Published: 2025-07-05

Table of Contents

Table of Contents

I to V

ದೈವತ್ವದಿಂದ ಕುಲಗುರು ತತ್ವಕ್ಕೇರಿದ ಕಾಯಕ ಶರಣರು

ಅಕ್ಷತ ಎಂ.ಜಿ.

01 to 06

ಸುಮಾರು ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಉದಯಿಸಿದ ವೀರಶೈವ ಧರ್ಮದಲ್ಲಿದ್ದ ಭಕ್ತ-ಭಗವಂತ ಮೊದಲಾದ ಸಂಸ್ಕಾರಗಳು ಜನರನ್ನಾಕರ್ಷಿಸಿತು. ಜನರ ಬುದ್ಧಿ ಮತ್ತು ದೇಹವನ್ನು ಚುರುಕುಗೊಳಿಸಿತು. ಸಾಮಾಜಿಕ ಅಸಮಾನತೆಯಲ್ಲಿ ಹಿಂದುಳಿದವರು ಜಾತಿ, ಕಸುಬು, ಇತ್ಯಾದಿಗಳ ಹಂಗಿಲ್ಲದೆ ಮುಕ್ತವಾಗಿ ಸೇರಬಹುದಾದ ವೀರಶೈವ ಧರ್ಮಕ್ಕೆ ಆಕರ್ಷಿತರಾದರು. ಜನರಿಗೆ ಸಂಸ್ಕಾರದೊಂದಿಗೆ ಅರ್ಥಪೂರ್ಣ, ಸಾರ್ಥಕ್ಯದ ಬದುಕನ್ನು ಗಳಿಸಲು ಸಾಧ್ಯವಾಯಿತು. ಜೀವನ ಸಾರ್ಥಕ್ಯಕ್ಕಾಗಿ ಶಿವಭಕ್ತಿ ಮತ್ತು ಕಾಯಕ ನಿಷ್ಠೆಯಲ್ಲಿ ತೊಡಗಿದವರಲ್ಲಿ ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಮೊದಲಾದವರು ಪ್ರಮುಖರು. ಕಾಯಕ ಶರಣರಿಂದು ತಮ್ಮ ಸಮುದಾಯದವರ ಕುಲಗುರುಗಳಾಗಿ ಆರಾಧನೆಗೆ ಒಳಪಟ್ಟದ್ದಲ್ಲದೆ ಸರಕಾರದ ವಲಯದಲ್ಲೂ ಗೌರವಿಸಲ್ಪಟ್ಟಿರುವುದು ಗಮನಾರ್ಹ.
ಒಟ್ಟಿನಲ್ಲಿ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಯ ನೆನಪಿನಾರ್ಥವಾಗಿ ಅವರ ಜಯಂತ್ಯುತ್ಸವವನ್ನು ಖಾಸಗಿ ಹಾಗೂ ಸರಕಾರದ ಮಟ್ಟಿನಲ್ಲಿ ಆಚರಿಸುವ ಮೂಲಕ ಶರಣರನ್ನು ಅವರ ಮೌಲ್ಯಗಳನ್ನು ಉಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

Read More »

