಾದಂಬರಿಗಳ ಕ್ಷೇತ್ರವನ್ನು ಆಪ್ತವಾಗಿ ಅಪ್ಪಿಕೊಂಡ ಅವರು ಕನ್ನಡ ನಾಡಿನ ಪ್ರಮುಖ ಕಥೆಗಾರರಾಗಿ, ಕಾದಂಬರಿಕಾರರಾಗಿ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. ವಸ್ತು ವೈವಿಧ್ಯ ಮತ್ತು ಭಾಷಿಕ ವೈಶಿಷ್ಯಗಳಿಂದ ಒಂದು ರೀತಿಯ ಅನನ್ಯತೆಯನ್ನು ಮೆರೆದಿದ್ದಾರೆ. ಪಾಟೀಲರ ಸೃಜನಶೀಲ ಸಂವೇದನೆಯ ಮುಪ್ಪುರಿಗೊಂಡು ವಿಶಿಷ್ಟ ರೀತಿಯಲ್ಲಿ `ತೇರು’ ಕಾದಂಬರಿಯ ಮೂಲಕ ಒಡಮೂಡಿದ್ದು ಕನ್ನಡ ಸಾಹಿತ್ಯದ ಚಲನಶೀಲತೆಗೆ ಹೊಸ ಆಯಾಮವನ್ನು ತಂದುಕೊಟ್ಟಿತು. ಈ `ತೇರು’ ಕಾದಂಬರಿಯಲ್ಲಿ ರಾಘವೇಂದ್ರ ಪಾಟೀಲ ಅವರ ಸೂಕ್ಷ್ಮ ಅವಲೋಕನ, ವಸ್ತು ನಿಷ್ಠದೃಷ್ಟಿಯ ಪ್ರತೀಕಗಳು, ಮೌಲ್ಯಯುತ ವಿವೇಚಗಳು ಬಹುಸ್ತರಗಳಲ್ಲಿ ಹೇಗೆ ಬಿತ್ತರಗೊಂಡಿವೆ ಎಂಬುದನ್ನು ತಿಳಿಯುವುದು ಅತ್ಯವಶ್ಯಕ.

Article Details

Section

Research Articles

Author Biography

ವೆಂಕಟೇಶ ಪಿ.

ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಹಾಸನ.

How to Cite

ವೆಂಕಟೇಶ ಪಿ. (2025). ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಯ ಮೌಲ್ಯಯುತ ವಿವೇಚನೆ. ಅಕ್ಷರಸೂರ್ಯ (AKSHARASURYA), 6(06), 97 to 103. https://aksharasurya.com/index.php/latest/article/view/1161

References

ರಾಘವೇಂದ್ರ ಪಾಟೀಲ, (2003), ತೇರು, ಆನಂದಕಂದ ಗ್ರಂಥಮಾಲೆ, ಮಲ್ನಾಡಹಳ್ಳಿ.

Most read articles by the same author(s)