ಕಾಲ ನಿಲ್ಲುವುದಿಲ್ಲ: ಒಂದು ವಿಮರ್ಶಾ ನೋಟ

Main Article Content

ಎ.ಆರ್. ಮಹೇಂದ್ರ

Abstract

ಕಾಲ ಅತ್ಯಮೂಲ್ಯವಾದದ್ದು. ಕಾಲವನ್ನು ಯಾವುದೇ ಕಾರಣಕ್ಕೂ ಮರಳಿ ಪಡೆಯಲಾಗುವುದಿಲ್ಲ. ಭವಿಷ್ಯದಲ್ಲಿ ಬರಲಿರುವ ಕಾಲವನ್ನು ಇಂದೇ ಅನುಭವಿಸುವುದು ಕಷ್ಟ ಸಾಧ್ಯ. ವರ್ತಮಾನದ ಬದುಕು ಮಾತ್ರ ನಮ್ಮದು. ನಮ್ಮ ಜೀವನದ ಪ್ರತಿಯೊಂದರಲ್ಲೂ ಹಾಸು ಹೊಕ್ಕಾಗಿರುವ ಈ ಕಾಲದ ಸದ್ಬಳಕೆ ಮಾಡಿಕೊಳ್ಳದೇ ಹೋದರೆ ಪಶ್ಚಾತ್ತಾಪದ ನಿಟ್ಟುಸಿರು ಕಟ್ಟಿಟ್ಟ ಬುತ್ತಿ. ಹಾಗೆಂದು ಕಳೆದ ಕಾಲವನ್ನು ಮರಳಿ ಪಡೆಯಲು ಯಾವುದೇ ಮಾರ್ಗವಿಲ್ಲ. ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಕಾಲ ದುಬಾರಿಯೇನಲ್ಲ. ವರ್ತಮಾನದ ಕಾಲ ಯಾರಿಗೂ ತಾರತಮ್ಯ ಮಾಡದೇ ೨4 ತಾಸು ಎಲ್ಲರಿಗೂ ನೀಡುತ್ತದೆ. ಆದರೆ ಅದು ಯಾರಿಗಾಗಿಯೂ ನಿಲ್ಲುವುದಿಲ್ಲ ಅಥವಾ ಅದು ಯಾರಿಗಾಗಿಯೂ ಮುಂದೆ ಓಡುವುದಿಲ್ಲ. ಬಹಳ ವಿಚಿತ್ರವಾದುದು ಈ ಸಮಯದ ವ್ಯವಹಾರ.

Article Details

Section

Research Articles

Author Biography

ಎ.ಆರ್. ಮಹೇಂದ್ರ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಂಚನಹಳ್ಳಿ, ಕಡೂರು ತಾಲ್ಲೂಕು.

How to Cite

ಎ.ಆರ್. ಮಹೇಂದ್ರ. (2025). ಕಾಲ ನಿಲ್ಲುವುದಿಲ್ಲ: ಒಂದು ವಿಮರ್ಶಾ ನೋಟ. ಅಕ್ಷರಸೂರ್ಯ (AKSHARASURYA), 7(02), 25 to 31. https://aksharasurya.com/index.php/latest/article/view/1176

References

ಚೆನ್ನವೀರ ಕಣವಿ, (1989), ಕಣವಿ ಸಮಗ್ರ ಕಾವ್ಯ, ಸಂವಹನ ಪ್ರಕಾಶನ, ಮೈಸೂರು.

ರಾಮಚಂದ್ರನ್ ಸಿ.ಎನ್., (2013), ಸಾಹಿತ್ಯ ವಿಮರ್ಶೆ, ಅಂಕಿತ ಪ್ರಕಾಶನ, ಬೆಂಗಳೂರು.

ಚೆನ್ನವೀರ ಕಣವಿ, (1965), ನೆಲಮುಗಿಲು, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು.

ಹೆಗಡೆ ಜಿ.ಎಮ್., (16 ಫೆಬ್ರುವರಿ 2022), ಅಕ್ಷರ ಆಕರದಲ್ಲಿ ಚೆನ್ನವೀರ ಕಣವಿ, ಪ್ರಜಾವಾಣಿ, ಬೆಂಗಳೂರು.

Most read articles by the same author(s)