ಜನಪದ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ

ಜಿ.ಎಂ. ಹೇಮಲತ, ಹೆಚ್. ವಿಶ್ವನಾಥ್

07 to 19

ಜನಪದ ಸಾಹಿತ್ಯವು ಸಮಾಜದ ಸಾಮಾನ್ಯ ಜನರ ಬದುಕಿನ ಕನ್ನಡಿಯಾಗಿದೆ. ಇದು ತಲೆಮಾರುಗಳಿಂದ ಮೌಖಿಕವಾಗಿ ಹರಿದುಬಂದ ಸಮೃದ್ಧ ಪರಂಪರೆಯಾಗಿದ್ದು, ಅದರಲ್ಲಿ ಮಹಿಳೆಯರ ಸಂವೇದನೆಗಳು, ಅನುಭವಗಳು ಮತ್ತು ಆಂತರಿಕ ಲೋಕವು ಹಾಸುಹೊಕ್ಕಾಗಿವೆ. ಪುರುಷಪ್ರಧಾನ ಸಮಾಜದಲ್ಲಿ ತಮ್ಮ ಭಾವನೆಗಳನ್ನು, ಅನಿಸಿಕೆಗಳನ್ನು ನೇರವಾಗಿ ವ್ಯಕ್ತಪಡಿಸಲು ಸೀಮಿತ ಅವಕಾಶಗಳನ್ನು ಹೊಂದಿದ್ದ ಮಹಿಳೆಯರಿಗೆ, ಜನಪದ ಸಾಹಿತ್ಯವು ಒಂದು ಪ್ರಬಲ ಅಭಿವ್ಯಕ್ತಿ ಮಾಧ್ಯಮವಾಗಿ ಕಾರ್ಯನಿರ್ವಹಿಸಿದೆ. ಜನಪದ ಹಾಡುಗಳು, ಲಾವಣಿಗಳು, ಒಗಟುಗಳು, ಗಾದೆಗಳು ಮತ್ತು ಕಥೆಗಳ ಮೂಲಕ ಮಹಿಳೆಯರು ತಮ್ಮ ದೈನಂದಿನ ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸಿದ್ದಾರೆ. ಕುಟುಂಬದೊಳಗೆ ಎದುರಿಸುವ ಸವಾಲುಗಳು, ಸಾಂಸಾರಿಕ ಜೀವನದ ಸುಖ-ದುಃಖಗಳು, ಪಿತೃಪ್ರಧಾನ ವ್ಯವಸ್ಥೆಯ ನಿರ್ಬಂಧಗಳು, ಅತ್ತೆ-ಸೊಸೆ ಸಂಬಂಧದ ಸಂಕೀರ್ಣತೆ, ತಾಯ್ತನದ ಮಹತ್ವ, ಮಕ್ಕಳ ಪೋಷಣೆಯ ಜವಾಬ್ದಾರಿ, ಗಂಡನ ಅಗಲಿಕೆ ಅಥವಾ ವಲಸೆಯಿಂದ ಉಂಟಾಗುವ ವಿರಹ ವೇದನೆ, ಮತ್ತು ದೈಹಿಕ ಶ್ರಮದಿಂದ ಉಂಟಾಗುವ ನೋವುಗಳು – ಇವೆಲ್ಲವೂ ಅವರ ಹಾಡುಗಳಲ್ಲಿ, ಕಥೆಗಳಲ್ಲಿ ಸ್ಪಷ್ಟವಾಗಿ ಮೂಡಿಬಂದಿವೆ. ಜನಪದ ಸಾಹಿತ್ಯವು ಕೇವಲ ನೋವು ಅಥವಾ ಪ್ರತಿರೋಧಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಮಹಿಳೆಯರ ಸಹಜ ಹಾಸ್ಯಪ್ರಜ್ಞೆ, ಸೃಜನಶೀಲತೆ, ಬದುಕಿನ ಕುರಿತ ಆಳವಾದ ತಿಳುವಳಿಕೆ ಮತ್ತು ಸಂಬಂಧಗಳನ್ನು ಪೋಷಿಸುವ ಅವರ ಅನನ್ಯ ಸಾಮರ್ಥ್ಯವನ್ನೂ ಸಹ ಬಿಂಬಿಸುತ್ತದೆ. ಪ್ರಕೃತಿಯೊಂದಿಗೆ ಅವಳಿಗಿರುವ ಬಾಂಧವ್ಯ, ಹಬ್ಬ-ಹರಿದಿನಗಳಲ್ಲಿನ ಆಚರಣೆಗಳು ಮತ್ತು ಧಾರ್ಮಿಕ ನಂಬಿಕೆಗಳು ಸಹ ಅವರ ಸಂವೇದನೆಗಳ ಭಾಗವಾಗಿ ಜನಪದ ಕೃತಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಒಟ್ಟಾರೆ, ಜನಪದ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯು ಮಹಿಳೆಯರ ಆಂತರಿಕ ಶಕ್ತಿ, ಸಾಮಾಜಿಕ ಅರಿವು ಮತ್ತು ಪ್ರತಿರೋಧದ ಮನೋಭಾವವನ್ನು ಅನಾವರಣಗೊಳಿಸುತ್ತದೆ. ಇದು ಪುರುಷ-ಪ್ರಧಾನ ನಿರೂಪಣೆಯಲ್ಲಿ ಸಾಮಾನ್ಯವಾಗಿ ಮರೆಯಾಗುವ ಅಥವಾ ವಿರೂಪಗೊಳ್ಳುವ ಸ್ತ್ರೀ ಅನುಭವಗಳಿಗೆ ಒಂದು ಅಧಿಕೃತ ಧ್ವನಿಯನ್ನು ನೀಡುತ್ತದೆ.

Read More »

ಪಂಪನ ಕಾವ್ಯಗಳಲ್ಲಿ ಪ್ರಕೃತಿ

ಶ್ರೀಮತಿ ಜೀವಿತ ಡಿ.

