ನಿರಂಜನರ ʼವಿಮೋಚನೆʼ ಕಾದಂಬರಿಯಲ್ಲಿ ಹೋರಾಟದ ಚಿತ್ರಣಗಳು

Main Article Content

ಎ.ಆರ್. ಮಹೇಂದ್ರ

Abstract

ಪ್ರಸ್ತುತ ಲೇಖನವು ನಿರಂಜನರ ʼವಿಮೋಚನೆʼ (1953) ಕಾದಂಬರಿಯಲ್ಲಿನ ಹೋರಾಟದ ಚಿತ್ರಣಗಳನ್ನು ವಿಶ್ಲೇಷಿಸುತ್ತದೆ. ನಿರಂಜನರು ಪ್ರಗತಿಪರ ಚಿಂತಕರು ಮತ್ತು ಗಾಂಧಿ, ಮಾರ್ಕ್ಸ್, ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ಅವರ ಆರಂಭಿಕ ಕಾದಂಬರಿಯಾದ ʼವಿಮೋಚನೆʼ ಯು ವರ್ಗ ಸಂಘರ್ಷ, ಸಾಮಾಜಿಕ ವಿಷಮತೆ, ಮತ್ತು ಶೋಷಿತ ವರ್ಗದ ನೋವುಗಳನ್ನು ಚಿತ್ರಿಸುತ್ತದೆ. ಇದು ನೇರವಾದ ಸ್ವಾತಂತ್ರ್ಯ ಹೋರಾಟದ ಕಾದಂಬರಿಯಲ್ಲವಾದರೂ, ಬಡ ಕಾರ್ಮಿಕ ವರ್ಗವು ಬ್ರಿಟಿಷರಿಂದ ಬಳುವಳಿಯಾಗಿ ದರ್ಪ ಪಡೆದ ಭಾರತೀಯ ಶ್ರೀಮಂತರಿಂದ ಮುಕ್ತಿ ಪಡೆಯಲು ನಡೆಸುವ ಹೋರಾಟವನ್ನು ಎತ್ತಿ ತೋರಿಸುತ್ತದೆ. ಕಥಾನಾಯಕ ಚಂದ್ರು ಅಸಮಾನತೆ ಮತ್ತು ಬಡತನದಿಂದ ಸ್ವಾತಂತ್ರ್ಯಕ್ಕಾಗಿ ನಡೆಸುವ ಹೋರಾಟವು, ದೇಶದ ಸ್ವಾತಂತ್ರ್ಯದ ನಂತರವೂ ಶೋಷಣೆ ಮುಂದುವರಿದಿರುವ ವಾಸ್ತವವನ್ನು ಪ್ರತಿಬಿಂಬಿಸುತ್ತದೆ. ಈ ಹೋರಾಟವು ಸೈದ್ಧಾಂತಿಕ ಶಿಸ್ತು ಇಲ್ಲದಿದ್ದರೂ, ಶೋಷಕ ಮಾಲೀಕರ ವಿರುದ್ಧ ಕೂಲಿ ಕಾರ್ಮಿಕರ ಮಾನವೀಯ ತುಡಿತವನ್ನು, ಅದರ ವೈಫಲ್ಯದ ದುರಂತದ ಮೂಲಕ, ಪ್ರಬಲವಾಗಿ ಬಿಂಬಿಸುತ್ತದೆ.

Article Details

Section

Research Articles

Author Biography

ಎ.ಆರ್. ಮಹೇಂದ್ರ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ‌ಪಂಚನಹಳ್ಳಿ, ಕಡೂರು.

How to Cite

ಎ.ಆರ್. ಮಹೇಂದ್ರ. (2025). ನಿರಂಜನರ ʼವಿಮೋಚನೆʼ ಕಾದಂಬರಿಯಲ್ಲಿ ಹೋರಾಟದ ಚಿತ್ರಣಗಳು. ಅಕ್ಷರಸೂರ್ಯ (AKSHARASURYA), 10(01), 85 to 92. https://aksharasurya.com/index.php/latest/article/view/1728

References

ಆಮೂರ ಜಿ.ಎಸ್., (1994), ಕನ್ನಡಕಥನ ಸಾಹಿತ್ಯ, ಶ್ರೀಹರಿ ಪ್ರಕಾಶನ, ಧಾರವಾಡ.

ನಿರಂಜನ, (2017), ವಿಮೋಚನೆ, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು.

ನಿರಂಜನ, (2013), ಚಿರಸ್ಮರಣೆ, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು.

Most read articles by the same author(s)