20 to 24

ಪಂಪನು ಕನ್ನಡ ಸಾಹಿತ್ಯದ ಆದಿಕಾವ್ಯ ಪರಂಪರೆಯ ಪ್ರಖ್ಯಾತ ಕವಿ. ಅವನು ರಚಿಸಿದ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕಾವ್ಯಗಳಲ್ಲಿ ಪ್ರಕೃತಿಯ ವರ್ಣನೆ ವೈಶಿಷ್ಟ್ಯಪೂರ್ಣವಾಗಿದೆ. ಈ ಕಾವ್ಯಗಳಲ್ಲಿ ಪ್ರಕೃತಿಯು ಪಾತ್ರದಂತೆ ಕಾಣುತ್ತದೆ. ಹಿಮವಂತದ ಶೃಂಗಗಳು, ಹೂವಿನ ಸುಗಂಧ, ನದಿಗಳ ಹರಿವು, ಋತುಚಕ್ರದ ವೈವಿಧ್ಯತೆ ಮುಂತಾದವುಗಳ ಮೂಲಕ ಪಂಪನು ಪ್ರಕೃತಿಯ ಸೌಂದರ್ಯವನ್ನು ಕಾವ್ಯಾತ್ಮಕವಾಗಿ ಚಿತ್ರಿಸಿದ್ದಾನೆ. ಪ್ರಕೃತಿಯ ಇಂತಹ ವರ್ಣನೆಗಳು ಕಾವ್ಯದ ಭಾವನಾತ್ಮಕತೆ ಮತ್ತು ಸಾಂದರ್ಭಿಕತೆಯನ್ನು ಹೆಚ್ಚಿಸುತ್ತವೆ. ಜೈನ ಧರ್ಮದ ಚಿಂತನೆಗಳೊಡನೆ ಪ್ರಕೃತಿಯ ಸಂಬಂಧವನ್ನು ಪಂಪನು ಸೂಕ್ಷ್ಮವಾಗಿ ಹೆಣೆಯುತ್ತಾನೆ. ಈ ಅಧ್ಯಯನವು ಪಂಪನ ಕಾವ್ಯಗಳಲ್ಲಿ ಪ್ರಕೃತಿಯ ಕಲಾತ್ಮಕ ಹಾಗೂ ತಾತ್ವಿಕ ಸ್ವಭಾವವನ್ನು ಅನಾವರಣಗೊಳಿಸುತ್ತದೆ.
ಪಂಪನು ಪ್ರಕೃತಿಯ ವರ್ಣನೆ ಮಾಡುವಾಗ ಕೇವಲ ದೃಶ್ಯವೈಭವವನ್ನಷ್ಟೆ ತೆರೆದಿಡುವುದಿಲ್ಲ, ಅದು ಪಾತ್ರಗಳ ಭಾವನೆಗಳಿಗೆ, ಸಂಕಷ್ಟಗಳಿಗೆ ಹಾಗೂ ಧರ್ಮ-ತಾತ್ವಿಕ ಹಿನ್ನೆಲೆಗಳಿಗೆ ಪೂರಕವಾಗಿದೆ. ಉದಾಹರಣೆಗೆ, ಯುದ್ಧದ ನಡುವೆ ಸೃಷ್ಟಿಯ ಶಾಂತಿಯ ಭಾವನೆ, ವನವಾಸದ ಸಂದರ್ಭಗಳಲ್ಲಿ ಪ್ರಕೃತಿಯ ಆಪ್ತತೆಯ ವಿವರಗಳು ಪಂಪನ ಅನುಭವಪೂರ್ಣ ಬರವಣಿಗೆಯನ್ನು ಸೂಚಿಸುತ್ತವೆ. ಜೈನ ಧರ್ಮದ ಅಹಿಂಸಾ ತತ್ತ್ವ, ತ್ಯಾಗ ಮತ್ತು ಶುದ್ಧತೆಯಂತೆ, ಪ್ರಕೃತಿಯ ಬಳಕೆ ಮತ್ತು ಅವಲೋಕನ ಕೂಡ ಪಂಪನ ಕಾವ್ಯಗಳಲ್ಲಿ ತಾತ್ವಿಕ ಗಂಭೀರತೆಯನ್ನು ಹೊಂದಿವೆ. ಈ ಅಧ್ಯಯನದಲ್ಲಿ ಪಂಪನ ಕಾವ್ಯಗಳಲ್ಲಿ ಪ್ರಕೃತಿಯ ಶೈಲಿ, ಭಾವನಾತ್ಮಕ ಮತ್ತು ತಾತ್ವಿಕ ಮುಖಗಳನ್ನು ವಿಶ್ಲೇಷಿಸಲಾಗಿದೆ. ಪಂಪನ ಕಾವ್ಯದಲ್ಲಿ ಪ್ರಕೃತಿಯ ಚಿತ್ರಣ ಕೇವಲ ಕಲಾತ್ಮಕವಷ್ಟೆ ಅಲ್ಲದೆ, ತಾತ್ವಿಕ ಹಾಗೂ ಸಾಂಸ್ಕೃತಿಕ ಅರ್ಥವನ್ನು ಸಹ ಒಳಗೊಂಡಿದೆ ಎಂಬುದನ್ನು ಇದು ಒತ್ತಿಹೇಳುತ್ತದೆ.

Read More »

ಕಾಲ ನಿಲ್ಲುವುದಿಲ್ಲ: ಒಂದು ವಿಮರ್ಶಾ ನೋಟ

ಎ.ಆರ್. ಮಹೇಂದ್ರ

25 to 31

ಕಾಲ ಅತ್ಯಮೂಲ್ಯವಾದದ್ದು. ಕಾಲವನ್ನು ಯಾವುದೇ ಕಾರಣಕ್ಕೂ ಮರಳಿ ಪಡೆಯಲಾಗುವುದಿಲ್ಲ. ಭವಿಷ್ಯದಲ್ಲಿ ಬರಲಿರುವ ಕಾಲವನ್ನು ಇಂದೇ ಅನುಭವಿಸುವುದು ಕಷ್ಟ ಸಾಧ್ಯ. ವರ್ತಮಾನದ ಬದುಕು ಮಾತ್ರ ನಮ್ಮದು. ನಮ್ಮ ಜೀವನದ ಪ್ರತಿಯೊಂದರಲ್ಲೂ ಹಾಸು ಹೊಕ್ಕಾಗಿರುವ ಈ ಕಾಲದ ಸದ್ಬಳಕೆ ಮಾಡಿಕೊಳ್ಳದೇ ಹೋದರೆ ಪಶ್ಚಾತ್ತಾಪದ ನಿಟ್ಟುಸಿರು ಕಟ್ಟಿಟ್ಟ ಬುತ್ತಿ. ಹಾಗೆಂದು ಕಳೆದ ಕಾಲವನ್ನು ಮರಳಿ ಪಡೆಯಲು ಯಾವುದೇ ಮಾರ್ಗವಿಲ್ಲ. ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಕಾಲ ದುಬಾರಿಯೇನಲ್ಲ. ವರ್ತಮಾನದ ಕಾಲ ಯಾರಿಗೂ ತಾರತಮ್ಯ ಮಾಡದೇ ೨4 ತಾಸು ಎಲ್ಲರಿಗೂ ನೀಡುತ್ತದೆ. ಆದರೆ ಅದು ಯಾರಿಗಾಗಿಯೂ ನಿಲ್ಲುವುದಿಲ್ಲ ಅಥವಾ ಅದು ಯಾರಿಗಾಗಿಯೂ ಮುಂದೆ ಓಡುವುದಿಲ್ಲ. ಬಹಳ ವಿಚಿತ್ರವಾದುದು ಈ ಸಮಯದ ವ್ಯವಹಾರ.

Read More »

ಸಾರಾ ಅಬೂಬಕ್ಕರ್ ಕಾದಂಬರಿಗಳಲ್ಲಿ - ಸ್ತ್ರೀ ಶಿಕ್ಷಣದ ಮಹತ್ವ

ಮಂಜು ಸಿ.ಎನ್.

32 to 37

ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಶಿಕ್ಷಣ ಪಡೆದ ವ್ಯಕ್ತಿ ತನ್ನ ಕುಟುಂಬ ಮತ್ತು ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ. ಅಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿಯೂ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ತರಲು ಶಿಕ್ಷಣ, ಅದರಲ್ಲೂ ಸ್ತ್ರೀ ಶಿಕ್ಷಣ ಅತ್ಯಗತ್ಯವಾಗಿದೆ. ಶಿಕ್ಷಣ ಪಡೆದ ಮಹಿಳೆಯು ಉದ್ಯೋಗಾವಕಾಶಗಳನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಾಳೆ. ಇದು ಮಹಿಳಾ ಸಬಲೀಕರಣಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಸ್ತ್ರೀ ಶಿಕ್ಷಣವು ಸಮಗ್ರ ಸಮಾಜದ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ. ಇದು ಕೇವಲ ಮಹಿಳೆಯೊಬ್ಬಳ ಜೀವನವನ್ನು ಬದಲಾಯಿಸುವುದಿಲ್ಲ, ಇಡೀ ಸಮಾಜದ ಭವಿಷ್ಯವನ್ನು ರೂಪಿಸುತ್ತದೆ. ಸಾರಾ ಅಬೂಬಕ್ಕರ್ ಅವರು ತಮ್ಮ ಕಾದಂಬರಿಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತಾರೆ. ಇವರ ಕಾದಂಬರಿಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿಗಳನ್ನು ಚಿತ್ರಿಸಲಾಗಿದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸ್ವತಂತ್ರವಾಗಿ ಬದುಕಬೇಕು ಎಂಬುದನ್ನು ಸಾರಾ ಬಯಸುತ್ತಾರೆ. ತಮ್ಮ ಕೃತಿಗಳಲ್ಲಿ ಶಿಕ್ಷಣದ ಮಹತ್ವವನ್ನು ಚಿತ್ರಿಸುವ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನವನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ.

Read More »

ತೊಗಟವೀರ ಕ್ಷತ್ರಿಯ ಮತ್ತು ಕನ್ನಡ ದೇವಾಂಗ ಸಮುದಾಯಗಳ ಆಚರಣೆಗಳಲ್ಲಿನ ಸಾಮ್ಯತೆ ಮತ್ತು ಭಿನ್ನತೆ

ಮೋಹನ್‌ ಕುಮಾರ್‌ ಆರ್.

38 to 47

ಭಾರತವು ಹಲವು ವಿಷಯಗಳಲ್ಲಿ ವೈವಿಧ್ಯತೆಯ ರಾಷ್ಟ್ರವಾಗಿದ್ದು, ಭಾರತದಲ್ಲಿರುವಷ್ಟು ಸಮುದಾಯಗಳು ಪ್ರಪಂಚದ ಬೇರೆ ಯಾವ ದೇಶಗಳಲ್ಲೂ ಕಾಣಸಿಗುವುದಿಲ್ಲ. ಎಲ್ಲಾ ಸಮುದಾಯಗಳಲ್ಲಿ ಜಾತಿ, ಉಪಜಾತಿಗಳಿದ್ದು ಅವುಗಳೊಳಗೆ ಆಚಾರ-ವಿಚಾರಗಳಲ್ಲಿ ಹಲವಾರು ಸಾಮ್ಯತೆಗಳಿದ್ದರೂ ಭಿನ್ನತೆಗಳು ಸಾಕಷ್ಟಿವೆ. ಸಮುದಾಯಗಳೊಳಗೆ ಆಹಾರಪದ್ಧತಿ, ಶಾಸ್ತ್ರ-ಸಂಪ್ರದಾಯಗಳ ಆಚರಣೆಗಳಲ್ಲಿರುವ ವಿಶಿಷ್ಟತೆ ಮತ್ತು ಭಿನ್ನತೆಗಳು ಹಲವು ಬಗೆಯ ಅಧ್ಯಯನಕ್ಕೆ ಎಡೆಮಾಡಿಕೊಟ್ಟಿವೆ. ಕರ್ನಾಟಕದಲ್ಲಿ ಹಲವಾರು ಧರ್ಮಗಳನ್ನು ಅನುಸರಿಸುವ ಜನಸಮುದಾಯಗಳಿದ್ದು, ಹಿಂದೂ ಧರ್ಮದ ಹಲವಾರು ಸಮುದಾಯಗಳಲ್ಲಿರುವ ಆಹಾರಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ತೌಲನಿಕ ಅಧ್ಯಯನವು ವ್ಯಕ್ತಿಯ ಅಸ್ಮಿತೆಯ ಕಾರಣಕ್ಕಾಗಿ ಮುಖ್ಯವೆನಿಸುತ್ತದೆ.

Read More »

ಯುದ್ಧ-ಶಾಂತಿ, ಬದುಕು-ಸಾವುಗಳ ನಡುವೆ ʼಯಾದ್ ವಶೇಮ್ʼ

ನಂದಿನಿ ಎ.ಆರ್.

48 to 59

“ದಯವಿಲ್ಲದ ಧರ್ಮವದೇವುದಯ್ಯ
ದಯವೇ ಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ”
ಎಂಬ ಬಸವಣ್ಣನವರ ಉಕ್ತಿಯಂತೆ ಸಕಲ ಧರ್ಮದ ಸಾರವೂ ಪ್ರೀತಿ, ಕರುಣೆ, ದಯೆಯೇ ಆಗಿದೆ. ಇದನ್ನು ಮತ್ತೊಮ್ಮೆ ನೆನಪಿಸುವಂತೆ 2007ರಲ್ಲಿ ನೇಮಿಚಂದ್ರರ ‘ಯಾದ್ ವಶೇಮ್’ ಪ್ರಕಟವಾಯಿತು. ಅದನ್ನೇ ಅವರು ‘ನೂರು ಸಾವಿರ ಸಾವಿನ ನೆನಪು’ ಎಂಬ ಹೆಸರಿನಲ್ಲಿ ಸುಧಾ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಗೋರಿಗಳು ಸಹ ಒಂದು ಉತ್ಕೃಷ್ಟ ಕೃತಿಗೆ ಕಥಾವಸ್ತುವಾಗಬಹುದು ಎಂದು ಇದರಿಂದ ತಿಳಿಯುತ್ತದೆ. ಇಲ್ಲಿ ಹಿಟ್ಲರ್‌ನ ನೆಲದಿಂದ ಗಾಂಧಿಯ ನೆಲವಾದ ಮುಕ್ಕೋಟಿ ದೇವರುಗಳಿಗೆ ಹೆಸರಾದ ಭಾರತಕ್ಕೆ ಬಂದ ಪುಟ್ಟ ಯಹೂದಿ ಬಾಲಕಿ ಹ್ಯಾನಾಳ ಕಥೆ. ಒಂದು ಕಾಲ್ಪನಿಕ ಕಥೆಯನ್ನು ಸೃಷ್ಟಿಸಿ ಆ ಮೂಲಕ ಧರ್ಮದ ಹೆಸರಿನಲ್ಲಿ ಹಿಟ್ಲರ್ ನಡೆಸಿದ ಕ್ರೌರ್ಯ, ಹಿಂಸೆ, ರಕ್ತಪಾತ, ಅತ್ಯಾಚಾರಗಳ ಒಂದು ದುರಂತ ಚಿತ್ರಣವನ್ನೇ ನೇಮಿಚಂದ್ರರು ನೀಡುತ್ತಾರೆ. ಹಿಟ್ಲರ್‌ನ ಭೀಕರ ಧರ್ಮಾಂಧತೆಯಿಂದ ಉರಿದ ಜರ್ಮನಿ ಜನ, ಅವರ ಬದುಕು ಸಾವುಗಳ ಚಿತ್ರಣವನ್ನು ಬಹಳ ಮನೋಜ್ಞವಾಗಿ ನಿರೂಪಿಸಿದ್ದಾರೆ. ಜೊತೆಗೆ ಭಾರತವು ಬಹುಧರ್ಮೀಯ ರಾಷ್ಟ್ರವಾಗಿದ್ದರೂ ಇಲ್ಲಿರುವ ಧರ್ಮ ಸಹಿಷ್ಣುತ ಮನೋಭಾವ, ಪ್ರೀತಿ, ಪರಸ್ಪರ ಸಹಕಾರ ಎಲ್ಲದರ ಬಗ್ಗೆ ಹ್ಯಾನಾಳ ಮೂಲಕ ನಿರೂಪಿಸಿ ಭಾರತದಲ್ಲಿ ಹ್ಯಾನಾಳಾಗಿ ಯೋಚಿಸುವ ನಾಯಕಿ, ಯಹೂದಿಗಳ ನೆಲೆಯಲ್ಲಿ ಅಪ್ಪಟ ಭಾರತೀಯ ಸ್ತ್ರೀ ಅನಿತಾಳಾಗಿ ವರ್ತಿಸುವ, ಚಿಂತಿಸುವ ಹಾಗೂ ಭಾರತಕ್ಕೆ ಮರಳಲು ತವಕಿಸುವ ಮೂಲಕ ಬೀಜವು ಯಾವ ಭೂಮಿಯ ಮೇಲೂ ಬಿದ್ದರೂ ಅದು ಚಿಗುರೊಡೆದು ಬೆಳೆದು ತನ್ನ ಕ್ಷೇತ್ರವನ್ನು ವಿಸ್ತರಿಸಿ ನೆಲೆನಿಲ್ಲುತ್ತದೆ ಎಂಬುದನ್ನು ಅನಿತಾಳ ಮೂಲಕ ನೇಮಿಚಂದ್ರರು ನಿರೂಪಿಸಿದ್ದಾರೆ.
ಸಕಲ ಧರ್ಮದ ಸಾರವು ದಯೆಯೆಂದು ಭಾವಿಸಿ ಸಹಿಷ್ಣುತ ದೃಷ್ಟಿಯಿಂದ ಜೀವಿಸಿದರೆ ಯುದ್ಧವೆಂಬುದೇ ಇಲ್ಲ. ಬದುಕನ್ನು ನೆಮ್ಮದಿಯಿಂದ ಸಾಗಿಸಬಹುದಾಗಿದೆ. ಆದರೆ ಪ್ರಸ್ತುತ ಜಗತ್ತಿನಲ್ಲಿ ಮಾನವ ಎಷ್ಟೋ ತಾಂತ್ರಿಕವಾಗಿ ಮುಂದುವರಿದಿದ್ದೇನೆ ಎಂದು ಹೇಳಿದರೂ ಸಹ ದಿನದಿಂದ ದಿನಕ್ಕೆ ಅವನ ಮನಸ್ಸು ಸಂಕುಚಿತಗೊಳ್ಳುತ್ತಿದೆ. ಮನುಷ್ಯನ ಬದುಕಿನಲ್ಲಿ ತಾಳ್ಮೆ, ಸಂಯಮ, ಪ್ರೀತಿ, ಕರುಣೆ, ದಯೆ ಎಂಬ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇದರಿಂದ ಬದುಕು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಾ ಸಾಗಿ ಒತ್ತಡಗಳು ಹೆಚ್ಚುತ್ತಿವೆ. ದುಡ್ಡಿಗಾಗಿ ತಂದೆ ತಾಯಿಯನ್ನೇ ಕೊಲ್ಲುವ ಸ್ಥಿತಿ ಬಂದೊದಗಿದೆ, ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ, ವಯಸ್ಸಾದ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ಆಧುನಿಕತೆಯ ಹೆಸರಿನಲ್ಲಿ ವಿಭಕ್ತ ಕುಟುಂಬಗಳು ಕಂಡು ಬರುತ್ತಿವೆ. ಇನ್ನೂ ವಿವಾಹ ವಿಚ್ಛೇದನಗಳಂತೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗಿದೆ. ಅಂದರೆ ಬದುಕಿನಲ್ಲಿ ನೈತಿಕ ಪ್ರಜ್ಞೆಯೂ ಕುಸಿಯುತ್ತಾ “ಹಿಟ್ಲರ್ ಎಲ್ಲಿ ಬೇಕಾದರೂ ಜನಿಸಬಹುದು” ಎಂಬ ನೇಮಿಚಂದ್ರರ ಮಾತನ್ನು ನಿಜವಾಗಿಸುವತ್ತ ಸಾಗಿದೆ.

Read More »

ಬಸವಣ್ಣನವರ ವಚನಗಳಲ್ಲಿ ತಳವರ್ಗದ ಅಭಿವ್ಯಕ್ತಿಯ ಸ್ವರೂಪ

ರಮೇಶ್ ಎಮ್. ಗೋನಾಳ್

60 to 64

೧೨ನೇ ಶತಮಾನದ ವಚನ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಬಸವಣ್ಣನವರು. ಬಾಲ್ಯದಿಂದಲೇ ಉಪನಯನವನ್ನು ತಿರಸ್ಕರಿಸುವ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ತಮ್ಮ ಧ್ವನಿ ಎತ್ತಿದರು. ಜಾತಿ, ಲಿಂಗ, ಬಡವ-ಬಲ್ಲಿದ, ಮೇಲು-ಕೀಳು ಎಂಬಂತಹ ತಾರತಮ್ಯಗಳ ವಿರುದ್ಧ ಹೋರಾಡಿ ಜಾಗತಿಕ ನಾಯಕರೆನಿಸಿದ್ದಾರೆ. ವೈದಿಕ ಧರ್ಮದ ಚಾತುರ್ವರ್ಣ ಪದ್ಧತಿಯಿಂದಾಗಿ ಶೂದ್ರ ಮತ್ತು ಪಂಚಮ ವರ್ಗದವರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗುತ್ತಿತ್ತು. ಶಾಸ್ತ್ರಗಳ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿತ್ತು. ಬಿಟ್ಟಿ ದುಡಿಮೆ ಮಾಮೂಲಾಗಿತ್ತು. ಶೂದ್ರರು ಅಸ್ಪೃಶ್ಯರು ಎಂದು ತಳಬುಡವಿಲ್ಲದ ಭೇದಭಾವ ಮಾಡಿ ಅವರನ್ನು ಶೋಷಣೆ, ಸುಲಿಗೆ ಮಾಡುತ್ತಿದ್ದರು. ಇದೆಲ್ಲವನ್ನೂ ಕಣ್ಣಾರೆ ಕಂಡ ಬಸವಣ್ಣನವರು 12ನೇ ಶತಮಾನದಲ್ಲಿ ವಚನ ಚಳುವಳಿಯ ಮೂಲಕ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ಜಾಗತಿಕ ಆಂದೋಲನ ಮಾಡಿದರು. ಬಸವಣ್ಣನವರು ತಮ್ಮ ನಡೆ-ನುಡಿಗಳಲ್ಲಿಯೂ ತಳವರ್ಗದವರನ್ನು, ಶೂದ್ರರನ್ನು ಆತ್ಮೀಯವಾಗಿ ಕಂಡು ಅವರಿಗೂ ಬದುಕುವ ಹಕ್ಕಿದೆ ಮತ್ತು ಸಮಾಜದಲ್ಲಿ ಗೌರವಯುತ ಬದುಕು ನಡೆಸಲು ಅನುವು ಮಾಡಿಕೊಟ್ಟರು. ಭವಿಗಳನ್ನು ಶರಣರನ್ನಾಗಿ ಮಾಡಿದರು. ತಮ್ಮ ವಚನಗಳಲ್ಲಿ ತಳವರ್ಗದವರನ್ನು ತಮ್ಮ ಬಂಧುವಂತೆ, ಅಣ್ಣ, ಅಪ್ಪ ಮೊದಲಾದ ಸಂಬಂಧ ಸೂಚಕ ಶಬ್ದಗಳನ್ನು ಬಳಸಿ, ಅವರನ್ನು ಬಿಗಿದಪ್ಪಿಕೊಂಡಿದ್ದಾರೆ. “ಇವನಾರವ ಇವನಾರವ ಇವನಾರವ ಎಂದೆನಿಸದೆ ನಿಮ್ಮ ಮನೆಯ ಮಗನೆಂದೆನಿಸಯ್ಯ” ಎಂದು ತಳವರ್ಗದ ಕುರಿತು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ತಳವರ್ಗದ ಕುರಿತು ವ್ಯಕ್ತಗೊಂಡ ಚಿಂತನೆಗಳನ್ನು ಚರ್ಚಿಸುವುದು ಈ ಲೇಖನದ ಗುರಿ ಮತ್ತು ಉದ್ದೇಶವಾಗಿದೆ.

Read More »

ಚಂದ್ರಶೇಖರ ಕಂಬಾರರ ಶಿವನ ಡಂಗುರ ಕಾದಂಬರಿ: ನಗರ ಮತ್ತು ಗ್ರಾಮ ಸಂಸ್ಕೃತಿಯ ಸಂಘರ್ಷ

ವೆಂಕಟೇಶ ಪಿ.

65 to 74

ಇಪ್ಪತ್ತೊಂದನೆಯ ಶತಮಾನದ ಕನ್ನಡ ಲೇಖಕರಲ್ಲಿ ಪ್ರಮುಖ ಕವಿ-ನಾಟಕಕಾರ ಚಂದ್ರಶೇಖರ ಕಂಬಾರ ಅವರ ಇತ್ತೀಚಿನ ಕಾದಂಬರಿ ‘ಶಿವನ ಡಂಗುರ’. ಕಂಬಾರರ ಬಹುತೇಕ ಕಥೆ ಮತ್ತು ನಾಟಕಗಳಲ್ಲಿ ಸಮಕಾಲೀನ ಚರಿತ್ರೆಯನ್ನು ಜನಪದ ಕಥೆಗಳ ಮೂಲಕ ಪುರಾಣದ ಮೂಲಕ ಹೇಳುತ್ತಿದ್ದರು. ಆದರೆ ಈಗ ಅವರು ಸಮಕಾಲೀನ ಜೀವನವನ್ನು ನೇರವಾಗಿ ಮುಖಾಮುಖಿಯಾಗಿಸುತ್ತಾ ಕೃತಿಗಳನ್ನು ರಚಿಸುತ್ತಿದ್ದಾರೆ. ಅಂತಹ ಒಂದು ಕೃತಿಗೆ ಒಂದು ಉತ್ತಮ ಉದಾಹರಣೆಯಾಗಿ ‘ಶಿವನ ಡಂಗುರ’ ಕಾದಂಬರಿ ಎಂದು ಹೇಳಬಹುದು. ದೇಸಿ ಪ್ರಜ್ಞೆಯನ್ನು ಮೂಲಸ್ಥಾಯಿಯಾಗಿ ಮತ್ತು ಜಾಗತಿಕ ಪ್ರಜ್ಞೆಯ ಆವರಣದೊಳಗೆ ಕಂಬಾರರು ಕಾದಂಬರಿಯನ್ನು ರಚಿಸಿದ್ದಾರೆ. ಕಂಬಾರರು ಸಂವೇದನೆ, ಆಕೃತಿಗಳೆರಡಲ್ಲೂ ಅಪ್ಪಟ ಭಾರತೀಯ ಲೇಖಕ.
ಭಾರತೀಯ ಸಮಾಜದಲ್ಲಿರುವ ಶೋಷಣೆ, ಜಾತಿ ತಾರತಮ್ಯ, ಲಿಂಗಭೇದ ಹಾಗೂ ಹಿಂಸಾ ಪ್ರವೃತ್ತಿಯು ಪ್ರಸ್ತುತ ಕಾಲಘಟ್ಟದಲ್ಲಿ ಪಡೆದುಕೊಂಡಿರುವ ಹೊಸರೂಪಗಳನ್ನು ಈ ಕಾದಂಬರಿಯು ಬಿಂಬಿಸುತ್ತದೆ. ಕೇವಲ ಲೌಕಿಕ ವಾಸ್ತವಗಳಷ್ಟೆ ಸಂಸ್ಕೃತಿಯನ್ನು ರೂಪಿಸುವುದಿಲ್ಲ, ಭಾವಜಗತ್ತು, ಲೋಕೋತ್ತರ ಸಂಗತಿಗಳು ಕೂಡ ಸಂಸ್ಕೃತಿಯ ಭಾಗವಾಗಿರುತ್ತವೆ. ಲೌಕಿಕ ವ್ಯವಸ್ಥೆಯ ಅಸಮಾನತೆಗಳ ವಿರುದ್ಧ ಮಾನವ ಚೈತನ್ಯ ಹೋರಾಟ ಮಾಡುತ್ತಲೇ ತನ್ನ ಅಂತರಂಗದ ಪೊರೆಯುವ ಶಕ್ತಿಯನ್ನು ಕಾಪಾಡಿಕೊಂಡಿದೆ. ಕನ್ನಡ ಸಂಸ್ಕೃತಿಯಲ್ಲಿ ಇಂತಹ ‘ಮಾರ್ಗ’ದ ವಿರುದ್ಧ ‘ದೇಸಿ’ ಚೈತನ್ಯ ಹೋರಾಡುತ್ತಲೇ ಬಂದಿರುವುದನ್ನು ನಾವು ಇತಿಹಾಸದ ಉದ್ದಕ್ಕೂ ಕಾಣಬಹುದು.

Read More »

Cultural Imprints: Art as a Mirror of History

Ravikumar D.

75 to 90

The study explores the relationship between art and history in India, focusing on how artistic expressions can record, interpret, and influence historical narratives. Drawing from cultural historiography, visual anthropology, and art criticism, the research investigates how various forms of Indian art, including cave paintings, temple architecture, folk traditions, and political murals, contribute to the construction and dissemination of historical memory. India’s rich civilizational heritage and diverse cultural landscapes make it an ideal case study to examine the interplay between artistic production and historical consciousness. The study uses a qualitative approach, engaging fifty historians in Focus Group Discussions to elicit critical insights into the role of art in shaping public understanding of historical events, identities, and socio-political transformations. Preliminary findings suggest that Indian art has historically served as a repository of collective memory, especially in times where written records were scarce or biased. The study advocates for a more interdisciplinary approach in historical research and pedagogy.

Read More »

The Role of Human Capital in The Indian Economy

Shrilatha A.

91 to 93

Innovation & Technology are vital for the economic development of India, offering solutions to improve productivity, livelihoods, and overall quality of life. According to Albert Einstein, “Imagination is more important than knowledge. Knowledge is limited whereas imagination embraces the entire world.” Stimulating progress gives birth to development not only for individuals, making them more productive and creative, but also impacts the betterment of the people. Quality of life improves as a result of better education, health, and skill development. Human capital formation also enables people to enjoy a greater standard of living since they are able to generate higher salaries for themselves, which helps in economic development. The impact of human capital becomes strong when the focus runs to the role of education. Quality education is always a productive source because it increases productive human capital, which results in overall economic growth in India. Providing education is a gigantic task, keeping in view the population.

Read More »

Talk Smarter, Live Better: Why Digital & Good Communication is Key in Today’s Fast-Paced World

Sunita N Patil

94 to 101

In our modern world, everything seems to move at lightning speed. We’re constantly bombarded with information, new technologies pop up every day, and we’re more connected to people across the globe than ever before. The piece delves into the unwavering power of good communication in the workplace and personal life, emphasizing clarity, empathy, and understanding. Furthermore, it examines the indispensable role of digital communication, acknowledging its speed, reach, accessibility, and efficiency. Finally, the article synthesizes why the interplay of good and digital communication is paramount in a world characterized by information overload, global connectivity, rapid decision-making, and dynamic work environments, concluding that mastering these skills is essential for thriving in the modern age. In this incredibly busy and sometimes overwhelming environment, one skill stands out as absolutely essential for success and happiness: good communication It helps teams work together smoothly, allows us to explain our ideas convincingly, and makes solving problems much easier and faster.

Read More »